Search
  • Follow NativePlanet
Share
» »ಇದು ಇಂಡಿಯನ್ ಜುರಾಸಿಕ್ ಪಾರ್ಕ್....ಒಮ್ಮೆ ಭೇಟಿ ಕೊಡಿ

ಇದು ಇಂಡಿಯನ್ ಜುರಾಸಿಕ್ ಪಾರ್ಕ್....ಒಮ್ಮೆ ಭೇಟಿ ಕೊಡಿ

ನಮ್ಮದೇಶದಲ್ಲಿಯೂ ಕೂಡ ಡೈನೊಸಾರ್‍ಗಳು ಇವೆಯೇ? ಎಂದು ಪ್ರೆಶ್ನೆ ಕೇಳುವವರಿಗೆ ಈ ಪ್ರದೇಶವೇ ಉತ್ತರ ನೀಡುತ್ತದೆ. ಇಲ್ಲಿ ನೀವು ಡೈನೋಸರ್‍ಗಳನ್ನು ಕಣ್ಣಾರೆ ಕಂಡು, ಮುಟ್ಟಿಯು ಕೂಡ ಸ್ಪರ್ಶ ಸುಖ ಅನುಭವಿಸಬಹುದು. ಅದು ಎಲ್ಲಿದೆ ಎಂದು ಯೋಚಿಸುತ್ತಿದ್ದ

ನಮ್ಮದೇಶದಲ್ಲಿಯೂ ಕೂಡ ಡೈನೊಸಾರ್‍ಗಳು ಇವೆಯೇ? ಎಂದು ಪ್ರೆಶ್ನೆ ಕೇಳುವವರಿಗೆ ಈ ಪ್ರದೇಶವೇ ಉತ್ತರ ನೀಡುತ್ತದೆ. ಇಲ್ಲಿ ನೀವು ಡೈನೋಸರ್‍ಗಳನ್ನು ಕಣ್ಣಾರೆ ಕಂಡು, ಮುಟ್ಟಿಯು ಕೂಡ ಸ್ಪರ್ಶ ಸುಖ ಅನುಭವಿಸಬಹುದು. ಅದು ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ? ಅದೇ "ಬಲಸಿನೋರ್ ಫಾಸಿಲ್ ಪಾರ್ಕ್". ಇದನ್ನೆ ಇಂಡಿಯನ್ ಜುರಾಸಿಕ್ ಪಾರ್ಕ್ ಎಂದೂ ಸಹ ಕರೆಯುತ್ತಾರೆ.

ಒಂದು ಕಾಲದಲ್ಲಿ ಒಂದು ಗ್ರಾಮದಲ್ಲಿ ಡೈನೋಸರ್‍ಗಳನ್ನು ಪೂಜಿಸುತ್ತಿದ್ದರಂತೆ. ಆ ಗ್ರಾಮದಲ್ಲಿ ಎಲ್ಲಿ ನೋಡಿದರು ಡೈನೋಸರ್‍ಗಳ ಶಿಲೆಗಳೇ ಕಾಣಿಸುತ್ತಿತ್ತಂತೆ. ಸುತ್ತಲೂ ಅವುಗಳ ಗುರುತುಗಳೇ ಕಾಣಿಸುತ್ತವೆ....ಅದೇ ಡೈನೋಸರ್‍ಗಳ ರಾಜ್ಯ....ಇದು ಎಲ್ಲಿಯೊ ಅಲ್ಲ ನಮ್ಮ ಭಾರತ ದೇಶದಲ್ಲಿಯೇ!

"ಬಲಸಿನೋರ್ ಫಾಸಿಲ್ ಪಾರ್ಕ್"

ಜುರಾಸಿಕ್ ಪಾರ್ಕ್, ಗುಜರಾತ್ ರಾಜ್ಯದಲ್ಲಿನ ಬಾಲಸಿನೋರ್ ಪಟ್ಟಣದಿಂದ ಸಮೀಪದಲ್ಲಿ ರೈಯಾಲಿ ಎಂಬ ಗ್ರಾಮದ ಬಳಿ ಈ "ಬಲಸಿನೋರ್ ಫಾಸಿಲ್ ಪಾರ್ಕ್" ಇದೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಡೈನೊಸಾರ್‍ಗಳು ಶಿಲೆಗಳಾಗಿ ಇರುವ ಗ್ರಾಮ ಎಂದು ಪ್ರಸಿದ್ಧಿಯನ್ನು ಪಡೆದ ರೈಯಾಲಿಯಲ್ಲಿ ಕಾಣಬಹುದಾಗಿದೆ. ಇಲ್ಲಿ ಡೈನೊಸಾರ್‍ಗಳ ಮೊಟ್ಟೆಗಳು, ಅಸ್ಥಿ ಪಂಜರಗಳು, ದಂತಗಳು ಮತ್ತು ಇತರ ಶರೀರದ ಭಾಗಗಳನ್ನು ಕಾಣಬಹುದಾಗಿದೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಇಲ್ಲಿನ ಡೈನೊಸಾರ್‍ಗಳ ಶಿಲೆಗಳು ಸುಮಾರು 20 ಮೀಟರ್ ಎತ್ತರದಲ್ಲಿ ಕಾಣಿಸುತ್ತದೆ. ಪ್ರವಾಸಿರನ್ನು ಆಕರ್ಷಣೆ ಮಾಡಲು ಇಲ್ಲಿ ಎತ್ತರವಾದ ಡೈನೊಸಾರ್‍ಗಳ ವಿಗ್ರಹಗಳನ್ನು ಕಂಡು ಆನಂದಿಸಬಹುದಾಗಿದೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಸುಮಾರು 10 ಕೋಟಿ ವರ್ಷಗಳ ಹಿಂದೆ ಈ ಗ್ರಾಮದ ಪರಿಸರದಲ್ಲಿ ಡೈನೊಸಾರ್‍ಗಳು ತಿರುಗುತ್ತಿದ್ದವಂತೆ. ವಾತಾವರಣ ಅನುಕೂಲವಾಗಿ ಇದ್ದ ಕಾರಣ ಇಲ್ಲಿ ಮೊಟ್ಟೆಗಳು ಕೂಡ ಇಡುತ್ತಿದ್ದವಂತೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಕೆಲವು ಮಂದಿ ಪರಿಶೋಧನೆಗಾರರು ಈ ಪ್ರದೇಶವನ್ನು ಪರಿಶೋಧನೆ ಮಾಡುವ ಸಮಯದಲ್ಲಿ ಮೊಟ್ಟ ಮೊದಲ ಬಾರಿ 1981 ರಲ್ಲಿ ಡೈನೊಸಾರ್‍ಗಳ ಅವಷೇಶಗಳು ದೊರೆತವಂತೆ. ಹಾಗಾಗಿ ಇಂದಿಗೂ ಈ ಪ್ರದೇಶಕ್ಕೆ ದೇಶ, ವಿದೇಶಗಳಿಂದ ಸಂಶೋಧನೆ ಮಾಡಲು ಈ ಸ್ಥಳಕ್ಕೆ ಭೇಟಿ ನೀಡುತ್ತಾರಂತೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಪರಿಶೋಧನೆಗಳ ಪುಣ್ಯವೇ ಎಂಬಂತೆ ಇದುವರೆವಿಗೂ 13 ಡೈನೊಸಾರ್‍ಗಳ ಅವಷೇಶಗಳನ್ನು ಮತ್ತು 10,000 ಡೈನೊಸಾರ್‍ಗಳ ಮೊಟ್ಟೆಗಳನ್ನು ಕಂಡು ಹಿಡಿದ್ದಿದ್ದಾರೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಡೈನೊಸಾರ್ ಟೂರಿಸಂ ಎಂಬ ಹೆಸರಿನಿಂದ ಗುಜರಾತ್ ಪ್ರವಾಸಿ ಶಾಖೆ ಇದನ್ನು ಅಭಿವೃದ್ಧಿ ಮಾಡಿದ್ದಾರೆ. ದಿನನಿತ್ಯವು ಸಾವಿರಾರು ಮಂದಿ ಪ್ರವಾಸಿಗರು ಈ ಜುರಾಸಿಕ್ ಪಾರ್ಕ್‍ಗೆ ಭೇಟಿ ನೀಡುತ್ತಿರುತ್ತಾರೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಬಲಿಸಿನೋರ್‍ನಲ್ಲಿ ಒಂದು ಸುಂದರವಾದ ಹಾಗು ಪುರಾತನವಾದ ದೇವಾಲಯವಿದೆ. ಆ ದೇವಾಲಯವೇ ಅಂಬಾಜಿ ದೇವಾಲಯ. ಇದು ಬಲಿಸಿನೋರ್ ಫಾಸಿಲ್ ಪಾರ್ಕ್‍ಗೆ ಸಮೀಪದಲ್ಲಿದೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಡೈನೊಸಾರ್ ಪಾರ್ಕ್‍ಗೆ ಕೇವಲ 20 ನಿಮಿಷಗಳ ದೂರದಲ್ಲಿ ಅತ್ಯಂತ ಸುಂದರವಾದ ದಿ ಗಾರ್ಡನ್ ಪ್ಯಾಲೆಸ್ ಇದೆ. ಇದನ್ನು ನವಾಬ್ ಸಾಹೇಬ್ ಮನೋವರ್ ಖಾನ್ ಜೀ ಬಾಬಿ ಕ್ರಿ.ಶ 1883 ರಲ್ಲಿ ನಿರ್ಮಾಣ ಮಾಡಿದನು. ಪ್ಯಾಲೆಸ್ ಪ್ರಸ್ತುತ ಪ್ರಾಚೀನ ಹೋಟೆಲ್ ಆಗಿ ಸೇವೆಯನ್ನು ನೀಡುತ್ತಿದೆ. ಪ್ಯಾಲೆಸ್‍ನ ಒಳಭಾಗದಲ್ಲಿ ಸುಂದರವಾದ ವಿನ್ಯಾಸವು ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುತ್ತದೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಮಾಹಿ ನದಿ ಮೇಲೆ ನಿರ್ಮಾಣ ಮಾಡಿರುವ ಬೋರಿ ಡ್ಯಾಂ ಪ್ರವಾಸಿಗರನ್ನು ಒಂದು ಪಿಕ್ನಿಕ್ ಸ್ಪಾಟ್ ಆಗಿ ಸಂತೋಷವನ್ನು ನೀಡುತ್ತದೆ. ಈ ಗಾರ್ಡನ್ ಪ್ಯಾಲೆಸ್‍ಗೆ ಈ ಡ್ಯಾಂ ಸಮೀಪದಲ್ಲಿದೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ತಿಮ್ಬ ತುವಾ ಡೈನೊಸಾರ್ ಪಾರ್ಕ್ ಸಮೀಪದಲ್ಲಿನ ಮತ್ತೊಂದು ಪ್ರವಾಸಿ ಪ್ರದೇಶವಾಗಿದೆ. ಇಲ್ಲಿ ಬಿಸಿಯಾದ ನೀರಿನ ಬುಗ್ಗೆಗಳನ್ನು ಕಂಡು ಆನಂದಿಸಬಹುದಾಗಿದೆ. ಇದನ್ನು ಸಂಜೀವಿನಿ ಲಕ್ಷಣಗಳು ಇವೆ ಎಂದು ಸ್ಥಳೀಯ ಜನರು ಭಾವಿಸುತ್ತಾರೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಇಲ್ಲಿ ಅತ್ಯಂತ ಸುಂದರವಾದ ಹಿಂದೂ ದೇವಾಲಯವಿದೆ ಅದೇ ಗಲ್ಫೇಶ್ವರ ದೇವಾಲಯ. ಈ ದೇವಾಲಯವು ಮಹಾ ಶಿವನಿಗೆ ಅಂಕಿತವಾದ ದೇವಾಲಯವಾಗಿದೆ. ಇಲ್ಲಿಗೆ ಮಹಾ ಶಿವರಾತ್ರಿಯ ಸಮಯದಲ್ಲಿ ಹಲವಾರು ಭಕ್ತರು ಭೇಟಿ ನೀಡುತ್ತಾರೆ.

"ಬಲಸಿನೋರ್ ಫಾಸಿಲ್ ಪಾರ್ಕ್"

ಅಸ್ಕಾರ್ ಪ್ರಶಸ್ತಿಗೆ ನಾಮಿನೆಟ್ ಆದ "ಲಗಾನ್" ಎಂಬ ಬಾಲಿವುಡ್ ಚಿತ್ರವನ್ನು ಚಂಪಾನೆರ್‍ನಲ್ಲಿ ಷೂಟಿಂಗ್ ಮಾಡಿದರು. ಚಂಪಾನೆರ್ ಬಲಿಸಿನೋರ್‍ಗೆ ಸುಮಾರು 50 ಕಿ.ಮೀ ದೂರದಲ್ಲಿದೆ. ಈ ಕುಗ್ರಾಮದಲ್ಲಿ 100 ವರ್ಷಗಳ ಹಿಂದೆ ಹಿಂದೂ, ಜೈನ ದೇವಾಲಯಗಳ ಸ್ಥಾವರಗಳು ಇದ್ದವಂತೆ. ಇಲ್ಲಿ ಇನ್ನೂ ಮಸೀದಿಗಳು, ಕೋಟೆಗಳು, ರಾಜಭವನಗಳು ಹೀಗೆ ಇನ್ನು ಹಲವಾರು ಚಂಪಾನೆರ್‍ನಲ್ಲಿ ಕಾಣಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಾಯು ಮಾರ್ಗ
ಬಲಿಸಿನೊರ್‍ಗೆ ಸಮೀಪದಲ್ಲಿ 79 ಕಿ.ಮೀ ದೂರದಲ್ಲಿ ವಡೋದರ ರೈಲ್ವೆ ನಿಲ್ದಾಣವಿದೆ. 107 ಕಿ.ಮೀ ದೂರದಲ್ಲಿ ಅಹ್ಮದಾಬಾದ್ ವಿಮಾನ ನಿಲ್ದಾಣವಿದೆ. ಇಲ್ಲಿಗೆ ದೇಶದಲ್ಲಿನ ಎಲ್ಲಾ ಪ್ರಧಾನ ನಗರಗಳಿಂದ ವಿಮಾನಗಳು ಬರುತ್ತಿರುತ್ತವೆ, ಹೋಗುತ್ತಿರುತ್ತವೆ.

ರೈಲು ಮಾರ್ಗದ ಮೂಲಕ
ಬಲಿಸಿನೊರ್‍ಗೆ ಸಮೀಪದಲ್ಲಿ 63 ಕಿ.ಮೀ ದೂರದಲ್ಲಿ ಆನಂದ್ ರೈಲ್ವೆ ನಿಲ್ದಾಣವಿದೆ. ಇದು ನ್ಯೂ ಢೆಲ್ಲಿ, ಮುಂಬೈ, ಚೆನ್ನೈ, ಅಹ್ಮಾದಾಬಾದ್ ಪ್ರದೇಶಗಳಿಂದ ಇಲ್ಲಿಗೆ ರೈಲುಗಳ ಸಂಪರ್ಕಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X