Search
  • Follow NativePlanet
Share
» »ಕಾಶಿಯಿಂದ ನೇಪಾಳ ಒಂದು ಅದ್ಭುತ ಪ್ರವಾಸ

ಕಾಶಿಯಿಂದ ನೇಪಾಳ ಒಂದು ಅದ್ಭುತ ಪ್ರವಾಸ

By Vijay

ಹಿಂದೂ ಸಂಸ್ಕೃತಿ-ಸಂಪ್ರದಾಯಗಳಿರುವ ಎರಡು ವಿಭಿನ್ನ ಹಾಗೂ ಲವಲವಿಕೆಯಿಂದ ಕೂಡಿದ ಎರಡು ದೇಶಗಳ ಎರಡು ಸಾಂಸ್ಕೃತಿಕ ನಗರಗಳ ಪ್ರವಾಸ ಮಾಡಬೇಕೆ, ಅದೂ ಕೂಡ ರಸ್ತೆ ಮಾರ್ಗದ ಮೂಲಕ! ಹೌದು, ಇದು ಕೇಳಲು ಎಷ್ಟು ಕುತೂಹಲಕರ ಅನಿಸುತ್ತದೆಯೋ ಪ್ರವಾಸವು ಅಷ್ಟೆ ರೋಮಾಂಚಕವಾಗಿದೆ.

ಪ್ರಸ್ತುತ ಲೇಖನವು ಭಾರತದಿಂದ ನೇಪಾಳ ದೇಶಕ್ಕೆ ರಸ್ತೆ ಮಾರ್ಗದ ಮೂಲಕ ಮಾಡಬಹುದಾದ ಒಂದು ಅದ್ಭುತ ಪ್ರವಾಸದ ಕುರಿತು ತಿಳಿಸುತ್ತದೆ. ನೇಪಾಳವು ತನ್ನ ಮೂರು ಭಾಗಗಳಲ್ಲಿ ಭಾರತದಿಂದ ಸುತ್ತುವರೆದಿದ್ದು ಭಾರತದೊಂದಿಗೆ ಅನೇಕ ದಶಕಗಳಿಂದ ಉತ್ತಮ ಬಾಂಧವ್ಯ ಹೊಂದಿದೆ.

ನಿಮಗಿಷ್ಟವಾಗಬಹುದಾದ : ಕಾರಿನಲ್ಲಿ ಬೆಂಗಳೂರಿನಿಂದ ತಿರುಪತಿ

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ನೇಪಾಳಕ್ಕೆ ಭಾರತೀಯರು ಪ್ರವೇಶಿಸಲು ಇತರೆ ದೇಶಗಳಲ್ಲಿರುವಂತೆ ಪಾಸ್ ಪೋರ್ಟ್ ಕಡ್ಡಾಯವಾಗಿ ಬೇಕೆ ಬೇಕು ಅಂತೇನಿಲ್ಲ. ಭಾರತೀಯ ಪ್ರಜೆ ಎಂದು ರುಜುವಾತುಪಡಿಸಲು ಬೇಕಾದ ಮತದಾರ ಗುರುತಿನ ಚೀಟಿ, ಆಧಾರ್, ಚಾಲನಾ ಪರವಾನಿಗೆಗಳಿದ್ದರೂ ಸಾಕು. ಕಡ್ಡಾಯವಾಗಿ ಇವುಗಳಲ್ಲಿ ಒಂದಾದರೂ ಇರಲೇಬೇಕು.

ಅಷ್ಟೆ ಅಲ್ಲ, ಭಾರತೀಯರಿಗೆ ನೇಪಾಳ ಸರ್ಕಾರವು "ವೀಸಾ ಆನ್ ಅರೈವಲ್" ವ್ಯವಸ್ಥೆ ಕಲ್ಪಿಸಿದ್ದು ನೇರವಾಗಿ ಭಾರತೀಯರು ನೇಪಾಳಕ್ಕೆ ತೆರಳಿ ಅಲ್ಲಿಂದಲೇ ಸುತ್ತಾಡಲು ಅನುಮತಿ ಅಥವಾ ವೀಸಾ ಪಡೆದುಕೊಳ್ಳಬಹುದು. ಇನ್ನೊಂದು ವಿಷಯವೆಂದರೆ ನಿಮ್ಮದೆ ಆದ ಕಾರನ್ನೂ ಸಹ ನೇಪಾಳಕ್ಕೆ ಒಯ್ಯಬಹುದಾಗಿದ್ದು ಅದಕ್ಕೆ ಕೆಲವು ವಿಧಿ ವಿಧಾನಗಳಿದ್ದು ಅದನ್ನು ಪೂರೈಸಬೇಕಾದುದು ಅನಿವಾರ್ಯ.

ನಿಮಗಿಷ್ಟವಾಗಬಹುದಾದ : ಪಿ ಬಿ ರಸ್ತೆಯ ಮೇಲೆ ಬೆಂಗಳೂರಿನಿಂದ ಪುಣೆ

ಕಠ್ಮಂಡು ನೇಪಾಳದ ದೇಶದ ರಾಜಧಾನಿ ನಗರವಾಗಿದ್ದು ಭಾರತದಿಂದ ಸುಲಭವಾಗಿ ತೆರಳಬಹುದಾದ ಸುಂದರ ನಗರವಾಗಿದೆ. ದೆಹಲಿ ಹಾಗೂ ವರಾಣಸಿ (ಕಾಶಿ) ಗಳಿಂದ ನೇರವಾಗಿ ಕಠ್ಮಂಡುವಿಗೆ ತೆರಳಲು ಬಸ್ಸುಗಳು ದೊರೆಯುತ್ತವೆ. ಪ್ರಸ್ತುತ ಲೇಖನದ ಮೂಲಕ ಕಾಶಿಯಿಂದ ಯಾವ ರೀತಿ ನೇಪಾಳ ಹೋಗಬಹುದೆಂಬುದರ ಕುರಿತು ತಿಳಿಯಿರಿ.

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ನೇಪಾಳದ ಕಠ್ಮಂಡುವಿಗೆ ಭಾರತದ ದೆಹಲಿ ಹಾಗೂ ವರಾಣಾಸಿಗಳಿಂದ ಸುಲಭವಾಗಿ ತೆರಳಬಹುದು. ದೆಹಲಿಯನ್ನು ದೇಶದ ಮೂಲೆ ಮೂಲೆಗಳಿಂದ ಸುಲಭವಾಗಿ ತಲುಪಬಹುದಾಗಿರುವುದರಿಂದ ಈ ಪ್ರವಾಸಕ್ಕೆ ದೆಹಲಿಯಿಂದ ತೆರಳುವುದು ಉತ್ತಮ ಆಯ್ಕೆಯಾಗಬಹುದಾದರೂ ವರಾಣಸಿ ದೇಶದ ಆಧ್ಯಾತ್ಮಿಕ ರಾಜಧಾನಿ ಹಾಗೂ ಅತ್ಯಂತ ಪ್ರಮುಖವಾದ ಧಾರ್ಮಿಕ ಕೇಂದ್ರವಾಗಿರುವುದರಿಂದ ವರಾಣಾಸಿ ಪ್ರವಾಸದೊಂದಿಗೆ ನೇಪಾಳ ಪ್ರವೇಶಿಸುವ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ.

ಚಿತ್ರಕೃಪೆ: Land Rover MENA

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಮೊದಲಿಗೆ ಅತ್ಯಂತ ಶೀಘ್ರವಾಗಿ ಕಠ್ಮಂಡುವಿಗೆ ತಲುಪಬೇಕೆಂದಿದ್ದಲ್ಲಿ ವಿಮಾನಯಾನ ಕೈಗೊಳ್ಳಬಹುದು. ವರಾಣಸಿಯಿಂದ ಕಠ್ಮಂಡುವಿಗೆ ಏರ್ ಇಂಡಿಯಾ ಹಾಗೂ ಜೆಟ್ ಏರ್ ವೇಸ್ ವಿಮಾನಗಳ ಸೇವೆಗಳು ಲಭ್ಯವಿದೆ. ಪ್ರಯಾಣಾವಧಿ ಕೇವಲ ಒಂದು ಘಂಟೆ ಮಾತ್ರ. ಆದರೆ ಒಬ್ಬರಿಗೆ ಟಿಕೆಟ್ ದರವು ಏನಿಲ್ಲವೆಂದರೂ ಆರು ಸಾವಿರ ರೂಪಾಯಿಗಳಷ್ಟಾಗಬಹುದು.

ಚಿತ್ರಕೃಪೆ: calflier001

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಮಿತವ್ಯಯ ಹಾಗೂ ಕೈಗೆಟುಕುವ ದರದಲ್ಲಿ ಪ್ರವಾಸ ಮಾಡಬಯಸುವವರಿಗೆ ರೈಲು ಅತ್ಯುತ್ತಮ ಆಯ್ಕೆ. ಆದರೆ ಕಠ್ಮಂಡುವಿಗೆ ನೇರವಾದ ರೈಲು ಸಂಪರ್ಕವಿಲ್ಲದ ಕಾರಣ ಭಾರತ-ನೇಪಾಳ ಗಡಿ ಪ್ರದೇಶವಾದ ಉತ್ತರ ಪ್ರದೇಶದ ಸುನೌಲಿಯಿಂದ ಮೂರು ಘಂಟೆಗಳಷ್ಟು ದೂರದಲ್ಲಿರುವ ಗೋರಖಪುರ ರೈಲು ನಿಲ್ದಾಣಕ್ಕೆ ತೆರಳಿ. ಅಲ್ಲಿಂದ ಶೇರ್ಡ್ ಆಟೊ, ಕಾರು, ಜೀಪು ಅಥವಾ ಬಸ್ಸುಗಳಿಂದ ಸುನೌಲಿಗೆ ಗಡಿ ತೆರಳಿ ಅಲ್ಲಿಂದ ನೇಪಾಳ ಪ್ರವೇಶಿಸಬಹುದು. ಮತ್ತೆ ಒಂದೊಮ್ಮೆ ನೇಪಾಳ ಪ್ರವೇಶಿಸಿದರೆ ಅಲ್ಲಿನ ವಿಸಾ ಕ್ರಿಯೆಗಳ ವಿಧಿ ವಿಧಾನಗಳನ್ನು ಮುಗಿಸಿ ಅಲ್ಲಿಂದ ಬಸ್ಸು ಅಥವಾ ಟ್ಯಾಕ್ಸಿ ಮೂಲಕ ಕಠ್ಮಂಡುವಿಗೆ ತೆರಳಬೇಕು.

ಚಿತ್ರಕೃಪೆ: TheDoGoodDames

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಇನ್ನೂ ರಸ್ತೆಯ ಮೂಲಕ ನಮ್ಮ ಲೇಖನದ ಉದ್ದೇಶವಾದ ನೇಪಾಳ ಪ್ರವಾಸ ಆರಂಭಿಸೋಣ. ವರಾಣಸಿಯಿಂದ ನೇಪಾಳಕ್ಕೆ ಉತ್ತರಪ್ರದೇಶದ ಸೋನೌಲಿ ಮಾರ್ಗವಾಗಿಯೂ ಬಿಹಾರ ರಾಜ್ಯದ ರಕ್ಸೌಲ್ ಮಾರ್ಗವಾಗಿಯೂ ಪ್ರವೇಶಿಸಬಹುದಾಗಿದೆ. ಆದರೆ ಇಲ್ಲಿ 2015 ರಲ್ಲಿ ಪ್ರಾರಂಭಿಸಲಾದ ಭಾರತ-ನೇಪಾಳ ಮೈತ್ರಿ ಸೇವಾ ಬಸ್ಸಿನ ಮೂಲಕ ಸೋನೌಲಿ ಮೂಲಕ ತಲುಪುವುದರ ಕುರಿತು ತಿಳಿಯೋಣ. ವಾರಣಾಸಿಯಿಂದ ಕಠ್ಮಂಡು ಒಟ್ಟು ಸುಮಾರು 500 ಕಿ.ಮೀ ಗಳಷ್ಟು ದೂರದಲ್ಲಿದೆ. ರಾತ್ರಿ ಹೊರಡುವ ಈ ಬಸ್ಸು ಕಠ್ಮಂಡು ತಲುಪಲು ಸುಮಾರು 12 ಘಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತದೆ.

ಚಿತ್ರಕೃಪೆ: Pau Sabria

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಬಸ್ಸು ಪ್ರಯಾಣವು ವರಾಣಸಿಯಿಂದ ಪ್ರಾರಂಭವಾಗಿ, ಉತ್ತರ ಪ್ರದೇಶದ ಅಜಂಗಡ್, ಗೋರಖಪುರ್ ಹಾಗೂ ಸೋನೌಲಿ ಮಾರ್ಗವಾಗಿ ನೇಪಾಳದ ಸಿದ್ಧಾರ್ಥನಗರ ಪ್ರವೇಶಿಸುತ್ತದೆ. ನಂತರ ಅಲ್ಲಿಂದ ಕಠ್ಮಂಡುವಿನ ಕಡೆಗೆ ಪ್ರಯಾಣ ಬೆಳೆಸುತ್ತದೆ.

ಚಿತ್ರಕೃಪೆ: Lev Yakupov

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಸೋನೌಲಿ ಗಡಿಯಲ್ಲಿ ಪರವಾನಿಗೆ ನೀಡುವ ಭಾರತ ಹಾಗೂ ನೇಪಾಳಿ ಕಚೇರಿಗಳಿದ್ದು ಅಲ್ಲಿಂದ ಅವಶ್ಯಕವಾಗಿರುವ ವಿಧಿ ವಿಧಾನಗಲನ್ನು ಪೂರೈಸಿ ಅನುಮತಿ ಪಡೆದು ನಂತರ ಮುಂದುವರೆಯಿರಿ. ಈ ಸಂದರ್ಭದಲ್ಲಿ ನಿಮ್ಮ ಭಾವಚಿತ್ರಗಳಿರಲಿ.

ಚಿತ್ರಕೃಪೆ: Matt Zimmerman

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ನೇಪಾಳ ಪ್ರವೇಶಿಸಿದ ನಂತರ ಭೈರಹವಾ (ಇಂದಿನ ಸಿದ್ಧಾರ್ಥನಗರ)ಗೆ ಭೇಟಿ ನೀಡಬಹುದು. ಇದರ ಸುತ್ತಮುತ್ತಲು ಕೆಲವು ಪ್ರವಾಸಿ ಆಕರ್ಷಣೆಗಳನ್ನು ಆಸ್ವಾದಿಸಬಹುದಾಗಿದೆ. ಲುಂಬಿಣಿ ಉದ್ಯಾನ. ಇದು ಸಿದ್ಧಾರ್ಥ ನಗರದಿಂದ 22 ಕಿ.ಮೀ ದೂರದಲ್ಲಿದೆ. ಇದೊಂದು ಬೌದ್ಧರ ಪವಿತ್ರ ಯಾತ್ರಾ ಸ್ಥಳವಾಗಿದ್ದು ಬೌದ್ಧ ಸಂಸ್ಕೃತಿಯ ಪ್ರಕಾರ, ರಾಣಿ ಮಾಯಾ ದೇವಿಯು ಸಿದ್ಧಾರ್ಥ ಗೌತಮನಿಗೆ ಇದೆ ಸ್ಥಳದಲ್ಲಿ ಜನ್ಮ ನೀಡಿದ್ದಳು.

ಚಿತ್ರಕೃಪೆ: Prakash Adhikary

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಲುಂಬಿಣಿಯ ನೈರುತ್ಯಕ್ಕೆ 25 ಕಿ.ಮೀ ದೂರದಲ್ಲಿ ಕಪಿಲವಸ್ತು ಎಂಬ ತಾಣಕ್ಕೆ ಭೇಟಿ ನೀಡಬಹುದು. ಇದೊಂದು ಯುನೆಸ್ಕೊದಿಂದ ಮಾನ್ಯತೆ ಪಡೆದ ವಿಶ್ವಪಾರಂಪರಿಕ ತಾಣವಾಗಿದೆ.

ಚಿತ್ರಕೃಪೆ: DiverDave

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಹತ್ತಿರದಲ್ಲಿ ಭೆಟಿ ನೀಡಬಹುದಾದ ಒಂದು ಅದ್ಭುತ ಪ್ರ್ವಾಸಿ ತಾನವೆಂದರೆ ಚಿತ್ವಾನ್ ರಾಷ್ಟ್ರೀಯ ಉದ್ಯಾನ. ಇದು ನೇಪಾಳ ರಾಷ್ಟ್ರದ ಮೊಟ್ಟ ಮೊದಲ ರಾಷ್ಟ್ರೀಯ ಉದ್ಯಾನ ಎಂಬ ಖ್ಯಾತಿಗೆ ಪಾತ್ರವಾಗಿದೆ. 932 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿರುವ ಈ ಉದ್ಯಾನವು ವೈವಿಧ್ಯಮಯ ಜೀವಸಂಕುಲದಿಂದ ನಳನಳಿಸುತ್ತದೆ.

ಚಿತ್ರಕೃಪೆ: Mario1952

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ನೇಪಾಳ ರಾಷ್ಟ್ರದಲ್ಲಿರುವ ಬಹು ಬೇಡಿಕೆಯ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ ಚಿತ್ವಾನ್ ರಾಷ್ಟ್ರೀಯ ಉದ್ಯಾನಕ್ಕೆ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ದೇಶೀಯ ಹಾಗೂ ವಿದೇಶೀಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಆನೆ ಸಫಾರಿ ಬಲು ನೆಚ್ಚಿನ ಚಟುವಟಿಕೆಯಾಗಿದೆ ಈ ಕಾಡುದ್ಯಾನದಲ್ಲಿ. ನಾರಾಯಣಿ-ರಪ್ತಿ ನದಿಗಳು ಈ ಉದ್ಯಾನದ ವ್ಯಾಪ್ತಿಯಲ್ಲಿ ಹರಿದಿವೆ.

ಚಿತ್ರಕೃಪೆ: Leofleck

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಕಠ್ಮಂಡುವಿಗೆ ಸಾಗುವಾಗ ನೇಪಾಳ ರಾಷ್ಟ್ರದ ಭರತ್ಪುರದ ಮೇಲಿಂದ ಸಾಗಬಹುದು. ಭರತ್ಪುರವು ಚಿತ್ವಾನ್ ಕಣಿವೆಯಲ್ಲಿದ್ದು ಚಿತ್ವಾನ್ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ನಾರಾಯಣಿ ನದಿಯ ತಟದಲ್ಲಿ ನೆಲೆಸಿರುವ ಭರತ್ಪುರ ನಗರವು ವಾಣಿಜ್ಯ ದೃಷ್ಟಿಯಿಂದ ಮಹತ್ವ ಪಡೆದ ನಗರವಾಗಿದೆ.

ಚಿತ್ರಕೃಪೆ: 南アジア

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಭರತ್ಪುರದಲ್ಲಿ ನೋಡಬಹುದಾದ ಒಂದು ಆಕರ್ಷಣೆಯೆಂದರೆ ಹತ್ತಿರದಲ್ಲಿರುವ ಮೌಲಾ ಕಾಳಿಕಾ ದೇವಿಯ ದೇವಸ್ಥಾನ.

ಚಿತ್ರಕೃಪೆ: 南アジア

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ನಂತರ ಇಲ್ಲಿಂದ (ಭರತ್ಪುರದಿಂದ) ಸುಮಾರು 150 ಕಿ.ಮೀ ಪ್ರಯಾಣ ಮಾಡಿ ಕಠ್ಮಂಡುವಿಗೆ ತಲುಪಬೇಕು. ಕಠ್ಮಂಡು ನೇಪಾಳ ದೇಶದ ರಾಜಧಾನಿ ನಗರ ಹಾಗೂ ಅತಿ ದೊಡ್ಡದಾದ ನಗರಸಭೆ ಪ್ರದೇಶ.

ಚಿತ್ರಕೃಪೆ: Royonx

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಪ್ರವಾಸೋದ್ಯಮ ಕಠ್ಮಂಡುವಿಗೆ ಪ್ರಮುಖ ಆರ್ಥಿಕ ಅಭಿವೃದ್ಧಿಯ ಅಂಗವಾಗಿದೆ. ಪ್ರತಿ ವರ್ಷ ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಪ್ರವಾಸಿಗರು ಕಠ್ಮಂಡುವಿನ ಹಿಂದೂ ಹಾಗೂ ಬೌದ್ಧ ಕ್ಷೇತ್ರಗಳಿಗೆ ಭೇಟಿ ನೀಡಲು ಬರುತ್ತಾರೆ. ಕಠ್ಮಂಡು ಕಣಿವೆಯಲ್ಲಿ ಸ್ಥಿತವಿರುವ ಈ ನಗರವು ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ತನ್ನ ಸುತ್ತ ಮುತ್ತ ಒಳಗೊಂಡಿದೆ. ಕಠ್ಮಂಡು ಕಣಿವೆಯಿಂದ ಹಿಮಾಲಯ ಪರ್ವತಗಳ ರಮಣೀಯ ನೋಟ.

ಚಿತ್ರಕೃಪೆ: Uwe Gille

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಕಠ್ಮಂಡು ಕಣಿವೆಯ ಈಶಾನ್ಯಕ್ಕೆ ಐದು ಕಿ.ಮೀ ದೂರದಲ್ಲಿ ಸ್ಥಿತವಿರುವ ಹಿಂದೂಗಳ ಪವಿತ್ರ ಧಾರ್ಮಿಕ ಸ್ಥಳವೆ ಶಿವನಿಗೆ ಮುಡಿಪಾದ ಪಶುಪತಿನಾಥ ದೇವಸ್ಥಾನ. ಪ್ರದೇಶದ ಪ್ರಮುಖ ದೇವನಾದ ಶಿವನ ಅವತಾರ ಪಶುಪತಿನಾಥನಿಗೆ ಮುಡಿಪಾದ ಈ ದೇವಾಲಯ ಬಾಗ್ಮತಿ ನದಿಯ ತಟದಲ್ಲಿ ನೆಲೆಸಿದೆ. ಸಾವಿರಾರು ಸಂಖ್ಯೆಯಲ್ಲಿ ಭಾರತದಿಂದ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮಹಾಶಿವರಾತ್ರಿಯನ್ನು ಈ ದೇವಾಲಯದಲ್ಲಿ ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Gerd Eichmann

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಸಾಮಾನ್ಯವಾಗಿ ಕಾಶಿಯಲ್ಲಿ ಜರುಗುವಂತೆ ಹಿಂದೂ ಸಂಸ್ಕೃತಿಯ ಪ್ರಕಾರ ಮೃತರ ಅಂತ್ಯಸಂಸ್ಕಾರಗಳೂ ಸಹ ಈ ಬಾಗ್ಮತಿ ನದಿಯ ತಟದಲ್ಲಿ ಪಶಿಪತಿನಾಥ ದೇವಾಲಯದ ವ್ಯಾಪ್ತಿಯಲ್ಲಿ ಜರುಗುತ್ತವೆ. ಇದರಿಂದ ಮೃತರ ಆತ್ಮಕ್ಕೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ.

ಚಿತ್ರಕೃಪೆ: Benjamint444

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಕಠ್ಮಂಡು ನಗರದ ಪಶ್ಚಿಮಕ್ಕೆ ಕಠ್ಮಂಡು ಕಣಿವೆಯ ಬೆಟ್ಟವೊಂದರ ಮೇಲೆ ಈ ಪುರಾತನ ಮಂದಿರವಿದೆ. ಸ್ವಯಂಭೂನಾಥ ಎಂದು ಕರೆಯಲ್ಪಡುವ ಈ ತಾನವು ಬೌದ್ಧ ಅತ್ಯಂತ ಪವಿತ್ರ ಯಾತ್ರಾ ಸ್ಥಳವಾಗಿದ್ದರೆ ಟಿಬೆಟ್ ಬೌದ್ಧ ಅನುಯಾಯಿಗಳಿಗೆ ಬೌದ್ಧನಾಥದ ನಂತರದಲ್ಲಿ ಅಂದರೆ ಎರಡನೆಯ ಪವಿತ್ರ ಯಾತ್ರಾ ಸ್ಥಳವಾಗಿದೆ.

ಚಿತ್ರಕೃಪೆ: Jean-Marie Hullot

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಹಿಂದೊಮ್ಮೆ ಈ ಕಣಿವೆಯಲ್ಲಿ ಕಮಲದ ಹೂವೊಂದು ಸ್ವಯಂಪ್ರಕಟವಾಗಿ ಎಲ್ಲೆಡೆ ಕೆರೆ ಸರೋವರಗಳು ಸ್ವಯಂರೂಪತಾಳಿದವು ಹಾಗಾಗಿ ಇದನ್ನು ಸ್ವಯಂಭೂನಾಥ ಎಂದು ಕರೆಯಲಾಯಿತು. ಇದನ್ನು "ಮಂಕಿ ಟೆಂಪಲ್" ಎಂತಲೂ ಸಹ ಕರೆಯಲಾಗುತ್ತದೆ. ಏಕೆಂದರೆ ಈ ಪ್ರದೇಶದಲ್ಲಿ ಸಾಕಷ್ಟು ಕೋತಿಗಳು ವಾಸಿಸಿಕೊಂಡಿವೆ. ಇವು ಪವಿತ್ರವಾದ ಕೋತಿಗಳು ಎಂದು ಸ್ಥಳೀಯರು ನಂಬುತ್ತಾರೆ. ಇಲ್ಲಿರುವ ಸ್ತೂಪವೊಂದರ ಮೇಲೆ ಕಣ್ಣುಗಳ ಚಿತ್ರವಿದ್ದು ಇದನ್ನು ಬುದ್ಧನ ಕಣ್ಣುಗಳು ಎಂದು ಕರೆಯುತ್ತಾರೆ. ಪ್ರಶಾಂತ ಹಾಗೂ ಸೌಂದರ್ಯದಿಂದ ಕೂಡಿರುವ ಈ ಸ್ಥಳವನ್ನು ಒಮ್ಮೆಯಾದರೂ ನೋಡಲೇಬೇಕು.

ಚಿತ್ರಕೃಪೆ: Jean-Pierre Dalbéra

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಕಠ್ಮಂಡುವಿನ ಈಶಾನ್ಯಕ್ಕೆ 11 ಕಿ.ಮೀ ದೂರದ ಹೊರವಲಯದ ಪ್ರದೇಶದಲ್ಲಿ ಸ್ಥಿತವಿರುವ ಪರಮ ಪವಿತ್ರ ಬೌದ್ಧ ಯಾತ್ರಾ ಸ್ಥಳವೆ ಬೌದ್ಧನಾಥ. ಕಠಂಡುವಿನ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಇದೂ ಸಹ ಒಂದಾಗಿದೆ. ಇದು ಯುನೆಸ್ಕೊದಿಂದ ಮಾನ್ಯತೆ ಪಡೆದ ವಿಶ್ವ ಪಾರಂಪರಿಕ ತಾಣವಾಗಿದೆ.

ಚಿತ್ರಕೃಪೆ: Christopher J. Fynn

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಬುದಾನೀಲಕಂಠ ದೇವಾಲಯ : ಕಠ್ಮಂಡುವಿನಲ್ಲಿ ನೋಡಬಹುದಾದ ಒಂದು ಧಾರ್ಮಿಕ ಆಕರ್ಷಣೆಯಾಗಿದೆ ಇದು. ನೀಲಕಂಠ ಎಮ್ಬ ಹೆಸರು ಬಂದಿದ್ದರೂ ಸಹ ಇದು ವಿಷ್ಣುವಿಗೆ ಮುಡಿಪಾದ ದೇವಾಲಯವಾಗಿದೆ.
ಶಿವಪುರಿ ಬೆಟ್ಟದ ಬುಡದಲ್ಲಿ ಸ್ಥಿತವಿರುವ ಈ ಮಂದಿರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ಭೇಟಿ ನೀಡುತ್ತಾರೆ.

ಚಿತ್ರಕೃಪೆ: 松岡明芳

ಭಾರತದಿಂದ ನೇಪಾಳ:

ಭಾರತದಿಂದ ನೇಪಾಳ:

ಶೇಷನಾಗನ ನೀಲ ವರ್ಣದ ಕತ್ತಿನಿಂದಾಗಿ ಇದಕ್ಕೆ ನೀಲಕಂಠ ಎಂಬ ಹೆಸರು ಬಂದಿದ್ದು ಈ ಸರ್ಪದ ಮೇಲೆ ವಿಷ್ಣು ಮಲಗಿರುವ ಭಂಗಿಯಲ್ಲಿರುವ ಸುಂದರ ಮೂರ್ತಿಯನ್ನು ನೋಡಬಹುದು. ಈ ಮೂರ್ತಿಯು ಕೊಳದಲ್ಲಿರುವುದು ಇನ್ನೊಂದು ವಿಶೇಷ.

ಚಿತ್ರಕೃಪೆ: 松岡明芳

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X