Search
  • Follow NativePlanet
Share
» »ನಿಮ್ಮ ಕನ್ಫರ್ಮ್ ರೈಲು ಟಿಕೇಟ್‌ನ್ನು ಬೇರೆಯವರಿಗೆ ವರ್ಗಾಯಿಸಬಹುದು ಗೊತ್ತಾ?

ನಿಮ್ಮ ಕನ್ಫರ್ಮ್ ರೈಲು ಟಿಕೇಟ್‌ನ್ನು ಬೇರೆಯವರಿಗೆ ವರ್ಗಾಯಿಸಬಹುದು ಗೊತ್ತಾ?

ಟ್ರೈನ್ ಟಿಕೇಟ್ ಕನ್‌ರ್ಫಮ್‌ ಆದ ಮೇಲೆ ನೀವು ಯಾವುದೋ ಕಾರಣದಿಂದ ಪ್ರಯಾಣಿಸಲು ಸಾಧ್ಯವಾಗದೆ ಟಿಕೇಟ್‌ ವ್ಯರ್ಥವಾಗಿದ್ಯಾ? ಬಹಳಷ್ಟು ಮಂದಿಗೆ ಹೀಗಾಗಿರುತ್ತದೆ. ಆದ್ರೆ ಅಂತಹ ಸಂದರ್ಭದಲ್ಲಿ ಏನ್‌ ಮಾಡೋದು ಅನ್ನೋದು ಹೆಚ್ಚಿನವರಿಗೆ ಗೊತ್ತಿರೋಲ್ಲ. ಅಂತಹ ಪರಿಸ್ಥಿತಿ ಬಂದರೆ ಟೆನ್ಷನ್‌ ಪಡೋ ಅಗತ್ಯನೇ ಇಲ್ಲ. ಆದರೆ ಕೆಲವು ನಿಯಮಗಳನ್ನು ಅನುಸರಿಸಬೇಕು.

ಟಿಕೇಟ್ ವ್ಯರ್ಥವಾಗೋದಿಲ್ಲ

ಟಿಕೇಟ್ ವ್ಯರ್ಥವಾಗೋದಿಲ್ಲ

ಬಹಳಷ್ಟು ಸಂದರ್ಭದಲ್ಲಿ ಮೊದಲಿಗೆ ಎಲ್ಲಾದರೂ ಟೂರ್ ಹೋಗುವ ಪ್ಲ್ಯಾನ್ ಮಾಡಿರುತ್ತೀರಿ. ಕೊನೆಗೆ ಕಾರಣಾಂತರದಿಂದಲೋ ನೀವು ಆ ಗುಂಪನ್ನು ಸೇರಿಕೊಳ್ಳಲಾಗುವುದಿಲ್ಲ. ಆಗ ಮುಂಗಡವಾಗಿ ಕಾಯ್ದಿರಿಸುವ ಟಿಕೇಟ್ ವ್ಯರ್ಥವಾಗುವ ಬದಲು ನಿಮ್ಮ ಬದಲು ಬೇರೊಬ್ಬರು ಆ ಸ್ಥಳವನ್ನು ಸುತ್ತಾಡಲು ಸಾಧ್ಯವಾಗುತ್ತದೆ.

ನಿಮ್ಮ ಆಸೆ ಈಡೇರಿದ್ರೆ ಇಲ್ಲಿನ ಮರಕ್ಕೆ ವಾಚ್‌ ಕಟ್ಟಬೇಕಂತೆ ನಿಮ್ಮ ಆಸೆ ಈಡೇರಿದ್ರೆ ಇಲ್ಲಿನ ಮರಕ್ಕೆ ವಾಚ್‌ ಕಟ್ಟಬೇಕಂತೆ

ಟಿಕೇಟ್ ವರ್ಗಾಯಿಸಿ

ಟಿಕೇಟ್ ವರ್ಗಾಯಿಸಿ

ರೈಲ್ವೆ ಇಲಾಖೆ ಈ ಕಾನೂನಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ ಅಂತ ಅನ್ನಿಸುತ್ತದೆ. ಇದರ ಪ್ರಕಾರ ನಿಮ್ಮ ಟಿಕೇಟ್ ಕನ್ಫರ್ಮ್ ಆಗಿದ್ದು ಯಾವುದೋ ಕಾರಣದಿಂದ ನಿಮಗೆ ಪ್ರಯಾಣಿಸಲು ಸಾಧ್ಯವಾಗದಿದ್ದಲ್ಲಿ ನೀವು ಆ ರೈಲು ಹೊರಡುವ ೨೪ ಗಂಟೆಯೊಳಗೆ ಆ ಟಿಕೇಟ್‌ನ್ನು ಬೇರೆಯವರಿಗೆ ವರ್ಗಾಯಿಸಬಹುದು.

ಯಾರಿಗೆ ವರ್ಗಾಯಿಸಬಹುದು?

ಯಾರಿಗೆ ವರ್ಗಾಯಿಸಬಹುದು?

ನಿಮ್ಮ ಫ್ಯಾಮಿಲಿಯ ಸದಸ್ಯರಿಗಷ್ಟೇ ನಿಮ್ಮ ಟಿಕೇಟ್‌ನ್ನು ವರ್ಗಾಯಿಸಬಹುದು. ಒಂದು ವೇಳೆ ಸರ್ಕಾರಿ ಅಧಿಕಾರಿ ತಮ್ಮ ಟಿಕೇಟ್‌ನ್ನು ಬೇರೆ ಸರ್ಕಾರಿ ಅಧಿಕಾರಿಗೆ ವರ್ಗಾತಿಸಬಹುದು. ಒಂದು ಶಾಲೆಯ ವಿದ್ಯಾರ್ಥಿ ಅದೇ ಶಾಲೆಯ ಬೇರೆ ವಿದ್ಯಾರ್ಥೀಗೆ ವರ್ಗಾಯಿಸಬಹುದು.

ದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿ

ವರ್ಗಾಯಿಸುವುದು ಹೇಗೆ?

ವರ್ಗಾಯಿಸುವುದು ಹೇಗೆ?

ರೈಲು ಹೊರಡುವ ೨೪ ಗಂಟೆ ಮೊದಲು ಟಿಕೇಟ್ ಟ್ರಾನ್ಫರ್ ಮಾಡಬಹುದಾಗಿದೆ. ಅದೂ ಕೂಡಾ ಕೇವಲ ಒಮ್ಮೆ ಮಾತ್ರ ಟ್ರಾನ್ಫರ್ ರಿಕ್ವೆಸ್ಟ್ ಸಲ್ಲಿಸಬಹುದಾಗಿದೆ. .
ಸರ್ಕಾರಿ ಅಧಿಕಾರಿಗಳ ಟಿಕೇಟ್ ವರ್ಗಾಯಿಸುವುದಾದಲ್ಲ ೨೪ ಗಂಟೆಗೂ ಮೊದಲೇ ಅನುಮತಿ ಸಿಗುತ್ತದೆ. ಆಗ ಬೇರೆ ಸರ್ಕಾರಿ ಅಧಿಕಾರಿಯ ಹೆಸರಿಗೆ ಸಿಗುತ್ತದೆ.

ನಿಯಮಗಳನ್ನು ಪಾಲಿಸಬೇಕು

ನಿಯಮಗಳನ್ನು ಪಾಲಿಸಬೇಕು

ಶಾಲೆಯ ವಿದ್ಯಾರ್ಥಿಯ ಟಿಕೇಟ್‌ನ್ನು ಇನ್ನೊರ್ವ ವಿದ್ಯಾರ್ಥಿಯ ಹೆಸರಿಗೆ ವರ್ಗಾಯಿಸುವುದಾದರೆ ಶಾಲೆಯ ಮುಖ್ಯಸ್ಥರ ಅನುಮತಿ ಪತ್ರ ತರಬೇಕು.
ಇನ್ನು ಯಾವುದಾದರೂ ಮದುವೆ ಪಾರ್ಟಿಯ ವ್ಯಕ್ತಿಯ ಟಿಕೇಟ್ ವರ್ಗಾಯಿಸಬೇಕಾದರೆ 48 ಗಂಟೆಯೊಳಗೆ ಸಾಧ್ಯವಾಗುತ್ತದೆ.

ಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದು ಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದು

ಉಪಕಾರಿ ಸೇವೆ

ಉಪಕಾರಿ ಸೇವೆ

ರೈಲ್ವೆ ಇಲಾಖೆಯು ಈ ನಿಯಮವನ್ನು ಜಾರಿಗೆ ತರುವ ಮೂಲಕ ಕನ್ಫಮ್ ಟಿಕೇಟ್‌ ಪಡೆದಿದ್ದು ಪ್ರಯಾಣಿಸಲು ಸಾಧ್ಯವಾಗದವರಿಗೆ ಉಪಕಾರಿಯಾಗಿದೆ. ಈ ಮೂಲಕ ಟಿಕೇಟ್‌ನ ಹಣವು ವ್ಯರ್ಥವಾಗೋದಿಲ್ಲ. ಜೊತೆಗೆ ನಿಮ್ಮ ಕುಟುಂಬದವರು ಆ ಟಿಕೇಟ್‌ನಲ್ಲಿ ಪ್ರಯಾಣಿಸಬಹುದಾಗಿದೆ. .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X