Search
  • Follow NativePlanet
Share
» »ಭಾರತದ ರಾಜ್ಯಗಳು ಮತ್ತು ಇವುಗಳು ಯಾವುದಕ್ಕೆ ಪ್ರಸಿದ್ದಿಯನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ!

ಭಾರತದ ರಾಜ್ಯಗಳು ಮತ್ತು ಇವುಗಳು ಯಾವುದಕ್ಕೆ ಪ್ರಸಿದ್ದಿಯನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ!

ಭಾರತವು ವೈವಿಧ್ಯತೆಯನ್ನು ಹೊಂದಿರುವ ಸುಂದರವಾದ ದೇಶ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇಲ್ಲಿಯ ಪ್ರತೀ ರಾಜ್ಯಗಳಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಈ ರಾಜ್ಯಗಳಲ್ಲಿ ಹಲವಾರು ಸುಪ್ತ ಅದ್ಬುತ ವಿಷಯಗಳು ಮತ್ತು ನೈಸರ್ಗಿಕ ಸೌಂದರ್ಯತೆಗಳಿದ್ದು ಭೇಟಿ ನೀಡಲು ಹಲವಾರು ಕಾರಣಗಳಿವೆ. 29 ರಾಜ್ಯಗಳನ್ನು ಹೊಂದಿರುವ ಭಾರತವು ವಿಶ್ವದಲ್ಲಿಯ ಅತೀ ಅನ್ವೇಶಿತ ದೇಶಗಳಲ್ಲಿ ಒಂದಾಗಿದೆ. ಯಾವುದೇ ಪ್ರಯಾಣಿಕನೂ ಇಲ್ಲಿಯ ಸ್ಥಳಗಳ ಬಗ್ಗೆ ಅನ್ವೇಷಣೆ ಮಾಡುವ ಹಾದಿಯಲ್ಲಿ ಹೋದಲ್ಲಿ ತಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಪಡೆಯಬಹುದು ಎಂಬುದರಲ್ಲಿ ಎರಡು ಮಾತಿಲ್ಲ.

ಆವಿಷ್ಕಾರ ಮತ್ತು ಬೆರಗುಗೊಳಿಸುವ ಹಾದಿಯು ಭಾರತದ ಮೂಲಕ ಹಾದು ಹೋಗುತ್ತದೆ ಎಂದರೆ ತಪ್ಪಾಗಲಾರದು.ವೈವಿಧ್ಯಮಯ ಭೂದೃಶ್ಯದಿಂದ ಹಿಡಿದು ಹಿಮಾಲಯ, ಪ್ರಶಾಂತ ಕಡಲತೀರಗಳು ಶಾಂತಿಯುತ ಕಾಡುಗಳು ಅಥವಾ ಐತಿಹಾಸಿಕ ಸ್ಥಳಗಳು, ಆಧುನಿಕ ನಗರಗಳವರೆಗೆ, ಭಾರತೀಯ ರಾಜ್ಯಗಳು ಒಂದು ಆದರ್ಶ ದೇಶವು ಹೊಂದಿರಬೇಕಾದ ಎಲ್ಲವನ್ನೂ ಹೊಂದಿವೆ.

ಭಾರತೀಯ ರಾಜ್ಯಗಳು ಯಾವುದಕ್ಕೆ ಪ್ರಸಿದ್ದವಾಗಿವೆ ಎಂಬುದನ್ನು ಎಂದಾದರೂ ಯೋಚಿಸಿದ್ದಿರಾ?ಹೌದು ಎಂದಾದರೆ, ನಿಮಗಾಗಿ ಬೇಕಾದ ಲೇಖನ ಇಲ್ಲಿದೆ. ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಭಾರತೀಯ ರಾಜ್ಯಗಳ ವಿಶೇಷತೆಗಳನ್ನು ತಿಳಿದುಕೊಳ್ಳಿ

1) ಅರುಣಾಚಲ ಪ್ರದೇಶ

1) ಅರುಣಾಚಲ ಪ್ರದೇಶ

ಸಸ್ಯಶಾಸ್ತ್ರಜ್ಞರ ಸ್ವರ್ಗ ಎಂದೂ ಕರೆಯಲ್ಪಡುವ ಅರುಣಾಚಲ ಪ್ರದೇಶವು ಕನಿಷ್ಟ ಪರಿಶೋಧಿಸಲ್ಪಟ್ಟ ಭಾರತೀಯ ರಾಜ್ಯಗಳಲ್ಲಿ ಒಂದಾಗಿದೆ. ಈ ಸುಂದರವಾದ ರಾಜ್ಯವು ಮನಮೋಹಕ ದೃಶ್ಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು ಇವು ಜಲಪಾತಗಳಿಂದ ಹಿಡಿದು ಕಾಡುಗಳವರೆಗೆ ಮತ್ತು ಸೊಂಪಾದ ಕಣಿವೆಗಳಿಂದ ಹಿಡಿದು ತಂಪಾದ ಪರ್ವತಗಳವರೆಗೆ ಎಲ್ಲವನ್ನೂ ತನ್ನಲ್ಲಿ ಹೊಂದಿದೆ. ನಮಗೆಲ್ಲರಿಗೂ ಗೊತ್ತಿರುವಂತೆ ಇದು ಶ್ರೀಮಂತವಾದ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿರುವುದು ಮಾತ್ರವಲ್ಲದೆ ಭಾರತದ ಅತೀ ದೊಡ್ಡ ಮಠವೆನಿಸಿರುವ ತವಾಂಗ್ ಮಠದ ನೆಲೆಯಾಗಿದೆ.

2) ಆಂಧ್ರಪ್ರದೇಶ

2) ಆಂಧ್ರಪ್ರದೇಶ

ಧಾರ್ಮಿಕತೆ ಮತ್ತು ಸಾಂಸ್ಕೃತಿಕ ಮಹತ್ವವು ತನ್ನ ಗುರುತಾಗಿರುವ ಆಂಧ್ರಪ್ರದೇಶವು ಪ್ರಸಿದ್ದ ಕೃಷ್ಣಾ ಮತ್ತು ಗೋಸ್ಥಾನಿ ನದಿಗಳು, ಹಾರ್ಸ್ಲೆ ಮತ್ತು ಪಪಿ ಬೆಟ್ಟಗಳು, ದೇವಾಲಯಗಳು, ಕುಚಿಪುಡಿ ನೃತ್ಯ ರೂಪ ಮತ್ತು ಮೈಕಾ ನಿರ್ಮಾಣ. ಮುಂತಾದುವುಗಳನ್ನು ಹೊಂದಿದೆ. ಅಲ್ಲದೆ ಭಾರತದ ಅಕ್ಕಿಯ ಕಣಜ ಎಂದೂ ಕರೆಯಲ್ಪಡುವ ಆಂಧ್ರಪ್ರದೇಶವು ಭಾರತದಲ್ಲಿಯ ಅತಿ ಹೆಚ್ಚು ಅಕ್ಕಿಯನ್ನು ರಫ್ತು ಮಾಡುವ ರಾಜ್ಯವೆನಿಸಿದೆ.

3) ಬಿಹಾರ್

3) ಬಿಹಾರ್

ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದೆನಿಸಿರುವ ಬಿಹಾರ್ ತನ್ನ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಒಂದೊಮ್ಮೆ ಸಾರಾಯಿ ಕೇಂದ್ರವಾಗಿದ್ದ ಈ ರಾಜ್ಯವು ಬೌದ್ಧ ತೀರ್ಥಯಾತ್ರೆಗಳಿಗೆ ಮತ್ತು ಬೌದ್ಧಧರ್ಮದ ಜನನಕ್ಕೂ ಪ್ರಸಿದ್ಧವಾಗಿದೆ.

4) ಜಾರ್ಕಂಡ್

4) ಜಾರ್ಕಂಡ್

ಹಿಂದೆ ಬಿಹಾರಿನ ಭಾಗವಾಗಿದ್ದ ಈ ಸ್ಥಳವು ಭಾರತದ ಪ್ರಮುಖ ಉಕ್ಕು ಮತ್ತು ಕಲ್ಲಿದ್ದಲು ಉತ್ಪಾದಕ ರಾಜ್ಯವಾಗಿದೆ. ಅಲ್ಲದೆ ಈ ಸ್ಥಳವು ಹಲವಾರು ಅದ್ಭುತವಾದ ಭೂದೃಶ್ಯಗಳು ಮತ್ತು ಕಾಡುಗಳಿಗೆ ನೆಲೆಯಾಗಿದೆ. ಜಾರ್ಖಂಡ್ ತನ್ನ ಹಳೆಯ ಬುಡಕಟ್ಟು ಮತ್ತು ಅವರ ಹಳೆಯ ಜೀವನಶೈಲಿಗೆ ಹೆಸರುವಾಸಿಯಾಗಿದೆ.

5) ಒಡಿಶಾ

5) ಒಡಿಶಾ

ಈ ಧಾರ್ಮಿಕತೆಯ ಪ್ರತಿರೂಪವಾಗಿರುವ ರಾಜ್ಯದಲ್ಲಿ ಶಿವ ದೇವರಿಗೆ ಅರ್ಪಿತವಾಗಿರುವ ಲಿಂಗರಾಜ ಮಂದಿರ ಮತ್ತು ಕೊನಾರ್ಕ್ ದೇವಾಲಯಗಳಂತಹ ಶತಮಾನಗಳಷ್ಟು ಹಳೆಯದಾದ ದೇವಾಲಯಗಳನ್ನು ಹೊಂದಿವೆ. ಅಲ್ಲದೆ ಸುಂದರವಾದ ಕೊಳಗಳು, ಮತ್ತು ದಟ್ಟ ಅರಣ್ಯಗಳೂ ಕೂಡಾ ಮನಮೋಹದ ದೃಶ್ಯವನ್ನು ಒದಗಿಸಿಕೊಡುತ್ತದೆ.

6)ಛತ್ತೀಸ್ ಘಡ್

6)ಛತ್ತೀಸ್ ಘಡ್

ನಕ್ಸಲರಿಂದ ಕುಖ್ಯಾತಿಗೊಳಗಾದ ಈ ರಾಜ್ಯವು ತನ್ನಲ್ಲಿ ಬೆರಗುಗೊಳಿಸುವಂತಹ ಸ್ಥಳಗಳನ್ನು ಹೊಂದಿದೆ. ಇಲ್ಲಿ ಪ್ರಾಚೀನ ಕೋಟೆಗಳಿಂದ ಹಿಡಿದು ಕೈಲಾಶ ಗುಹೆಗಳವರೆಗೆ ಇದ್ದು, ಈ ರಾಜ್ಯದಲ್ಲಿ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ವಿವರಿಸುವಂತಹ ಎಲ್ಲಾ ಅಂಶಗಳನ್ನೂ ಹೊಂದಿವೆ. ಇಷ್ಟೇ ಅಲ್ಲದೆ ಈ ರಾಜ್ಯವು ದೇಶದ ದೊಡ್ಡ ವಿದ್ಯುಚ್ಚಕ್ತಿಯ ಮೂಲವಾಗಿದೆ.

7) ನಾಗಾಲ್ಯಾಂಡ್

7) ನಾಗಾಲ್ಯಾಂಡ್

ಶ್ರೀಮಂತವಾದ ಜೀವವೈವಿಧ್ಯತೆ ಮತ್ತು 16 ಸ್ಥಳೀಯ ನಾಗ ಬುಡಕಟ್ಟು ಜನಾಂಗದವರುಗಳ ನೆಲೆಯಾಗಿದೆ. ಈ ಭವ್ಯವಾದ ರಾಜ್ಯವು ವಿಸ್ಮಯಕಾರಿ ದೃಶ್ಯ ಸೌಂದರ್ಯ ಮತ್ತು ಅದ್ಭುತ ಪರಿಸರಕ್ಕೆ ಹೆಸರುವಾಸಿಯಾಗಿದೆ

8) ಉತ್ತರ ಪ್ರದೇಶ

8) ಉತ್ತರ ಪ್ರದೇಶ

ಈ ಸುಂದರವಾದ ರಾಜ್ಯವು ತನ್ನದೇ ಆದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯಗಳನ್ನು ಹೊಂದಿದೆ. ಜಗತ್ತಿತ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ನ ನೆಲೆಯಾಗಿದೆ ಉತ್ತರ ಪ್ರದೇಶವು ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ಥಳಗಳಿಗೂ ಹೆಸರುವಾಸಿಯಾಗಿದ್ದು ಅವುಗಳಲ್ಲಿ ವಾರಣಾಸಿ , ಆಗ್ರಾ, ಲಕ್ನೋ ಫತೇಪುರ್ ಸಿಕ್ರಿ ಇತ್ಯಾದಿಗಳನ್ನು ಒಳಗೊಂಡಿದೆ. ಇದಲ್ಲದೆ ಈ ರಾಜ್ಯವು ಚರ್ಮದ ವಸ್ತುಗಳು, ಮತ್ತು ಆಲೂಗಡ್ಡೆ, ಗೋಧಿ, ಕಬ್ಬು ಮತ್ತು ಅಕ್ಕಿಗಳಂತಹ ಬೆಳೆಗಳ ಉತ್ಪಾದನೆಗೂ ಹೆಸರುವಾಸಿಯಾಗಿದೆ.

9) ಮಧ್ಯಪ್ರದೇಶ

9) ಮಧ್ಯಪ್ರದೇಶ

ಮಧ್ಯಪ್ರದೇಶವು ಭಾರತದ ಹೃದಯವೆಂದು ಪ್ರಸಿದ್ದಿಯನ್ನು ಪಡೆದಿದ್ದು, ಇದು ವಜ್ರ ಮತ್ತು ತಾಮ್ರದ ನಿಕ್ಷೇಪಗಳಿಂದ ಸಮೃದ್ಧವಾಗಿದೆ. ಖಜುರಾಹೊ ದೇವಾಲಯಗಳಿಗೆ ಹೆಸರುವಾಸಿಯಾದ ಈ ಸೊಗಸಾದ ರಾಜ್ಯವು ಐತಿಹಾಸಿಕ ಸ್ಥಳಗಳು ಮತ್ತು ಸ್ಮಾರಕಗಳಿಂದ ಕೂಡಿದೆ.

10) ಪಶ್ಚಿಮ ಬಂಗಾಳ

10) ಪಶ್ಚಿಮ ಬಂಗಾಳ

ಭಾರತದ ಸಾಂಸ್ಕೃತಿಕ ರಾಜಧಾನಿಯೆಂದೇ ಕರೆಯಲ್ಪಡುವ ಈ ರಾಜ್ಯಕ್ಕೆ ಸಾವಿರಾರು ವರ್ಷ ಹಳೆಯ ಇತಿಹಾಸವಿದೆ. ಸುಂದರ್‌ಬನ್ ಕಾಡುಗಳು, ಹುಲಿ ರಕ್ಷಣಾ ಕೇಂದ್ರಗಳು ಮತ್ತು ಮನಮೋಹಕ ಭೂದೃಶ್ಯಗಳಿಗೆ ಹೆಸರುವಾಸಿಯಾದ ಈ ರಾಜ್ಯವು ಶ್ರೀಮಂತ ಇತಿಹಾಸದ ನೆಲೆಯಾಗಿದೆ ಮತ್ತು ಭಾರತೀಯ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ.

11) ಸಿಕ್ಕಿಂ

11) ಸಿಕ್ಕಿಂ

ಪ್ರಶಾಂತವಾದ ಸೌಂದರ್ಯತೆಯನ್ನೊಳಗೊಂಡ ಗಗನಚುಂಬಿ ಪರ್ವತಗಳು, ಶಾಂತಯುತವಾದ ಸರೋವರಗಳು ಮತ್ತು ಅಭಿವೃದ್ದಿ ಹೊಂದುತ್ತಿರುವ ಬಯಲು ಪ್ರದೇಶಗಳನ್ನು ಹೊಂದಿರುವ ಈ ರಾಜ್ಯವು ಭಾರತದ ನೈಸರ್ಗಿಕ ಅದ್ಭುತಗಳಲ್ಲಿ ಒಂದಾಗಿದೆ. ಕೆಲವೊಮ್ಮೆ ಅಕ್ಕಿಯ ಕಣಿವೆ ಎಂದೂ ಕರೆಯಲ್ಪಡುವ ಸಿಕ್ಕಿಂ ಅನೇಕ ಬೌದ್ದ ಮಠಗಳಿಗೂ ಹೆಸರುವಾಸಿಯಾಗಿದೆ.

 12) ಅಸ್ಸಾಂ

12) ಅಸ್ಸಾಂ

ಚಹಾ ತೋಟ, ತೈಲ ಕ್ಷೇತ್ರಗಳು ಮತ್ತು ರೇಷ್ಮೆಗೆ ಹೆಸರುವಾಸಿಯಾದ ಅಸ್ಸಾಂ ವೈವಿಧ್ಯಮಯ ವನ್ಯಜೀವಿಗಳು ಮತ್ತು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳಿಗೆ ನೆಲೆಯಾಗಿದೆ. ಅಲ್ಲದೆ ಈ ಬೆರಗುಗೊಳಿಸುವಂತಹ ರಾಜ್ಯವು ಅನೇಕ ಪ್ರಾಚೀನ ದೇವಾಲಯಗಳ ನೆಲೆಯಾಗಿದೆ.

13) ಮೇಘಾಲಯ

13) ಮೇಘಾಲಯ

ಪ್ರತೀ ವರ್ಷವೂ ಅತೀ ಹೆಚ್ಚು ಮಳೆ ಬೀಳುವ ರಾಜ್ಯವೆಂದು ಪ್ರಸಿದ್ದಿಯನ್ನು ಹೊಂದಿರುವ ಈ ರಾಜ್ಯವು ಜೀವಂತ ಬೇರುಗಳ ಸೇತುವೆಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಇದು ಮಸಾಲೆಗಳು ಮತ್ತು ಖಾಸಿ ಬೆಟ್ಟಗಳಲ್ಲಿನ ಔಷಧೀಯ ಸಸ್ಯಗಳಿಗೂ ಹೆಸರುವಾಸಿಯಾಗಿದೆ. ಏಷ್ಯಾದಲ್ಲಿಯ ಅತ್ಯಂತ ಸ್ವಚ್ಚ ಗ್ರಾಮವೆಂದು ಪ್ರಸಿದ್ದಿಯನ್ನು ಪಡೆದಿರುವ ಮಾವ್ಲಿನಾಂಗ್‌ ಅನ್ನು ತನ್ನಲ್ಲಿ ಹೊಂದಿದೆ.

14) ಮಿಜೋರಾಂ

14) ಮಿಜೋರಾಂ

ಭಾರತದಲ್ಲಿಯ ಕಡಿಮೆ - ಪರಿಶೋಧನೆಗೊಳಗಾದ ರಾಜ್ಯಗಳಲ್ಲಿ ಒಂದಾದ ಮಿಜೋರಾಂ ಅನೇಕ ಪ್ರಾಚೀನ ಬುಡಕಟ್ಟು ಜನಾಂಗಗಳಿಗೆ ಹಾಗೂ ವಿಭಿನ್ನ ವಜ್ಯಜೀವಿಗಳನ್ನು ತನ್ನಲ್ಲಿ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಈ ರಾಜ್ಯವು ಅನೇಕ ಮನಮೋಹಕ ಕಣಿವೆಗಳು ಮತ್ತು ಸ್ವಚ್ಚವಾದ ನದಿಗಳಿಗೆ ಹೆಸರುವಾಸಿಯಾಗಿದೆ.

15) ತ್ರಿಪುರ

15) ತ್ರಿಪುರ

ಏಳು ಸೋದರಿ ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರ ಭಾರತದ ಅತ್ಯಂತ ಸಾಕ್ಷರತಾ ರಾಜ್ಯವಾಗಿದೆ. ಇಲ್ಲಿ ಸಾಂಸ್ಕೃತಿಕ ವೈವಿಧ್ಯತೆಯಿಂದ ಹಿಡಿದು ಜನಪದ ಕಲೆಗಳವರೆಗೆ ಮತ್ತು ಕಿತ್ತಳೆ ತೋಟಗಳಿಂದ ಹಿಡಿದು ಸೆಣಬಿನ ಕೃಷಿಯವರೆಗೆ ಎಲ್ಲವನ್ನೂ ಹೊಂದಿದ್ದು ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಬೇಕಾದ ಎಲ್ಲವನ್ನೂ ನೀಡುತ್ತದೆ. ಈ ರಾಜ್ಯವು ಉತ್ತಮ ಗುಣಮಟ್ಟದ ಬಿದಿರಿನ ಉತ್ಪನ್ನಗಳಿಗೂ ಹೆಸರುವಾಸಿಯಾಗಿದೆ.

16) ಮಣಿಪುರ

16) ಮಣಿಪುರ

ಮಣಿಪುರಿ ನೃತ್ಯಕ್ಕೆ ಪ್ರಸಿದ್ದಿಯನ್ನು ಪಡೆದಿರುವ ಈ ರಾಜ್ಯವು ಶ್ರೀಮಂತ ಸಂಸ್ಕೃತಿ ಮತ್ತು ಹಲವಾರು ನೈಸರ್ಗಿಕ ಸಸ್ಯವರ್ಗಗಳಿಗೂ ಹೆಸರುವಾಸಿಯಾಗಿದೆ. ಕೆಲವು ಸಮಯದಲ್ಲಿ ಬಿಡುವ ಅಪರೂಪದ ಹೂವುಗಳನ್ನು ಹೊಂದಿರುವ ಡುಕೌ ಕಣಿವೆಯು ಇಲ್ಲಿ ನೆಲೆಸಿದೆ.

17) ಉತ್ತರಾಖಂಡ್

17) ಉತ್ತರಾಖಂಡ್

ಮೊದಲು ಉತ್ತರಪ್ರದೇಶದ ಭಾಗವಾಗಿದ್ದ ಉತ್ತರಾಖಂಡ್ ಅನೇಕ ಹಿಂದೂ ದೇವಾಲಯಗಳು ಮತ್ತು ಯಾತ್ರೀ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಈ ಸುಂದರವಾದ ಹಾಗೂ ಉತ್ತಮವಾದ ಸೆಳೆತವನ್ನು ಹೊಂದಿರುವ ಗಿರಿಧಾಮವು ಟ್ರಕ್ಕಿಂಗ್ ಹಾಗೂ ಕ್ಯಾಂಪಿಂಗ್ ಮಾಡಲು ಸೂಕ್ತವಾಗಿದ್ದು ಇದಕ್ಕೆ ಪ್ರಸಿದ್ದಿಯನ್ನು ಪಡೆದಿದೆ.

18) ಜಮ್ಮು ಮತ್ತು ಕಾಶ್ಮೀರ

18) ಜಮ್ಮು ಮತ್ತು ಕಾಶ್ಮೀರ

ನಿಸ್ಸಂದೇಹವಾಗಿಯೂ ಭೂಮಿಯ ಮೇಲಿನ ಸ್ವರ್ಗವೆಂದೇ ಕರೆಯಲಾಗುವ ಈ ಅಸಾಧಾರಣ ರಾಜ್ಯವು ಭಾರತದ ಒಂದು ರಾಜ್ಯವೆನ್ನಲು ಸಂತೋಷಕರವಾದ ವಿಷಯವೇ ಸರಿ. ಈ ರಾಜ್ಯವು ತನ್ನಲ್ಲಿ ಮಂತ್ರಮುಗ್ದಗೊಳಿಸುವಂತಹ ಬೆಟ್ಟಗಳು, ಸುಂದರ ಪರ್ವತ ಶ್ರೇಣಿಗಳು ಸೊಂಪಾದ ಹಸಿರುಪ್ರದೇಶಗಳು, ಮತ್ತು ಸ್ವಚ್ಚವಾದ ಸರೋವರಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ ಇದು ಹಿಂದೂ ಯಾತ್ರಿ ಸ್ಥಳಗಾದ ಅಮರ್ ನಾಥ್, ಮತ್ತು ವೈಷ್ಣೋದೇವಿ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇವೆಲ್ಲವನ್ನೂ ತನ್ನಲ್ಲಿ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಪ್ರತಿಯೊಬ್ಬ ಪ್ರಯಾಣಿಕನಿಗೂ ಸ್ವರ್ಗದ ಅನುಭವವನ್ನು ಕೊಡುತ್ತದೆ ಎಂಬುದು ಸತ್ಯ ಸಂಗತಿ.

19) ಹಿಮಾಚಲ ಪ್ರದೇಶ

19) ಹಿಮಾಚಲ ಪ್ರದೇಶ

ಭಾರತದ ಬೇಸಿಗೆಯನ್ನು ಕಳೆಯುವ ತಾಣವೆಂದೇ ಪ್ರಸಿದ್ದಿಯಾಗಿರುವ ಹಿಮಾಚಲ ಪ್ರದೇಶವು ತನ್ನಲ್ಲಿಯ ಮನಾಲಿ, ಶಿಮ್ಲಾ ಕುಲು ಮುಂತಾದ ಗಿರಿಧಾಮಗಳಿಗೆ ಹೆಸರುವಾಸಿಯಾಗಿದೆ ಮತ್ತು ಇದು ವರ್ಷದ ಎಲ್ಲಾ ಸಮಯದಲ್ಲೂ ಮಧುಚಂದ್ರಕ್ಕೆ ಸೂಕ್ತವಾದ ಸ್ಥಳವೆಂದು ಹೆಸರುವಾಸಿಯಾಗಿದೆ. ಈ ರಾಜ್ಯವು ಸೇಬು ಬೆಳೆಗೆ ಹೆಸರುವಾಸಿಯಾಗಿರುವುದು ಮಾತ್ರವಲ್ಲದೆ ಈ ಸುಂದರವಾದ ರಾಜ್ಯವು ಬೈಕ್ ಸವಾರರು , ಸ್ಕೇಟಿಂಗ್ ಮತ್ತು ಕಲ್ಲುಬಂಡೆಗಳನ್ನು ಹತ್ತುವ ಸಾಹಸಿಗರಿಲ್ಲಿಯೂ ಪ್ರಸಿದ್ದಿಯನ್ನು ಪಡೆದಿದೆ.

20) ಹರಿಯಾಣ

20) ಹರಿಯಾಣ

ರೋಮಾಂಚಕ ಸಂಸ್ಕೃತಿಯನ್ನು ತನ್ನಲ್ಲಿ ಹೊಂದಿರುವ ಕಾರಣ ಇದನ್ನು ದೇವರುಗಳಿರುವ ನೆಲೆ ಎಂದೂ ಈ ರಾಜ್ಯವು ಕರೆಯಲ್ಪಡುತ್ತದೆ. ಈ ರಾಜ್ಯವು ಹಸುಗಳು, ಹಾಲು ಮತ್ತು ಕೃಷಿಗೆ ಹೆಸರುವಾಸಿಯಾಗಿದೆ. ಹರಿಯಾಣವು ವಾಹನ ಉದ್ಯಮಗಳಿಗೂ ಸಹ ಹೆಸರುವಾಸಿಯಾಗಿದೆ.

21) ಪಂಜಾಬ್

21) ಪಂಜಾಬ್

ಐದು ನದಿಗಳನ್ನು ಹೊಂದಿರುವ ಈ ಭೂಮಿಯು ಭಾರತದ ಒಂದು ಸುಂದರವಾದ ರಾಜ್ಯವಾಗಿದ್ದು, ಇದು ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿರುವ ರಾಜ್ಯವಾಗಿದೆ. ಗೋಲ್ಡನ್ ಟೆಂಪಲ್ ಮತ್ತು ಹಲವಾರು ಧಾರ್ಮಿಕ ಸ್ಥಳಗಳಿಗೆ ಈ ರಾಜ್ಯವು ನೆಲೆಯಾಗಿದೆ. ಅಲ್ಲದೆ ಪಂಜಾಬ್ ಅಕ್ಕಿ, ಗೋಧಿ, ಜೋಳ, ಬಾರ್ಲಿ ಇತ್ಯಾದಿಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲದೆ ಈ ರಾಜ್ಯವನ್ನು ಲಸ್ಸಿ ಮತ್ತು ಆಲೂ ಪರೋಟಗಳಿಗೆ ಪ್ರಸಿದ್ದಿಯನ್ನು ಪಡೆದಿರುವ ರಾಜ್ಯವೆಂದು ಕರೆಯಲಾಗುತ್ತದೆ.

22) ರಾಜಸ್ಥಾನ

22) ರಾಜಸ್ಥಾನ

ಥಾರ್ ಮರುಭೂಮಿಯನ್ನು ತನ್ನಲ್ಲಿ ಹೊಂದಿರುವ ಈ ರಾಜ್ಯವು ಹಲವಾರು ಶ್ರೀಮಂತ ಹಾಗೂ ವೈಭವೋಪೇತ ಅರಮನೆಗಳನ್ನು ಮತ್ತು ಕೋಟೆಗಳನ್ನು ತನ್ನಲ್ಲಿ ಹೊಂದಿದೆ ಅಲ್ಲದೆ ರಾಜಸ್ಥಾನವು ವೈಭವೋಪೇತ ಸಂಸ್ಕೃತಿ ಮತ್ತು ಐತಿಹಾಸಿಕ ಸ್ಮಾರಕಗಳನ್ನು ತನ್ನಲ್ಲಿ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಹವಾಮಹಲ್ ಮತ್ತು ಅನೇಕ ಬಾಯೋರಿಸ್ ಗಳೂ ಸೇರಿವೆ.

23) ಗುಜರಾತ್

23) ಗುಜರಾತ್

ಈ ಶ್ರೀಮಂತ ರಾಜ್ಯವು ಆಹಾರಕ್ಕೆ ಪ್ರಸಿದ್ದಿಯನ್ನು ಪಡೆದಿದೆ ಅವುಗಳಲ್ಲಿ ಡೋಕ್ಲಾ ಮತ್ತು ಪಾಫ್ಡಾ ಪ್ರಮುಖವಾದುದಾಗಿದೆ.ಅಲ್ಲದೆ ಇಲ್ಲಿಯ ಗರ್ಭಾ ಹಾಗೂ ದಾಂಡಿಯಾ ನೃತ್ಯಗಳೂ ಸಹ ಹೆಸರುವಾಸಿಯಾದುದಾಗಿದೆ. ಈ ರಾಜ್ಯವು ವ್ಯವಹಾರ ಮನೋಭಾವಕ್ಕೆ ಜನಪ್ರಿಯವಾಗಿರುವುದರಿಂದ ಇಲ್ಲಿ ವಿಶ್ವ ವಿಖ್ಯಾತ ನಾಯಕರುಗಳು ಮತ್ತು ವ್ಯಾಪಾರಸ್ಥರನ್ನು ತನ್ನಲ್ಲಿ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ.

24) ಗೋವಾ

24) ಗೋವಾ

ಪಾರ್ಟಿಗಳನ್ನು ನಡೆಸುವ ರಾಜಧಾನಿಯೆಂದೇ ಹೆಸರಾಗಿರುವ ಗೋವಾ ತನ್ನಲ್ಲಿ ಅನೇಕ ಪಬ್ ಗಳು, ಕಡಲತೀರಗಳು, ಮಿಡ್ ನೈಟ್ ಪಾರ್ಟಿಗಳು ಮತ್ತು ಮನಮೋಹಕ ಭೂದೃಶ್ಯಗಳನ್ನು ತನ್ನಲ್ಲಿ ಹೊಂದಿದ್ದು ಪ್ರಸಿದ್ದಿಯನ್ನು ಪಡೆದಿದೆ.

25) ಮಹಾರಾಷ್ಟ್ರ

25) ಮಹಾರಾಷ್ಟ್ರ

ಬಾಲಿವುಡ್ ನಿಂದ ಹಿಡಿದು ಮುಂಬೈನ ಚಾವ್ಲ್ ಗಳು, ಮನಮೋಹಕ ಕಡಲುಗಳಿಂದ ಹಿಡಿದು ಪ್ರಾಚೀನ ಗುಹೆಗಳವರೆಗೆ ಮತ್ತು ಗಣೇಶ ಉತ್ಸವದಿಂದ ಹಿಡಿದು ಅಚ್ಚರಿಗೊಳಿಸುವಂತಹ ಶ್ರೀಮಂತ ಕಲೆ ಮತ್ತು ಸಂಸ್ಕೃತಿಗಳವರೆಗೆ ಎಲ್ಲವನ್ನೂ ಮಹಾರಾಷ್ಟ್ರಕ್ಕೆ ಭೇಟಿ ಕೊಡುವ ಪ್ರವಾಸಿಗರು ಕಾಣಬಹುದಾಗಿದೆ. ಇದನ್ನು ಶಿವಾಜಿ ಮತ್ತು ದಾದಾ ಸಾಹೇಬ್ ಫಾಲ್ಕೆ ಅವರಂತಹ ಪ್ರತಿಭಾನ್ವಿತ ವ್ಯಕ್ತಿಗಳು ನೆಲೆಸಿದ ಭೂಮಿ ಎಂದೂ ಕರೆಯಲಾಗುತ್ತದೆ.

26) ಕರ್ನಾಟಕ

26) ಕರ್ನಾಟಕ

ಕರ್ನಾಟಕವು ತನ್ನಲ್ಲಿಯ ಮೈಸೂರು ಅರಮನೆ ಮತ್ತು ಭಾರತದ ತಂತ್ರಜ್ಞಾನ ಕೇಂದ್ರವೆಂದೇ ಕರೆಯಲ್ಪಡುವ ಬೆಂಗಳೂರಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಈ ರಾಜ್ಯವು ಸಾವಿರಾರು ವರ್ಷಗಳ ಹಿಂದಿನ ಹಾಗೂ ಎಂದೂ ಮರೆಯಲಾಗದಂತಹ ಇತಿಹಾಸವನ್ನು ಹೊಂದಿದೆ . ಅಷ್ಟೇ ಅಲ್ಲದೆ ಶಾಂತಿಯುತವಾದ ಪ್ರಕೃತಿಯಿಂದ ಆವೃತವಾದ ಸುಂದರವಾದ ಗಿರಿಧಾಮಗಳನ್ನೂ ಇಲ್ಲಿ ಕಾಣಬಹುದಾಗಿದೆ.

27) ಕೇರಳ

27) ಕೇರಳ

ದೇವರ ಸ್ವಂತ ದೇಶ ಎಂದು ಕರೆಯಲ್ಪಡುವ ಕೇರಳವು ದೈವಿಕ ಲೋಕವನ್ನು ಸೃಷ್ಟಿಸುವ ರೀತಿಯ ಹಿನ್ನೀರಿನ ನೆಲೆಗಳು, ಹಲವಾರು ಸ್ವಚ್ಚವಾದ ಕಡಲತೀರಗಳು, ದೋಣಿ ಕ್ರೀಡೆಗಳು, ತೆಂಗಿನ ಮರಗಳು ಮತ್ತು ಸುಂದರವಾದ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ.

28) ತಮಿಳುನಾಡು

28) ತಮಿಳುನಾಡು

ನೈಸರ್ಗಿಕ ಸಂಪನ್ಮೂಲಗಳು, ಹಿಂದೂ ದೇವಾಲಯಗಳು, ಗಿರಿಧಾಮಗಳು ಮತ್ತು ಹಲವಾರು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿಗೆ ಹೆಸರುವಾಸಿಯಾದ ಇದು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯ ನೆಲೆಯಾಗಿದೆ. ಭಾರತದ ಎರಡನೇ ಅತಿದೊಡ್ಡ ಚಲನಚಿತ್ರ ನಿರ್ಮಾಣ ಉದ್ಯಮವಾದ ಟಾಲಿವುಡ್‌ ಸಿನಿಮಾ ಪ್ರಿಯರಲ್ಲಿ ಜನಪ್ರಿಯವಾಗಿದೆ.

29) ತೆಲಂಗಾಣ

29) ತೆಲಂಗಾಣ

ಇತ್ತೀಚೆಗೆ ಆಂಧ್ರಪ್ರದೇಶದ ಒಂದು ಭಾಗವಾಗಿದ್ದ ತೆಲಂಗಾಣ ಚಾರ್ಮಿನಾರ್, ಬಿರಿಯಾನಿ ತಾಣಗಳು, ಪ್ರಾಚೀನ ದೇವಾಲಯಗಳು ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

Read more about: india state ಭಾರತ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X