Search
  • Follow NativePlanet
Share
» »ಬಾಬಾ ಬುಡನ್ ಗಿರಿ ಬಳಿ ಇರುವ ಎಂದಿಗೂ ಬತ್ತದ ಈ ಜಲಪಾತ ನೋಡಿದ್ದೀರಾ?

ಬಾಬಾ ಬುಡನ್ ಗಿರಿ ಬಳಿ ಇರುವ ಎಂದಿಗೂ ಬತ್ತದ ಈ ಜಲಪಾತ ನೋಡಿದ್ದೀರಾ?

ಕರ್ನಾಟಕದಲ್ಲಿ ಎಷ್ಟೊಂದು ಜಲಪಾತಗಳಿವೆ. ಜಲಪಾತಗಳ ನಿಜವಾದ ಸೌಂದರ್ಯವನ್ನು ಕಾಣಬೇಕಾದರೆ ನೀವು ಮಳೆಗಾಲದಲ್ಲಿಯೇ ಅಲ್ಲಿಗೆ ಭೇಟಿ ನೀಡಬೇಕು. ಚಿಕ್ಕಮಗಳೂರಿನಲ್ಲೂ ಸಾಕಷ್ಟು ಜಲಪಾತಗಳಿವೆ. ಪ್ರವಾಸಿಗರಿಗಂತೂ ಈ ಜಲಪಾತಗಳು ರಮಣೀಯ ತಾಣಗಳಾಗಿವೆ. ಇಂದು ನಾವು ಚಿಕ್ಕಮಗಳೂರಿನ ಹೊನ್ನಮ್ಮನ ಜಲಪಾತದ ಬಗ್ಗೆ ಹೇಳಲಿದ್ದೇವೆ.

ಎಲ್ಲಿದೆ ಈ ಹೊನ್ನಮ್ಮ ಫಾಲ್ಸ್?

ಎಲ್ಲಿದೆ ಈ ಹೊನ್ನಮ್ಮ ಫಾಲ್ಸ್?

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹೊನ್ನಮ್ಮ ಜಲಪಾತವು ಸುಂದರವಾದ ಜಲಪಾತವಾಗಿದೆ. ಈ ಜಲಪಾತವು ಕೆಮ್ಮಣ್ಣಗುಂಡಿನಿಂದ ಸುಮಾರು 25 ಕಿ.ಮೀ ದೂರದಲ್ಲಿದೆ ಮತ್ತು ಬಾಬಾ ಬುಡನ್ ಗಿರಿ ದತ್ತಾತ್ರೇಯ ಪೀಠದಿಂದ ಸುಮಾರು 1 ಕಿ.ಮೀ ದೂರದಲ್ಲಿದೆ.

ಗಾಳಿಯಲ್ಲಿ ತೇಲುತ್ತಿದೆ 9 ಸಾವಿರ ಕಿ.ಲೋ ತೂಕದ ಪಾರ್ಶ್ವನಾಥನ ಮೂರ್ತಿಗಾಳಿಯಲ್ಲಿ ತೇಲುತ್ತಿದೆ 9 ಸಾವಿರ ಕಿ.ಲೋ ತೂಕದ ಪಾರ್ಶ್ವನಾಥನ ಮೂರ್ತಿ

ಬಾಬಾ ಬುಡನ್ ಗಿರಿ ಬೆಟ್ಟ

ಬಾಬಾ ಬುಡನ್ ಗಿರಿ ಬೆಟ್ಟ

ದಟ್ಟ ಕಾಡು ಪ್ರದೇಶದಲ್ಲಿ ನೆಲೆಸಿದೆ ಜಲಪಾತವು ಕರ್ನಾಟಕದ ಕಡಿಮೆ ಪ್ರಕೃತಿ ಸೌಂದರ್ಯವನ್ನು ಹೊಂದಿದೆ.ಈ ಜಲಪಾತ 30 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ. ಇದು ಒಂದು ರಮಣೀಯ ತಾಣವಾಗಿದ್ದು ಬಾಬಾ ಬುಡನ್ ಗಿರಿ ಬೆಟ್ಟಗಳ ಆಕರ್ಷಕ ನೋಟವನ್ನು ಇಲ್ಲಿ ಕಾಣಬಹುದು.

ಮಾಣಿಕ್ಯಧಾರಾ ಜಲಪಾತ

ಮಾಣಿಕ್ಯಧಾರಾ ಜಲಪಾತ

ಈ ಜಲಪಾತವನ್ನು ಮಾಣಿಕ್ಯಧಾರಾ ಜಲಪಾತವೆಂದೂ ಕರೆಯಲಾಗುತ್ತದೆ, ಅಂದರೆ ಮುತ್ತಿನಂತೆ ಮೃದುವಾದ. ಇಲ್ಲಿ ನೀರು ಒಂದು ಮುತ್ತಿನ ತೊಟ್ಟಿಯಾಗಿ ನಿಧಾನವಾಗಿ ಬೀಳುತ್ತದೆ. ಜಲಪಾತಕ್ಕಾಗಿ ಮಣಿಕ್ಯಧಾರ ಎಂಬ ಹೆಸರನ್ನು ಮಾಣಿಕ್ಯದಾ ಧಾರ ಎಂಬ ಸಂತರ ಹೆಸರಿನಿಂದ ಪಡೆಯಲಾಗಿದೆ ಎಂದು ಪುರಾಣ ಹೇಳುತ್ತದೆ.

ಇಲ್ಲಿನ ಕಲ್ಲನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟಿದ್ರೆ ಯಾವುದೇ ವಿಘ್ನ ಬರೋದಿಲ್ಲವಂತೆಇಲ್ಲಿನ ಕಲ್ಲನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟಿದ್ರೆ ಯಾವುದೇ ವಿಘ್ನ ಬರೋದಿಲ್ಲವಂತೆ

ನೀರು ಯಾವತ್ತೂ ಬತ್ತಿಲ್ಲ

ನೀರು ಯಾವತ್ತೂ ಬತ್ತಿಲ್ಲ

ಈ ಜಲಪಾತದ ಆಸಕ್ತಿದಾಯಕ ಸಂಗತಿಯೆಂದರೆ, ಅದು ಇಲ್ಲಿಯವರೆಗೂ ಎಂದಿಗೂ ಬತ್ತಿಲ್ಲ. ಶುಷ್ಕ ಬೇಸಿಗೆ ಕಾಲದಲ್ಲಿ ಸಹ ಜಲಪಾತದ ಹೊಳೆಯುವ ಬಿಳಿ ನೀರು ಎಡೆಬಿಡದೆ ಬೀಳುವಂತೆ ಕಾಣುತ್ತದೆ. ಇದು ವರ್ಷಪೂರ್ತಿ ಭೇಟಿ ನೀಡಬಹುದಾದ ಜಲಪಾತಗಳಲ್ಲಿ ಒಂದಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಅಕ್ಟೋಬರ್‌ನಿಂದ ಎಪ್ರಿಲ್ ವರೆಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ತಾಣವಾಗಿದೆ. ಮಳೆಗಾಲದಲ್ಲಂತೂ ಇಲ್ಲಿ ನೀರು ತುಂಬಿ ಹರಿಯುತ್ತಿರುತ್ತದೆ. ಜಲಪಾತವು ಸುಂದರವಾಗಿ ಕಾಣಿಸುತ್ತದೆ. ಜೊತೆಗೆ ಅನೇಕ ಫೋಟೋಗಳನ್ನೂ ಕ್ಲಿಕ್ಕಿಸಬಹುದು. ಈ ನೀರು ಬೀಳುವ ಕೆಳಭಾಗದಲ್ಲಿ ಪೂಲ್ ರೀತಿ ನಿರ್ಮಾಣವಾಗಿದೆ. ಪ್ರವಾಸಿಗರು ನೀರಿನಲ್ಲಿ ಇಳಿದು ಸ್ನಾನವೂ ಮಾಡಬಹುದು.

ಈ ಮಂದಿರದ ಹೆಸರು ಕೇಳಿದ್ರೆ ಪಾಕಿಸ್ತಾನವೂ ಹೆದರುತ್ತಂತೆ!ಈ ಮಂದಿರದ ಹೆಸರು ಕೇಳಿದ್ರೆ ಪಾಕಿಸ್ತಾನವೂ ಹೆದರುತ್ತಂತೆ!

ತಲುಪುವುದು ಹೇಗೆ?

ತಲುಪುವುದು ಹೇಗೆ?

ರಸ್ತೆ ಮೂಲಕ: ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ. ಕೆಮ್ಮಣ್ಣುಗುಂಡಿ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಬಂದು ಇಲ್ಲಿಂದ ಹೊನ್ನಮ್ಮನ ಫಾಲ್ಸ್‌ಗೆ ಸುಲಭವಾಗಿ ಹೋಗಬಹುದು.

ರೈಲಿನ ಮೂಲಕ: ಈ ಫಾಲ್ಸ್‌ಗೆ ಸಮೀಪವಿರುವ ರೈಲು ನಿಲ್ದಾಣವೆಂದರೆ ಬೀರೂರು ರೈಲು ನಿಲ್ದಾಣ. ಇಲ್ಲಿಗೆ ಬಂದು ನಂತರ ಟ್ಯಾಕ್ಸಿ ಮೂಲಕ ಫಾಲ್ಸ್‌ನ್ನು ತಲುಪಬಹುದು.

ವಿಮಾನ: ವಿಮಾನದಲ್ಲಿ ಬರುವುದಾದರೆ ಕೆಮ್ಮಣ್ಣುಗುಂಡಿ ಬಳಿ ಯಾವುದೇ ವಿಮಾನ ನಿಲ್ದಾಣಗಳಿಲ್ಲ. ಆದ್ದರಿಂದ ಬೆಂಗಳೂರು ಅಥವಾ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿ ನಂತರ ಅಲ್ಲಿಂದ ಬಸ್‌ ಅಥವಾ ಟ್ಯಾಕ್ಸಿ ಮೂಲಕ ಇಲ್ಲಿಗೆ ತಲುಪಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X