Search
  • Follow NativePlanet
Share
» »ಹೊರನಾಡು - ಪ್ರಕೃತಿ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟ ಸ್ಥಳ

ಹೊರನಾಡು - ಪ್ರಕೃತಿ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟ ಸ್ಥಳ

ಹೊರನಾಡಿನ ಪ್ರಸಿದ್ದಿಗೆ ಮುಖ್ಯ ಕಾರಣವೆಂದರೆ ಅಲ್ಲಿರುವ ಸುಂದರವಾದ ದೇವಿ ಅನ್ನಪೂರ್ಣೇಶ್ವರಿ ದೇವಾಲಯದಿಂದಾಗಿದ್ದು, ಪ್ರಕೃತಿಯ ನೈಸರ್ಗಿಕ ಸುಂದರ ವೈಭವವನ್ನು ನೋಡಲು ಇಷ್ಟ ಪಡುವವರಿಗಾಗಿ ಹೊರನಾಡು ಇಂದ್ರಿಯಗಳನ್ನು ತೃಪ್ತಿ ಪಡಿಸುವಂತಹುದಾಗಿದೆ. ಈ ಹಚ್ಚ ಹಸಿರಿನ ಪಟ್ಟಣವು ಚಿಕ್ಕಮಗಳೂರಿನ ದಕ್ಷಿಣಕ್ಕೆ 100 ಕಿಮೀ ದೂರದಲ್ಲಿರುವ ಸುಂದರವಾದ ಮಲೆನಾಡಿನಲ್ಲಿದೆ. ಈ ಪ್ರದೇಶವು ದಟ್ಟವಾದ ಕಾಡುಗಳು ಮತ್ತು ಫಲವತ್ತಾದ ಕಣಿವೆಯಿಂದ ಆವೃತವಾಗಿದ್ದು, ಹೊರನಾಡಿಗೆ ನಿಜವಾಗಿಯೂ ಅದ್ಭುತವಾದ ನೋಟವನ್ನು ನೀಡುತ್ತದೆ.

horanadu-sri-annapoorneshwari-devi-temple-karnata

ಶ್ರೀ ಕ್ಷೇತ್ರ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಹಿಂದಿನ ದಂತಕಥೆ

ನಿಸರ್ಗದ ನೈಜವಾದ ಸೌಂದರ್ಯವನ್ನು ಹೊರತುಪಡಿಸಿ, ಈ ಚಿಕ್ಕ ಪಟ್ಟಣಕ್ಕೆ ಭೇಟಿ ನೀಡಲು ಮುಖ್ಯ ಕಾರಣವೆಂದರೆ ಅನ್ನಪೂರ್ಣೇಶ್ವರಿಯ ಪುರಾತನ ದೇವಾಲಯ. ಇಲ್ಲಿಯ ದೇವಿಯ ವಿಗ್ರಹವನ್ನು ಚಿನ್ನದಿಂದ ಮಾಡಲಾಗಿದ್ದು, ಇಲ್ಲಿ ಬಂದು ಪ್ರಾರ್ಥಿಸುವ ಯಾತ್ರಿಕರು ತಮ್ಮ ಜೀವನದಲ್ಲಿ ಎಂದಿಗೂ ಆಹಾರದ ಕೊರತೆಯನ್ನು ಎದುರಿಸುವುದಿಲ್ಲ ಎಂಬ ನಂಬಿಕೆ ಇದೆ. ದಂತಕಥೆಯ ಪ್ರಕಾರ, ಶಿವನು ಒಮ್ಮೆ ಶಾಪಗ್ರಸ್ತನಾಗಿದ್ದಾಗ, ಈ ದೇವಿಯ ಆಶೀರ್ವಾವಾದದಿಂದ ಶಾಪ ವಿಮೋಚನೆಗೆ ಒಳಗಾದನೆಂದು ಕಥೆಯಲ್ಲಿ ಹೇಳಲಾಗುತ್ತದೆ.

ಈ ದೇವಾಲಯದ ಇನ್ನೊಂದು ವಿಶೇಷತೆಯೇನೆಂದರೆ ಇಲ್ಲಿಗೆ ಬರುವ ಪ್ರತೀ ಸಂದರ್ಶಕರಿಗೂ ಆಹಾರ ಮತ್ತು ಮಲಗಲು ಸ್ಥಳವನ್ನು ನೀಡಲಾಗುತ್ತದೆ.

horanadu-sri-annapoorneshwari-devi-temple-karnataka

ಹೊರನಾಡು ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಒಮ್ಮೆ ನೀವು ಹೊರನಾಡಿಗೆ ಪ್ರವಾಸ ಆಯೋಜಿದಲ್ಲಿ ಅದರ ಜೊತೆಗೆ ಇಲ್ಲಿಯ ಇನ್ನಿತರ ದೇವಾಲಯಗಳಿಗೂ ಭೇಟಿ ನೀಡಬಹುದಾಗಿದೆ. ಇಲ್ಲಿಂದ ಕೇವಲ 75ಕಿ.ಮೀ ಅಂತರದಲ್ಲಿ ಶ್ರಿಂಗೇರಿ ಇದ್ದು, ಹೊರನಾಡಿಗೆ ಹತ್ತಿರವಿರುವ ಮತ್ತೊಂದು ಆಸಕ್ತಿದಾಯಕ ಸ್ಥಳವಾಗಿದೆ ಹಾಗೂ ಇದರೊಂದಿಗೆ ನೀವು ಧರ್ಮಸ್ಥಳ ಮತ್ತು ಉಡುಪಿ ಕೃಷ್ಣ ದೇವಾಲಯಗಳಿಗೂ ಭೇಟಿ ನೀಡಬಹುದಾಗಿದೆ.

ಹೊರನಾಡಿಗೆ ತಲುಪುವುದು ಹೇಗೆ?

ಬೆಂಗಳೂರಿನಿಂದ 330 ಕಿ.ಮೀ ಅಂತರದಲ್ಲಿರುವ ಹೊರನಾಡಿಗೆ ಶಿವಮೊಗ್ಗ ರೈಲ್ವೇ ನಿಲ್ದಾಣವು ಹತ್ತಿರದ್ದಾಗಿದೆ ಅಲ್ಲದೆ ಈ ಪಟ್ಟಣವನ್ನು ರಸ್ತೆಯ ಮೂಲಕ ಉತ್ತಮವಾಗಿ ಸಂಪರ್ಕಿಸಬಹುದಾಗಿದ್ದು ರಾಜ್ಯಸಾರಿಗೆ ಮತ್ತು ಸ್ಥಳೀಯ ಬಸ್ಸುಗಳ ಮೂಲಕ ಪ್ರಯಾಣಿಸಬಹುದಾಗಿದೆ. ಹೊರನಾಡಿಗೆ ಹತ್ತಿರವಾಗಿ ಮಂಗಳೂರು ವಿಮಾನ ನಿಲ್ದಾಣವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X