Search
  • Follow NativePlanet
Share
» »ಮಹಿಳಾ ದಿನದ ವಿಶೇಷ: ಭಾರತೀಯ ಮಹಿಳೆಯರು ನಿರ್ಮಿಸಿದಂತಹ ಗಮನ ಸೆಳೆಯುವ ಅವಿಸ್ಮರಣೀಯ ಸ್ಮಾರಕಗಳು

ಮಹಿಳಾ ದಿನದ ವಿಶೇಷ: ಭಾರತೀಯ ಮಹಿಳೆಯರು ನಿರ್ಮಿಸಿದಂತಹ ಗಮನ ಸೆಳೆಯುವ ಅವಿಸ್ಮರಣೀಯ ಸ್ಮಾರಕಗಳು

ಈ ತಿಂಗಳು ಅದರಲ್ಲಿಯೂ ವಿಶೇಷವಾಗಿ ವಿಶ್ವ ಮಹಿಳಾ ದಿನ(ಮಾರ್ಚ್ 8) ವನ್ನು ಆಚರಣೆ ಮಾಡುತ್ತಾ, ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಹೆಸರುವಾಸಿಯಾದ ಮಹಿಳೆಯರು ಮತ್ತು ಅವರ ಸಾಧನೆಗಳನ್ನು ಹಾಗೂ ಅವರ ಹಕ್ಕುಗಳು ಮತ್ತು ಸಮಾನತೆಗಳ ಬಗ್ಗೆ ಸ್ಮರಿಸಲು ಸೂಕ್ತವಾದ ಸಮಯವಾಗಿದೆ.

ಮಹಿಳಾದಿನವೆಂದರೆ ಕೇವಲ ಪ್ರಸಿದ್ದ ಹಾಗೂ ಹೆಸರುವಾಸಿಯಾದ ಮಹಿಳೆಯರನ್ನು ಮಾತ್ರ ನೆನಪಿನಲ್ಲಿಟ್ಟುಕೊಂಡು ಆಚರಿಸುವ ದಿನ ಮಾತ್ರವಲ್ಲದೆ ವಿಶ್ವದ ಏಳಿಗೆಗೆ ಮಹಿಳೆಯರ ಪಾತ್ರವೂ ದೊಡ್ಡದಾಗಿರುವುದರಿಂದ ಪ್ರತೀ ವರ್ಗದ ಮಹಿಳೆಯರಿಗೂ ಅನ್ವಯವಾಗುವಂತಹ ದಿನವಾಗಿದೆ. ಈ ಲೇಖನವು ಪ್ರಾಚೀನ ಭಾರತೀಯ ವಾಸ್ತುಶಿಲ್ಪ ಮತ್ತು ಇತಿಹಾಸವನ್ನು ವ್ಯಾಖ್ಯಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೆಲವು ಶ್ರೇಷ್ಠ ಮಹಿಳಾ ವಾಸ್ತುಶಿಲ್ಪಿಗಳಿಗೆ ಸಮರ್ಪಿಸಲಾಗಿದೆ.

ಮಹಿಳೆಯರಿಂದ ನಿರ್ಮಿತವಾದ ಭಾರತದ ಅತ್ಯಂತ ಅದ್ಭುತವಾದ ವಾಸ್ತುಶಿಲ್ಪಗಳ ಕಡೆಗೆ ಒಮ್ಮೆ ಗಮನ ಹರಿಸೋಣ

ಹುಮಾಯೂನನ ಸಮಾಧಿ

ಹುಮಾಯೂನನ ಸಮಾಧಿ

ಹುಮಾಯೂನನ ಮಡದಿ ಹಮೀದಾ ಬಾನು ಬೇಗಂ ಅವರಿಂದ ನಿರ್ಮಿಸಲ್ಪಟ್ಟ ಹುಮಾಯೂನ್ ಸಮಾದಿಯು ಭಾರತದ ಪ್ರಸಿದ್ದ ಸ್ಮಾರಕಗಳಲ್ಲಿ ಒಂದೆನಿಸಿದೆ. ಈ ಭವ್ಯವಾದ ಹುಮಾಯೂನನಿಗಾಗಿ ನಿರ್ಮಿತವಾದ ಸ್ಮಾರಕವು ದೆಹಲಿಯಲ್ಲಿದೆ ಈ ಸಮಾದಿಯ ವಾಸ್ತುಶಿಲ್ಪವು ಪರ್ಶಿಯನ್ ಮತ್ತು ಭಾರತೀಯ ಶೈಲಿಗಳ ಮಿಶ್ರಣವಾಗಿದೆ. ಹಮೀದಾರ ಮರಣಾನಂತರ ಅವರನ್ನು ಈ ಜಾಗದಲ್ಲಿಯೇ ಸಮಾಧಿ ಮಾಡಲಾಯಿತು.

ವಿರೂಪಾಕ್ಷ ದೇವಾಲಯ

ವಿರೂಪಾಕ್ಷ ದೇವಾಲಯ

ಪ್ರಸಿದ್ಧ ವಿರೂಪಾಕ್ಷ ದೇವಾಲಯವು ಕರ್ನಾಟಕದ ಪಟ್ಟದಕಲ್‌ನಲ್ಲಿದೆ ಇದನ್ನು ಕ್ರಿ.ಶ 740 ರಲ್ಲಿ ರಾಣಿ ಲೋಕಮಹಾದೇವಿಯವರು ಪಲ್ಲವ ಆಡಳಿತಗಾರರ ಮೇಲೆ ಪತಿ ರಾಜ ಎರಡನೇ ವಿಕ್ರಮಾದಿತ್ಯ ಇವರ ವಿಜಯದ ನೆನಪಿಗಾಗಿ ನಿರ್ಮಿಸಿದರು. ಈ ಸ್ಮಾರಕವನ್ನು ಲೋಕೇಶ್ವರ ಮತ್ತು ಲೋಕಪಲೇಶ್ವರ ಎಂದೂ ಕರೆಯಲಾಗುತ್ತಿತ್ತು. ಇದು 8 ನೇ ಶತಮಾನದಲ್ಲಿ ಪಟ್ಟದಕಲ್‌ನಲ್ಲಿ ನಿರ್ಮಿಸಲಾದ ಅತಿದೊಡ್ಡ ದೇವಾಲಯವಾಗಿದೆ.

ರಾಣಿ ಕೀ ವಾವ್

ರಾಣಿ ಕೀ ವಾವ್

ಗುಜರಾತ್ ನ ಪಟಾನ್ ನಲ್ಲಿ ನೆಲೆಸಿರುವ ರಾಣೀ ಕೀ ವಾವ್ ಭಾರತದ ಅತ್ಯಂತ ಸುಂದರವಾದ ಮೆಟ್ಟಿಲು-ಬಾವಿಗಳಲ್ಲಿ ಒಂದಾಗಿದೆ. ಇದನ್ನು ರಾಣಿ ಉದಯಮತಿ ಅವರು 1063ರಲ್ಲಿ ತಮ್ಮ ಪತಿ ರಾಜ ಮೊದಲನೇ ಭೀಮದೇವ್ ಅವರಿಗಾಗಿ ನಿರ್ಮಿಸಿದ್ದುದಾಗಿದೆ. ಸರಸ್ವತಿ ನದಿ ದಂಡೆಯ ಮೇಲೆ ನೆಲೆಸಿರುವ ಈ ಮೆಟ್ಟಿಲು ಬಾವಿಯನ್ನು ನಂತರ ನದಿಯಿಂದ ಹೂಳು ಮುಚ್ಚಲಾಯಿತು. ಇಲ್ಲಿಯ ಕೆತ್ತನೆಗಳನ್ನು ಭಾರತೀಯ ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡಿದಾಗ ಇನ್ನೂ ಇತ್ತಮ ಸ್ಥಿತಿಯಲ್ಲಿರುವುದು ಕಂಡುಬಂದಿದೆ. 2014ರಲ್ಲಿ ರಾಣಿ ಕಿ ವಾವ್ ಇದನ್ನು ಯುನೆಸ್ಕೋ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು.

ಲಾಲ್ ದರ್ವಾಜಾ ಮಸ್ಜಿದ್

ಲಾಲ್ ದರ್ವಾಜಾ ಮಸ್ಜಿದ್

ಉತ್ತರಪ್ರದೇಶದ ಜೌನ್ಪುರ್ ನಲ್ಲಿರುವ ಲಾಲ್ ದರ್ವಾಜಾ ಮಸ್ಜಿದ್ ಅನ್ನು 1447 ರಲ್ಲಿ ರಾಣಿ ರಾಜ್ಯೇ ಬೀಬಿ ಅವರು ಪ್ರಸಿದ್ದ ಸಂತ ಮೌಲಾನಾ ಸಯ್ಯಿದ್ ಅಲಿ ದಾವೂದ್ ಕುತುಬುದ್ದೀನ್ ಅವರ ಗೌರವಾರ್ಥವಾಗಿ ನಿರ್ಮಿಸಿದರು. ಈ ಮಸೀದಿಗೆ ಪಕ್ಕದಲ್ಲಿ ನೆಲೆಸಿರುವ ರಾಣಿಯವರ ಅರಮನೆಯ ಹೆಸರನ್ನೇ ಇಡಲಾಗಿದೆ. ಅಲ್ಲದೆ ಈ ಮಸೀದಿಯನ್ನು ರಾಣಿಯ ಖಾಸಗಿ ಮಸೀದಿಯಾಗಿ ನಿರ್ಮಿಸಲಾಯಿತು. ಜೌನ್ಪುರ್ ನ ಇತರ ಆಕರ್ಷಣೆಗಳಲ್ಲಿ ಶಾಹೀ ಸೇತುವೆ ಮತ್ತು ಶಾಹಿ ಕಿಲಾ ಇವುಗಳೂ ಸೇರಿವೆ.

ದಕ್ಷಿಣೇಶ್ವರ ಕಾಳಿ ಮಂದಿರ

ದಕ್ಷಿಣೇಶ್ವರ ಕಾಳಿ ಮಂದಿರ

ರಾಣಿ ರಶ್ಮೋನಿ ದೇವಿ ಅವರು ನಿರ್ಮಿಸಿದ 19 ನೇ ಶತಮಾನದಲ್ಲಿಯ ದಕ್ಷಿಣೇಶ್ವರ ಕಾಳಿ ದೇವಾಲಯವು ಕೋಲ್ಕತ್ತಾದ ಅದ್ಭುತ ದೇವಾಲಯವಾಗಿದೆ. ರಾಣಿ ರಶ್ಮೋನಿ ದೇವಿ ಯವರನ್ನು ಭಾರತೀಯ ಇತಿಹಾಸದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರು ರಸ್ತೆಗಳು, ಗ್ರಂಥಾಲಯಗಳು, ಮತ್ತು ಘಾಟ್ ಗಳ ನಿರ್ಮಾಣ ಸೇರಿದಂತೆ ಅನೇಕ ದತ್ತಿ ಮತ್ತು ಮಾನವ ವಿಕಾಸ ಯೋಜನೆಗಳಿಗೆ ಕಾರಣರಾಗಿದ್ದಾರೆ. ಈ ದೇವಾಲಯವು ಅತ್ಯಂತ ಮಹತ್ವದ ಪರಂಪರೆಯಾಗಿದ್ದು, ಇದು ಪೀಳಿಗೆಯಿಂದ ಪೀಳಿಗೆಗೆ ಜನರರನ್ನು ಆಕರ್ಷಿಸುತ್ತಾ ಬಂದಿದೆ.

ಪುರಾಣಗಳ ಪ್ರಕಾರ, ಒಮ್ಮೆ ರಾಣಿ ರಶ್ಮೋನಿ ದೇವಿ ಬನಾರಸ್‌ಗೆ ತೀರ್ಥಯಾತ್ರೆ ಹೊರಟಿದ್ದರು. ಈ ಸಮಯದಲ್ಲಿ ಕಾಳಿ ದೇವಾಲಯವನ್ನು ನಿರ್ಮಿಸುವ ಕನಸನ್ನು ಕಂಡರು. ಈ ಕನಸಿನ ಪ್ರಕಾರ, ಕಾಳಿ ದೇವಿಯ ಒಂದು ಅಂಶವಾದ ಭವತಾರಿನಿಗೆ ಮೀಸಲಾಗಿರುವ ದೇವಾಲಯವನ್ನು ನಿರ್ಮಿಸುವ ನಿರ್ವಹಣೆಯನ್ನು ಅವರು ಹೊತ್ತರು ಎನ್ನಲಾಗುತ್ತದೆ.

ಖೈರ್ - ಅಲ್ - ಮನಾಜಿಲ್ ಮಸೀದಿ

ಖೈರ್ - ಅಲ್ - ಮನಾಜಿಲ್ ಮಸೀದಿ

ದೆಹಲಿಯಲ್ಲಿರುವ ಪುರಾನಾಖಿಲಾದ(ಹಳೆಯ ಕೋಟೆ) ಎದುರುಗಡೆ ಇರುವ ಖೈರ್ - ಅಲ್ - ಮನಾಜಿಲ್ ಮಸೀದಿಯನ್ನು ಮದರಸಾವಾಗಿ ಬಳಸಲಾಯಿತು. ಈ ಮಸೀದಿಯು ಸುಂದರವಾದ ಶಾಸನಗಳು ಮತ್ತು ಕೆತ್ತನೆಗಳನ್ನು ಹೊಂದಿದೆ.ಅಕ್ಬರ್ ಚಕ್ರವರ್ತಿಯ ರಕ್ಷಕಿಯಾಗಿದ್ದ ಮಹಮ್ ಅಂಗಾ ಅವರು 1561ರಲ್ಲಿ ಈ ಮಸೀದಿಯ ನಿರ್ಮಾಣದ ಜವಾಬ್ದಾರಿಯನ್ನು ನಿರ್ವಹಿಸಿದ್ದರು ಎನ್ನಲಾಗುತ್ತದೆ ಅಲ್ಲದೆ ದಂತಕಥೆಯ ಪ್ರಕಾರ, ಅಕ್ಬರ್ ತನ್ನ ಬಾಲ್ಯವಸ್ಥೆಯನ್ನು ಶಾಂತಿಯಿಂದ ಆನಂದಿಸುತ್ತಿದ್ದಾಗ ಅವಳು ಸಂಪೂರ್ಣ ಮೊಘಲ್ ಸಾಮ್ರಾಜ್ಯದ ಅರ್ಧದಷ್ಟು ಜವಬ್ದಾರಿಯನ್ನು ತಾನು ಹೊತ್ತಿದ್ದಳು ಎನ್ನಲಾಗುತ್ತದೆ.

ಮಿರ್ಜಾನ್ ಕೋಟೆ

ಮಿರ್ಜಾನ್ ಕೋಟೆ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯಲ್ಲಿರುವ ಮಿರ್ಜನ್ ಕೋಟೆ ವಾಸ್ತುಶಿಲ್ಪದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದನ್ನು ಗೆರ್ ಸೊಪ್ಪದ ಮಹಾನ್ ರಾಣಿ ಚೆನ್ನಭೈರಾ ದೇವಿ ಅವರು ನಿರ್ಮಿಸಿದ್ದು, ಅತ್ಯುತ್ತಮ ರೀತಿಯ ಕರಿಮೆಣಸು ಬೆಳೆಯುವ ವಿಶಾಲವಾದ ಈ ಪ್ರದೇಶವನ್ನು ರಾಣಿಯು ಆಳುತ್ತಿದ್ದರು. ಅಲ್ಲದೆ ಬೃಹತ್ ಗೋಡೆಗಳ ಎರಡು ಪದರದಿಂದ ಸುತ್ತುವರೆದಿರುವ ಈ ಭವ್ಯವಾದ ಕೋಟೆಯನ್ನು ಸುರಂಗಗಳು, ಅನೇಕ ರಹಸ್ಯ ಬಾಗಿಲುಗಳು ಮತ್ತು ಕಾವಲು ಗೋಪುರಗಳಿಂದ ಅಲಂಕರಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more