Search
  • Follow NativePlanet
Share
» »ಇಲ್ಲಿನ ಪ್ರಸಿದ್ಧ ಸ್ಥಳಗಳ ಹೆಸರುಗಳನ್ನು ನೀವು ಗುರುತಿಸಬಲ್ಲಿರಾ?

ಇಲ್ಲಿನ ಪ್ರಸಿದ್ಧ ಸ್ಥಳಗಳ ಹೆಸರುಗಳನ್ನು ನೀವು ಗುರುತಿಸಬಲ್ಲಿರಾ?

ಅನೇಕ ಮಂದಿ ಇಂತಹ ಚಟುವಟಿಕೆಗಳನ್ನು ಆನಂದಿಸಬಹುದು. ಒಮ್ಮೊಮ್ಮೆ ಸ್ಥಳಗಳ ಚಿತ್ರ ನೋಡುತ್ತಲೇ ಆಕರ್ಷಿತರಾಗುತ್ತೇವೆ ಅಥವಾ ತಟ್ಟನೆ ಹೇಳುತ್ತೇವೆ. ಇದು ಅದೇ ಸ್ಥಳವೆಂದು. ಪ್ರವಾಸ ಮಾಡುವುದು ಎಲ್ಲರಿಗೂ ಇಷ್ಟವಾದುದೇ. ಮನಸ್ಸಿ ಒಂದಿಷ್ಟು ವಿಶ್ರಾಂತಿಯ

ಅನೇಕ ಮಂದಿ ಇಂತಹ ಚಟುವಟಿಕೆಗಳನ್ನು ಆನಂದಿಸಬಹುದು. ಒಮ್ಮೊಮ್ಮೆ ಸ್ಥಳಗಳ ಚಿತ್ರ ನೋಡುತ್ತಲೇ ಆಕರ್ಷಿತರಾಗುತ್ತೇವೆ ಅಥವಾ ತಟ್ಟನೆ ಹೇಳುತ್ತೇವೆ. ಇದು ಅದೇ ಸ್ಥಳವೆಂದು. ಪ್ರವಾಸ ಮಾಡುವುದು ಎಲ್ಲರಿಗೂ ಇಷ್ಟವಾದುದೇ. ಮನಸ್ಸಿ ಒಂದಿಷ್ಟು ವಿಶ್ರಾಂತಿಯ ಸಲುವಾಗಿ ಹೊರಗಡೆಗೆ ಸ್ನೇಹಿತರೊಂದಿಗೂ, ದಂಪತಿಗಳು ಅಥವಾ ಮಕ್ಕಳೊಂದಿಗೆ ತೆರಳುತ್ತಿರುತ್ತೇವೆ. ಇಲ್ಲಿ ಪ್ರಕೃತಿ ಸೌಂದರ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಚಿತ್ರಗಳೊಂದಿಗೆ ಯಾವ ಸ್ಥಳ ಎಂದು ನೀವೆ ಕಂಡು ಹಿಡಿಯಿರಿ. ಅಂದರೆ ಇಲ್ಲಿ ಚಿತ್ರಗಳನ್ನು ನೀಡಲಾಗುತ್ತದೆ. ಆ ಚಿತ್ರದಲ್ಲಿನ ಸ್ಥಳ ಯಾವುದು ಎಂದು ನೀವೆ ಕಂಡು ಹಿಡಿಯಬೇಕು.

ನೋಡೋಣ ನೀವೆಷ್ಟು ಪ್ರವಾಸಿ ಪ್ರಿಯರು ಎಂಬುದನ್ನು ನೀವೆ ತಿಳಿದುಕೊಳ್ಳಿ. ಹಾಗಾದರೆ ಮತ್ತೇಕೆ ತಡ ಬನ್ನಿ ಆ ಚಿತ್ರಗಳ ಸ್ಥಳಗಳನ್ನು ಗುರುತಿಸಲು ಸಜ್ಜಾಗಿ....

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಚಿತ್ರದಲ್ಲಿನ ಸುಂದರವಾದ ಸ್ಥಳವು ದೃಶ್ಯವೇ ಹೇಳುವಂತೆ, ಹಾಲಿನ ನೊರೆಯಂತೆ ಧುಮುಕುತ್ತಿರುವ ಅದ್ಭುತವಾದ ದೃಶ್ಯವು ಎಂಥಹ ಪ್ರವಾಸಿಗರಿಗೆ ಆಗಲಿ ಮಂತ್ರಮುಗ್ಧರನ್ನಾಗಿಸದೇ ಬಿಡದು. ಇದು ನಮ್ಮ ಕರ್ನಾಟಕ ರಾಜ್ಯದಲ್ಲಿನ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಈ ಜಲಪಾತವು ದಕ್ಷಿಣ ಭಾರತ ಪ್ರಖ್ಯಾತ ಗಿರಿಧಾಮಗಳಲ್ಲಿ ಒಂದಾಗಿದೆ. ಕರ್ನಾಟಕದ ಜೀವನದಿಯ ಉಗಮವಾಗಿದ್ದು ಇದೇ ಸ್ಥಳದಲ್ಲಿ... ಉತ್ತರ ಹೇಳಿ.....

ಉತ್ತರ: ಅಬ್ಬಿ ಜಲಪಾತ, ಮಡಿಕೇರಿ.


PC:Vaishak Kallore

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಉತ್ತರ ನೋಡುವ ಮುನ್ನ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಉತ್ತರ ಹೇಳಿ. ಈ ನಯನಮನೋಹರವಾದ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಈ ಸ್ಥಳವು ಜಗತ್ತಿನಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ಇದನ್ನು ದಕ್ಷಿಣ ಚಿರಾಪುಂಜಿ ಎಂದೇ ಕರೆಯುತ್ತಾರೆ. ಇಲ್ಲಿನ ಅಪೂರ್ವವಾದ ಸೂರ್ಯಾಸ್ತ ಹಾಗು ಸೂರ್ಯೋದಯವನ್ನು ಕಾಣುವ ಸಲುವಾಗಿ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಉತ್ತರ ತಿಳಿದಿರಬೇಕು ಅಲ್ಲವೇ?

ಉತ್ತರ: ಆಗುಂಬೆ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ.


PC:Sajjad Fazel

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಇದೊಂದು ಅದ್ಭುತವಾದ ಬೆಟ್ಟ ಶ್ರೇಣಿ ಹೊಂದಿರುವ ಪಶ್ಚಿಮ ಘಟ್ಟಗಳಲ್ಲಿ ಆವರಿಸಿರುವ ಧಾರ್ಮಿಕವಾದ ದೃಷ್ಟಿಯಿಂದಲೂ ಪ್ರಸಿದ್ಧಿ ಹೊಂದಿರುವ ತಾಣ. ಇದು ಹಿಂದೂ ಹಾಗು ಮುಸ್ಲಿಂ ಎರಡು ಧರ್ಮದವರಿಗೂ ಪವಿತ್ರವಾದ ತಾಣವೆಂದೇ ಹೇಳಬಹುದು.

ಉತ್ತರ: ಬಾಬಾ ಬುಡನ್ ಗಿರಿ ಬೆಟ್ಟಗಳು, ಚಿಕ್ಕಮಗಳೂರು ಜಿಲ್ಲೆ.


PC:S N Barid

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಇದೊಂದು ಮಂತ್ರಮುಗ್ಧಗೊಳಿಸುವ ಬೆಟ್ಟಗಳ ಶ್ರೇಣಿ. ಇದು ಕೊಡಗು ಜಿಲ್ಲೆಯಲ್ಲಿರುವ ಈ ಬೆಟ್ಟಕ್ಕೆ ಚಾರಣಕ್ಕೂ ಸಹ ಪ್ರಸಿದ್ಧವಾದುದು. ಸೃಷ್ಟಿಕರ್ತನೊಂದಿಗೆ ನಂಟನ್ನು ಹೊಂದಿರುವ ಈ ಬೆಟ್ಟವು ಪಶ್ಚಿಮ ಘಟ್ಟದಲ್ಲಿ ನೆಲೆಸಿದೆ ಎಂದೇ ಹೇಳಬಹುದು. ಈ ಸುಂದರವಾದ ತಾಣಕ್ಕೆ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ.

ಉತ್ತರ: ಬ್ರಹ್ಮಗಿರಿ ಪರ್ವತಗಳು, ಕೊಡಗು

PC:L. Shyamal

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಪ್ರಸಿದ್ಧ ಇಂಗ್ಲೀಷ್ ಪುರಾತತ್ತ್ವ ಇತಿಹಾಸಕಾರ ಹೇಳುವ ಪ್ರಕಾರ ಈ ದೇವಾಲಯದ ಶಿಲ್ಪಕಲೆಯು ಕನ್ನಡ ಪ್ರದೇಶದಲ್ಲಿ ಹಳೇಬೀಡಿನ ನಂತರದ ಅತಿ ಉತ್ಕøಷ್ಟವಾದುದು. ಪಶ್ಚಿಮ ಚಾಲುಕ್ಯರ ಕಲಾ ನೈಪುಣ್ಯತೆಯನ್ನು ತೋರುವ ಈ ದೇವಾಲಯವು ಮಹಾಶಿವನಿಗೆ ಮುಡಿಪಾದ ದೇವಾಲಯವಾಗಿದೆ. ಅಂದರೆ ಇದೊಂದು ಮಹಿಮಾನ್ವಿತವಾದ ಶೈವ ಕ್ಷೇತ್ರ.

ಉತ್ತರ: ಮಹಾದೇವ ದೇವಾಲಯ, ಇಟಗಿ, ಕೊಪ್ಪಳ ಜಿಲ್ಲೆ.

PC:L. Shyamal

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಇದು ಕರ್ನಾಟಕ ಮಾತ್ರವಲ್ಲ ಭಾರತ ದೇಶದಲ್ಲಿಯೇ ಪಸಿದ್ಧವಾದ ಜಲಪಾತವಾಗಿದೆ. ಇಲ್ಲಿ ರಾಜಾ, ರಾಣಿ, ರಾಕೆಟ್ ಹಾಗು ರೋರರ್ ಎಂಬ 4 ಧಾರೆಗಳು ಧುಮುಕುವ ಈ ಸ್ಥಳವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇಲ್ಲಿನ ಸೌಂದರ್ಯವನ್ನು ಕಾಣಲು ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ,

ಉತ್ತರ: ಜೋಗದ ಜಲಪಾತ, ಶಿವಮೊಗ್ಗ


PC:Prasanaik

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಈ ಸುಂದರವಾದ ಸ್ಥಳವು ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ಇದೊಂದು ಬೆಟ್ಟದ ಸೌಂದರ್ಯವಾಗಿದ್ದು, ಅನೇಕ ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೊಂದು ಅದ್ಭುತವಾದ ಪ್ರವಾಸಿ ಕೇಂದ್ರ. ಇಲ್ಲಿನ ಪ್ರಾಕೃತಿಕ ಸೌಂದರ್ಯದ ಜೊತೆ ಜೊತೆಗೆ ಭೋಗ ನಂದೀಶ್ವರನ ದೇವಾಲಯವು ಕೂಡ ಇದೆ. ಇದನ್ನು ಅರ್ಕಾವತಿ ನದಿಯ ಉಗಮ ಸ್ಥಾನ ಎಂದು ನಂಬಲಾಗಿದೆ.

ಉತ್ತರ: ನಂದಿ ಬೆಟ್ಟ, ಚಿಕ್ಕಬಳ್ಳಾಪುರ.

PC:Koshy Koshy

ಇದು ಯಾವ ಸ್ಥಳ?

ಇದು ಯಾವ ಸ್ಥಳ?

ಇದು ದಕ್ಷಿಣ ಭಾರತ ರಾಜ್ಯವೊಂದರೆ "ಸಾಂಸ್ಕøತಿಕ ರಾಜಧಾನಿ" ನಗರದಲ್ಲಿದೆ. ಭಾರತದಲ್ಲಿರುವ ಸುಂದರವಾದ ಹಾಗು ವಿಶಾಲವಾದ ಉದ್ಯಾನವನಗಳಲ್ಲಿ ಒಂದಾಗಿದೆ. ಈ ಸುಂದರವಾದ ಉದ್ಯಾನ ಕರ್ನಾಟಕದ ಜನಪ್ರಿಯ ಜಲಾಶಯದ ಒಂದು ಭಾಗವಾಗಿದೆ.

ಉತ್ತರ: ಕೆ.ಆರ್.ಎಸ್ ಉದ್ಯಾನ, ಮಂಡ್ಯ ಜಿಲ್ಲೆ.


PC:Sunil Nallode

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X