Search
  • Follow NativePlanet
Share
» »ವಿಸ್ಮಯಗೊಳಿಸುವ ಪ್ರದರ್ಶನಗಳ ಅದ್ಭುತ ಸಂಗ್ರಹಾಲಯ

ವಿಸ್ಮಯಗೊಳಿಸುವ ಪ್ರದರ್ಶನಗಳ ಅದ್ಭುತ ಸಂಗ್ರಹಾಲಯ

By Vijay

ಭಾರತದ ಅತ್ಯಂತ ದೊಡ್ಡ ಹಾಗೂ ಪುರಾತನ ವಸ್ತು ಸಂಗ್ರಹಾಲಯಕ್ಕೆ ಎಂದಾದರೂ ಭೇಟಿ ನೀಡಿರುವಿರಾ? ಅಲ್ಲಿ ಯಾವ್ಯಾವ ವಸ್ತುಗಳು ಪ್ರದರ್ಶಿತಗೊಂಡಿರಬಹುದು ಎಂಬ ಕುತೂಹಲ ನಿಮಗಿದೆಯಾ? ಹಾಗಾದರೆ ಈ ಲೇಖನದ ಮೂಲಕ ಆ ಎರಡು ಪ್ರಶ್ನೆಗಳಿಗೆ ಉತ್ತರ ಕೊಂಡುಕೊಳ್ಳಿ. ಅದಕ್ಕಿಂತಲೂ ಮಿಗಿಲಾಗಿ ಸಮಯಾವಕಾಶ ದೊರೆತರೆ ಈ ಸಂಗ್ರಹಾಲಯಕ್ಕೊಮ್ಮೆಯಾದರೂ ಪ್ರವಾಸ ಮಾಡಿ.

ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಸಂಸ್ಥೆಯಡಿ ಡ್ಯಾನಿಶ್ ಸಸ್ಯ ಶಾಸ್ತ್ರಜ್ಞರಾಗಿದ್ದ ಡಾ. ನಥನೀಲ್ ವಾಲಿಚ್ ಎಂಬುವವರಿಂದ ಸ್ಥಾಪಿಸಲ್ಪಟ್ಟ, ಇಂದಿನ ಕೊಲ್ಕತ್ತಾದಲ್ಲಿರುವ ಇಂಡಿಯನ್ ಮ್ಯೂಸಿಯಂ ಅಥವಾ ವಸ್ತು ಸಂಗ್ರಹಾಲಯವೆ ಭಾರತದ ದೊಡ್ಡ ಹಾಗೂ ಪುರಾತನ ವಸ್ತು ಸಂಗ್ರಹಾಲಯವಾಗಿದೆ.

ಎಲ್ಲ ಥಾಮಸ್ ಕುಕ್ ಪ್ರವಾಸ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ

ಪ್ರಪಂಚದಲ್ಲೆ ಅತಿ ಪುರಾತನ ವಸ್ತು ಸಂಗ್ರಹಾಲಯಗಳ ಪೈಕಿ ಒಂದಾಗಿರುವ ಇಂಡಿಯನ್ ಮ್ಯೂಸಿಯಂ ಸ್ಥಾಪನೆಯಾಗಿದ್ದು 1814 ರಲ್ಲಿ. ಈ ಬೃಹತ್ ಸಂಗ್ರಹಾಲಯದಲ್ಲಿ ಅತಿ ಪ್ರಾಚೀನ ಹಾಗೂ ಅಪರೂಪದ ವಸ್ತುಗಳು, ಆಭರಣಗಳು, ನಾಣ್ಯಗಳು, ಸರಿಸೃಪ ಜೀವಿಗಳ ಮಾದರಿಗಳು, ವರ್ಣಚಿತ್ರಗಳು ಹೀಗೆ ವೈವಿಧ್ಯಮಯ ವಸ್ತುಗಳನ್ನು ಕಾಣಬಹುದಾಗಿದೆ.

ವಿಶೇಷ ಲೇಖನ : ನಂಬಿದರೆ ನಂಬಿ ಬಿಟ್ಟರೆ ಬಿಡಿ!

ಇನ್ನೂ ಮಕ್ಕಳ ಬೌದ್ಧಿಕ ವಿಕಸನದ ದೃಷ್ಟಿಯಿಂದ ಈ ಸಂಗ್ರಹಾಲಯವು ಒಮ್ಮೆಯಾದರೂ ಭೇಟಿ ಕೊಡಲೇಬೇಕಾದ ಶೈಕ್ಷಣಿಕ ಪ್ರವಾಸಿ ಆಕರ್ಷಣೆಯಾಗಿರುವುದಂತೂ ನಿಜ. ಈ ಲೇಖನದ ಮೂಲಕ ಇಲ್ಲಿನ ಕೆಲವು ಅಪರೂಪದ ವಸ್ತುಗಳ ಕುರಿತು ತಿಳಿಯಿರಿ ಹಾಗೂ ಭೇಟಿ ನೀಡಲು ಒಂದೊಮ್ಮೆ ಯೋಜಿಸಿರಿ. ಸ್ಥಳ ಹಾಗೂ ಸಮಯದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಸ್ಲೈಡುಗಳಲ್ಲಿ ಇಲ್ಲಿ ಪ್ರದರ್ಶಿಸಲಾಗಿರುವ ವಸ್ತುಗಳಲ್ಲಿ ಕೆಲವು ಆಯ್ದ ಚಿತ್ರಗಳು.

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಬಿಸಿಇ ಅಥವಾ ಕ್ರಿ.ಪೂ 2600-1700 ಸಮಯದಲ್ಲಿ ಹರಪ್ಪಾ ನಾಗರಿಕತೆಯ ಉತ್ಖನನದ ಸಂದರ್ಭದಲ್ಲಿ ದೊರೆತಿರುವ ಆ ಸಮಯದ ಮಾನವ ತಲೆ ಬುರುಡೆ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಮಾನವನ ದೈಹಿಕ ವಿಕಸನವನ್ನು ಬಿಂಬಿಸುವ ಒಂದು ಅದ್ಭುತ ಮಾದರಿ. ಪ್ರತಿ ಹಂತದಲ್ಲೂ ಆದ ಶಾರೀರಿಕ ಬದಲಾವಣೆಗಳ ಕುರಿತು ಸಮರ್ಪಕವಾಗಿ ವಿಷಯ ಇಲ್ಲಿ ತಿಳಿಸಲಾಗಿದ್ದು ಇತಿಹಾಸ ಪ್ರಿಯ ಪ್ರವಾಸಿಗರಿಗೆ ಇದು ಇಷ್ಟವಾಗುವ ಅಂಶವಾಗಿದೆ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಪ್ರಪಂಚದ ಮೂಲೆ ಮೂಲೆಗಳಿಂದ ಯಾವೆಲ್ಲ ಪಕ್ಷಿಗಳು/ಹಕ್ಕಿಗಳು ಭಾರತಕ್ಕೆ ವಲಸೆ ಬರುತ್ತವೆ ಎಂಬುದನ್ನು ತಿಳಿಸುವ ಸರಳ ಮಾದರಿ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಪಕ್ಷಿಗಳಲ್ಲೆ ಅತ್ಯಂತ ಪ್ರಾಚೀನ ವರ್ಗಕ್ಕೆ ಸೇರಿದ ಪಕ್ಷಿ ಇದಾಗಿದೆ. ಆಪಿಸ್ತೊಕೊಮೈಡ್ (Opisthocomidae) ಎಂಬ ಕುಟುಂಬಕ್ಕೆ ಸೇರಿದ ಈ ಪಕ್ಷಿಯ ಹೆಸರು ಹೋಟ್ಜೆನ್ ಹಾಗೂ ಇದು ದಕ್ಷಿಣ ಅಮೇರಿಕಾದ ಮ್ಯಾಂಗ್ರೋವ್ ಕಾಡುಗಳಲ್ಲಿ ಕಂಡುಬರುತ್ತದೆ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಆಗ್ನೇಯ ಭಾರತ ಹಾಗೂ ಚೀನಾ ಪ್ರಾಂತ್ಯಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪಕ್ಷಿಗಳ ಮಾದರಿಗಳು.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಹಿಂದೆ ಈಜಿಪ್ತ್ ಪ್ರಾಂತ್ಯಗಳಲ್ಲಿ ಮಾಡಲಾಗುತ್ತಿದ "ಮಮ್ಮಿ" ಗಳ ಮಾದರಿ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಅಚ್ಚಾಗಿ ಶಿಲೆಗಳ ಮೇಲೆ ಮೂಡಿರುವ ಪ್ರಾಚೀನ ಸಸ್ಯಗಳ ಪಳೆಯುಳಿಕೆಗಳು.

ಚಿತ್ರಕೃಪೆ: ptwo

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಪುರಾತನ ಸಮಯದಲ್ಲಿದ್ದ ದೃಢ ಕಾಯ ಆನೆಗಳ ಅಸ್ಥಿ ಪಂಜರಗಳ ಕರಾರುವಕ್ಕಾದ ಜೋಡಣೆ.

ಚಿತ್ರಕೃಪೆ: ptwo

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಪ್ರಾಚೀನ ಸಮಯದ ಚಿಪ್ಪುಗಳು.

ಚಿತ್ರಕೃಪೆ: ptwo

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಭಾರತ ದೇಶದಲ್ಲಿರುವ ಜೈವಿಕ ಶ್ರೀಮಂತಿಕೆಯನ್ನು ಪ್ರದರ್ಶಿಸುವ ವಿಭಾಗದಲ್ಲಿ ಪ್ರದರ್ಶಿಸಲಾಗಿರುವ ಭಾರತದಲ್ಲಿ ಕಂಡುಬರುವ ಮೊಸಳೆಗಳ ಅದ್ಭುತ ಮಾದರಿಗಳು.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಕ್ರಿ.ಪೂ ಸಮಯದ ಎರಡನೇಯ ಶತಮಾನದ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ತಾಮ್ರದ ನಾಣ್ಯ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

1325 ರಿಂದ 1351 ರ ಮಧ್ಯದಲ್ಲಿ ಮೊಹಮ್ಮದ್ ಬೀನ್ ತಘುಲಕ್ ನ ಆಡಳಿತ ಸಮಯದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

1870 ರಿಂದ 75 ರ ಮಧ್ಯದಲ್ಲಿ ಮಲ್ಹಾರ್ ರಾವ್ ಆಡಳಿತದ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯದ ಮಾದರಿ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ದಕ್ಷಿಣ ಭಾರತದ ಮೈಸೂರು ಪ್ರಾಂತ್ಯದಲ್ಲಿ, 1782-99 ರ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಟಿಪ್ಪು ಸುಲ್ತಾನನ ಆಳ್ವಿಕೆಯ ಸಮಯದಲ್ಲಿದ್ದ ನಾಣ್ಯದ ಮಾದರಿ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಎರಡನೇಯ ಶತಮಾನದಲ್ಲಿ ಬಳಕೆಯಲ್ಲಿದ್ದ, ಗೋಲಾಕಾರವಲ್ಲದ ಬದಲಿಗೆ ಚೌಕಾಕಾರದಲ್ಲಿರುವ ತಾಮ್ರದ ನಾಣ್ಯ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಪ್ರಾಚೀನ ಶಿಲಾಯುಗದಲ್ಲಿ ಮಾನವನು ತುಂಡರಿಸಲು ಬಳಸುತ್ತಿದ್ದ ಕಲ್ಲಿನ ಆಯುಧ. ನರ್ಮದಾ ಕಣಿವೆಯಿಂದ ಇದನ್ನು ಹೊರತೆಗೆಯಲಾಗಿದ್ದು ಭಾರತೀಯ ಸಂಗ್ರಹಾಲಯದಲ್ಲಿ ಪ್ರದರ್ಶಿತಗೊಂಡಿರುವುದು.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಕ್ರಿ.ಪೂ 336-323 ರ ಸಂದರ್ಭದಲ್ಲಿ ಅಲೆಕ್ಸಾಂಡರಿನ ಅವಧಿಯಲ್ಲಿ ಪ್ರಚಲಿತದಲ್ಲಿದ್ದ ಬೆಳ್ಳಿಯ ನಾಣ್ಯ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಮೊಸಳೆಗಳ ನೈಜ ಅಸ್ಥಿ ಪಂಜರದ ಪ್ರದರ್ಶನ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಯಕ್ಷ ಅಟವಿಕನ ಜೊತೆ ಗೌತಮ ಬುದ್ಧನು ಮಾತುಕತೆಯಲ್ಲಿ ತೊಡಗಿರುವ ಪ್ರಸಂಗವನ್ನು ವಿವರಿಸುವ ಪುರಾತನ ಬೌದ್ಧ ಕೆತ್ತನೆ.

ಚಿತ್ರಕೃಪೆ: Photo Dharma

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಮರ ಹಾಗೂ ಮರ್ಜಾನ್ ರಾಕ್ಷಸರು ಬುದ್ಧನ ಧ್ಯಾನಕ್ಕೆ ಭಂಗ ತರಲು ಪ್ರಯತ್ನಿಸುವ ಪ್ರಸಂಗ ವಿವರಿಸುವ ಕೆತ್ತನೆ.

ಚಿತ್ರಕೃಪೆ: Photo Dharma

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಡಿಯೊರಮ ಎಂಬುದೊಂದು ಭಾರತೀಯ ಸಂಗ್ರಹಾಲಯದಲ್ಲಿರುವ ಒಂದು ವಿಭಾಗವಾಗಿದೆ. ಮೂಲತಃ ಡಿಯೊರಮ ಎಂಬುದೊಂದು, ಇಂದಿನ ಆಧುನಿಕ ಯುಗದಲ್ಲಿ ಹೇಳಬೇಕೆಂದರೆ 3D ಆಯಾಮಗಳ ಚಿತ್ರಗಳಾಗಿವೆ. ಇವು ವಸ್ತುಗಳ ಭೌತಿಕತೆಯ ನೈಜ ಲಕ್ಷಣವನ್ನು ಬಿಂಬಿಸುವ ಅಂಶಗಳಾಗಿದ್ದು ತಿಳಿದುಕೊಳ್ಳಲು ಸುಲಭವಾಗಿರುತ್ತದೆ. ಈ ಸಂಗ್ರಹಾಲಯದಲ್ಲಿಯೂ ಸಹ ಇಂತಹ ಅದ್ಭುತ ಪ್ರದರ್ಶನಗಳಿರುವುದು ವಿಶೇಷ. ಹಿಮಾಲಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಅಲ್ಪೈನ್ ಗಿಡಗಳ ಕುರಿತು ತಿಳಿಸುವ ಮಾದರಿ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಭಾರತದ ಗ್ರಾಮೀಣ ಪ್ರದೇಶಗಳ ನಿತ್ಯ ಜೀವನ ಶೈಲಿಯನ್ನು ಬಿಂಬಿಸುವ ಮಾದರಿ.

ಚಿತ್ರಕೃಪೆ: Tinucherian

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಭಾರತದ ಪಟ್ಟಣ ಹಳ್ಳಿಗಳಲ್ಲಿ ನಿತ್ಯ ಜೀವನ ಶೈಲಿಯನ್ನು ಬಿಂಬಿಸುವ ಮಾದರಿ.

ಚಿತ್ರಕೃಪೆ: Tinucherian

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುವ ವಾತಾವರಣ ಬಿಂಬಿಸುವ ಮಾದರಿ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಕೇವಲ ಭಾರತವಷ್ಟೆ ಅಲ್ಲ, ದಕ್ಷಿಣ ಅಮೇರಿಕಾದಲ್ಲಿ ಕಂಡುಬರುವ ವಿಶೇಷ ಹಕ್ಕಿಗಳ ಮಾದರಿ ಪ್ರದರ್ಶನ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ತೇವಾಂಶ ಹಾಗೂ ಜಲಾನಯನ ಪ್ರದೇಶಗಳಲ್ಲಿ ಕಂಡುಬರುವ ಪಕ್ಷಿಗಳು.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಕೇರಳ ರಾಜ್ಯದ ಗ್ರಾಮೀಣ ಪರಿಸರ ಬಿಂಬಿಸುವ ಮಾದರಿ.

ಚಿತ್ರಕೃಪೆ: Tinucherian

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಗಿರಣಿಗಳು ಬರುವ ಮುಂಚೆ, ದೇಶದ ಎಲ್ಲೆಡೆ ಗೋಧಿ ಅಥವಾ ಜೋಳದ ಹಿಟ್ಟನ್ನು ಬೀಸುವ ಕಲ್ಲಿನ ಮೂಲಕವೆ ತಯಾರಿಸಲಾಗುತ್ತಿತ್ತು. ಇಂದಿಗೂ ಹಳ್ಳಿಗಳಲ್ಲಿ ಇವು ಪ್ರಚಲಿತದಲ್ಲಿರುವುದು ವಿಶೇಷ.

ಚಿತ್ರಕೃಪೆ: Tinucherian

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಈಜಿಪ್ತ ದೇಶದಲ್ಲಿ ಹಿಂದೆ ಚಾಲ್ತಿಯಲ್ಲಿದ್ದ ವಿಶಿಷ್ಟ ರೀತಿಯ ಮಮ್ಮಿ (ಶವ ಸಂಸ್ಕಾರ) ಗಳ ಪ್ರದರ್ಶನವನ್ನೂ ಈ ಸಂಗ್ರಹಾಲಯದಲ್ಲಿ ಕಾಣಬಹುದು.

ಚಿತ್ರಕೃಪೆ: Tinucherian

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಭಯ ಹುಟ್ಟಿಸುವಂತಹ "ಮಮ್ಮಿ"ಯ ಒಂದು ಉದಾಹರಣೆ ಪ್ರದರ್ಶನ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವೈಜ್ಞಾನಿಕವಾಗಿ ಒಪ್ಪಿಕೊಳ್ಳಲಾಗಿರುವ ಸಮಯದ ವಿವಿಧ ಯುಗಗಳ ಪರಿಚಯಿಸುವ ಅದ್ಭುತ ಮಾದರಿ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಕೊಲ್ಕತ್ತಾದಲ್ಲಿರುವ ಇಂಡಿಯನ್ ಮ್ಯೂಸಿಯಂನ ಒಳಾಂಗಣ.

ಚಿತ್ರಕೃಪೆ: Biswarup Ganguly

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ವಸ್ತು ಸಂಗ್ರಹಾಲಯದ ವಿಸ್ಮಯಗಳು:

ಭಾರತೀಯ ಸಂಗ್ರಹಾಲಯದ ಕಟ್ಟಡ.

ಚಿತ್ರಕೃಪೆ: njanam92

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X