Search
  • Follow NativePlanet
Share
» »ಚಳಿಗಾಲದಲ್ಲಿ ಬೈಕ್ ಟೂರ್ ಹೋಗ್ತಿದೀರಾ? ಹಾಗಿದ್ರೆ ಈ ವಸ್ತುಗಳನ್ನು ಮರಿದೆ ಪ್ಯಾಕ್ ಮಾಡ್ಕೊಳಿ

ಚಳಿಗಾಲದಲ್ಲಿ ಬೈಕ್ ಟೂರ್ ಹೋಗ್ತಿದೀರಾ? ಹಾಗಿದ್ರೆ ಈ ವಸ್ತುಗಳನ್ನು ಮರಿದೆ ಪ್ಯಾಕ್ ಮಾಡ್ಕೊಳಿ

ಚಳಿಗಾಲದಲ್ಲಿ ಬೈಕ್‌ನಲ್ಲಿ ಪ್ರಯಾಣಿಸುವುದು ಹುಚ್ಚುತನವೆಂದು ಅಥವಾ ಅಸಾಧ್ಯವೆಂದು ಕೆಲವರು ಭಾವಿಸಬಹುದು, ಆದರೆ ನೀವು ಪ್ರಯಾಣಕ್ಕೆ ಬೇಕಾಗುವ ಅವಶ್ಯಕ ವಸ್ತುಗಳನ್ನು ಸರಿಯಾಗಿ ಪ್ಯಾಕ್ ಮಾಡಿಕೊಂಡು ರಸ್ತೆಗೆ ಇಳಿದರೆ ನಿಜಕ್ಕೂ ಸಾಧ್ಯ.ಬೈಕ್‌ನಲ್ಲಿ ಸುದೀರ್ಘ ಸವಾರಿ, ಅದು ಏಕಾಂಗಿಯಾಗಿರಲಿ ಅಥವಾ ಸ್ನೇಹಿತರೊಂದಿಗೆ ಇರಲಿ, ಇದು ಸಂತೋಷದಾಯಕ ಹಾಗೂ ಮನಸ್ಸಿಗೆ ಆಹ್ಲಾದಕರ ಅನುಭವನ್ನು ಉಂಟುಮಾಡುತ್ತದೆ .ಆದಾಗ್ಯೂ, ಚಳಿಗಾಲದ ಸಮಯದಲ್ಲಿ ಬೈಕು ಪ್ರವಾಸವು ಸ್ವಲ್ಪ ಕಷ್ಟಕರ ಎನಿಸಬಹುದು. ನೀವು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ನಡುಗಬಹುದು, ಹಾಗೂ ಮೋಡ ಕವಿದ ವಾತಾವರಣದಿಂದ ಸ್ವಲ್ಪ ಮುಂಚೆಯೇ ಕತ್ತಲಾಗಬಹುದು, ನಿಮ್ಮ ಬೈಕ್‌ಗೆ ಹೆಚ್ಚಿನ ಬೆಳಕಿನ ವ್ಯವಸ್ಥೆ ಬೇಕಾಗಬಹುದು ಮತ್ತು ಪರಿಸ್ಥಿತಿಗಳು ಸ್ವಲ್ಪ ಸವಾಲಾಗಿರಬಹುದು. ಅದೇನೇ ಇದ್ದರೂ, ಬೈಕ್‌ನಲ್ಲಿ ಪ್ರಯಾಣಿಸುವ ಕಲ್ಪನೆಯನ್ನು ನೀವು ಸಂಪೂರ್ಣವಾಗಿ ತ್ಯಜಿಸುತ್ತೀರಿ ಎಂದಲ್ಲ.

ಚಳಿಗಾಲದಲ್ಲಿ ನೀವು ಬೈಕ್‌ನಲ್ಲಿ ಆರಾಮವಾಗಿ ಪ್ರಯಾಣಿಸಬೇಕಾದ ಅಗತ್ಯ ವಸ್ತುಗಳ ಪಟ್ಟಿ ಇಲ್ಲಿದೆ. ಮತ್ತು ಚಳಿಗಾಲದಲ್ಲಿ ಪ್ರವಾಸ ಮಾಡಲು ಸಿದ್ಧರಿರುವ ಧೈರ್ಯಶಾಲಿಗಳಿಗೆ , ಈ ವಸ್ತುಗಳು ಅಮೂಲ್ಯವಾದವು.

1.ಗೂಗಲ್ ಮ್ಯಾಪ್ಸ್

1.ಗೂಗಲ್ ಮ್ಯಾಪ್ಸ್

ನೀವು ಬೈಕ್‌ನಲ್ಲಿ ಪ್ರಯಾಣಿಸುವಾಗ ಜಿಪಿಎಸ್ ಘಟಕ ಮತ್ತು ಗೂಗಲ್ ನಕ್ಷೆಗಳು ಉಪಯುಕ್ತವಾದವು .ಆದಾಗ್ಯೂ, ಸಂಪೂರ್ಣ ಹೊಸ ಮತ್ತು ಅಪರಿಚಿತ ಪ್ರದೇಶದ ಸಂದರ್ಭದಲ್ಲಿ ಸಾಕಷ್ಟು ವಿವರವಾದ ಯೋಜನೆಯನ್ನು ಹೊಂದಿರುವುದು ಬಹಳ ಸಹಾಯ ಮಾಡುತ್ತದೆ. ಬಟ್ಲರ್ ನಕ್ಷೆಗಳನ್ನು ಬಳಸಿ. ಬಟ್ಲರ್ ನಕ್ಷೆಗಳು ಮೋಟರ್ಸೈಕ್ಲಿಸ್ಟ್‌ಗಳಿಗಾಗಿ, ಮೋಟರ್ಸೈಕ್ಲಿಸ್ಟ್‌ಗಳಿಂದ ವಿನ್ಯಾಸಗೊಳಿಸಲಾದ ನಕ್ಷೆಗಳು ಮತ್ತು ಸವಾಲಿನ ರಸ್ತೆಗಳಲ್ಲಿ ಸವಾರರಿಗೆ ಉತ್ತಮ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳು ದಾರಿಯುದ್ದಕ್ಕೂ ಅನ್ವೇಷಿಸಲು ಕೆಲವು ಉತ್ತಮ ಸ್ಥಳಗಳನ್ನು ಒಳಗೊಂಡಿವೆ. ಇದರಲ್ಲಿರುವ ವಾಟರ್ ಪ್ರೂಫ್ ನಕ್ಷೆಯು ಉತ್ತಮ ಮಾರ್ಗಗಳನ್ನು ತಿಳಿದಿದೆ. ಉತ್ತಮ ಸವಾರಿಗಳನ್ನು ಸುಲಭ ಉಲ್ಲೇಖದಲ್ಲಿ ಹೈಲೈಟ್ ಮಾಡಲಾಗಿದೆ. ಮತ್ತು ನಮ್ಮ ಸಮಯವನ್ನು ಉಳಿಸುತ್ತವೆ. ಇದರ ಜೊತೆಗೆ ನೀವು ಆನ್‌ಲೈನ್‌ ರೈಡ್ ಪ್ಲಾನರ್ ಮತ್ತು ಮೋಟಾರ್‌ಸೈಕಲ್ ಟ್ರಿಪ್ ಪ್ಲಾನರ್ ಅನ್ನು ಜಾಲ ತಾಣದಲ್ಲಿ ನೋಡಿ.

2. ಇಯರ್‌ಪ್ಲಗ್‌ಗಳು

2. ಇಯರ್‌ಪ್ಲಗ್‌ಗಳು

ನಿಮ್ಮ ಹೆಲ್ಮೆಟ್ ನಿಮ್ಮ ತಲೆಯನ್ನು ರಕ್ಷಿಸುತ್ತದೆ, ಆದರೆ ನಿಮ್ಮ ಶ್ರವಣವನ್ನು ರಕ್ಷಿಸಲು ಇಯರ್‌ಪ್ಲಗ್‌ಗಳು ಅತ್ಯಗತ್ಯವಾಗಿ ಬೇಕಾಗಬಹುದು , ವಿಶೇಷವಾಗಿ ರಸ್ತೆ ಪ್ರವಾಸದಲ್ಲಿ ಅನಿವಾರ್ಯ. ನೀವು ರಸ್ತೆಯಲ್ಲಿ ನೂರಾರು ಮೈಲುಗಳಷ್ಟು ಪ್ರಯಾಣಿಸುತ್ತಿರುವಾಗ, ಹೆಲ್ಮೆಟ್‌ನ ಒಳಭಾಗವು ತುಂಬಾ ಜೋರಾಗಿರುತ್ತದೆ. ಮತ್ತು ಗಂಟೆಗಳ ಕಾಲ ಮುಂದುವರಿಯುವ ಪ್ರಯಾಣದಿಂದ ನಿಮ್ಮ ಕಿವಿಗಳ ಆಯಾಸಕ್ಕೆ ಕಾರಣವಾಗಬಹುದು. ನೆನಪಿಡಿ, ಗುಣಪಡಿಸುವುದಕ್ಕಿಂತ ತಡೆಗಟ್ಟುವಿಕೆ ಉತ್ತಮವೆಂದು ನಾವು ತಿಳಿದಿದ್ದೇವೆ. ನಿಮ್ಮ ಶ್ರವಣ ಸಾಮರ್ಥ್ಯವು ಹಾನಿಗೊಳಗಾದ ನಂತರ, ಹಿಂತಿರುಗುವುದಿಲ್ಲ. ಆದ್ಧರಿಂದ ನೀವು ಇಯರ್‌ಪ್ಲಗ್‌ ಬಳಸಿ ಸುರಕ್ಷೆ ಇಂದ ಸವರಿ ಮಾಡಿದರೆ ಒಳ್ಳೆಯದು.

3. LED ಹೆಡ್-ಲ್ಯಾಂಪ್‌ಗಳು

3. LED ಹೆಡ್-ಲ್ಯಾಂಪ್‌ಗಳು

ದಾರಿಯುದ್ದಕ್ಕೂ ಬೀದಿ ದೀಪಗಳಿಲ್ಲದಿದ್ದಾಗ ನೀವು ಏನು ಮಾಡುತ್ತೀರಿ? ರಾತ್ರಿಯಲ್ಲಿ ಏನಾದರೂ ಅಪಾಯ ಎದುರಾದರೆ ,ಬೈಕ್ ನ ಬಿಡಿ ಭಾಗಗಳು ಕಳಚಿಕೊಂಡಲ್ಲಿ ನೀವು ಏನು ಮಾಡುತ್ತೀರಿ? ಅವುಗಳನ್ನು ಸರಿಪಡಿಸಲು, ನಿಮಗೆ ಪ್ರಕಾಶಮಾನವಾದ ಬೆಳಕು ಅತ್ಯಾವಶಕ. ಹೆಡ್-ಲ್ಯಾಂಪ್‌ಗಳು ಜಟಿಲತೆಗಳನ್ನು ನೋಡಲು ಹಾಗೂ ಸ್ವಲ್ಪ ದೂರದ ವಸ್ತುಗಳನ್ನು ನೋಡಲು ನಿಮಗೆ ಸಹಾಯ

4. ಹ್ಯಾಂಡ್ ಗ್ಲೋವ್ಸ್ ಗಳು

4. ಹ್ಯಾಂಡ್ ಗ್ಲೋವ್ಸ್ ಗಳು

ನೀವು ಚಳಿಗಾಲದಲ್ಲಿ ಮೋಟಾರ್ಸೈಕಲ್ ಟ್ರಿಪ್‌ಗೆ ಹೋದಾಗ ಹ್ಯಾಂಡ್ ಗ್ಲೋವ್ಸ್ ಗಳು ಮಾತ್ರ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಹೆಚ್ಚುವರಿ ಜೋಡಿ ಹ್ಯಾಂಡ್ ಗ್ಲೋವ್ಸ್ ಗಳು ಇದ್ದಾರೆ ಇನ್ನು ಉತ್ತಮ. ತಾಪಮಾನ ಬದಲಾವಣೆಯ ಸಮಯದಲ್ಲೂ ಇವು ನಿಮ್ಮ ಕೈಗಳನ್ನು ಬೆಚ್ಚಗಾಗಿಸುತ್ತದೆ. ಕೈಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಭಾಗವಾಗಿದೆ ; ನಿಮ್ಮ ಹಿಡಿತವನ್ನು ಅಥವಾ ನಿಮ್ಮ ಬೆರಳುಗಳಲ್ಲಿನ ಭಾವನೆಯನ್ನು ಕಳೆದು ಕೊಳ್ಳದ ಹಾಗೆ ರಕ್ಷಿಸುವ ಹಾಗೂ ಶೀತ, ಗಾಳಿ ಮತ್ತು ಮಳೆಯನ್ನು ತಡೆದಿಡುವ ವಿವಿಧ ಬಗೆಯ ಹ್ಯಾಂಡ್ ಗ್ಲೋವ್ಸ್ ಗಳನ್ನೂ ಮಾರುಕಟ್ಟೆಯಲ್ಲಿ ಕಾಣಬಹುದು .

5. ಕುತ್ತಿಗೆ ಸ್ಕ್ಯಾರ್ಪ್

5. ಕುತ್ತಿಗೆ ಸ್ಕ್ಯಾರ್ಪ್

ಚಳಿಗಾಲದ ಬೈಕು ಪ್ರವಾಸದ ಸಮಯದಲ್ಲಿ ನಿಮ್ಮ ಕುತ್ತಿಗೆ ಮತ್ತು ಕೈಗಳಿಗೆ ತುಂಬಾ ಚಳಿಯಾಗುತ್ತದೆ. ಮೊದಲೇ ಹೇಳಿದಂತೆ, ಕೈಗವಸುಗಳು ನಿಮ್ಮ ಕೈಗಳನ್ನು ರಕ್ಷಿಸುತ್ತವೆ; ಆದಾಗ್ಯೂ, ನಿಮ್ಮ ಕುತ್ತಿಗೆಯನ್ನು ರಕ್ಷಿಸಲು ಸ್ಕ್ಯಾರ್ಪ್ ಬಳಸಿ. ಸ್ಕ್ಯಾರ್ಪ್ ನಿಮ್ಮ ದೇಹವನ್ನು ಚಳಿಯಿಂದ ಬೆಚ್ಚಗಾಗಿಸುತ್ತದೆ. ಹವಾಮಾನವು ಬಿಸಿಯಾದರೆ, ನೀವು ಅವುಗಳನ್ನು ನೀರಿನಲ್ಲಿ ನೆನೆಸಿ ಧರಿಸಿಕೊಂಡರೆ ನಿಮ್ಮ ದೇಹವನ್ನು ತಣ್ಣಗಾಗಿಸುತ್ತದೆ. ಇದು ಕೀಟಗಳಿಂದ ನಿಮ್ಮ ಕುತ್ತಿಗೆಯನ್ನು ಕಾಪಾಡುತ್ತದೆ

6. ಹಣ

6. ಹಣ

ಅನೇಕ ಆಫ್‌ಬೀಟ್ ತಾಣಗಳಲ್ಲಿ ಜನರು ಕಾರ್ಡ್‌ಗಳನ್ನು ಸ್ವೀಕರಿಸುವುದಿಲ್ಲ. ಅದಕ್ಕೆ ನೀವು ಜೇಬಲ್ಲಿ ಹಣವನ್ನು ಇಟ್ಟುಕೊಂಡರೆ ಅದು ಇಂಧನ, ಆಹಾರ ಅಥವಾ ಇತರ ವಿಷಯಗಳಿಗಾಗಿ ಪ್ರಯೋಜನವಾಗುತ್ತದೆ. ಕೆಲವೊಂದು ಪರಿಸ್ಥಿತಿಯಲ್ಲಿ ನೀವು ಒಬ್ಬ ವ್ಯಕ್ತಿ ಅಥವಾಇತರರಿಗೆ ಪಾವತಿಸಬೇಕಾದಾಗ ನಿಮಗೆ ಸಹಾಯವಾಗುತ್ತದೆ. ಆದ್ದರಿಂದ ನೀವು ನಿರ್ಧಾರಿತ ಸ್ಥಳಕ್ಕೆ ಬಂದ ತಕ್ಷಣ, ಹತ್ತಿರದಲ್ಲಿ ಎಟಿಎಂ ಅನ್ನು ಹುಡುಕಿ ಮತ್ತು ಮೇಲೆ ತಿಳಿಸಿದ ಕಾರಣಗಳಿಗಾಗಿ ಸ್ವಲ್ಪ ಹಣವನ್ನು ಬಿಡಿಸಿಇಟ್ಟುಕೊಳ್ಳಿ.

7. ಟೈರ್ ಪ್ಲಗ್ ಕಿಟ್

7. ಟೈರ್ ಪ್ಲಗ್ ಕಿಟ್

ಹಳ್ಳಿಗಾಡಿನ ಮತ್ತು ಕಡಿದಾದ ಕಲ್ಲುಮುಳ್ಳಿನ ರಸ್ತೆಗಳಲ್ಲಿ ಬೈಕ್‌ನಲ್ಲಿ ಪ್ರಯಾಣಿಸುವಾಗ ಟೈರ್ ಪ್ಲಗ್ ಕಿಟ್ ಕಡ್ಡಾಯವಾಗಿ ಬೇಕಾಗುತ್ತದೆ. ಪಂಚರ್ ಆದ ಟೈರ್ ನೊಂದಿಗೆ ನೀವು ನಿರ್ಜನ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ, ಆ ಟೈರ್‌ಗಳನ್ನು ಸರಿಪಡಿಸಲು ಟೈರ್ ಪ್ಲಗ್ ಕಿಟ್ ಅನ್ನು ಬಳಸಬಹುದು. ಮತ್ತು ಟ್ಯೂಬ್‌ಲೆಸ್ ಟೈರ್‌ಗಳಿಗೆ ಇದು ಅತ್ಯಾವಶಕ. ಟೈರ್ ಪ್ಲಗ್ ಕಿಟ್‌ನಲ್ಲಿ ಎರಡು ಟಿ ಹ್ಯಾಂಡಲ್‌ಗಳಿವೆ: ಒಂದು ಬಿಂದು ಮತ್ತು ಒರಟು ಶಾಫ್ಟ್ ಅನ್ನು ಹೊಂದಿರುತ್ತದೆ ಮತ್ತು ಇನ್ನೊಂದಕ್ಕೆ ಅದರ ಕೊನೆಯಲ್ಲಿ "ಕಣ್ಣು" ಇರುತ್ತದೆ. ಪ್ಲಗ್ ಮಾಡಲಾದ ಟೈರ್‌ನೊಂದಿಗೆ ಚಾಲನೆ ಮಾಡುವುದು ಅಲ್ಪಾವಧಿಗೆ ಮಾತ್ರ ಸುರಕ್ಷಿತವಾಗಿರುತ್ತದೆ ಎಂದು ಮರೆಯದಿರಿ.

8. ಚಳಿಗೆ ಬೆಚ್ಚಗಿನ ಜಾಕೆಟ್

8. ಚಳಿಗೆ ಬೆಚ್ಚಗಿನ ಜಾಕೆಟ್

ಬೈಕು ಪ್ರವಾಸದ ಸಮಯದಲ್ಲಿ ಇದು ಅತ್ಯಗತ್ಯ ವಸ್ತುವಾಗಿದ್ದು, ನಗರದಲ್ಲಿ ಧೂಳನ್ನು ತಡೆಯಲು ಇದನ್ನು ಧರಿಸುವುದು ಉತ್ತಮ.ನೀವು ಹೆದ್ದಾರಿಯಲ್ಲಿದ್ದಾಗ, ಹಠಾತ್ ಎದುರಾಗುವ ಚಳಿಗಾಳಿ ಅಥವಾ ದಿನವಿಡೀ ಜಿನುಗುವ ತಂಪಾದ ಮಳೆಹನಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇದನ್ನು ಧರಿಸಿ.ಮಳೆಯಲ್ಲಿ ನೆನೆಯುವುದು ಮತ್ತು ಶೀತವಾಗುವುದು ಬೈಕ್ ಪ್ರವಾಸ ಹೋಗುವವರಿಗೆ ಒಳ್ಳೆಯದಲ್ಲ ಹಾಗೂ ಇದು ಅನಾರೋಗ್ಯಕ್ಕೂ ಕಾರಣವಾಗಬಹುದು. ಆದ್ದರಿಂದ, ಇದನ್ನು ತಪ್ಪಿಸಲು, ನೀವು ವಿಂಡ್‌ಚೀಟರ್ ಅಥವಾ ಜಾಕೆಟ್ ಅನ್ನು ಇಟ್ಟುಕೊಂಡಿದೀರಾ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಮೋಟಾರ್ಸೈಕಲ್ ನಲ್ಲಿ ಸುಲಭವಾಗಿ ಪ್ಯಾಕ್ ಮಾಡಬಹುದಾದ ಎರಡು ಜೊತೆ ರೈನ್ ಕೋಟ್, ವಾಟರ್ ಪ್ರೂಫ್ ಹ್ಯಾಂಡ್ ಗ್ಲೋವ್ಸ್ ಮತ್ತು ಬೂಟುಗಳು ಇದ್ದರೆ ಇನ್ನು ಒಳಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X