Search
  • Follow NativePlanet
Share
» »ಭಾರತದಲ್ಲಿರುವ ಇಸ್ಕಾನ್ ದೇವಾಲಯಗಳು

ಭಾರತದಲ್ಲಿರುವ ಇಸ್ಕಾನ್ ದೇವಾಲಯಗಳು

ಇಸ್ಕಾನ್ (ISKCON) ಒಂದು ಧಾರ್ಮಿಕ ಸಂಸ್ಥೆಯಾಗಿದ್ದು ಭಗವದ್ಗೀತೆಯ ಸಾರವನ್ನು ಪಸರಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಇದರ ಪೂರ್ಣ ಹೆಸರು ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷೀಯಸ್ ನೆಸ್ ಎಂದಾಗಿದೆ. 11 ಜುಲೈ 1966 ರಂದು ಈ ಸಂಸ್ಥೆಯನ್ನು ಅಧಿಕೃತವಾಗಿ ಅಮೇರಿಕದಲ್ಲಿ ಶ್ರೀ ಭಕ್ತಿ ವೇದಾಂತಸ್ವಾಮಿ (ಶ್ರೀ ಪ್ರಭುಪಾದರು) ಅವರಿಂದ ನೊಂದಾಯಿಸಲಾಯಿತು.

ಇಂದು ವಿಶ್ವದ ಹಲವೆಡೆ ಇಸ್ಕಾನ್ ನಿರ್ಮಿತ ಕೃಷ್ಣ ದೇವಾಲಯಗಳನ್ನು ಕಾಣಬಹುದಾಗಿದೆ. ಭಾರತದಲ್ಲಿ 40 ಕ್ಕೂ ಅಧಿಕ ಇಸ್ಕಾನ್ ದೇವಾಲಯಗಳಿವೆ. ಪ್ರಸ್ತುತ ಲೇಖನವು ಭಾರತದ ಕೆಲವು ಪ್ರಮುಖ ದೇವಾಲಯಗಳ ಕುರಿತು ತಿಳಿಸುತ್ತದೆ.

Important ISKCON temples of India

ಇಸ್ಕಾನ್ ದೇವಾಲಯ:
ಬೆಂಗಳೂರಿನ ರಾಜಾಜಿನಗರ ಬಡಾವಣೆಯ್ತಲ್ಲಿರುವ ಈ ಭವ್ಯ ಇಸ್ಕಾನ್ ದೇವಾಲಯದ ಹೆಸರು ಶ್ರೀ ರಾಧಾ ಕೃಷ್ಣ ಮಂದಿರ. ವಿಶ್ವದ ದೊಡ್ಡದಾದ ಇಸ್ಕಾನ್ ದೇವಸ್ಥಾನಗಳ ಪೈಕಿ ಒಂದಾಗಿರುವ ಈ ದೇವಸ್ಥಾನವು 1997 ರಂದು ಶ್ರೀ ಶಂಕರ ದಯಾಳ ಶರ್ಮಾ ಹಾಗೂ ಮಧು ಪಂಡಿತ ದಾಸರವರಿಂದ ಉದ್ಘಾಟಿಸಲ್ಪಟ್ಟಿದೆ.

ಚಿತ್ರಕೃಪೆ: Svpdasa

ನವ ದೆಹಲಿಯಲ್ಲಿರುವ ಪ್ರಸಿದ್ಧ ವೈಷ್ಣವ ದೇವಾಲಯ ಇಸ್ಕಾನ್ ದೇವಾಲಯವಾಗಿದೆ. ಈ ದೇವಾಲಯವನ್ನು ಪೂಜ್ಯನೀಯ ದೇವತೆಗಳಾದ ಶ್ರೀ ಕೃಷ್ಣ ಹಾಗೂ ರಾಧಾ ದೇವತೆಗೆ ಮೀಸಲಾಗಿಡಲಾಗಿದ್ದು ಶ್ರೀ ರಾಧಾ ಪಾರ್ಥಸಾರಥಿ ಮಂದಿರ ಎಂದೇ ಕರೆಯಲಾಗುತ್ತದೆ. ಈ ದೇವಾಲಯವು ದೆಹಲಿಯ ಕೈಲಾಶ್ ಪ್ರದೇಶದ ಪೂರ್ವ ಕಡೆಗೆ ಸುಂದರ ಹಸಿರು ತುಂಬಿದ ಹರೇ ಕೃಷ್ಣ ಎಂಬ ಬೆಟ್ಟದ ಮೇಲಿದೆ. ಈ ದೇವಸ್ಥಾನವನ್ನು 1998 ರಲ್ಲಿ ಸ್ಥಾಪನೆ ಮಾಡಲಾಯಿತು.

ಚಿತ್ರಕೃಪೆ: Bill william compton

ತಿರುಪತಿಯಲ್ಲಿರುವ ಇಸ್ಕಾನ್‌ ಶ್ರೀ ಕೃಷ್ಣ ದೇವಾಲಯವು ತಿರುಮಲ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಸಿಗುತ್ತದೆ. ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ವಿನ್ಯಾಸವನ್ನು ಇದು ಒಳಗೊಂಡಿದೆ. ಅಲ್ಲದೇ ಇದು ಶಿಖರ ಮಾದರಿಯಲ್ಲಿದೆ. ಬಿಳಿ ಹಾಗೂ ಚಿನ್ನದ ಬಣ್ಣ ಹೊಂದಿದೆ. ಇಲ್ಲಿ ಶ್ರೀ ನರಸಿಂಹಸ್ವಾಮಿ, ಶ್ರೀಕೃಷ್ಣ, ಕೃಷ್ಣಲೀಲೆ ಹಾಗೂ ದೇವ ವರಾಹಸ್ವಾಮಿಯನ್ನು ಗೋಡೆಯ ಮೇಲೆ ವಿಶಿಷ್ಟವಾಗಿ ಕೆತ್ತಿ ಪ್ರದರ್ಶಿಸಲಾಗಿದೆ.

ಚಿತ್ರಕೃಪೆ: Raji.srinivas

ಮುಂಬೈನ ಜುಹು ಪ್ರದೇಶದಲ್ಲಿರುವ ಇಸ್ಕಾನ್ ದೇವಸ್ಥಾನವನ್ನು ಶ್ರೀ ಶ್ರೀ ರಾಧಾ ರಸ್ ಬಿಹಾರಿ ಜೀ ದೇವಸ್ಥಾನ ಎಂದು ಕರೆಯಲಾಗುತ್ತದೆ. ಇದು ಮುಂಬೈನಲ್ಲೆ ಕೃಷ್ಣನ ಸುಂದರ ದೇವಾಲಯವಾಗಿದೆ.

ಚಿತ್ರಕೃಪೆ: Rohini

ಇದು ಆಂಧ್ರಪ್ರದೇಶದ ಅನಂತಪುರ ಪಟ್ಟಣದಲ್ಲಿರುವ ಶ್ರೀ ಕೃಷ್ಣನಿಗೆ ಮುಡಿಪಾದ ಇಸ್ಕಾನ್ ದೇವಾಲಯವಾಗಿದೆ.

ಚೆನ್ನೈನಲ್ಲಿರುವ ಈ ಇಸ್ಕಾನ್ ದೇವಾಲಯವು ಒಂದು ವೈಷ್ಣವ ದೇವಾಲಯವಾಗಿದ್ದು ಕೃಷ್ಣನಿಗೆ ಮುಡಿಪಾಗಿದೆ. 26 ಎಪ್ರಿಲ್, 2012 ರಂದು ಉದ್ಘಾಟನೆಗೊಂಡ ಈ ದೇವಾಲಯವು ತಮಿಳುನಾಡಿನಲ್ಲೆ ದೊಡ್ಡದಾದ ರಾಧಾ ಕೃಷ್ಣರ ದೇವಾಲಯವಾಗಿದೆ.

Important ISKCON temples of India

ಚಿತ್ರಕೃಪೆ: Hayavadhan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X