Search
  • Follow NativePlanet
Share
» »75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು

75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ

ಸ್ವಾತಂತ್ರ್ಯ ಹೋರಾಟಕ್ಕೆ ಸಂಭಂದಿಸಿದ ಭಾರತದಲ್ಲಿಯ ಸ್ಮಾರಕಗಳು

ಸ್ವಾತಂತ್ರ್ಯ ಎನ್ನುವುದು ಭಾರತಕ್ಕೆ ಸಾಮಾನ್ಯದ ಸಂಗತಿಯೇನಲ್ಲ. ದೇಶವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗುವ ಮೊದಲು ಭಾರತೀಯ ಮತ್ತು ಬ್ರಿಟಿಷರೆರಡೂ ಅನೇಕ ಜೀವಗಳನ್ನು ತೆಗೆದುಕೊಂಡಿತು. ಜನರು ತಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಎದ್ದುನಿಂತು ಹೋರಾಡಲು ಆಯ್ಕೆ ಮಾಡಿದ ಸಮಯ.

ಜನರು ತಮ್ಮಲ್ಲಿರುವದನ್ನು ತ್ಯಾಗಮಾಡಲು ಆರಿಸಿಕೊಂಡ ಸಮಯವೂ ಇದು ಆಗಿತ್ತು, ಇದರಿಂದಾಗಿ ಇತರರು ತಮ್ಮಲ್ಲಿಲ್ಲದ್ದನ್ನು ಪಡೆಯುತ್ತಾರೆ.

ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳೇ ಕಳೆದಿದ್ದು, ಭಾರತವು ತನ್ನ ನಾಗರಿಕ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಲ್ಯಾಣಗಳ ವಿಷಯದಲ್ಲಿ ಮಹತ್ತರವಾದ ಪ್ರಗತಿಯನ್ನು ಕಂಡಿದೆ. ಆದುದರಿಂದ ಈ ವರ್ಷ ನಾವು ಭಾರತದ ಭಾರತದ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವವನ್ನು ಅಥವಾ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದ್ದೇವೆ.

ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೀವು ಈ ಸ್ವಾತಂತ್ರ್ಯ ದಿನಾಚರಣೆಗೆ ಭೇಟಿ ನೀಡಬಹುದಾದ ಸ್ವಾತಂತ್ರ್ಯ ಹೋರಾಟಗಳೊಂದಿಗೆ ಸಂಬಂಧ ಹೊಂದಿರುವ ಭಾರತದ ಸ್ಮಾರಕಗಳ ಪಟ್ಟಿ ಇಲ್ಲಿದೆ

ಅಹಮ್ಮದಾಬಾದ್ ನಲ್ಲಿರುವ ಸಬರ್ಮತಿ ಆಶ್ರಮ

ಅಹಮ್ಮದಾಬಾದ್ ನಲ್ಲಿರುವ ಸಬರ್ಮತಿ ಆಶ್ರಮ

ಸಬರ್ಮತಿ ಆಶ್ರಮವು ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದೆ. ಇದು 1917 ರಿಂದ 1930 ರವರೆಗೆ ಮಹಾತ್ಮಾಗಾಂಧೀಜಿಯವರ ಮನೆಯಾಗಿತ್ತು. ಇಂದು ಈ ಆಶ್ರಮವು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂದಿಸಿದ ಭಾರತದ ಒಂದು ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಜೈಲು ಮತ್ತು ಸ್ಮಶಾನದ ನಡುವೆ ಇರುವ ಕಾರಣದಿಂದ ರಾಷ್ಟ್ರಪಿತ ಈ ಸ್ಥಳವನ್ನು ಆರಿಸಿಕೊಂಡರು ಎಂದು ಹೇಳಲಾಗುತ್ತದೆ ಮತ್ತು ಅವರು ಸ್ವತಃ ಸತ್ಯಾಗ್ರಹದಲ್ಲಿ ನಂಬಿಕೆಯುಳ್ಳವರಾಗಿದ್ದರು ಸತ್ಯಾಗ್ರಹಿಯಾಗಿದ್ದರು ಹಾಗೂ ಅವುಗಳಲ್ಲಿ ಯಾವುದಾದರೂ ಒಂದರಲ್ಲಿ ಕೊನೆಗೊಳ್ಳಬೇಕು ಎಂದು ತಿಳಿದವರಾಗಿದ್ದರು.

ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮವು ಮಗನ್ ನಿವಾಸ್, ಹೃದಯ್ ಕುಂಜ್, ವಿನೋಬಾ-ಮೀರಾ ಕುಟೀರ್, ನಂದಿನಿ, ಉದ್ಯೋಗ ಮಂದಿರ, ಸೋಮನಾಥ ಛತ್ರಾಲಯ, ಉಪಾಸನಾ ಮಂದಿರ (ಪ್ರಾರ್ಥನಾ ಭೂನಿ), ಗಾಂಧಿ ಸ್ಮಾರಕ ವಸ್ತುಸಂಗ್ರಹಾಲಯ ಸೇರಿದಂತೆ ಹಲವು ತಾಣಗಳನ್ನು ಒಳಗೊಂಡಿದೆ.

ಸ್ಥಳ: ಗಾಂಧಿ ಸ್ಮಾರಕ ಸಂಗ್ರಹಾಲಯ, ಆಶ್ರಮ ರಸ್ತೆ, ಅಹಮದಾಬಾದ್, ಗುಜರಾತ್ 380027.

ಪೋರ್ಟ್ ಬ್ಲೇರ್‌ನಲ್ಲಿರುವ ಸೆಲ್ಯುಲರ್ ಜೈಲ್ ರಾಷ್ಟ್ರೀಯ ಸ್ಮಾರಕ

ಪೋರ್ಟ್ ಬ್ಲೇರ್‌ನಲ್ಲಿರುವ ಸೆಲ್ಯುಲರ್ ಜೈಲ್ ರಾಷ್ಟ್ರೀಯ ಸ್ಮಾರಕ

ಪೋರ್ಟ್ ಬ್ಲೇರ್‍ ನಲ್ಲಿರುವ ಸೆಲ್ಲ್ಯುಲರ್ ಜೈಲ್ ರಾಷ್ಟ್ರೀಯ ಸ್ಮಾರಕವು ಅತ್ಯಂತ ಹೆಚ್ಚು ಭೇಟಿ ಕೊಡಲ್ಪಡುವ ಪ್ರವಾಸಿ ಆಕರ್ಷಣೆಯಾಗಿದೆ. ಇದು 1906ರಲ್ಲಿ ಬ್ರಿಟೀಷರಿಂದ ನಿರ್ಮಿಸಲ್ಪಟ್ಟಿತು. ಇದು ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಇಲ್ಲಿ ಬಂಧನದಲ್ಲಿದ್ದ ರಾಜಕೀಯ ಕೈದಿಗಳ ಸ್ಮಾರಕವಾಗಿದೆ. ಸೆಲ್ಯುಲರ್ ಜೈಲ್ ರಾಷ್ಟ್ರೀಯ ಸ್ಮಾರಕವು ಭಾರತದ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ತಮ್ಮ ಪ್ರಾಣವನ್ನು ಕಳೆದುಕೊಂಡ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯ ತಾಣವಾಗಿದೆ. ಈಗ ರಾಷ್ಟ್ರೀಯ ಸ್ಮಾರಕವಾಗಿ ರಾಷ್ಟ್ರಕ್ಕೆ ಸಮರ್ಪಿಸಲಾಗಿದ್ದು, ವಸ್ತುಸಂಗ್ರಹಾಲಯ, ಫೋಟೋ ಗ್ಯಾಲರಿ ಮತ್ತು ಆರ್ಟ್ ಗ್ಯಾಲರಿಯನ್ನೂ ಒಳಗೊಂಡಿದೆ.

ಸ್ಥಳ: ಉಪನ್ಯಾಸ ಸಭಾಂಗಣ 2, ಜಿಬಿ ಪಂತ್ ನಿರ್ಗಮನ ಗೇಟ್, ಅಟ್ಲಾಂಟಾ ಪಾಯಿಂಟ್, ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 744104

ರೆಡ್ ಪೋರ್ಟ್, (ಕೆಂಪು ಕೋಟೆ) ದೆಹಲಿ

ರೆಡ್ ಪೋರ್ಟ್, (ಕೆಂಪು ಕೋಟೆ) ದೆಹಲಿ

ಭಾರತದ ರೆಡ್ ಪೋರ್ಟ್ ಒಂದು ದೆಹಲಿಯ ಐತಿಹಾಸಿಕ ಸ್ಮಾರಕವಾಗಿದೆ ಮತ್ತು ದೆಹಲಿಯ ಒಂದು ಅತ್ಯುತ್ತಮವದ ಸ್ಮಾರಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಭಾರತದ ಐದನೇ ಮೊಘಲ್ ಚಕ್ರವರ್ತಿ ಷಹಜಹಾನ್ ಭಾರತೀಯರನ್ನು ಆಳುತ್ತಿದ್ದ ಸಮಯಕ್ಕೆ ಇದು ನಮ್ಮನ್ನು ಕರೆದೊಯ್ಯುತ್ತದೆ. ಸ್ವಾತಂತ್ರ್ಯದ ನಂತರ, ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು 15 ಆಗಸ್ಟ್ 1947 ರಂದು ತ್ರಿವರ್ಣ ಧ್ವಜವನ್ನು ಆರೋಹಣ ಮಾಡಿದರು.

ಸ್ಥಳ: ನೇತಾಜಿ ಸುಭಾಷ್ ಮಾರ್ಗ, ಲಾಲ್ ಕಿಲಾ, ಚಾಂದಿನಿ ಚೌಕ್, ನವದೆಹಲಿ, ದೆಹಲಿ 110006

 ಅಮೃತಸರದ ಜಲಿಯನ್ ವಾಲಾ ಬಾಗ್

ಅಮೃತಸರದ ಜಲಿಯನ್ ವಾಲಾ ಬಾಗ್

ಅಮೃತ್ ಸರದ ಗೋಲ್ಡನ್ ಟೆಂಪಲ್ ನ ಹತ್ತಿರದಲ್ಲಿರುವ ಜಲಿಯನ್ ವಾಲಾಭಾಗ್ 1919 ರ ಏಪ್ರಿಲ್ 13 ರಂದು ಬೈಸಾಖಿ ಹಬ್ಬದಂದು ಸಂಭವಿಸಿದ ಹೃದಯ ವಿದ್ರಾವಕ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಒಂದು ಭಾಗವಾಗಿದ್ದು, 1919 ರಲ್ಲಿ ಬ್ರಿಟೀಷ್ ಅಧಿಕಾರಿಯೊಬ್ಬರು ತನ್ನ ಪಡೆಗಳಿಗೆ ಗುಂಡು ಹಾರಿಸಲು ಆದೇಶಿಸಿದಾಗ ಇಲ್ಲಿ ಅನೇಕ ಜನರು ಕೊಲ್ಲಲ್ಪಟ್ಟರು ಮತ್ತು ಗಾಯಗೊಂಡರು. ಇದಕ್ಕೆ ಸಾಕ್ಷಿ ಎಂಬಂತೆ ಜಲಿಯನ್ ವಾಲಾ ಬಾಗ್‌ನ ಗೋಡೆಗಳಲ್ಲಿ ಗುಂಡಿನ ರಂಧ್ರಗಳನ್ನು ಈಗಲೂ ಕಾಣಬಹುದು. ಈ ಘಟನೆಯು ಭಾರತದ ಇತಿಹಾಸದಲ್ಲಿ ಅನೇಕ ಮಹತ್ವದ ತಿರುವುಗಳಲ್ಲಿ ಒಂದಾಗಿದ್ದು, ಬ್ರಿಟನ್‌ನಿಂದ ಸಂಪೂರ್ಣ ಸ್ವಾತಂತ್ರ್ಯ ಪಡೆಯುವವರೆಗೆ ನಮ್ಮ ದೇಶವು ಸುರಕ್ಷಿತವಾಗಿರಲಿಲ್ಲ ಎಂದು ತೋರಿಸುತ್ತದೆ.

ಸ್ಥಳ: ಗೋಲ್ಡನ್ ಟೆಂಪಲ್ ರಸ್ತೆ, ಅಮೃತಸರ, ಪಂಜಾಬ್

ಕೋಲ್ಕತ್ತಾದಲ್ಲಿರುವ ನೇತಾಜಿ ಭವನ

ಕೋಲ್ಕತ್ತಾದಲ್ಲಿರುವ ನೇತಾಜಿ ಭವನ

ಕೋಲ್ಕತ್ತಾದ ನೇತಾಜಿ ಭವನವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಸುಭಾಸ್ ಚಂದ್ರ ಬೋಸ್ ಅವರ ನಿವಾಸವಾಗಿತ್ತು. ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಕೋಲ್ಕತ್ತಾವು ಸಾವಿರಾರು ಸಂಖ್ಯೆಯಲ್ಲಿ ಸಂದರ್ಶಕರಿಗೆ ಸಾಕ್ಷಿಯಾಗುತ್ತದೆ.ಈ ಭವನವು ಭಾರತದ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಸುಭಾಸ್ ಚಂದ್ರ ಬೋಸ್ ಅವರ ನಿವಾಸವಾಗಿತ್ತು. ಭಾರತ ಸ್ವಾತಂತ್ರ್ಯ ದಿವಸದ ಅಂಗವಾಗಿ ಅವರ ತ್ಯಾಗವನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಪ್ರತೀವರ್ಷವೂ ಮ್ಯೂಸಿಯಂನಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಸ್ಮರಣೆ ಮಾಡಲಾಗುತ್ತದೆ.

ಸ್ಥಳ: 38, ಎಲ್ಜಿನ್ ರಸ್ತೆ, ಶ್ರೀಪಲ್ಲಿ, ಭವಾನಿಪೋರ್, ಕೋಲ್ಕತ್ತಾ, ಪಶ್ಚಿಮ ಬಂಗಾಳ 700020.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X