Search
  • Follow NativePlanet
Share
» »ರೋಮ ರೋಮಗಳನ್ನೂ ಸೆಟೆಸಿ ನಿಲ್ಲಿಸುವ ಪ್ಯಾರಾಗ್ಲೈಡಿಂಗ್

ರೋಮ ರೋಮಗಳನ್ನೂ ಸೆಟೆಸಿ ನಿಲ್ಲಿಸುವ ಪ್ಯಾರಾಗ್ಲೈಡಿಂಗ್

By Vijay

ಪಕ್ಷಿಗಳನ್ನು ನೋಡಿದಾಗ ಒಮ್ಮೆಯಾದರೂ ನಮ್ಮ ಮನದಲ್ಲಿ ಅವುಗಳಂತೆ ನಾವು ಕೂಡ ಹಾರಬಲ್ಲವರಾಗಿದ್ದರೆ ಎಷ್ಟು ಚೆಂದವಾಗಿರುತ್ತಿತ್ತು ಎಂಬ ಅನಿಸಿಕೆ ಬಂದಿರಲೇಬೇಕು. ಹೌದು ಬಾನಂಗಳದಲ್ಲಿ ಯಾವುದೆ ಅಡೆ ತಡೆಗಳಿಲ್ಲದೆ, ಸಿಗ್ನಲ್ ದೀಪಗಳಿಲ್ಲದೆ, ಶಿರಸ್ತ್ರಾಣ, ಪರವಾನಿಗೆ ಪತ್ರ, ವಿಮೆಯ ದಾಖಲೆಗಳು ಹೀಗೆ ಯಾವುದೆ ಗೋಜು ಗದ್ದಲಗಳಿಲ್ಲದೆ ಹಾರುತ್ತ ವಿಹರಿಸಲು ಯಾರಿಗೆ ತಾನೆ ಮನಸ್ಸಿಲ್ಲ.

ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಹಾರಾಟಗಳ ಮೇಲೆ 50% ರಷ್ಟು ಕಡಿತ, ತ್ವರೆ ಮಾಡಿ

ಹೆಬ್ಬಯಕೆಯೆ ಆವಿಷ್ಕಾರಕ್ಕೆ ಮೂಲ ಎಂಬುವಂತೆ ಮನುಷ್ಯನು ರೆಕ್ಕೆಗಳಿಲ್ಲದೆಯೂ ಸಹ ಹಾರುವ ಉಪಾಯ ಕೊಂಡುಕೊಂಡಿದ್ದಾನೆ. ಆ ರೀತಿಯಾಗಿ ಬಾನಂಗಳದಲ್ಲಿ ವಿಹರಿಸುತ್ತ ನಿಧಾನವಾಗಿ ಕೆಳಗಿಳಿಯುವ ಚಟುವಟಿಕೆಯೆ ಪ್ಯಾರಾಗ್ಲೈಡಿಂಗ್. ಇದರಲ್ಲಿ ಮನುಷ್ಯನ ದೇಹಕ್ಕೆ ಸಲಕರಣೆಯೊಂದರಿಂದ ಧುಮುಕುಕೊಡೆ (ಪ್ಯಾರಾಚೂಟ್) ಜೋಡಿಸಲಾಗಿದ್ದು, ಎತ್ತರದ ಒಂದು ಸ್ಥಳದಿಂದ ಜಿಗಿದು ಹಕ್ಕಿಯ ಹಾಗೆ ಹಾರುತ್ತ ನಿಧಾನವಾಗಿ ಭೂಮಿಯ ಮೇಲೆ ಕೆಳಗಿಳಿಯಲಾಗುತ್ತದೆ. ಪ್ರಸ್ತುತ ಲೇಖನವು ಭಾರತದಲ್ಲಿ ಈ ಕ್ರೀಡೆಯನ್ನು ಆನಂದಿಸಬಹುದಾದ ಕೆಲ ಪ್ರಮುಖ ಸ್ಥಳಗಳ ಕುರಿತು ತಿಳಿಸುತ್ತದೆ.

ವಿಶೇಷ ಲೇಖನ : ಭಾರತದಲ್ಲೂ ಸ್ಕೂಬಾ ಡೈವಿಂಗ್

ರೋಮ ರೋಮಗಳನ್ನೂ ಸೆಟೆಸಿ ನಿಲ್ಲಿಸುವ ಪ್ಯಾರಾಗ್ಲೈಡಿಂಗ್

ಚಿತ್ರಕೃಪೆ: Raman Virdi

ಇದೊಂದು ಸಾಹಸಮಯ ಹಾಗೂ ಮೋಜಿನ ಚಟುವಟಿಕೆಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಈ ಕ್ರೀಡೆಯು ಹೆಚ್ಚು ಹೆಸರುವಾಸಿಯಾಗಿದ್ದು, ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತದಲ್ಲಿಯೂ ಈ ಕ್ರೀಡೆಯ ಜನಪ್ರೀಯತೆ ಗಮನಾರ್ಹವಾಗಿ ಹೆಚ್ಚುತ್ತಿದೆ. ಇದಕ್ಕೆಂತಲೆ ಸಾಕಷ್ಟು ತರಬೇತಿ ಸಂಸ್ಥೆಗಳೂ ಸಹ ಸೃಷ್ಟಿಗೊಂಡಿವೆ. ಮೂಲತಃ ಈ ಕ್ರೀಡೆಗೆ ಒಂದು ಉತ್ತಮವಾದ ಸ್ಥಳವಿರಬೇಕು. ಏರಲು ಅನುಕೂಲವಿರುವ ಎತ್ತರದ ಬೆಟ್ಟ ನಿಧಾನವಾಗಿ ಇಳಿಯುವಂತೆ ಅನುಕೂಲಕರವಾದ ಸಮತಟ್ಟಾದ ಮೈದಾನ ಈ ಕ್ರೀಡೆಗೆ ಬೇಕಾಗಿರುವ ಪ್ರಾಥಮಿಕ ಅವಶ್ಯಕತೆಗಳು.

ರೋಮ ರೋಮಗಳನ್ನೂ ಸೆಟೆಸಿ ನಿಲ್ಲಿಸುವ ಪ್ಯಾರಾಗ್ಲೈಡಿಂಗ್

ಚಿತ್ರಕೃಪೆ: Túrelio

ಕಾಮ್ಷೇಟ್, ಪುಣೆ: ಮಹಾರಾಷ್ಟ್ರ ರಾಜ್ಯದ ಐಟಿ ಸಿಟಿ ಪುಣೆ ಬಳಿಯಿರುವ ಕಾಮ್ಷೇಟ್ ಎಂಬ ಸ್ಥಳವು ಭಾರತದ ಉತ್ತಮ ಪ್ಯಾರಾಗ್ಲೈಡಿಂಗ್ ಸ್ಥಳಗಳ ಪೈಕಿ ಒಂದಾಗಿದೆ. ಇಲ್ಲಿ ಕೈಗೆಟುಕುವ ದರದಲ್ಲಿ ಈ ಕ್ರೀಡೆಯ ತರಬೇತಿ ನೀಡುವ ಅನೇಕ ಸಂಸ್ಥೆಗಳಿವೆ. ಮಳೆಗಾಲ ಹಾಗೂ ಬೇಸಿಗೆ ಕಾಲಗಳನ್ನು ಹೊರತುಪಡಿಸಿ ಚಳಿಗಾಲವು ಈ ಕ್ರೀಡೆಗೆ ಸೂಕ್ತವಾಗಿರುತ್ತದೆ. ನಿಮ್ಮೊಬ್ಬರಿಗೆ ಪ್ಯಾರಾಗ್ಲೈಡಿಂಗ್ ಮಾಡಲು ಹೆದರಿಕೆಯಿದ್ದರೆ ಟಾಂಡೇಮ್ ಪ್ಯಾರಾಗ್ಲೈಡಿಂಗ್ ಸಹ ಮಾಡಬಹುದು. ಇದರಲ್ಲಿ ನಿಮ್ಮ ಜೊತೆ ಒಬ್ಬ ನಿಪುಣ ಮಾರ್ಗದರ್ಶಕನಿರುತ್ತಾನೆ.

ವಿಶೇಷ ಲೇಖನ : ಪುಣೆ ಜಿಲ್ಲೆಯ ಧಾರ್ಮಿಕ ಆಕರ್ಷಣೆಗಳು

ಪ್ಯಾರಾಗ್ಲೈಡಿಂಗ್ ಚಟುವಟಿಕೆಗೆ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಪಿತ್ತೊರ್ಗಡ್: ಉತ್ತರಾಖಂಡ ರಾಜ್ಯದಲ್ಲಿರುವ ಪಿತ್ತೊರ್ಗಡ್ ಒಂದು ಪ್ಯಾರಾಗ್ಲೈಡಿಂಗ್ ಚಟುವಟಿಕೆಯಿರುವ ತಾಣವಾಗಿದೆ. ದೆಹಲಿಯಿಂದ 500 ಕಿಮೀ ಹಾಗೂ ನೈನಿತಾಲ್ ಪ್ರವಾಸಿ ಸ್ಥಳದಿಂದ 330 ಕಿಮೀ ಗಳಷ್ಟು ದೂರದಲ್ಲಿ ಈ ನಗರ ಸ್ಥಿತವಿದೆ. ಚಳಿಗಾಲವು ಈ ಕ್ರೀಡೆಯನ್ನು ಆಸ್ವಾದಿಸಬಹುದಾದ ಉತ್ತಮ ಸಮಯವಾಗಿದೆ. [ಮನಸೂರೆಗೊಳ್ಳುವ ದೆಹಲಿ ಚಿತ್ರಗಳು]

ರೋಮ ರೋಮಗಳನ್ನೂ ಸೆಟೆಸಿ ನಿಲ್ಲಿಸುವ ಪ್ಯಾರಾಗ್ಲೈಡಿಂಗ್

ಚಿತ್ರಕೃಪೆ: Pedroserafin

ಮುಕ್ತೇಶ್ವರ : ಮುಕ್ತೇಶ್ವರದಲ್ಲಿ ಪ್ಯಾರಾಗ್ಲೈಡಿಂಗ್ ಶಿಬಿರವಿದ್ದು, ಇದು ನೈನಿತಾಲ್ ಪಟ್ಟಣದಿಂದ 50 ಕಿಮೀ ಗಳಷ್ಟು ದೂರದಲ್ಲಿದೆ.

ಸೋಲಂಗ್ ಕಣಿವೆ ಮನಾಲಿ: ಹಿಮಾಚಲ ಪ್ರದೇಶ ರಾಜ್ಯದ ಮನಾಲಿ ಬಳಿಯಲ್ಲಿರುವ ಸೋಲಂಗ್ ಕಣಿವೆ ಪ್ಯಾರಾಗ್ಲೈಡಿಂಗ್ ಕ್ರೀಡೆಯನ್ನು ಆಸ್ವಾದಿಸಬಹುದಾದ ಸ್ಥಳವಾಗಿದೆ. ಈ ಒಂದು ಕ್ರೀಡೆಯ ಆನಂದವನ್ನು ಪಡೆಯುವುದಕ್ಕೆಂತಲೆ ದೇಶದ ಹಲವು ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ರೋಮ ರೋಮಗಳನ್ನೂ ಸೆಟೆಸಿ ನಿಲ್ಲಿಸುವ ಪ್ಯಾರಾಗ್ಲೈಡಿಂಗ್

ಚಿತ್ರಕೃಪೆ: Harsh Agrawal

ಯಳಗಿರಿ, ತಮಿಳುನಾಡು: ವೆಲ್ಲೂರು ಜಿಲ್ಲೆಯಲ್ಲಿರುವ ಯಳಗಿರಿ ಹಸಿರಿನ ಮೈಸಿರಿಯಿಂದ ಕಂಗೊಳಿಸುವ ಒಂದು ಸುಂದರ ಗಿರಿಧಾಮ ಪ್ರದೇಶವಾಗಿದೆ. ರಾಜ್ಯದ ಇತರೆ ಗಿರಿಧಾಮಗಳಾದ ಊಟಿ ಹಾಗೂ ಸ್ವರ್ಗದಂತಿರುವ ಕೊಡೈಕೆನಾಲ್ ಗಳಂತೆ ಈ ಗಿರಿಧಾಮವು ಅಭಿವೃದ್ಧಿಗೊಂಡಿಲ್ಲ. ಆದರೂ ಇಲ್ಲಿನ ರಾಜ್ಯ ಸರ್ಕಾರವು ಇದನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಇಲ್ಲಿ ಪ್ಯಾರಾಗ್ಲೈಡಿಂಗ್ ಹಾಗೂ ಪರ್ವತಾರೋಹಣದಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.

ವಿಶೇಷ ಲೇಖನಗಳು: ಬೊಂಬಾಟ್ ಮೈಮಾಟದ ಊಟಿ ಧರೆಗಿಳಿದ ಸ್ವರ್ಗ ಕೊಡೈಕೆನಾಲ್

ರೋಮ ರೋಮಗಳನ್ನೂ ಸೆಟೆಸಿ ನಿಲ್ಲಿಸುವ ಪ್ಯಾರಾಗ್ಲೈಡಿಂಗ್

ಚಿತ್ರಕೃಪೆ: Raman Virdi

ನಂದಿ ಬೆಟ್ಟ: ಕರ್ನಾಟಕದ ನಂದಿ ಬೆಟ್ಟ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ಚಟುವಟಿಕೆಯನ್ನು ಅನುಭವಿಸಬಹುದಾಗಿದೆ. ಇಲ್ಲಿ ಟಾಂಡೆಮ್ ಪ್ಯಾರಾಗ್ಲೈಡಿಂಗ್ ಚಟುವಟಿಕೆಯನ್ನು ಕೆಲ ಕ್ಲಬ್ಬುಗಳು ಒದಗಿಸುತ್ತವೆ. ಬೆಂಗಳೂರಿಗರಿಗೆ ಪ್ಯಾರಾಗ್ಲೈಡಿಂಗ್ ಸವಿಯಬಹುದಾದ ಅತಿ ಹತ್ತಿರದ ಸ್ಥಳ ನಂದಿ ಬೆಟ್ಟವಾಗಿದೆ.

ವಿಶೇಷ ಲೇಖನ : ಮೈ ಜುಮ್ಮೆನ್ನಿಸುವ ನಂದಿ ಬೆಟ್ಟ

ರೋಮ ರೋಮಗಳನ್ನೂ ಸೆಟೆಸಿ ನಿಲ್ಲಿಸುವ ಪ್ಯಾರಾಗ್ಲೈಡಿಂಗ್

ಚಿತ್ರಕೃಪೆ: Bernard Oh

ಮುನ್ನಾರ್: ನವದಂಪತಿಗಳ ಪಾಲಿಗೆ ಸ್ವರ್ಗದಂತಿರುವ ಸುಂದರ ಪ್ರವಾಸಿ ಸ್ಥಳ ಕೇರಳದಲ್ಲಿರುವ ಮುನ್ನಾರ್. ಇಡುಕ್ಕಿ ಜಿಲ್ಲೆಯಲ್ಲಿರುವ ಈ ಹಸಿರಿನ ರಾಶಿಯು ಕೇವಲ ಮಧುಚಂದ್ರದ ನಿಮಿತ್ತ ಮಾತ್ರವಲ್ಲದೆ ಸಾಹಸಿ ಪ್ರವೃತ್ತಿಯ ಪ್ರವಾಸಿಗರ ಪಾಲಿಗೂ ಕೂಡ ಸ್ವರ್ಗವೆನಿಸಿದೆ. ಕಾರಣ ಈ ಒಂದು ಸುಂದರ ಸ್ಥಳದಲ್ಲಿ ಪ್ಯಾರಾಗ್ಲೈಡಿಂಗ್ ಚಟುವಟಿಕೆಯನ್ನು ಆನಂದಿಸಬಹುದಾಗಿದೆ.

ಸೂಚನೆ: ಪ್ರಕಟಿಸಲಾದ ಚಿತ್ರಗಳು ಸಾಂದರ್ಭಿಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X