Search
  • Follow NativePlanet
Share
» »ಈ ಅನ್ನಪೂರ್ಣೇಯ ಸನ್ನಿಧಿಗೆ ಬಂದವರಿಗೆ ಎಂದೂ ಅನ್ನದ ಕೊರತೆ ಆಗೋದಿಲ್ಲವಂತೆ!

ಈ ಅನ್ನಪೂರ್ಣೇಯ ಸನ್ನಿಧಿಗೆ ಬಂದವರಿಗೆ ಎಂದೂ ಅನ್ನದ ಕೊರತೆ ಆಗೋದಿಲ್ಲವಂತೆ!

ಇತಿಹಾಸದ ಜೊತೆಗೆ ಕಲಾ ಸಂಸ್ಕೃತಿ ಪ್ರೇಮಿಗಳಿಗೆ ಭಾರತವು ಯಾವುದೇ ಸಂಪತ್ತಿಗಿಂತಲೂ ಕಮ್ಮಿ ಇಲ್ಲ. ಭಾರತದ ಪ್ರಾಚೀನ ಮಂದಿರಗಳು ಶ್ರದ್ಧೆ ಹಾಗೂ ವಾಸ್ತುಕಲೆ ಕ್ಷೇತ್ರದಲ್ಲಿ ಬಹಳಷ್ಟು ಮುಂದಿದೆ. ಈ ಲೇಖನದಲ್ಲಿ ನಾವು ದಕ್ಷಿಣ ಭಾರತದ ಒಂದು ಅದ್ಭುತ ಮಂದಿರದ ಬಗ್ಗೆ ತಿಳಿಸಲಿದ್ದೇವೆ. ಇದು ತನ್ನ ವಿಶೇಷತೆಗಳೊಂದಿಗೆ ಬಹಳ ಲೋಕಪ್ರಿಯವೂ ಆಗಿದೆ.

ಹೊರನಾಡು ಅನ್ನಪೂರ್ಣೇಶ್ವರಿ ಮಂದಿರ

ಹೊರನಾಡು ಅನ್ನಪೂರ್ಣೇಶ್ವರಿ ಮಂದಿರ

PC: Kgpramod2

ಭದ್ರಾ ನದಿ ತೀರದಲ್ಲಿರುವ ಈ ದೇವಾಲಯವು ಕರ್ನಾಟಕದ ಅತ್ಯಂತ ಪ್ರಾಚೀನ ಜನಪ್ರಿಯ ಮಂದಿರಗಳಲ್ಲಿ ಒಂದಾಗಿದೆ. ಈ ಕ್ಷೇತ್ರವನ್ನು ಹೊರನಾಡು ಅನ್ನಪೂರ್ಣೇಶ್ವರಿ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಇದು ಚಿಕ್ಕಮಗಳೂರಿನಿಂದ ಸುಮಾರು 100ಕಿ.ಮೀ ದೂರದಲ್ಲಿದೆ. ಅನ್ನದ ದೇವತೆ ಅನ್ನಪೂರ್ಣೇಗೆ ಈ ಮಂದಿರ ಸಮರ್ಪಿಸಲಾಗಿದೆ. ಈ ಮಂದಿರದ ಒಳಗೆ ಅನ್ನಪೂರ್ಣೇಯ ಸುಂದರ ಮೂರ್ತಿಯನ್ನು ಕಾಣಬಹುದು.

ಸೇಬಿನ ತೋಟ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿಸೇಬಿನ ತೋಟ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ

ಮಂದಿರದ ಇತಿಹಾಸ

ಮಂದಿರದ ಇತಿಹಾಸ

PC: Kgpramod2

ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಕಳೆದ 400 ವರ್ಷಗಳಿಂದ ವಂಶಾನುಗತವಾಗಿ ಧರ್ಮಮಾರ್ತರು ನಡೆದುಕೊಂಡು ಬರುತ್ತಿದೆ. ಅಂದಿನಿಂದ ಮಂದಿರದ ಸೇವೆ ಹಾಗೂ ಸಂರಕ್ಷಣೆಯ ಜವಬ್ದಾರಿಯನ್ನು ಒಂದೇ ಕುಟುಂಬ ವಹಿಸಿಕೊಂಡಿದೆ. ಮಂದಿರವನ್ನು ಅಲಂಕರಿಸುವುದು, ಧಾರ್ಮಿಕ ಅನುಷ್ಠಾನಗಳಲ್ಲಿ ಇವರ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂದಿನ ಧರ್ಮ ಮಾತೃರು ಆದ ವೆಂಕಟಸುಬ ಜೋಯಿಷರು ವಾಸ್ತು ಶಿಲ್ಪ, ಜ್ಯೋತೀಷ್ಯ, ಹಿಂದೂ ಪೌರಾಣಿಕ ಸಿದ್ಧಾಂತದ ಜೊತೆಗೆ ಮಂದಿರವನ್ನು ಪುನಃನವೀಕರಿಸಿದರು. 1973ರಲ್ಲಿ ಅಕ್ಷಯ ತೃತೀಯದ ದಿನ ದೇವಿ ಆದಿಶಕ್ತಿ ಹಾಗೂ ಅನ್ನಪೂರ್ಣೇಶ್ವರಿಯ ಪ್ರತಿಮೆಯ ಪ್ರತಿಷ್ಠಾಪನೆಯನ್ನು ಮಾಡಿದರು.

ಪೌರಾಣಿಕ ಕಥೆ

ಪೌರಾಣಿಕ ಕಥೆ

PC: Flicker

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನವನ್ನು 8ನೇ ಶತಮಾನದಲ್ಲಿ ಅಗಸ್ತ್ಯ ಋಷಿಯು ಅನ್ನಪೂರ್ಣೇಶ್ವರಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರು. ವದಂತಿಯ ಪ್ರಕಾರ, ಒಂದು ದಿನ ಶಿವ ಹಾಗೂ ಪಾರ್ವತಿಯ ನಡುವೆ ಜಗಳವಾಗುತ್ತದೆ. ಆಗ ಶಿವನು ಅನ್ನ ಸಹಿತ ಜಗತ್ತಿನ ಎಲ್ಲಾ ವಸ್ತುವನ್ನು ಭ್ರಮೆ ಎಂದು ಘೋಷಿಸುತ್ತಾನೆ. ಆದರೆ ಅನ್ನ ಮಾಯೆಯಲ್ಲ ಎನ್ನುವುದನ್ನು ಸಾಭೀತು ಪಡಿಸಲು ದೇವಿ ಪಾರ್ವತಿ ಮಾಯವಾಗುತ್ತಾಳೆ. ಮರ ಗಿಡಗಳೆಲ್ಲವೂ ನಿರ್ಜೀವವಾದವು. ವಾತಾವರಣ ಕೂಡಾ ಸ್ತಬ್ಧವಾಯಿತು. ಆಗ ದೇವಿಯು ಎಲ್ಲರಿಗೆ ಅನ್ನವನ್ನು ನೀಡಿ ಅವರಿಗೆ ಮರುಜೀವ ನೀಡುತ್ತಾಳೆ. ಆಗಿನಿಂದ ದೇವಿಯನ್ನು ಅನ್ನಪೂರ್ಣೇ ಎನ್ನುತ್ತಾರೆ.

ಶ್ರೀರಾಮ ರಾವಣನನ್ನು ಸಂಹರಿಸಿ ಬಂದು ತನ್ನ ಜಡೆಯನ್ನು ತೊಳೆದದ್ದು ಇಲ್ಲೇಶ್ರೀರಾಮ ರಾವಣನನ್ನು ಸಂಹರಿಸಿ ಬಂದು ತನ್ನ ಜಡೆಯನ್ನು ತೊಳೆದದ್ದು ಇಲ್ಲೇ

ಇನ್ನೊಂದು ಕಥೆ

ಇನ್ನೊಂದು ಕಥೆ

ಇಷ್ಟೇ ಅಲ್ಲದೆ ಈ ಮಂದಿರಕ್ಕೆ ಸಂಬಂಧಿಸಿದ ಇನ್ನೊಂದು ಕಥೆ ಇದೆ. ಒಮ್ಮೆ ಶಿವನು ಬ್ರಹ್ಮನ ತಲೆಯನ್ನು ಕಡಿದಿದ್ದನು. ಆ ನಂತರ ಬ್ರಹ್ಮನ ತಲೆ ಬುರುಡೆಯು ಶಿವನ ಕೈಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಶಿವನಿಗೆ ಶಾಪ ನೀಡಲಾಗಿತ್ತು ಆ ತಲೆ ಬುರುಡೆ ಅನ್ನದಿಂದ ತುಂಬುವವರೆಗೆ ಅದು ಹಾಗೆಯೇ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ. ಶಿವನು ಎಲ್ಲಾ ಕಡೆ ಹೋದರೂ ಆ ಬುರುಡೆ ತುಂಬಲಿಲ್ಲ. ಕೊನೆಗೆ ಶಿವನು ಈ ಮಂದಿರಕ್ಕೆ ಬಂದು ಅನ್ನಪೂರ್ಣೇಯನ್ನು ಬೇಡಿಕೊಂಡರು. ಅನ್ನಪೂರ್ಣೇಯು ಆ ಬುರುಡೆಯನ್ನು ಅನ್ನದಿಂದ ತುಂಬಿಸಿದಳು. ಹೀಗೆ ಶಿವನು ಶಾಪ ಮುಕ್ತನಾಗುತ್ತಾನೆ.

ವಿಶಿಷ್ಟ ವಾಸ್ತುಕಲೆ

ವಿಶಿಷ್ಟ ವಾಸ್ತುಕಲೆ

PC:Gnanapiti

ಧಾರ್ಮಿಕ ಹಾಗೂ ಪೌರಾಣಿಕ ಕಥೆಯನ್ನು ಹೊರತುಪಡಿಸಿ ಈ ಮಂದಿರದ ವಾಸ್ತುಕಲೆಯು ವಿಶಿಷ್ಟವಾಗಿದೆ. ಈ ಮಂದಿರವನ್ನು ತಲುಪಬೇಕಾದರೆ ಮೆಟ್ಟಿಲುಗಳ ಮೂಲಕ ಹೋಗಬೇಕು. ಮಂದಿರದ ಗೋಪುರದಲ್ಲಿ ಹಿಂದೂ ದೇವತೆಗಳ ಅನೇಕ ಮೂರ್ತಿಗಳಿವೆ. ಗೋಡೆಯಲ್ಲಿನ ಚಿತ್ತಾಕರ್ಷಕ ಚಿತ್ರಗಳು, ಕಂಬಗಳಲ್ಲಿರುವ ಕೆತ್ತನೆ ಇಲ್ಲಿನ ಭಕ್ತರ ಜೊತೆಗೆ ಪ್ರವಾಸಿಗರನ್ನೂ ತನ್ನತ್ತ ಆಕರ್ಷಿಸುತ್ತದೆ.

 ಅನ್ನದ ಕೊರತೆ ಬರೋದಿಲ್ಲ

ಅನ್ನದ ಕೊರತೆ ಬರೋದಿಲ್ಲ

ಪುರಾಣದ ಪ್ರಕಾರ ಈ ಮಂದಿರವನ್ನು ಅಗಸ್ತ್ಯ ಋಷಿ ನಿರ್ಮಿಸಿದ್ದಂತೆ. ಈ ಮಂದಿರದ ಮೇಲೆ ದಕ್ಷಿಣದ ಹಿಂದೂಗಳ ಅಪಾರ ನಂಬಿಕೆ ಇದೆ. ಈ ದೇವಿಗೆ ಚಮತ್ಕಾರಿ ಶಕ್ತಿ ಇದೆಯಂತೆ. ಭಕ್ತರು ಇಲ್ಲಿ ಸ್ವಚ್ಫ ಮನಸ್ಸಿನಿಂದ ದೇವಿಯನ್ನು ಪೂಜಿಸಿದರೆ ಅವರು ಜೀವನಪರ್ಯಂತ ಅನ್ನದ ಕೊರತೆ ಇಲ್ಲದೆ ಇರುತ್ತಾರಂತೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿಗೆ ಹೋಗಬೇಕಾದರೆ ಮಂಗಳೂರು ಏರ್‌ಪೋರ್ಟ್ ಮೂಲಕ ಹೋಗಬೇಕು. ಇಲ್ಲಿ ಯಾವುದೇ ರೈಲ್ವೆ ಸ್ಟೇಶನ್ ಕೂಡಾ ಇಲ್ಲ. ಅಲ್ಲಿಗೆ ಸಮೀಪ ಇರುವ ರೈಲ್ವೆ ಸ್ಟೇಶನ್ ಎಂದರೆ ಬಂಟ್ವಾಳ ರೈಲ್ವೆ ಸ್ಟೇಶನ್. ಬಸ್‌ನಲ್ಲಿ ಹೋಗುವುದಾದರೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ನಗರಗಳಿಂದ ಇಲ್ಲಿಗೆ ಬಸ್‌ಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X