Search
  • Follow NativePlanet
Share
» »ಬಿಯರ್ ಯೋಗಾ, ಬಿರಿಯಾನಿ ಯೋಗಾ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಬಿಯರ್ ಯೋಗಾ, ಬಿರಿಯಾನಿ ಯೋಗಾ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಇಂದು ವಿಶ್ವಯೋಗಾ ದಿನ. ಇಡೀ ವಿಶ್ವದಾದ್ಯಂತ ಯೋಗಾ ದಿನವನ್ನು ಆಚರಿಸುತ್ತಿದ್ದಾರೆ. ಬಹುತೇಕರಿಗೆ ತಮ್ಮ ದಿನವು ಯೋಗದಿಂದಲೇ ಪ್ರಾರಂಭವಾಗುತ್ತದೆ. ಬಹುತೇಕರ ಆರೋಗ್ಯದ ಗುಟ್ಟು ಸಹಾ ಯೋಗವೇ ಆಗಿದೆ. ಆದರೆ ಇನ್ನೂ ಕೆಲವರಿಗೆ ಯೋಗ ಅಂದರೆ ಉದಾಸಿನ ಆಗುತ್ತದೆ. ಯಾರು ಬೆಳಗ್ಗೆ ಎದ್ದು ಯೋಗಾಸನ ಮಾಡುವುದು ಎಂದು ಅಸಡ್ಡೆ ತೋರುತ್ತಾರೆ.

ಈ ಯೋಗವನ್ನು ಇನ್ನಷ್ಟು ಇಂಟ್ರಸ್ಟಿಂಗ್ ಆಗಿಸಲು ಎಷ್ಟೆಲ್ಲಾ ವಿಧಾನಗಳಿವೆ. ನೀವು ಬಿಯರ್ ಯೋಗಾದ ಬಗ್ಗೆ ಕೇಳಿದ್ದೀರಾ. ಬಿಯರ್‌ ಯೋಗಾ ತುಂಬಾನೇ ಫೇಮಸ್ ಆಗಿದೆ. ಇದು ಒಂದು ರೀತಿಯಲ್ಲಿ ಆಸಕ್ತಿದಾಯಕವೂ, ಮನರಂಜನಾತ್ಮಕವೂ ಆಗಿದೆ.

ಅದೃಷ್ಟವಂತರಿಗಷ್ಟೇ ಸಿಗುತ್ತೆ ಗುಹೆಯೊಳಗೆ ಪ್ರವೇಶ -ವೈಷ್ಣೋದೇವಿ ಮಂದಿರ ರಹಸ್ಯಅದೃಷ್ಟವಂತರಿಗಷ್ಟೇ ಸಿಗುತ್ತೆ ಗುಹೆಯೊಳಗೆ ಪ್ರವೇಶ -ವೈಷ್ಣೋದೇವಿ ಮಂದಿರ ರಹಸ್ಯ

ದೆಹಲಿಗೆ ಹೋಗಿ

ದೆಹಲಿಗೆ ಹೋಗಿ

ದೆಹಲಿಯಲ್ಲಿ ನಿಮಗೆ ಈ ಬೀಯರ್ ಯೋಗಾ ನೋಡಲು ಸಿಗುತ್ತದೆ. ಅಂತರಾಷ್ಟ್ರೀಯ ಯೋಗಾದಿನದಂದು ಹೆಚ್ಚಿನವರು ಈ ಬಿಯರ್‌ ಯೋಗಾಕ್ಕೆ ಹೋಗುತ್ತಾರೆ. ಪ್ರತಿದಿನ ಇದನ್ನು ಮಾಡೋದರಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ ಹಾಗೆಯೇ ನಿಮಗೆ ಬೋರ್ ಅನಿಸೋದಿಲ್ಲ.

ಬಿಯರ್ ಯೋಗಾ

ಬಿಯರ್ ಯೋಗಾ

ನೀವೂ ಕೂಡಾ ಈ ಬಿಯರ್ ಯೋಗಾದ ಆನಂದವನ್ನು ಪಡೆಯಬೇಕೆಂದಿದ್ದರೆ ದೆಹಲಿಗೆ ಹೋಗಿ. ಬಿಯರ್ ಯೋಗ ಯಾವ ರೀತಿ ಇರುತ್ತದೆ ಅನ್ನೋದನ್ನು ತಿಳಿಯಬೇಕಾದ್ರೆ ದೆಹಲಿಯ ಬಿಯರ್ ಯೋಗಾದಲ್ಲಿ ಪಾಲ್ಗೊಳ್ಳಲೇ ಬೇಕು. ಭಾರತದಲ್ಲಿ ಮೊತ್ತಮೊದಲ ಬಾರಿಗೆ ಬಿಯರ್ ಯೋಗಾವನ್ನು ಪರಿಚಯಿಸಿರುವ ನಗರವೆಂದರೆ ಅದು ದೆಹಲಿ. ದೆಹಲಿಯಲ್ಲಿ ೨೦೧೫ರಲ್ಲಿ ಈ ಬಿಯರ್‌ ಯೋಗಾ ಎನ್ನುವ ಕಾನ್ಸೆಪ್ಟ್‌ನ್ನು ಜಾರಿಗೆ ತರಲಾಯಿತು.

ಕೇರಳದ ಪಾದ್ರಿಯೊಬ್ಬರು ಪಾತಾಳಲೋಕಕ್ಕೆ ಹೋಗಿದ್ದು ಈ ಬಾವಿಯಿಂದಲೇ ಕೇರಳದ ಪಾದ್ರಿಯೊಬ್ಬರು ಪಾತಾಳಲೋಕಕ್ಕೆ ಹೋಗಿದ್ದು ಈ ಬಾವಿಯಿಂದಲೇ

ಬೆಳಗ್ಗಿನ ಯೋಗಾ

ಬೆಳಗ್ಗಿನ ಯೋಗಾ

ಬಿಯರ್‌ ಯೋಗಾ ಕಾನ್ಸೆಪ್ಟ್ ಸಾಕಷ್ಟು ಜನರನ್ನು ಯೋಗಾದತ್ತ ಆಕರ್ಷೀಸುತ್ತಿದೆ. ಕೇಳಲು ತಮಾಷೆ ಎನಿಸಬಹುದು. ಆದರೆ ಬಹಳ ಪರಿಣಾಮಕಾರಿಯಾದ ವಿಧಾನವಾಗಿದೆ. ಬಿಯರ್‌ನ ಕೃಪೆಯಿಂದಾದರೂ ನೀವು ಯೋಗ ಮಾಡುವ ಸಲುವಾಗಿ ಬೆಳಗ್ಗೆ ಬೇಗ ಏಳಲೂ ಬಹುದು.

 ಬಿರಿಯಾನಿ ಯೋಗಾ

ಬಿರಿಯಾನಿ ಯೋಗಾ

ಒಂದು ವೇಳೆ ನೀವು ಬಿಯರ್ ಕುಡಿಯೋದಿಲ್ಲವೆಂದಾದಲ್ಲಿ, ಪರವಾಗಿಲ್ಲ ನಿಮಗಾಗಿ ಬಿರಿಯಾನಿ ಯೋಗಾವೂ ಇದೆ. ಬಿರಿಯಾನಿಯನ್ನು ತಟ್ಟೆಯಲ್ಲಿಟ್ಟು ಯೋಗಾ ಮಾಡಬಹುದು. ದೆಹಲಿಯ ಬಹುತೇಕ ಕಡೆಗಳಲ್ಲಿ ನಿಮಗೆ ಈ ಯೋಗಾ ಕಾಣಸಿಗುತ್ತದೆ.

ಸ್ಪೆಶಲ್ ಯೋಗಾ ಡೇ

ಸ್ಪೆಶಲ್ ಯೋಗಾ ಡೇ

ಬಿರಿಯಾನಿ ಪ್ರಿಯರರೆಲ್ಲರೂ ಈ ಬಿರಿಯಾನಿ ಯೋಗವನ್ನು ಟ್ರೈ ಮಾಡಬಹುದು. ಈ ಮೂಲಕ ಯೋಗದಲ್ಲಿ ನಿಮಗೆ ಆಸಕ್ತಿಯೂ ಬೆಳೆಯುತ್ತದೆ. ಒಂದು ರೀತಿ ವಿಭಿನ್ನವೂ ಆಗಿದೆ. ಈ ಯೋಗಾ ಡೇಯನ್ನು ಈ ಹೊಸ ಯೋಗಾಗಳನ್ನು ಟ್ರೈ ಮಾಡುವ ಮೂಲಕ ಹೊಸ ಅನುಭವವನ್ನು ಪಡೆಯಿರಿ.

ಅತಿ ದೊಡ್ಡ ಮಹಾನಗರ

ಅತಿ ದೊಡ್ಡ ಮಹಾನಗರ

ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ (ಎನ್‌.ಸಿ.ಟಿ) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ನಗರವು ಪ್ರಾದೇಶಿಕವಾಗಿ ಭಾರತದಲ್ಲೇ ಅತಿ ದೊಡ್ಡ ಮಹಾನಗರ ಮತ್ತು ಜನಸಂಖ್ಯೆಯಲ್ಲಿಎರಡನೇ ಅತಿ ದೊಡ್ಡ ಮಹಾನಗರವಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 12.25 ದಶಲಕ್ಷಕ್ಕೂ ಮಿಕ್ಕಿ ನಿವಾಸಿಗಳು ಮತ್ತು 15.9 ದಶಲಕ್ಷ ನಗರವಾಸಿಗಳನ್ನು ಹೊಂದಿರುವ ದೆಹಲಿ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎಂಟನೇ ದೊಡ್ಡ ನಗರವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X