Search
  • Follow NativePlanet
Share
» »ದೇವರ ಹೆಸರನ್ನು ಹೊಂದಿರುವ ಭಾರತದ 7 ಪ್ರಮುಖ ಸ್ಥಳಗಳು

ದೇವರ ಹೆಸರನ್ನು ಹೊಂದಿರುವ ಭಾರತದ 7 ಪ್ರಮುಖ ಸ್ಥಳಗಳು

ಭಾರತವು ಪ್ರಾಚೀನ ಇತಿಹಾಸ ಮತ್ತು ಸಹಸ್ರಮಾನದಷ್ಟು ಹಳೆಯ ದಂತಕಥೆಗಳನ್ನು ತನ್ನಲ್ಲಿ ಒಳಗೊಂಡಿರುವ ದೇಶವಾಗಿದ್ದು, ವೇದಗಳ ಕಾಲದಿಂದಲೂ ಭಾರತದ ವೈಭವದಲ್ಲಿ ಎಂದಿಗೂ ಕಡಿಮೆ ಎಂದೂ ಆಗಿದ್ದಿಲ್ಲ . ಇದಲ್ಲದೆ ಭಾರತದ ಪ್ರತಿಯೊಂದು ಬೀದಿಗಳೂ ನಿಮಗೆ ಆ ಸ್ಥಳದ ಮತ್ತು ಅವುಗಳ ಸಮೃದ್ಧಿ, ವಿನಾಶ ಮತ್ತು ಉಳಿವಿನಿಂದ ತುಂಬಿದ ಹಿಂದಿನ ಕಥೆಯನ್ನು ಹೇಳುತ್ತದೆ. ಅಭಿವೃದ್ಧಿ ಹೊಂದುತ್ತಿರುವ ನಗರಗಳು ಮತ್ತು ಹಳ್ಳಿಗಳು ನಗರಗಳತ್ತ ತಿರುಗುವ ನಿಟ್ಟಿನಲ್ಲಿ ಅತ್ಯಾಧುನಿಕತೆಯತ್ತ ಹೆಜ್ಜೆ ಹಾಕುತ್ತಿರುವ ದೇಶವು ಅಭಿವೃದ್ದಿ ಹೊಂದುತ್ತಿರುವುದು ಪಾರದರ್ಶಕದಂತೆ ಕಂಡುಬರುತ್ತಿದೆ.

ಇಂದು, ಭಾರತದ ಸಾವಿರಾರು ದೊಡ್ಡ ನಗರಗಳು ಭಾರತದ ಅಭಿವೃದ್ದಿಯಲ್ಲಿ ಸಹಕರಿಸುತ್ತಾ ಮಹತ್ತರ ಪಾತ್ರವಹಿಸಿದೆ. ಈ ಎಲ್ಲಾ ನಗರಗಳ ಮಧ್ಯೆ, ಕೆಲವು ಸ್ಥಳಗಳು ಮತ್ತು ಪ್ರಾಂತ್ಯಗಳು ಅಲ್ಲಿ ಪೂಜಿಸಲ್ಪಡುವ ಮುಖ್ಯ ದೇವರು, ದೇವತೆಗಳ ಆಶೀರ್ವಾದವೆಂದು ಪರಿಗಣಿಸಿ ಅವರುಗಳ ಹೆಸರನ್ನೇ ಹೊಂದಿದ್ದು, ಈ ಮೂಲಕ ಆಯಾ ಸ್ಥಳಗಳ ಅಭಿವೃದ್ದಿಗೆ ಸಹಾಯ ಮಾಡುತ್ತವೆ. ಭಾರತದ ಕೆಲವು ಮಹತ್ವದ ಸ್ಥಳಗಳನ್ನು ಈ ಕೆಳಗೆ ನೀಡಲಾಗಿದೆ, ಈ ಸ್ಥಳಗಳು ಖಂಡಿತವಾಗಿಯೂ ನೇರವಾಗಿ ದೇವರ ಕೃಪೆಯನ್ನು ಹೊಂದಿರುವವೆಂದು ಪರಿಗಣಿಸಲಾಗಿದ್ದು, ಈ ಎಲ್ಲಾ ನಗರಗಳಿಗೆ ಅವುಗಳಿಗೆ ಸಂಬಂಧಿಸಿದ ದೇವಾನು ದೇವತೆಗಳ ಇಡಲಾಗಿದೆ.

ಮುಂಬೈ

ಮುಂಬೈ

ಸದಾ ಎಚ್ಚರವಿರುವ ನಗರವೆಂದು ಪ್ರಖ್ಯಾತಿ ಪಡೆದಿರುವ ಇರುವ ಮುಂಬೈ ಭಾರತದ ಆರ್ಥಿಕ ರಾಜಧಾನಿಯೆಂದೇ ಪ್ರಸಿದ್ದಿಯನ್ನು ಪಡೆದಿದೆ. ಚಲನಚಿತ್ರೋದ್ಯಮ, ಕಡಲತೀರಗಳು ಮತ್ತು ಅತ್ಯಾಧುನಿಕ ಜೀವನಶೈಲಿಗಾಗಿ ಇದು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ಕೆಲವೊಮ್ಮೆ ಈ ನಗರದಲ್ಲಿಯ, ಶ್ರೀಮಂತ ಜೀವನ ಮತ್ತು ಉತ್ತಮ ಅವಕಾಶಗಳ ಕಾರಣದಿಂದಾಗಿ ಇದನ್ನು ಸಿಟಿ ಆಫ್ ಡ್ರೀಮ್ಸ್(ಕನಸುಗಳ ನಗರ) ಎಂದೂ ಕರೆಯಲಾಗುತ್ತದೆ.

ಮಾತೃ ದೇವತೆಯಾದ ಮುಂಬಾದೇವಿಯ ಹೆಸರನ್ನೇ ಈ ನಗರಕ್ಕೆ ಇಡಲಾಗಿದೆ ಎನ್ನುವ ವಿಷಯವು ಕೆಲವರಿಗಷ್ಟೇ ಗೊತ್ತಿರುವ ವಿಷಯವಾಗಿದೆ. ಮುಂಬಾ ದೇವಿಯ ಕಥೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೀವು ಬಯಸಿದರೆ, ನೀವು ಮುಂಬೈನಲ್ಲಿ ನೆಲೆಸಿರುವ ಮುಂಬಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಅಲ್ಲದೆ ಮುಂಬೈನ ಕಡಲತೀರಗಳು, ಫಿಲ್ಮ್ ಸಿಟಿ ಮತ್ತು ಗೇಟ್ವೇ ಆಫ್ ಇಂಡಿಯಾದಂತಹ ಇತರ ಪ್ರಾಚೀನ ಕಟ್ಟಡಗಳನ್ನು ಸಹ ನೀವು ಭೇಟಿ ಮಾಡಬಹುದು.

ಶಿಮ್ಲಾ

ಶಿಮ್ಲಾ

ಹಿಮಾಲಯದ ತೆಕ್ಕೆಯಲ್ಲಿರುವ ಅದ್ಬುತವಾದ ಶಿಮ್ಲಾವು ಭಾರತದ ಅತ್ಯಂತ ಹೆಚ್ಚು ಭೇಟಿ ಕೊಡುವ ಮತ್ತು ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದಾಗಿದೆ. ಪರ್ವತಗಳ ರಾಣಿ ಎಂದೂ ಕರೆಯಲ್ಪಡುವ ಶಿಮ್ಲಾವು ಅದರ ಶಾಂತಿಯುತವಾದ ಸೌಂದರ್ಯತೆ , ಪರಿಸರ ಹಾಗೂ ಕಳಂಕರಹಿತ ವಾತಾವರಣವು ಎಲ್ಲಾ ಕಡೆಯೂ ಹರಡಿರುವುದರಿಂದ ಪ್ರವಾಸಿಗರಿಗೆ ಅಚ್ಚು ಮೆಚ್ಚಿನ ಸ್ಥಳವಾಗಿದೆ.

ಕಾಳಿ ದೇವಿಯ ಅವತಾರವಾದ ಶ್ಯಾಮಲಾ ದೇವಿಯ ಹೆಸರನ್ನು ಇಲ್ಲಿಗೆ ಇಡಲಾಗಿದೆ. ಶ್ಯಾಮಲಾ ದೇವಿಗೆ ಸಂಬಂಧಿಸಿದ ಇತಿಹಾಸವನ್ನು ತಿಳಿಯಲು ಉತ್ಸುಕರಾಗಿರುವಿರಾ? ಹಾಗಿದ್ದಲ್ಲಿ, ನೀವು ಇಲ್ಲಿಯ ಬೆಟ್ಟ ಮತ್ತು ಬಯಲುಪ್ರದೇಶದ ಮೇಲೆ ನೆಲೆಸಿರುವ ಶ್ಯಾಮಲ ಮತ್ತು ಕಾಳೀ ದೇವಾಲಯಗಳಿಗೆ ಭೇಟಿ ನೀಡಬಹುದು. ಅಲ್ಲದೆ ಮೋಡಿಮಾಡುವಂತಹ ಪ್ರಕೃತಿಯನ್ನು ನೀವು ಪ್ರೀತಿಸುವವರಾಗಿದ್ದಲ್ಲಿ, ಶಿಮ್ಲಾದ ಅಸಾಧಾರಣ ಸೌಂದರ್ಯ ಮತ್ತು ಅತಿವಾಸ್ತವಿಕವಾದ ಸ್ಥಳಗಳನ್ನು ಸಹ ಆನಂದಿಸಬಹುದಾಗಿದೆ.

ಚಂಡೀಗಡ

ಚಂಡೀಗಡ

ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾದ ಎರಡು ನೆರೆಯ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್‌ಗಳಿಗೆ ರಾಜಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಚಂಡೀಗಡ, ಕಳೆದ ಕೆಲವು ದಶಕಗಳಿಂದ ಸಾಕಷ್ಟು ಅಭಿವೃದ್ದಿ ಹೊಂದಿದೆ. ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದರಿಂದ ಹಿಡಿದು ಮರಗಳನ್ನು ನೆಡುವವರೆಗೆ ಈ ಅದ್ಭುತವಾದ ನಗರವು ಒಂದು ನಗರದ ಸೌಂದರ್ಯತೆಗೆ ಬೇಕಾದ ಎಲ್ಲವನ್ನೂ ಹೊಂದಿದ್ದು ಸುಂದರವಾದ ನಗರವೆನಿಸಿಕೊಂಡಿದೆ.

ರಾಕ್ ಗಾರ್ಡನ್ ಗೆ ಹೆಸರುವಾಸಿಯಾದ ಚಂಡೀಗಡದ ಈ ಹೆಸರು ಪಾರ್ವತಿ ದೇವಿಯ ಉಗ್ರ ಸ್ವರೂಪವಾದ ಹಾಗೂ ಕೋಪ ಮತ್ತು ದುಷ್ಕೃತ್ಯಗಳನ್ನು ಸಹಿಸದ ವರ್ತನೆಗೆ ಹೆಸರುವಾಸಿಯಾದ ಚಂಡೀ ದೇವಿಯಿಂದ ಬಂದುದಾಗಿದೆ. ನಿಸ್ಸಂಶಯವಾಗಿ, ಇಲ್ಲಿ ಎಲ್ಲೆಡೆ ಹರಡಿರುವ ಪರಿಶುದ್ಧತೆಯು ಚಂಡಿ ಮಾತೆಯ ಆಶೀರ್ವಾದವೋ ಎನ್ನುವಂತೆ ಕಾಣುತ್ತಿದ್ದು ದೇವಿಯು ನಗರವನ್ನು ದುಷ್ಕೃತ್ಯಗಳಿಂದ ರಕ್ಷಿಸುತ್ತಿರುವಂತೆ ಕಾಣುತ್ತದೆ.

ಮಂಗಳೂರು

ಮಂಗಳೂರು

ಶಕ್ತಿ ಸ್ವರೂಪಿಯಾದ ಮಂಗಳಾದೇವಿಯ ಹೆಸರನ್ನೇ ಇಟ್ಟಿರುವ ಮಂಗಳೂರು ನಗರವು ಭಾರತದ ಕರ್ನಾಟಕ ರಾಜ್ಯದಲ್ಲಿಯ ಒಂದು ದೊಡ್ಡ ಬಂದರು ನಗರವಾಗಿದೆ. ಮಂಗಳೂರಿನಲ್ಲಿ ಮಂಗಳಾದೇವಿ ದೇವಾಲಯವಿದ್ದು ಈ ನಗರವು ತನ್ನ ಮನಮೋಹಕ ಸೌಂದರ್ಯತೆ ಮತ್ತು ಸುಂದರವಾದ ಭೂದೃಶ್ಯಕ್ಕಾಗಿ ಹೆಸರು ಪಡೆದಿದೆ. ಇಲ್ಲಿಯ ಸೌಂದರ್ಯತೆ ಮತ್ತು ಸುಂದರವಾದ ಭೂದೃಶ್ಯ ಹಾಗೂ ಈ ನಗರದ ಇತಿಹಾಸದ ಅನ್ವೇಷಣೆ ಮಾಡಲು ದೇಶದಾದ್ಯಂತದ ಜನರು ಭೇಟಿ ಕೊಡುವುದನ್ನು ಇಲ್ಲಿ ಕಾಣಬಹುದಾಗಿದೆ.

ಮಂಗಳೂರಿನ ಗಡಿಯೊಳಗೆ ನೀವು ಪ್ರವೇಶಿಸಿದಲ್ಲಿ, ಬಂದರು ನಗರವಾದ ಮಂಗಳೂರಿನ ಉಗಮಕ್ಕೆ ಕಾರಣವಾದ ಮಂಗಳಾದೇವಿ ದೇವಾಲಯಕ್ಕೆ ಭೇಟಿ ಕೊಡುವುದನ್ನು ಮರೆಯದಿರಿ.

ವಿಶಾಖಪಟ್ಟಣಂ

ವಿಶಾಖಪಟ್ಟಣಂ

ಭಾರತದ ಅತ್ಯಂತ ಹಳೆಯ ನಗರ ಹಾಗೂ ಆಂಧ್ರಪ್ರದೇಶದ ಆರ್ಥಿಕ ರಾಜಧಾನಿ ಎನಿಸಿರುವ ವಿಶಾಖಪಟ್ಟಣಂಗೆ ಆಂಧ್ರದ ರಾಜನ ಮನೆದೇವರಾದ ವಿಸಾಕೇಶ್ವರ ದೇವರ ಹೆಸರನ್ನಿಡಲಾಗಿದೆ.ರಾಜನು ಈ ನಗರದ ಕರಾವಳಿಯ ಸಮೀಪ ವಿಸಕೇಶ್ವರ ದೇವಾಲಯವನ್ನು ಅದರ ಶಾಂತ ಮತ್ತು ಶಾಂತಿಯುತ ವಾತಾವರಣ ಮತ್ತು ದೈವಿಕ ಸೆಳವಿನ ಕಾರಣದಿಂದಾಗಿ ನಿರ್ಮಿಸಿದನು ತದನಂತರದಿಂದ ಈ ನಗರವು ವಿಶಾಖಪಟ್ಟಣಂ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು.

ಪ್ರೀತಿಯಿಂದ ವೈಜಾಗ್ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ವಿಶಾಖಪಟ್ಟಣಂ ನ ಅನ್ವೇಶನೆ ಮಾಡಬೇಕೆಂದಿದ್ದಲ್ಲಿ, ಇಲ್ಲಿಯ ಬೀಚ್ ಗಳಿಗೆ, ಪ್ರಾಚೀನ ದೇವಾಲಯಗಳು ಮತ್ತು ಸ್ತೂಪಗಳಿಗೆ ಭೇಟಿ ನೀಡಬಹುದಾಗಿದೆ.

ತಿರುವನಂತಪುರಂ

ತಿರುವನಂತಪುರಂ

ದೇವರ ಸ್ವಂತ ನಗರವೆನಿಸಿರುವ ಕೇರಳದ ರಾಜಧಾನಿಯಾಗಿರುವ ತಿರುವನಂತಪುರಂ ಶಾಂತಿಯುತವಾದ ಹಿನ್ನಿರು, ರೋಮಾಂಚಕ ದೋಣಿ ಸವಾರಿ, ಮತ್ತು ಮನಮೋಹಕ ತಾಳೆ ಮರಗಳಿಗೆ ಹೆಸರುವಾಸಿಯಾಗಿದೆ.

ತಿರುವನಂತಪುರಂ ಎಂದರೆ ನಿಜಾರ್ಥದಲ್ಲಿ ಅನಂತ ದೇವರ ನಗರ ಎಂದು ಅರ್ಥೈಸುತ್ತದೆ. ಅನಂತ ಎಂದರೆ ಕೊನೆಯಿಲ್ಲದ ಎಂದು ಅರ್ಥಬರುವ ಈ ದೇವರು ಇಡೀ ಜಗತ್ತು ಮತ್ತು ಭೂಮಿಯನ್ನು ತನ್ನಲ್ಲಿ ಹಿಡಿದಿರುವನೆಂದು ನಂಬಲಾಗುತ್ತದೆ. ಅನಂತದೇವರಿಗೆ ಅರ್ಪಿತವಾದ ಪದ್ಮನಾಭ ದೇವಾಲಯವು ತಿರುವನಂತಪುರಂ ನಲ್ಲಿ ನೆಲೆಸಿದೆ.

ಇಂದೋರ್

ಇಂದೋರ್

ಸ್ವರ್ಗದ ಅಧಿಪತಿ ಹಗೂ ಮಿಂದು, ಸಿಡಿಲು ಮತ್ತು ಮಳೆಯ ದೇವರಾದ ಇಂದ್ರ ದೇವನಿಗೆ ಅರ್ಪಿತವಾದ ಇಂದ್ರೇಶ್ವರ ದೇವಾಲಯದಿಂದಾಗಿ ಈ ನಗರಕ್ಕೆ ಇಂದೋರ್ ಎಂಬ ಹೆಸರು ಬಂದಿದೆ. ಮಧ್ಯ ಪ್ರದೇಶದ ವಾಣಿಜ್ಯ ರಾಜಧಾನಿ ಎಂದು ಪರಿಗಣಿಸಲ್ಪಟ್ಟಿರುವ ಇಂದೋರ್ ನಗರ ಪ್ರದೇಶ ಮತ್ತು ಅನೇಕ ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ.

ಇಂದೋರ್‌ನ ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಟಿಂಚಾ ಫಾಲ್ಸ್, ಸೆಂಟ್ರಲ್ ಮ್ಯೂಸಿಯಂ, ಲಾಲ್ ಬಾಗ್ ಪ್ಯಾಲೇಸ್, ರಾಜವಾಡ ಪ್ಯಾಲೇಸ್, ಇತ್ಯಾದಿ. ಭಗವಾನ್ ಇಂದ್ರನ ಈ ಅದ್ಭುತ ನಗರಕ್ಕೆ ಭೇಟಿ ನೀಡಿ ಸ್ವತ: ನೀವೇ ದೇವರ ಆಶೀರ್ವಾದ ಪಡೆದರೆ ಹೇಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X