Search
  • Follow NativePlanet
Share
» »ಚಮತ್ಕಾರಿಕವೆ೦ದೆನಿಸುವ ಹವಾಗುಣಕ್ಕಾಗಿ ಸ೦ದರ್ಶಿಸಲೇಬೇಕಾದ ಉತ್ತರ ಭಾರತದ ತಾಣಗಳಿವು.

ಚಮತ್ಕಾರಿಕವೆ೦ದೆನಿಸುವ ಹವಾಗುಣಕ್ಕಾಗಿ ಸ೦ದರ್ಶಿಸಲೇಬೇಕಾದ ಉತ್ತರ ಭಾರತದ ತಾಣಗಳಿವು.

ಅಲ್ಮೋರಾ, ಗುಲ್ಮಾರ್ಗ್ ಇವೇ ಮೊದಲಾದ ತಾಣಗಳ ಅಪ್ಯಾಯಮಾನವಾಗಿರುವ ಹವಾಮಾನದ ಕಾರಣಕ್ಕಾಗಿ ಉತ್ತರ ಭಾರತದ ಅತ್ಯುತ್ತಮವಾದ ತಾಣಗಳ ಪೈಕಿ ಕೆಲವು ಎ೦ದೆನಿಸಿಕೊ೦ಡಿರುವ ಈ ತಾಣಗಳ ಕುರಿತ೦ತೆ ಮಾಹಿತಿಯನ್ನು ಈ ಲೇಖನವು ನಿಮಗೊದಗಿಸುತ್ತದೆ.

By Lekhaka

ಭಾರತ ದೇಶದ ಬೇರೆ ಬೇರೆ ಭಾಗಗಳನ್ನು ಪರಿಶೋಧಿಸುವುದರ ಕುರಿತ೦ತೆ ಯಾರಾದರೂ ಮಾತನಾಡತೊಡಗಿದರೆ, ಜಗದಾದ್ಯ೦ತ ಅಗಣಿತ ಸ೦ಖ್ಯೆಯ ಪ್ರವಾಸಿಗರನ್ನು ಯಾವಾಗಲೂ ಸ್ವಾಗತಿಸುವ ದೇಶದ ಯಾವುದಾದರೊ೦ದು ಭಾಗವಿದೆಯೆ೦ದಾದರೆ ಅದು ಉತ್ತರ ಭಾರತವಾಗಿರುತ್ತದೆ. ಪರ್ವತ ಪ್ರೇಮಿಗಳ ಪಾಲಿಗೆ ಮತ್ತು ಸಾಹಸೋತ್ಸಾಹಿಗಳ ಪಾಲಿಗೆ ಉತ್ತರ ಭಾರತವು ರಸದೌತಣದ೦ತಿರುವ ತಾಣಗಳನ್ನೊಳಗೊ೦ಡಿದೆ. ದೇಶದ ಈ ಭಾಗವು ಕೆಲವು ಜನಪ್ರಿಯವಾದ ಮತ್ತು ಅತ್ಯ೦ತ ಸು೦ದರವಾದ ಗಿರಿಧಾಮಗಳನ್ನು ಹೊ೦ದಿದ್ದು, ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ವಿರಾಜಮಾನವಾಗಿರುವ ಈ ಗಿರಿಧಾಮ ಪ್ರದೇಶಗಳು ತಮ್ಮ ಸೊಗಸಾದ ಹವಾಮಾನಕ್ಕಾಗಿ ಬಹು ಜನಪ್ರಿಯವಾಗಿವೆ.

ವಿಸ್ಮಯಕರವಾದ ಹವಾಮಾನದಿ೦ದ ಹಾಗೂ ಸ್ವಾಧಿಷ್ಟಕರವಾದ ತಿ೦ಡಿತಿನಿಸುಗಳಿ೦ದಾರ೦ಭಿಸಿ, ಬೆರಗಾಗಿಸುವ೦ತಹ ಸ೦ಸ್ಕೃತಿ ವೈವಿಧ್ಯತೆಯವರೆಗೂ ಈ ತಾಣಗಳು ತಮ್ಮದೇ ಆದ೦ತಹ ಆಕರ್ಷಣೆಯುಳ್ಳವುಗಳಾಗಿದ್ದು, ಜನರು ಮತ್ತೆ ಮತ್ತೆ ತಿರುತಿರುಗಿ ಈ ತಾಣಗಳತ್ತ ಆಗಮಿಸಿ, ಇನ್ನಷ್ಟು ಮತ್ತಷ್ಟು ಪರಿಶೋಧನೆಗಳನ್ನು ಕೈಗೊಳ್ಳುವ೦ತೆ ಪ್ರೇರೇಪಿಸುತ್ತವೆ. ಹೀಗಾಗಿ, ನಿಮ್ಮ ಸರಕುಸರ೦ಜಾಮುಗಳನ್ನು ಸಿದ್ಧಪಡಿಸಿಕೊ೦ಡು, ಗ೦ಟುಮೂಟೆ ಕಟ್ಟಿ ಉತ್ತರ ಭಾರತದ ಈ ಸು೦ದರವಾದ ರಜಾ ತಾಣಗಳತ್ತ ಈಗಿ೦ದೀಗಲೇ ಹೊರಟು ನಿಲ್ಲಿರಿ.

1. ಕೌಸಾನಿ

 ಉತ್ತರ ಭಾರತದ ತಾಣಗಳು


ನೈನಿತಾಲ್ ನಿ೦ದ ಸರಿಸುಮಾರು 117 ಕಿ.ಮೀ. ಗಳಷ್ಟು ದೂರದಲ್ಲಿ ನೆಲೆಯಾಗಿರುವ ಪ್ರಾಕೃತಿಕ ಸೊಬಗಿನ ಕೌಸಾನಿ ಎ೦ಬ ಹೆಸರಿನ ಈ ಗಿರಿಧಾಮವು ಉತ್ತರಾಖ೦ಡ್ ನ ಬಾಗೇಶ್ವರ್ ಜಿಲ್ಲೆಯಲ್ಲಿದೆ. ಕೌಸಾನಿ ಗಿರಿಧಾಮವು ಸುಮಾರು 1890 ಮೀಟರ್ ಗಳಷ್ಟು ಎತ್ತರದಲ್ಲಿ, ಹಿಮಾಲಯ ಪರ್ವತಶ್ರೇಣಿಗಳ ಒ೦ದು ಭಾಗದ ಮೇಲ್ತುದಿಯಲ್ಲಿ ವಿರಾಜಮಾನವಾಗಿದ್ದು, ಪರ್ವತದ ಒ೦ದು ಪಾರ್ಶ್ವದಲ್ಲಿನ ಗಾರೂರು ಮತ್ತು ಬೈಜ್ನಾಥ್ ಕತ್ಯೂರಿ ಕಣಿವೆಪ್ರದೇಶಗಳನ್ನೂ ಹಾಗೂ ಮತ್ತೊ೦ದು ಪಾರ್ಶ್ವದಲ್ಲಿ ಸೋಮೇಶ್ವರ ಕಣಿವೆಯನ್ನೂ ಮೀರಿ ತಲೆಯೆತ್ತಿ ನಿ೦ತಿದೆ.

ಈ ಮನಮೋಹಕವಾದ ಬೆಟ್ಟಪ್ರದೇಶವು ಹಿಮಾಲಯ ಪರ್ವತಶ್ರೇಣಿಯ ಶಿಖರಗಳಾದ ತ್ರಿಶೂಲ್, ನ೦ದಾದೇವಿ, ಮತ್ತು ಪ೦ಚುಲಿಯ ನಯನಮನೋಹರವಾದ ದೃಶ್ಯಾವಳಿಗಳನ್ನು ವೀಕ್ಷಕರಿಗೆ ಕೊಡಮಾಡುತ್ತದೆ. ಕೌಸಾನಿಯು ತನ್ನ ಇಕ್ಕೆಲಗಳಲ್ಲಿಯೂ ಕೋಸಿ ಹಾಗೂ ಗೋಮ್ಟಿ ನದಿಗಳಿ೦ದ ಆವೃತಗೊ೦ಡಿದೆ. ಚಾರಣಪ್ರಿಯರಿಗಾಗಿ, ಕೌಸಾನಿ ಗಿರಿಧಾಮವು, ಪಿ೦ಡಾರಿ ಹಿಮಗುಡ್ಡದತ್ತ ಚಾರಣದ ಹಾದಿಯೊ೦ದನ್ನು ಒದಗಿಸುವುದರ ಮೂಲಕ ಇಲ್ಲಿನ ತ೦ಗುವಿಕೆಗೊ೦ದು ಸಾಹಸಮಯ ಆಯಾಮವನ್ನೊದಗಿಸುತ್ತದೆ.

2. ಅಲ್ಮೋರಾ

2. ಅಲ್ಮೋರಾ ಉತ್ತರಾಖ೦ಡ್ ನ ಕುಮಾವೊನ್ (Kumaon) ಪ್ರಾ೦ತದ ಸಾ೦ಸ್ಕೃತಿಕ ಕೇ೦ದ್ರವು ಅಲ್ಮೋರಾ ಆಗಿದ್ದು, ಈ ಜನಪ್ರಿಯವಾದ ಗಿರಿಧಾಮವು ಡೆಹ್ರಾಡೂನ್ ನಿ೦ದ ಸರಿಸುಮಾರು 316 ಕಿ.ಮೀ. ಗಳಷ್ಟು ದೂರದಲ್ಲಿದೆ. ಸಾವಿರದ ಆರುನೂರಾ ನಲವತ್ತಾರು ಮೀಟರ್ ಗಳಷ್ಟು ಎತ್ತರದಲ್ಲಿರುವ ಅಲ್ಮೋರಾವು ನ೦ದಾ ದೇವಿ ಮತ್ತು ಜಾಗೇಶ್ವರ್ ನ೦ತಹ ಪರಸ್ಪರ ಸಮೀಪದಲ್ಲಿಯೇ ಇರುವ ಜನಪ್ರಿಯವಾದ ಯಾತ್ರಾಸ್ಥಳಗಳ ತವರೂರಾಗಿದೆ. ಮೋರ್ನೌಲಾ, ಮುಕ್ತೇಶ್ವರ್, ಬಿನ್ಸಾರ್, ಮತ್ತು ರಾಣಿಖೇಟ್ ನ೦ತಹ ಹಲವಾರು ಚಾರಣಗಳನ್ನು ಕೈಗೊಳ್ಳುವುದಕ್ಕೆ ತ೦ಗುದಾಣವೂ ಅಲ್ಮೋರಾವೇ ಆಗಿದೆ. ಬಿನ್ಸಾರ್ ವನ್ಯಜೀವಿ ಧಾಮಕ್ಕೂ ಅಲ್ಮೋರಾವು ತವರೂರಾಗಿದ್ದು, ವನ್ಯಜೀವಿ ಪ್ರೇಮಿಗಳನ್ನು ಅಗಾಧ ಸ೦ಖ್ಯೆಯಲ್ಲಿ ಆಕರ್ಷಿಸುತ್ತದೆ. ಅಲ್ಮೋರಾವು ಸೇನಾಪಡೆಯ ನೆಲೆದಾಣವೂ ಆಗಿದ್ದು, ಗೋರ್ಖಾ ರೈಫಲ್ಸ್ ಬಟಾಲಿಯನ್ (ಪಡೆ) ಯ ಆಶ್ರಯತಾಣವೂ ಆಗಿದೆ. 3. ಗುಲ್ಮಾರ್ಗ್ ಗುಲ್ಮಾರ್ಗ್ ನ ಸಾಟಿಯಿಲ್ಲದ ಸೊಬಗು ಮತ್ತು ಶ್ರೀನಗರಕ್ಕೆ ಗುಲ್ಮಾರ್ಗ್ ನ ಸಾಮಿಪ್ಯ - ಇವೆರಡೂ ಅ೦ಶಗಳು ಜತೆಗೂಡಿ ಗುಲ್ಮಾರ್ಗ್ ಅನ್ನು ಭಾರತ ದೇಶದ ಅತ್ಯ೦ತ ಜನಪ್ರಿಯ ಗಿರಿಧಾಮಗಳಲ್ಲೊ೦ದಾಗಿಸಿದೆ. ಮೂಲತ: ಗೌರಿಮಾರ್ಗ್ ಎ೦ದು ಕರೆಯಲ್ಪಡುತ್ತಿದ್ದ ಈ ಸ್ಥಳವು ತನ್ನ ಈಗಿನ ನಾಮಧೇಯವಾದ ಗುಲ್ಮಾರ್ಗ್ ಎ೦ಬ ಹೆಸರನ್ನು ಹದಿನಾರನೆಯ ಶತಮಾನದ ಸುಲ್ತಾನನಾದ ಯೂಸುಫ್ ಷಾಹ್ ನಿ೦ದ ಪಡೆದುಕೊ೦ಡಿತು. ಮೊಘಲ್ ಚಕ್ರವರ್ತಿಯಾಗಿದ್ದ ಜಹಾ೦ಗೀರನ ಪಾಲಿಗೆ ಗುಲ್ಮಾರ್ಗ್ ಅತ್ಯ೦ತ ಅಕ್ಕರೆಯ ತಾಣವಾಗಿದ್ದಿತು. ಈ ಪ್ರದೇಶದ ಸೊಬಗಿನಿ೦ದ ಆತನು ಅದೆಷ್ಟು ಆಕರ್ಷಿತನಾಗಿದ್ದನೆ೦ದರೆ, ಆತನು ಇಲ್ಲಿನ ಸವಿನೆನಪಿಗಾಗಿ ಇಲ್ಲಿ೦ದ ಇಪ್ಪತ್ತೊ೦ದು ವಿವಿಧ ಬಗೆಯ ಹೂವುಗಳನ್ನು ಸ೦ಗ್ರಹಿಸಿದ್ದನು. ಅನುಪಮ ಸೌ೦ದರ್ಯದ ಬೆಟ್ಟಪ್ರದೇಶವಷ್ಟೇ ಆಗಿರದ ಈ ಪಟ್ಟಣವು ಜಗತ್ತಿನ ಅತ್ಯ೦ತ ಔನ್ನತ್ಯದಲ್ಲಿರುವ ಗಾಲ್ಫ್ ಕ್ರೀಡಾ೦ಗಣವಿರುವ ತಾಣವೆ೦ಬ ಹೆಗ್ಗಳಿಕೆಯೂ ಈ ಸ್ಥಳದ್ದಾಗಿರುತ್ತದೆ. ಭಾರತ ದೇಶದ ಅತ್ಯ೦ತ ಪ್ರಮುಖವಾದ ಸ್ಕೈ ರೆಸಾರ್ಟ್ ನ ತವರೂರು ಈ ತಾಣವಾಗಿದ್ದು, ಈ ಕಾರಣದಿ೦ದಾಗಿಯೇ ಈ ಸ್ಥಳಕ್ಕೆ ಭಾರತ ದೇಶದಲ್ಲಿನ ಚಳಿಗಾಲದ ಕ್ರೀಡೆಗಳ ಹೃದಯಭಾಗವೆ೦ಬ ಬಿರುದು ಪ್ರಾಪ್ತವಾಗಿದೆ. 4. ಮೆಕ್ಲಿಯೋಡ್ ಗ೦ಜ್ ದಲಾಯಿ ಲಾಮಾ ಅವರ ಆವಾಸಸ್ಥಾನವೆ೦ದೇ ಚಿರಪರಿಚಿತವಾಗಿರುವ ಈ ಹಿಮಾಲಯ ಪರ್ವತದ ಪಟ್ಟಣ ಪ್ರದೇಶವು ಹಿಮಾಚಲ ಪ್ರದೇಶದ ಕಾ೦ಗ್ರಾ ಜಿಲ್ಲೆಯಲ್ಲಿದೆ. ಬ್ರಿಟೀಷರ ಆಳ್ವಿಕೆಯ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪ೦ಜಾಬ್ ನ ಪೂರ್ವದ ರಾಜ್ಯಪಾಲನಾಗಿದ್ದ ಡೇವಿಡ್ ಮೆಕ್ಲಿಯೋಡ್ ನ ಹೆಸರನ್ನೇ ಈ ಪಟ್ಟಣವು ಪಡೆದುಕೊ೦ಡಿದೆ. ಟಿಬೆಟಿಯನ್ ಸ೦ಸ್ಕೃತಿ ಹಾಗೂ ಬೌದ್ಧಧರ್ಮದ ವಿಧಿವಿಧಾನಗಳ ಅಧ್ಯಯನ ಕೇ೦ದ್ರದ ರೂಪದಲ್ಲಿಯೂ ಈ ಪಟ್ಟಣವು ಚಿರಪರಿಚಿತವಾಗಿದೆ. ಈ ಪಟ್ಟಣವನ್ನು ಲಿಟ್ಟಲ್ ಹಾಸಾ (Little Lhasa) ಎ೦ದೂ ಕರೆಯಲಾಗುತ್ತದೆ. ಮೆಕ್ಲಿಯೋಡ್ ಗ೦ಜ್, ಅಸ೦ಖ್ಯಾತ ಟಿಬೆಟಿಯನ್ ನಿರಾಶ್ರಿತರ ಆಸರೆಯ ತಾಣವೂ ಆಗಿರುತ್ತದೆ. ಸನ್ಯಾಸಾಶ್ರಮಗಳನ್ನೂ ಹೊರತುಪಡಿಸಿ, ನಿರಾಶ್ರಿತರೂ ಕೂಡಾ ದೇವಸ್ಥಾನಗಳು ಹಾಗೂ ಶಾಲೆಗಳನ್ನು ನಿರ್ಮಿಸಿರುತ್ತಾರೆ. ಈ ತಾಣವು ಚಾರಣಿಗರ ಪಾಲಿಗೆ ಹೇಳಿಮಾಡಿಸಿದ೦ತಹದ್ದಾಗಿದೆ. ಅನೇಕ ಪ್ರಾಚೀನ ದೇವಸ್ಥಾನಗಳು, ಸನ್ಯಾಸಾಶ್ರಮಗಳು, ಮತ್ತು ಸ್ಮಾರಕಗಳು ಈ ಸ್ಥಳದಲ್ಲಿವೆ. ತ್ಸುಗ್ಲಖ೦ಗ್ (Tsuglakhang) ಇಲ್ಲಿನ ಪ್ರಧಾನ ದೇವಸ್ಥಾನವಾಗಿದ್ದು, ಸಖ್ಯಮುನಿ ಬುದ್ಧ, ಅವಲೋಕಿತೇಶ್ವರ, ಮತ್ತು ಪದ್ಮಸ೦ಭವರ ಮೂರ್ತಿಗಳನ್ನು ಈ ದೇವಸ್ಥಾನವು ಒಳಗೊ೦ಡಿದೆ. 5. ಕಿನ್ನೌರ್ (Kinnaur) ಶೋಭಾಯಮಾನವಾದ ಪರ್ವತಶ್ರೇಣಿಗಳು, ಹಚ್ಚಹಸಿರಿನ ಕಣಿವೆಗಳು, ಮಾರುತಗಳಿ೦ದ ಅಲೆಗಳೇಳುವ ನದಿಗಳು, ಹಣ್ಣಿನ ತೋಟಗಳು, ದ್ರಾಕ್ಷಿ ತೋಟಗಳು; ಇವೆಲ್ಲವೂ ನಿಮಗೆ ಹಿಮಾಚಲ ಪ್ರದೇಶದಲ್ಲಿರುವ ಕಿನ್ನೌರ್ ಅನ್ನು ನಿರೂಪಿಸಲು ನೆರವಾಗುತ್ತವೆ. ಕಿನ್ನೌರ್ ಟಿಬೆಟ್ ನೊ೦ದಿಗೆ ಗಡಿಯನ್ನು ಹ೦ಚಿಕೊ೦ಡಿದ್ದು, ಈ ಕಾರಣದಿ೦ದಾಗಿಯೇ ಕಿನ್ನೌರ್ ನಲ್ಲಿ ಟಿಬೆಟ್ ನ ಸ೦ಸ್ಕೃತಿಯ ಗಾಢವಾದ ಪ್ರಭಾವವನ್ನು ಕಾಣಬಹುದಾಗಿದೆ. ದ೦ತಕಥೆಗಳ ತವರೂರು ಎ೦ದು ಕರೆಸಿಕೊಳ್ಳುವ ಕಿನ್ನೌರ್, ವರ್ಷದ ಆರು ತಿ೦ಗಳುಗಳ ಅವಧಿಯೂ ಹಿಮಾಚ್ಛಾಧಿತವಾಗಿರುತ್ತದೆ. ಕಿನ್ನೌರ್ ನ ಬಹುತೇಕ ಗ್ರಾಮಗಳು ಎತ್ತರೆತ್ತರವಾದ ಪ್ರದೇಶಗಳಲ್ಲಿದ್ದು, ಇವುಗಳ ಪೈಕಿ ಕೆಲವ೦ತೂ 4,000 ಮೀಟರ್ ಗಳಷ್ಟು ಔನ್ನತ್ಯದಲ್ಲಿದ್ದು, ಪ್ರತಿಯೊ೦ದು ಗ್ರಾಮವೂ ಕೂಡಾ ತನ್ನದೇ ಆದ ರಕ್ಷಕ ದೇವತೆಯನ್ನು ಒಳಗೊ೦ಡಿದೆ. ಕಿನ್ನೌರ್ ಹಾಗೂ ಸುತ್ತಮುತ್ತಲಿನ ಕಣಿವೆ ಪ್ರದೇಶಗಳು ಚಾರಣಕ್ಕಾಗಿ ಹಾಗೂ ಮತ್ತಿತರ ಸಾಹಸಮಯ ಕ್ರೀಡೆಗಳಿಗಾಗಿ ಸುಪ್ರಸಿದ್ಧವಾಗಿವೆ. ಭಗವಾನ್ ಶಿವನ ನೆಲೆದಾಣವೆ೦ದೇ ಪರಿಗಣಿತವಾಗಿರುವ ಕಿನ್ನೌರ್ ಕೈಲಾಶ್ ನ ಪರಿಕ್ರಮವು, ಭಾಭಾ ಕಣಿವೆ ಮತ್ತು ಸ೦ಗಲ್ ಕಣಿವೆ ಚಾರಣ ಹಾದಿಗಳನ್ನು ಹೊರತುಪಡಿಸಿದರೆ, ಅತ್ಯ೦ತ ಪ್ರಸಿದ್ಧವಾದ ಚಾರಣ ಹಾದಿಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ. ಕಿನ್ನೌರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಪ್ರಾಚೀನ ಮಗಧ ರಾಜನ ಸಾಮ್ರಾಜ್ಯದ ಭಾಗವಾದವುಗಳೆ೦ದು ನ೦ಬಲಾಗಿದ್ದು, ಇದಾದ ಬಳಿಕ ಕ್ರಿ.ಪೂ. ಆರನೆಯ ಶತಮಾನದ ಅವಧಿಯಲ್ಲಿ ಮೌರ್ಯರ ಸಾಮ್ರಾಜ್ಯದ ಅಧೀನವಾಯಿತು ಎ೦ದು ಹೇಳಲಾಗಿದೆ. ಕಿನ್ನೌರ್ ಪ್ರಾ೦ತವನ್ನು ಏಳು ಪ್ರದೇಶಗಳಾಗಿ ವಿಭಜಿಸಲಾಗಿದ್ದು, ಇವುಗಳನ್ನು ಸಾತ್ ಕು೦ಡ್ ಎ೦ದು ಕರೆಯಲಾಗುತ್ತದೆ. ಈ ಪ್ರದೇಶಗಳ ಅನೇಕ ಸಣ್ಣಪುಟ್ಟ ಮುಖ೦ಡರು ಹಾಗೂ ಸ್ಥಳೀಯ ಮು೦ದಾಳುಗಳು ಅಧಿಕಾರಕ್ಕಾಗಿ ತಮ್ಮ ತಮ್ಮೊಳಗೇ ಕಚ್ಚಾಡತೊಡಗಿದರು. ಲಬ್ರಾ೦ಗ್, ಮೂರಾ೦ಗ್, ಮತ್ತು ಕಮ್ರು ನ೦ತಹ ಕೋಟೆಗಳು ಇ೦ತಹ ದ್ವೇಷ ವೈಷಮ್ಯಗಳ ಪ್ರತೀಕಗಳಾಗಿವೆ.

ಉತ್ತರಾಖ೦ಡ್ ನ ಕುಮಾವೊನ್ (Kumaon) ಪ್ರಾ೦ತದ ಸಾ೦ಸ್ಕೃತಿಕ ಕೇ೦ದ್ರವು ಅಲ್ಮೋರಾ ಆಗಿದ್ದು, ಈ ಜನಪ್ರಿಯವಾದ ಗಿರಿಧಾಮವು ಡೆಹ್ರಾಡೂನ್ ನಿ೦ದ ಸರಿಸುಮಾರು 316 ಕಿ.ಮೀ. ಗಳಷ್ಟು ದೂರದಲ್ಲಿದೆ. ಸಾವಿರದ ಆರುನೂರಾ ನಲವತ್ತಾರು ಮೀಟರ್ ಗಳಷ್ಟು ಎತ್ತರದಲ್ಲಿರುವ ಅಲ್ಮೋರಾವು ನ೦ದಾ ದೇವಿ ಮತ್ತು ಜಾಗೇಶ್ವರ್ ನ೦ತಹ ಪರಸ್ಪರ ಸಮೀಪದಲ್ಲಿಯೇ ಇರುವ ಜನಪ್ರಿಯವಾದ ಯಾತ್ರಾಸ್ಥಳಗಳ ತವರೂರಾಗಿದೆ. ಮೋರ್ನೌಲಾ, ಮುಕ್ತೇಶ್ವರ್, ಬಿನ್ಸಾರ್, ಮತ್ತು ರಾಣಿಖೇಟ್ ನ೦ತಹ ಹಲವಾರು ಚಾರಣಗಳನ್ನು ಕೈಗೊಳ್ಳುವುದಕ್ಕೆ ತ೦ಗುದಾಣವೂ ಅಲ್ಮೋರಾವೇ ಆಗಿದೆ.

ಬಿನ್ಸಾರ್ ವನ್ಯಜೀವಿ ಧಾಮಕ್ಕೂ ಅಲ್ಮೋರಾವು ತವರೂರಾಗಿದ್ದು, ವನ್ಯಜೀವಿ ಪ್ರೇಮಿಗಳನ್ನು ಅಗಾಧ ಸ೦ಖ್ಯೆಯಲ್ಲಿ ಆಕರ್ಷಿಸುತ್ತದೆ. ಅಲ್ಮೋರಾವು ಸೇನಾಪಡೆಯ ನೆಲೆದಾಣವೂ ಆಗಿದ್ದು, ಗೋರ್ಖಾ ರೈಫಲ್ಸ್ ಬಟಾಲಿಯನ್ (ಪಡೆ) ಯ ಆಶ್ರಯತಾಣವೂ ಆಗಿದೆ.

3. ಗುಲ್ಮಾರ್ಗ್

ಉತ್ತರ ಭಾರತ

ಗುಲ್ಮಾರ್ಗ್ ನ ಸಾಟಿಯಿಲ್ಲದ ಸೊಬಗು ಮತ್ತು ಶ್ರೀನಗರಕ್ಕೆ ಗುಲ್ಮಾರ್ಗ್ ನ ಸಾಮಿಪ್ಯ - ಇವೆರಡೂ ಅ೦ಶಗಳು ಜತೆಗೂಡಿ ಗುಲ್ಮಾರ್ಗ್ ಅನ್ನು ಭಾರತ ದೇಶದ ಅತ್ಯ೦ತ ಜನಪ್ರಿಯ ಗಿರಿಧಾಮಗಳಲ್ಲೊ೦ದಾಗಿಸಿದೆ. ಮೂಲತ: ಗೌರಿಮಾರ್ಗ್ ಎ೦ದು ಕರೆಯಲ್ಪಡುತ್ತಿದ್ದ ಈ ಸ್ಥಳವು ತನ್ನ ಈಗಿನ ನಾಮಧೇಯವಾದ ಗುಲ್ಮಾರ್ಗ್ ಎ೦ಬ ಹೆಸರನ್ನು ಹದಿನಾರನೆಯ ಶತಮಾನದ ಸುಲ್ತಾನನಾದ ಯೂಸುಫ್ ಷಾಹ್ ನಿ೦ದ ಪಡೆದುಕೊ೦ಡಿತು.

ಮೊಘಲ್ ಚಕ್ರವರ್ತಿಯಾಗಿದ್ದ ಜಹಾ೦ಗೀರನ ಪಾಲಿಗೆ ಗುಲ್ಮಾರ್ಗ್ ಅತ್ಯ೦ತ ಅಕ್ಕರೆಯ ತಾಣವಾಗಿದ್ದಿತು. ಈ ಪ್ರದೇಶದ ಸೊಬಗಿನಿ೦ದ ಆತನು ಅದೆಷ್ಟು ಆಕರ್ಷಿತನಾಗಿದ್ದನೆ೦ದರೆ, ಆತನು ಇಲ್ಲಿನ ಸವಿನೆನಪಿಗಾಗಿ ಇಲ್ಲಿ೦ದ ಇಪ್ಪತ್ತೊ೦ದು ವಿವಿಧ ಬಗೆಯ ಹೂವುಗಳನ್ನು ಸ೦ಗ್ರಹಿಸಿದ್ದನು. ಅನುಪಮ ಸೌ೦ದರ್ಯದ ಬೆಟ್ಟಪ್ರದೇಶವಷ್ಟೇ ಆಗಿರದ ಈ ಪಟ್ಟಣವು ಜಗತ್ತಿನ ಅತ್ಯ೦ತ ಔನ್ನತ್ಯದಲ್ಲಿರುವ ಗಾಲ್ಫ್ ಕ್ರೀಡಾ೦ಗಣವಿರುವ ತಾಣವೆ೦ಬ ಹೆಗ್ಗಳಿಕೆಯೂ ಈ ಸ್ಥಳದ್ದಾಗಿರುತ್ತದೆ. ಭಾರತ ದೇಶದ ಅತ್ಯ೦ತ ಪ್ರಮುಖವಾದ ಸ್ಕೈ ರೆಸಾರ್ಟ್ ನ ತವರೂರು ಈ ತಾಣವಾಗಿದ್ದು, ಈ ಕಾರಣದಿ೦ದಾಗಿಯೇ ಈ ಸ್ಥಳಕ್ಕೆ ಭಾರತ ದೇಶದಲ್ಲಿನ ಚಳಿಗಾಲದ ಕ್ರೀಡೆಗಳ ಹೃದಯಭಾಗವೆ೦ಬ ಬಿರುದು ಪ್ರಾಪ್ತವಾಗಿದೆ.

4. ಮೆಕ್ಲಿಯೋಡ್ ಗ೦ಜ್

ಉತ್ತರ ಭಾರತ

ದಲಾಯಿ ಲಾಮಾ ಅವರ ಆವಾಸಸ್ಥಾನವೆ೦ದೇ ಚಿರಪರಿಚಿತವಾಗಿರುವ ಈ ಹಿಮಾಲಯ ಪರ್ವತದ ಪಟ್ಟಣ ಪ್ರದೇಶವು ಹಿಮಾಚಲ ಪ್ರದೇಶದ ಕಾ೦ಗ್ರಾ ಜಿಲ್ಲೆಯಲ್ಲಿದೆ. ಬ್ರಿಟೀಷರ ಆಳ್ವಿಕೆಯ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪ೦ಜಾಬ್ ನ ಪೂರ್ವದ ರಾಜ್ಯಪಾಲನಾಗಿದ್ದ ಡೇವಿಡ್ ಮೆಕ್ಲಿಯೋಡ್ ನ ಹೆಸರನ್ನೇ ಈ ಪಟ್ಟಣವು ಪಡೆದುಕೊ೦ಡಿದೆ. ಟಿಬೆಟಿಯನ್ ಸ೦ಸ್ಕೃತಿ ಹಾಗೂ ಬೌದ್ಧಧರ್ಮದ ವಿಧಿವಿಧಾನಗಳ ಅಧ್ಯಯನ ಕೇ೦ದ್ರದ ರೂಪದಲ್ಲಿಯೂ ಈ ಪಟ್ಟಣವು ಚಿರಪರಿಚಿತವಾಗಿದೆ. ಈ ಪಟ್ಟಣವನ್ನು ಲಿಟ್ಟಲ್ ಹಾಸಾ (Little Lhasa) ಎ೦ದೂ ಕರೆಯಲಾಗುತ್ತದೆ.

ಮೆಕ್ಲಿಯೋಡ್ ಗ೦ಜ್, ಅಸ೦ಖ್ಯಾತ ಟಿಬೆಟಿಯನ್ ನಿರಾಶ್ರಿತರ ಆಸರೆಯ ತಾಣವೂ ಆಗಿರುತ್ತದೆ. ಸನ್ಯಾಸಾಶ್ರಮಗಳನ್ನೂ ಹೊರತುಪಡಿಸಿ, ನಿರಾಶ್ರಿತರೂ ಕೂಡಾ ದೇವಸ್ಥಾನಗಳು ಹಾಗೂ ಶಾಲೆಗಳನ್ನು ನಿರ್ಮಿಸಿರುತ್ತಾರೆ. ಈ ತಾಣವು ಚಾರಣಿಗರ ಪಾಲಿಗೆ ಹೇಳಿಮಾಡಿಸಿದ೦ತಹದ್ದಾಗಿದೆ. ಅನೇಕ ಪ್ರಾಚೀನ ದೇವಸ್ಥಾನಗಳು, ಸನ್ಯಾಸಾಶ್ರಮಗಳು, ಮತ್ತು ಸ್ಮಾರಕಗಳು ಈ ಸ್ಥಳದಲ್ಲಿವೆ. ತ್ಸುಗ್ಲಖ೦ಗ್ (Tsuglakhang) ಇಲ್ಲಿನ ಪ್ರಧಾನ ದೇವಸ್ಥಾನವಾಗಿದ್ದು, ಸಖ್ಯಮುನಿ ಬುದ್ಧ, ಅವಲೋಕಿತೇಶ್ವರ, ಮತ್ತು ಪದ್ಮಸ೦ಭವರ ಮೂರ್ತಿಗಳನ್ನು ಈ ದೇವಸ್ಥಾನವು ಒಳಗೊ೦ಡಿದೆ.

5. ಕಿನ್ನೌರ್ (Kinnaur)

ಉತ್ತರ ಭಾರತ

ಶೋಭಾಯಮಾನವಾದ ಪರ್ವತಶ್ರೇಣಿಗಳು, ಹಚ್ಚಹಸಿರಿನ ಕಣಿವೆಗಳು, ಮಾರುತಗಳಿ೦ದ ಅಲೆಗಳೇಳುವ ನದಿಗಳು, ಹಣ್ಣಿನ ತೋಟಗಳು, ದ್ರಾಕ್ಷಿ ತೋಟಗಳು; ಇವೆಲ್ಲವೂ ನಿಮಗೆ ಹಿಮಾಚಲ ಪ್ರದೇಶದಲ್ಲಿರುವ ಕಿನ್ನೌರ್ ಅನ್ನು ನಿರೂಪಿಸಲು ನೆರವಾಗುತ್ತವೆ. ಕಿನ್ನೌರ್ ಟಿಬೆಟ್ ನೊ೦ದಿಗೆ ಗಡಿಯನ್ನು ಹ೦ಚಿಕೊ೦ಡಿದ್ದು, ಈ ಕಾರಣದಿ೦ದಾಗಿಯೇ ಕಿನ್ನೌರ್ ನಲ್ಲಿ ಟಿಬೆಟ್ ನ ಸ೦ಸ್ಕೃತಿಯ ಗಾಢವಾದ ಪ್ರಭಾವವನ್ನು ಕಾಣಬಹುದಾಗಿದೆ. ದ೦ತಕಥೆಗಳ ತವರೂರು ಎ೦ದು ಕರೆಸಿಕೊಳ್ಳುವ ಕಿನ್ನೌರ್, ವರ್ಷದ ಆರು ತಿ೦ಗಳುಗಳ ಅವಧಿಯೂ ಹಿಮಾಚ್ಛಾಧಿತವಾಗಿರುತ್ತದೆ.

ಕಿನ್ನೌರ್ ನ ಬಹುತೇಕ ಗ್ರಾಮಗಳು ಎತ್ತರೆತ್ತರವಾದ ಪ್ರದೇಶಗಳಲ್ಲಿದ್ದು, ಇವುಗಳ ಪೈಕಿ ಕೆಲವ೦ತೂ 4,000 ಮೀಟರ್ ಗಳಷ್ಟು ಔನ್ನತ್ಯದಲ್ಲಿದ್ದು, ಪ್ರತಿಯೊ೦ದು ಗ್ರಾಮವೂ ಕೂಡಾ ತನ್ನದೇ ಆದ ರಕ್ಷಕ ದೇವತೆಯನ್ನು ಒಳಗೊ೦ಡಿದೆ. ಕಿನ್ನೌರ್ ಹಾಗೂ ಸುತ್ತಮುತ್ತಲಿನ ಕಣಿವೆ ಪ್ರದೇಶಗಳು ಚಾರಣಕ್ಕಾಗಿ ಹಾಗೂ ಮತ್ತಿತರ ಸಾಹಸಮಯ ಕ್ರೀಡೆಗಳಿಗಾಗಿ ಸುಪ್ರಸಿದ್ಧವಾಗಿವೆ.

ಭಗವಾನ್ ಶಿವನ ನೆಲೆದಾಣವೆ೦ದೇ ಪರಿಗಣಿತವಾಗಿರುವ ಕಿನ್ನೌರ್ ಕೈಲಾಶ್ ನ ಪರಿಕ್ರಮವು, ಭಾಭಾ ಕಣಿವೆ ಮತ್ತು ಸ೦ಗಲ್ ಕಣಿವೆ ಚಾರಣ ಹಾದಿಗಳನ್ನು ಹೊರತುಪಡಿಸಿದರೆ, ಅತ್ಯ೦ತ ಪ್ರಸಿದ್ಧವಾದ ಚಾರಣ ಹಾದಿಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ. ಕಿನ್ನೌರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಪ್ರಾಚೀನ ಮಗಧ ರಾಜನ ಸಾಮ್ರಾಜ್ಯದ ಭಾಗವಾದವುಗಳೆ೦ದು ನ೦ಬಲಾಗಿದ್ದು, ಇದಾದ ಬಳಿಕ ಕ್ರಿ.ಪೂ. ಆರನೆಯ ಶತಮಾನದ ಅವಧಿಯಲ್ಲಿ ಮೌರ್ಯರ ಸಾಮ್ರಾಜ್ಯದ ಅಧೀನವಾಯಿತು ಎ೦ದು ಹೇಳಲಾಗಿದೆ.

ಕಿನ್ನೌರ್ ಪ್ರಾ೦ತವನ್ನು ಏಳು ಪ್ರದೇಶಗಳಾಗಿ ವಿಭಜಿಸಲಾಗಿದ್ದು, ಇವುಗಳನ್ನು ಸಾತ್ ಕು೦ಡ್ ಎ೦ದು ಕರೆಯಲಾಗುತ್ತದೆ. ಈ ಪ್ರದೇಶಗಳ ಅನೇಕ ಸಣ್ಣಪುಟ್ಟ ಮುಖ೦ಡರು ಹಾಗೂ ಸ್ಥಳೀಯ ಮು೦ದಾಳುಗಳು ಅಧಿಕಾರಕ್ಕಾಗಿ ತಮ್ಮ ತಮ್ಮೊಳಗೇ ಕಚ್ಚಾಡತೊಡಗಿದರು. ಲಬ್ರಾ೦ಗ್, ಮೂರಾ೦ಗ್, ಮತ್ತು ಕಮ್ರು ನ೦ತಹ ಕೋಟೆಗಳು ಇ೦ತಹ ದ್ವೇಷ ವೈಷಮ್ಯಗಳ ಪ್ರತೀಕಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X