Search
  • Follow NativePlanet
Share
» »ಭೂತ, ಪ್ರೇತಗಳನ್ನು ಹೊರದಬ್ಬುವ ಪ್ರಭಾವಕಾರಿ ಸ್ಥಳಗಳಿವು

ಭೂತ, ಪ್ರೇತಗಳನ್ನು ಹೊರದಬ್ಬುವ ಪ್ರಭಾವಕಾರಿ ಸ್ಥಳಗಳಿವು

ಇಂದಿಗೂ ನಮ್ಮ ದೇಶದ ಸಾಕಷ್ಟು ಜನರು ಈ ಭೂತ, ಪಿಶಾಚಿಯನ್ನು ನಂಬುತ್ತಾರೆ. ಮೈ ಮೇಲೆ ಪ್ರೇತಾತ್ಮ ಬರೋದನ್ನು ನೀವು ಕೇಳಿರಬಹುದು. ಅಂತಹ ಅನೇಕ ಪ್ರಕರಣಗಳನ್ನು ನೋಡಿರಬಹುದು. ಅದನ್ನು ನಂಬುವವರು ನಂಬುತ್ತಾರೆ. ಈ ಪ್ರೇತಾತ್ಮ ಕಾಟದಿಂದ ಬಳಲುತ್ತಿರುವವರನ್ನು ಪ್ರೇತಾತ್ಮದಿಂದ ಮುಕ್ತಿಗೊಳಿಸಲು ನಮ್ಮ ದೇಶದಲ್ಲಿ ಅನೇಕ ಸ್ಥಳಗಳಿವೆ. ಅವುಗಳಲ್ಲಿ ಕೆಲವು ಮಂದಿರಗಳಾದರೆ ಇನ್ನೂ ಕೆಲವು ದರ್ಗಾಗಳು. ಇಲ್ಲಿಗೆ ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲಾ ಜಾತಿಯವರು ಪ್ರೇತಾತ್ಮ ಕಾಟವನ್ನು ದೂರ ಮಾಡಲು ಬರುತ್ತಾರೆ. ಅಂತಹ ಸ್ಥಳಗಳು ಯಾವುದು ಅನ್ನೋದನ್ನು ನಾವಿಂದು ತಿಳಿಸಲಿದ್ದೇವೆ.

 ಮೆಹಂದಿಪುರ್ ಬಾಲಾಜಿ ದೇವಸ್ಥಾನ, ರಾಜಸ್ಥಾನ

ಮೆಹಂದಿಪುರ್ ಬಾಲಾಜಿ ದೇವಸ್ಥಾನ, ರಾಜಸ್ಥಾನ

ರಾಜಸ್ಥಾನದ ಮೆಹಂದಿಪುರ್ ಬಾಲಾಜಿಯ ಮಂದಿರವು ದೇಹದಲ್ಲಿ ಸೇರಿಕೊಂಡಿರುವ ಪ್ರೇತಾತ್ಮವನ್ನು ಹೊರಹಾಕುವ ದೇವಾಲಯಗಳಲ್ಲಿ ಇದು ಒಂದಾಗಿದೆ. ರಾಜಸ್ತಾನದ ದೌಸಾ ಜಿಲ್ಲೆಯಲ್ಲಿದೆ ಸಾವಿರಾರು ಜನರು ಸಾವಿರ ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ದೇಹದಲ್ಲಿನ ದುಷ್ಟಶಕ್ತಿಗಳನ್ನು ಹೊರಹಾಕಲು ಜನರು ಪ್ರಯತ್ನಿಸುತ್ತಾರೆ.

ದಸರಾ ರಜೆಗೆ ಫ್ಯಾಮಿಲಿ ಜೊತೆ ಎಲ್ಲೆಲ್ಲಾ ಸುತ್ತಾಡಬೇಕೆಂದಿದ್ದೀರಿ?ದಸರಾ ರಜೆಗೆ ಫ್ಯಾಮಿಲಿ ಜೊತೆ ಎಲ್ಲೆಲ್ಲಾ ಸುತ್ತಾಡಬೇಕೆಂದಿದ್ದೀರಿ?

ಚಂಡಿ ದೇವಿ ದೇವಾಲಯ ಹರಿದ್ವಾರ

ಚಂಡಿ ದೇವಿ ದೇವಾಲಯ ಹರಿದ್ವಾರ

PC:Kalkamandir

ಚಂಡೀ ದೇವಿಯನ್ನು ದೇವಿಯ ಉಗ್ರರೂಪವೆಂದು ಕರೆಯಲಾಗುತ್ತದೆ. ಹರಿದ್ವಾರದಲ್ಲಿರುವ ಚಂಡಿ ದೇವಿ ದೇವಾಲಯವುಹಿಮಾಲಯ ಪರ್ವತದ ದಕ್ಷಿಣದ ಪರ್ವತ ಶ್ರೇಣಿಯ ಶಿವಾಲಿಕ ಬೆಟ್ಟಗಳ ಪೂರ್ವ ಶಿಖರದಲ್ಲಿ ನೀಲ್ ಪರ್ವತದ ಮೇಲೆ ನೆಲೆಗೊಂಡಿದೆ . ವಿಶೇಷವಾಗಿ ಚಾಂಡಿ ಚೌದಾಸ್, ನವರಾತ್ರಿ ಮತ್ತು ಹರಿದ್ವಾರದ ಕುಂಭ ಮೇಳದ ಉತ್ಸವಗಳ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.

ಹಜರತ್ ಸಯದ್ ಅಲಿ ಮೀರಾ ದರ್ಗಾ, ಗುಜರಾತ್

ಹಜರತ್ ಸಯದ್ ಅಲಿ ಮೀರಾ ದರ್ಗಾ, ಗುಜರಾತ್

ಈ ದೇವಾಲಯವು ದುಷ್ಟಶಕ್ತಿಗಳನ್ನು ಓಡಿಸಲು ಮತ್ತು ಅವುಗಳನ್ನು ಗುಣಪಡಿಸುವ, ವಿಶೇಷವಾಗಿ ದುಷ್ಟ ಶಕ್ತಿಗಳಿಂದ ಬಳಲುತ್ತಿರುವ ಮಹಿಳೆಯರನ್ನು ಗುಣಪಡಿಸುವಲ್ಲಿ ಹೆಸರುವಾಸಿಯಾಗಿದೆ. ಆತ್ಮಗಳು ದೇಹವನ್ನು ಬಿಟ್ಟು ಹೋಗುತ್ತವೆ ಎಂಬುದು ಜನರ ನಂಬಿಕೆ. ಈ ದರ್ಗಾವು ಯುನಿವಾ ಗ್ರಾಮದಲ್ಲಿರುವ ಕೋಟೆಯಂತೆಯೇ ಇದೆ ಮತ್ತು ಸಾವಿರಾರು ಜನರು ಜಾತಿ ಅಥವಾ ಧರ್ಮದ ವ್ಯತ್ಯಾಸವಿಲ್ಲದೆ ಇಲ್ಲಿಗೆ ಬರುತ್ತಾರೆ.

ಸೌತಡ್ಕ ಗಣಪತಿ ; ಇಲ್ಲಿನ ಗಂಟೆಯ ಮಹಿಮೆ ಏನು ಗೊತ್ತಾ?ಸೌತಡ್ಕ ಗಣಪತಿ ; ಇಲ್ಲಿನ ಗಂಟೆಯ ಮಹಿಮೆ ಏನು ಗೊತ್ತಾ?

ನಿಜಾಮುದ್ದೀನ್ ದರ್ಗಾ

ನಿಜಾಮುದ್ದೀನ್ ದರ್ಗಾ

ನಿಜಾಮುದ್ದೀನ್ ದರ್ಗಾ ದೆಹಲಿಯಲ್ಲಿ ಒಂದು ಪ್ರಮುಖ ಪ್ರವಾಸಿ ಯಾತ್ರಾ ಕೇಂದ್ರವಾಗಿದೆ. ನಿಜಾಮುದ್ದೀನ್ ದರ್ಗಾವು ಸೂಫಿ ಸಂತರು, ಖ್ವಾಜ ನಿಜಾಮುದ್ದೀನ್ ಔಲಿಯ ಸಮಾಧಿ ಆಗಿದೆ. ಇಲ್ಲಿ ಸಮಾಧಿ ಬಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ . ಮಹಿಳೆಯರು ಪರದೆಯ ಮೂಲಕ ಸಮಾಧಿಯನ್ನು ನೋಡಬಹುದು. ಇಲ್ಲಿ ಭೂತ ಪ್ರೇತಗಳನ್ನು ಬಿಡಿಸಲಾಗುತ್ತದೆ.

ಸಂತ ಸಬೀರ್ ಷಾ ದರ್ಗಾ

ಸಂತ ಸಬೀರ್ ಷಾ ದರ್ಗಾ

ಸಂತ ಸಬೀರ್ ಷಾ ದರ್ಗಾ ಜನರು ಭೂತ, ಪ್ರೇತಗಳ ನಿವಾರಣೆಗೆ ಬರುತ್ತಾರೆ. ಪ್ರತಿದಿನ ನೂರಾರು ಮಂದಿ ಇಲ್ಲಿ ಪ್ರೇತ ನಿವಾರಣೆಗೆ ಬರುತ್ತಾರೆ. ಮೊದಲು ಪ್ರೇತಾತ್ಮಗಳಿಗೆ ಶಿಕ್ಷೆಯನ್ನು ನೀಡಲಾಗುತ್ತದೆ. ನಂತರ ಕ್ಷಮೆ ಕೇಳಿದ ನಂತರವೇ ಅವರಿಗೆ ಮುಕ್ತಿ ಸಿಗುತ್ತದೆ. ಈ ದರ್ಗಾದೊಳಗೆ ಕಾಲಿಡುತ್ತಿದ್ದಂತೆ ಭೂತಗಳು ಶರೀರ ಬಿಟ್ಟು ಹೋಗುತ್ತವೆಂತೆ.

ಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆ

ದತ್ತಾತ್ರೇಯ ಮಂದಿರ ಗಂಗಾಪುರ

ದತ್ತಾತ್ರೇಯ ಮಂದಿರ ಗಂಗಾಪುರ

Pc: dailymail

ಈ ದೇವಸ್ಥಾನವು ಅಪರೂಪದ ದೇವಾಲಯವನ್ನು ಹೊಂದಿದೆ. ಕರ್ನಾಟಕದ ಈ ವಿಚಿತ್ರ ದೇವಾಲಯದಲ್ಲಿ ಹುಣ್ಣಿಮೆಯ ದಿನಗಳಲ್ಲಿ ಈ ನಿರ್ದಿಷ್ಟ ದೇವಸ್ಥಾನಕ್ಕೆ ಜನರು ಬರುತ್ತಾರೆ. ಬೆಳಿಗ್ಗೆ 11.30 ಕ್ಕೆ ಮಹಾಮಂಗಳಾರತಿ ಜೊತೆ ಪ್ರಾರಂಭವಾಗುತ್ತದೆ. ದುಷ್ಟಶಕ್ತಿಗಳನ್ನು ದೂರಮಾಡಲು ಜನರು ಇಲ್ಲಿಗೆ ಬರುತ್ತಾರೆ.

ಕಷ್ಟಬಂಜನ್ ಹನುಮಾನ್ ಮಂದಿರ

ಕಷ್ಟಬಂಜನ್ ಹನುಮಾನ್ ಮಂದಿರ

ಗುಜರಾತ್‌ನ ಭಾವನಗರದ ಸಾರಂಗ್‌ಪುರ್‌ನಲ್ಲಿರುವ ಈ ಹನುಮಾನ್‌ ಮಂದಿರವನ್ನು ಕಷ್ಟಭಂಜನ್‌ ಹನುಮಾನ್ ಎನ್ನುತ್ತಾರೆ. ಇಲ್ಲಿಗೆ ಪ್ರತಿನಿತ್ಯ ಭಕ್ತರು ಆಗಮಿಸುತ್ತಾರೆ. ಆದರೆ ಮಂಗಳವಾರ ಹಾಗೂ ಶನಿವಾರ ಈ ಮಂದಿರದಲ್ಲಿ ಲಕ್ಷಾಂತರ ಜನರು ಆಗಮಿಸುತ್ತಾರೆ. ಶನಿದೆಸೆಯಿಂದ ಮುಕ್ತಿ ಪಡೆಯಲು ಹೆಚ್ಚಿನ ಜನರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಗೆ ಬಂದರೆ ಶನಿದೆಸೆಮುಕ್ತಿಯಾಗುತ್ತದಂತೆ. ಮಂಗಳವಾರ ಹಾಗೂ ಶನಿವಾರ ಈ ಪ್ರೇತಾತ್ಮವನ್ನು ಹೊರಹಾಕುವ ಕಾರ್ಯ ನಡೆಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X