Search
  • Follow NativePlanet
Share
» »ಭಾರತದ ಈ ಐದು ಮಂದಿರಗಳ ರಹಸ್ಯವನ್ನು ನಂಬೋದು ಕಷ್ಟ

ಭಾರತದ ಈ ಐದು ಮಂದಿರಗಳ ರಹಸ್ಯವನ್ನು ನಂಬೋದು ಕಷ್ಟ

ಭಾರತದಲ್ಲಿ ಅನೇಕ ಮಂದಿರಗಳಿವೆ. ಪ್ರತಿಯೊಂದು ಮಂದಿಕ್ಕೂ ಅದರದ್ದೇ ಆದ ವಿಶೇಷತೆಗಳಿವೆ. ಒಂದು ದೇವಸ್ಥಾನ ಕಟ್ಟಲು ಕನಿಷ್ಟ 6 ತಿಂಗಳಾದರೂ ಬೇಕೆ ಬೇಕು. ಅದರಲ್ಲೂ ದೊಡ್ಡ ದೊಡ್ಡ ದೇವಸ್ಥಾನಗಳ ನಿರ್ಮಾಣಕ್ಕೆ ಒಂದುವರ್ಷವೂ ಬೇಕಾಗುತ್ತದೆ. ಹೀಗಿರುವಾಗ ಕೇವಲ ಒಂದು ದಿನದಲ್ಲಿ ಅದೂ ಕೂಡಾ ರಾತ್ರಿ ಹೊತ್ತಿನಲ್ಲಿ ದೇವಸ್ಥಾನ ವನ್ನು ನಿರ್ಮಾಣ ಮಾಡಲು ಸಾಧ್ಯನಾ? ಖಂಡಿತಾ ಇಲ್ಲ. ಆದರೆ ಇಲ್ಲಿ ಕೆಲವು ದೇವಾಲಯಗಳಿವೆ ಅವುಗಳನ್ನು ಕೇವಲ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡಲಾಗಿದೆಯಂತೆ.

ಇಲ್ಲಿರುವ ಕೃಷ್ಣನ ವಿಗ್ರಹವನ್ನು ದ್ವಾರಕಾದಿಂದ ಕದ್ದು ತಂದಿದ್ದಂತೆ!ಇಲ್ಲಿರುವ ಕೃಷ್ಣನ ವಿಗ್ರಹವನ್ನು ದ್ವಾರಕಾದಿಂದ ಕದ್ದು ತಂದಿದ್ದಂತೆ!

ಗೋವಿಂದ ದೇವ್‌ಜೀ ಮಂದಿರ (ವೃಂದಾವನ )

ಗೋವಿಂದ ದೇವ್‌ಜೀ ಮಂದಿರ (ವೃಂದಾವನ )

PC: MADHURANTHAKAN JAGADEESAN

ಶ್ರೀ ಕೃಷ್ಣನ ಲೀಲಾಸ್ಥಳವಾದ ವೃಂದಾವನದಲ್ಲಿ ಗೋವಿಂದ ದೇವನ ಮಂದಿರವೊಂದಿದೆ. ಈ ಮಂದಿರದ ನಿರ್ಮಾಣವೂ ಕೃಷ್ಣನ ಲೀಲೆಯ ತರಹ ಅದ್ಭುತವಾಗಿದೆ. ಈ ಮಂದಿರ ಒಂದೇ ರಾತ್ರಿಯಲ್ಲಿ ನಿರ್ಮೀಸಿದ್ದು ಎನ್ನಲಾಗುತ್ತದೆ. ಈ ಮಂದಿರವನ್ನು ಸಮೀಪದಿಂದ ನೋಡಿದಾಗ ಅಪೂರ್ಣ ಎನಿಸುತ್ತದೆ. ಈ ಮಂದಿರವನ್ನು ಭೂತ, ಪ್ರೇತಗಳು ದಿವ್ಯ ಶಕ್ತಿಗಳು ರಾತ್ರಿ ಹೊತ್ತಿನಲ್ಲಿ ನಿರ್ಮಿಸಿದ್ದು ಎನ್ನಲಾಗುತ್ತದೆ. ಬೆಳಗಾಗುವ ಮುನ್ನವೇ ಯಾರೋ ರುಬ್ಬಲು ಆರಂಭಿಸಿದರು ಇದರಿಂದ ಬೆಳಗಾಯಿತೆಂದು ತಿಳಿದು ಮಂದಿರ ನಿರ್ಮಾಣದ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿ ಹೊರಟಿದ್ದಾರೆ ಎನ್ನಲಾಗುತ್ತದೆ.

ದೇವ್‌ಘರ್ ಮಂದಿರ(ಜಾರ್ಖಂಡ)

ದೇವ್‌ಘರ್ ಮಂದಿರ(ಜಾರ್ಖಂಡ)

PC: Ravishekharojha

ಜಾರ್ಖಂಡದಲ್ಲಿರುವ ದೇವ್‌ಘರ್ ಮಂದಿರದ ಹಿಂದೆಯೂ ಒಂದು ಕಥೆ ಇದೆ. ಶಿಲ್ಪಿ ವಿಶ್ವಕರ್ಮನು ಇಲ್ಲಿ ಮಂದಿರದ ನಿರ್ಮಾಣವನ್ನು ಒಂದೇ ರಾತ್ರಿಯಲ್ಲಿ ಮಾಡಿದರಂತೆ. ಮಂದಿರದ ಪ್ರಾಂಗಣದಲ್ಲಿರುವ ಪಾರ್ವತಿಯ ಮಂದಿರವು ಬಾಬಾ ಬೈಜನಾಥ್ ಹಾಗೂ ವಿಷ್ಣುವಿನ ಮಂದಿರಕ್ಕಿಂತಲೂ ಸಣ್ಣದಾಗಿದೆ. ಯಾಕೆಂದರೆ ದೇವಿ ಪಾರ್ವತಿಯ ಮಂದಿರದ ನಿರ್ಮಾಣವಾಗುತ್ತಿದ್ದಂತೆ ಬೆಳಕಾಯಿತು ಹಾಗಾಗಿ ಮಂದಿರದ ನಿರ್ಮಾಣ ಅರ್ಧಕ್ಕೆ ನಿಂತಿತು ಎನ್ನಲಾಗುತ್ತದೆ.

ಹಥಿಯಾ ದೇವಾಲಯ (ಉತ್ತರಖಂಡ)

ಹಥಿಯಾ ದೇವಾಲಯ (ಉತ್ತರಖಂಡ)

PC: youtube

ಉತ್ತರಖಂಡದ ಪಿಥೋರಗಡದಲ್ಲಿ ಒಂದು ಶಾಪಿತ ಮಂದಿರವಿದೆ. ಅದನ್ನು ಹಥಿಯಾ ದೇವಾಲಯ ಎನ್ನುತ್ತಾರೆ. ಈ ಮಂದಿರದ ಕಥೆ ಏನೆಂದರೆ ಒಂದು ಕೈಯುಳ್ಳ ಶಿಲ್ಪಿಯು ಒಂದೇ ರಾತ್ರಿಯಲ್ಲಿ ಈ ಮಂದಿರದ ನಿರ್ಮಾಣ ಮಾಡಿದನು. ಶಿವಲಿಂಗದ ಅರ್ಧ ದಕ್ಷಿಣ ದಿಕ್ಕಿನಲ್ಲಿ ಇರುವ ಕಾರಣ ಮಂದಿರವ ಪೂಜೆ ಮಾಡುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ.

ಬೋಜೇಶ್ವರ ಮಂದಿರ (ಮಧ್ಯಪ್ರದೇಶ)

ಬೋಜೇಶ್ವರ ಮಂದಿರ (ಮಧ್ಯಪ್ರದೇಶ)

PC: wikipedia

ಮಧ್ಯಪ್ರದೇಶದ ರಾಯ್‌ಸೇನ ಜಿಲ್ಲೆಯಲ್ಲಿರುವ ಬೋಜೇಶ್ವರ ಮಂದಿರವನ್ನು ಉತ್ತರ ಸೋಮನಾಥ ಮಂದಿರ ಎಂದೂ ಕರೆಯಲಾಗುತ್ತದೆ. ಗುಡ್ಡದ ಮೇಲೆ ನಿರ್ಮಿತವಾಗಿರುವ ಈ ದೇವಸ್ಥಾನದ ಕಥೆಯು ದ್ವಾಪರ ಯುಗ ಅಂದರೆ ಮಹಾಭಾರತ ಕಾಲಕ್ಕೆ ಸಂಬಂಧಿಸಿದ್ದು. ಇಲ್ಲಿ ಪಾಂಡವರು ತಮ್ಮ ತಾಯಿ ಕುಂತಿಗಾಗಿ ರಾತ್ರೋರಾತ್ರಿ ದೊಡ್ಡ ಶಿವಲಿಂಗವನ್ನು ನಿರ್ಮಿಸಿದರು ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X