Search
  • Follow NativePlanet
Share
» »ಸಾವಿರಾರು ವರ್ಷಗಳ ಹಿಂದೆ ಮುಳುಗಿದ್ದ ಈ ನಗರ ನೀರಿನೊಳಗಿನಿಂದ ಹೇಗೆ ಕಾಣುತ್ತಿದೆ ಗೊತ್ತಾ?

ಸಾವಿರಾರು ವರ್ಷಗಳ ಹಿಂದೆ ಮುಳುಗಿದ್ದ ಈ ನಗರ ನೀರಿನೊಳಗಿನಿಂದ ಹೇಗೆ ಕಾಣುತ್ತಿದೆ ಗೊತ್ತಾ?

ಸುಮಾರು 5000 ವರ್ಷಗಳಿಗೂ ಹಿಂದೆ ಸಮುದ್ರದಲ್ಲಿ ಮುಳುಗಿ ಹೋಗಿರುವ ದ್ವಾರಕಾ ನಗರದ ಅವಶೇಷಗಳು ಇಂದಿಗೂ ಕಾಣಸಿಗುತ್ತದೆ. ಶ್ರೀ ಕೃಷ್ಣನ ನಂತರ ಕೆಲವು ವರ್ಷದಲ್ಲಿ ದ್ವಾರಕ ಮುಳುಗಿದ್ದು, ಆಗಿನ ಶಿಲೆಗಳು ಅವಶೇಷಗಳು ಇಂದಿಗೂ ಸಮುದ್ರ ಗರ್ಭದಲ್ಲಿ ಇದೆಯಂತೆ. ಹಾಗಾದ್ರೆ ಸಮುದ್ರದ ಅಡಿಯಲ್ಲಿ ದ್ವಾರಕಾ ಯಾವ ರೀತಿ ಕಾಣುತ್ತದೆ ಎನುವುದನ್ನು ನೋಡೋಣ...

ಈ ರೈಲಿನಲ್ಲಿ ಊಟನೂ ಫ್ರೀ...ವೈ ಫೈ ಕೂಡಾ ಫ್ರಿ...ಈ ರೈಲಿನಲ್ಲಿ ಊಟನೂ ಫ್ರೀ...ವೈ ಫೈ ಕೂಡಾ ಫ್ರಿ...

ಎಲ್ಲಿದೆ ಈ ದ್ವಾರಕಾ?

ಎಲ್ಲಿದೆ ಈ ದ್ವಾರಕಾ?

PC: youtube

ಗುಜರಾತ್‌ನ ಜಾಮ್ ನಗರದ ಅರೇಬಿಯಾ ಮಹಾಸಮುದ್ರದಲ್ಲಿ ಸುಮಾರು 150 ಅಡಿ ಆಳದಲ್ಲಿ ಈ ದ್ವಾರಕಾ ನಗರ ಇದೆ ಎನ್ನುತ್ತಾರೆ ಪುರಾತತ್ವ ಶಾಸ್ತ್ರಜ್ಞರು.

ಚಾರ್ ಧಾಮದಲ್ಲಿ ಒಂದು

ಚಾರ್ ಧಾಮದಲ್ಲಿ ಒಂದು

PC: youtube

ಪುರಾತನ ನಗರಗಳಲ್ಲಿ ಒಂದಾಗಿರುವ ಶ್ರೀ ಕೃಷ್ಣನ ಊರಾದ ದ್ವಾರಕಾ ಚಾರ್‌ಧಾಮ(ನಾಲ್ಕು ಧಾಮ) ಗಳಲ್ಲಿ ಒಂದಾಗಿದೆ ಎಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಕೃಷ್ಣನು ಮಥುರೆಯಲ್ಲಿ ಯುದ್ದವನ್ನು ಪರಿತ್ಯಜಿಸಿ ಮಥುರೆಯನ್ನು ಬಿಟ್ಟು ದ್ವಾರಕೆಗೆ ಬಂದು ತನ್ನ ಸಾಮ್ರಾಜ್ಯಕ್ಕೆ ಬೆಯ್ಟ್ ದ್ವಾರಕ ಎನ್ನುವಲ್ಲಿ ಬುನಾದಿಯನ್ನು ಹಾಕಿದನು. ಇದು ಓಕಾ ಬಂದರಿನ ಸಮೀಪದಲ್ಲಿದೆ. ಇಲ್ಲಿ ಕೃಷ್ಣ ತನ್ನ ಜೀವನದ ಬಹುಭಾಗವನ್ನು ಕಳೆದನು. ಕೃಷ್ಣನ ಮರಣದ ನಂತರ ಈ ನಗರವು ಮುಳುಗಿತು.

ದ್ವಾರಕಾ ಎನ್ನುವ ಹೆಸರು ಹೇಗೆ ಬಂತು?

ದ್ವಾರಕಾ ಎನ್ನುವ ಹೆಸರು ಹೇಗೆ ಬಂತು?

PC: youtube

ದ್ವಾರಕಾ ಎನ್ನುವ ಹೆಸರು ಸಂಸ್ಕøತದ ದ್ವಾರ್ ಎನ್ನುವುದರಿಂದ ಬಂದಿದೆ ಎನ್ನಲಾಗಿದೆ. ದ್ವಾರ್ ಎಂದರೆ ಬಾಗಿಲು. ಈ ಪದದ ಮಹತ್ವವೆಂದರೆ ಇದು ಬ್ರಹ್ಮನ ಬಾಗಿಲು. ಇಲ್ಲಿನ ಮಂದಿರದಲ್ಲಿ ಶ್ರೀಕೃಷ್ಣನನ್ನು ದ್ವಾರಕಾಧೀಶ ಎಂದು ಪೂಜಿಸಲಾಗುತ್ತದೆ. ದ್ವಾರಕಾ ನಗರವು ಹಲವು ಅದ್ಭುತ ಧಾರ್ಮಿಕ ಸ್ಥಳಗಳು ಹಾಗೂ ರಹಸ್ಯಗಳನ್ನು ಒಳಗೊಂಡಿದೆ. ಈ ದೇವಾಲಯವು ಐದು ಮಹಡಿಯ ಗೋಪುರವನ್ನು ಹೊಂದಿದೆ ಇದನ್ನು ಕೃಷ್ಣನ ಮೊಮ್ಮಗ ಸಾಂಬಾ ಕಟ್ಟಿಸಿದನೆನ್ನಲಾಗಿದೆ. ಈ ದೇವಸ್ಥಾವನ್ನು ಶಿಲ್ಪಿ ವಿಶ್ವಕರ್ಮನಿಂದ ನಿರ್ಮಿತವಾಗಿದೆ ಎನ್ನಲಾಗುತ್ತದೆ.

ಎರಡು ದ್ವಾರಗಳಿವೆ

ಎರಡು ದ್ವಾರಗಳಿವೆ

PC: youtube

ಈ ದೇವಸ್ಥಾನದಲ್ಲಿ ಪ್ರಮುಖ ಎರಡು ದ್ವಾರಗಳಿವೆ ಸ್ವರ್ಗ ದ್ವಾರ ಹಾಗು ಮೋಕ್ಷ ದ್ವಾರ. ಗೋಮತಿ ನದಿಯ ಸಮುದ್ರದೆಡೆಗೆ ಹರಿದು ಸೇರುವ ಸಂಗಮವನ್ನು ಜನರು ಈ ದೇವಸ್ಥಾನದಲ್ಲಿ ಕಾಣಬಹುದು. ದ್ವಾರಕಾದಲ್ಲಿ ವಸುದೇವ, ದೇವಕಿ, ಬಲರಾಮ, ರೇವತಿ ಸುಭದ್ರಾ, ರುಕ್ಮಿಣಿ, ಜಾಂಬವತಿ ಹಾಗು ಸತ್ಯಭಾಮರ ದೇವಾಲಯವೂ ಇದೆ.

ಬೆಟ್ ದ್ವಾರಕಾ

ಬೆಟ್ ದ್ವಾರಕಾ

PC: wikipedia

ಈ ದೇವಸ್ಥಾನವು ಶ್ರೀಕೃಷ್ಣ ಆಡಳಿತ ನಡೆಸುತ್ತಿದ್ದ ಅರಮನೆಯಂತೆಯೇ ಇದೆ. ದ್ವಾರಕನಾಥನನ್ನೇ ಹೋಲುವ ದೇವರ ವಿಗ್ರಹ ಬೆಟ್ ದ್ವಾರಕಲಾದಲ್ಲಿಯೂ ಇದೆ. ಆರು ಬಾರಿ ಸಮುದ್ರದಲ್ಲಿ ಮುಳುಗಿಹೊಗಿದ್ದು ಈಗಿನ ದ್ವಾರಕಾವು ಏಳನೇ ಬಾರಿಗೆ ನಿರ್ಮಿಸಲಾಗಿರುವ ದ್ವಾರಕಾವಾಗಿದೆ.

Read more about: india temple dwarka gujarat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X