Search
  • Follow NativePlanet
Share
» »ಭಾರತದಲ್ಲಿ ಮಧುಚಂದ್ರಕ್ಕೆ ಯೋಗ್ಯವಾದಂತಹ ಸುಂದರ ತಾಣಗಳು

ಭಾರತದಲ್ಲಿ ಮಧುಚಂದ್ರಕ್ಕೆ ಯೋಗ್ಯವಾದಂತಹ ಸುಂದರ ತಾಣಗಳು

ಮಧುಚಂದ್ರಕ್ಕೆ ಸೂಕ್ತವಾದಂತಹ ಮತ್ತು ಮೇ ತಿಂಗಳಲ್ಲಿ ಭೇಟಿ ಕೊಡಬಹುದಾದಂತಹ ಭಾರತದ ಸುಂದರ ತಾಣಗಳು

ನಿಮ್ಮ ಜೀವನ ಸಂಗಾತಿಯೊಂದಿಗೆ ಅಥವಾ ಸಂಗಾತಿಯೊಂದಿಗೆ ಖಾಸಗಿ ಸಮಯವನ್ನು ಕಳೆಯಲು ಯಾವುದಾದರೂ ಉತ್ತಮವಾದ ಸ್ಥಳಗಳನ್ನು ಆಯ್ಕೆ ಮಾಡಲು ನೋಡುತ್ತಿದ್ದಲ್ಲಿ, ನಿಮಗೆ ಹಲವಾರು ಸಾಂಪ್ರದಾಯಿಕ ಸ್ಥಳಗಳು ಕಾಣಸಿಗುತ್ತವೆ. ಅದರಲ್ಲೂ ಖಾಸಗಿ ಸಮಯವನ್ನು ಕಳೆಯಲು ಗಿರಿಧಾಮಗಳು ಅಥವಾ ಕಡಲತೀರಗಳ ತಾಣಗಳಿಗಿಂತ ಉತ್ತಮವಾದುದು ಯಾವುದೂ ಇರಲು ಸಾಧ್ಯವಿಲ್ಲ. ನಮ್ಮ ಭಾರತದಲ್ಲಿ ಇಂತಹ ಸ್ಥಳಗಳು ಹಲವಾರು ಕಾಣಸಿಗುತ್ತವೆ.

ನಮ್ಮ ಈ ಲೇಖನದಲ್ಲಿ, ಮೇ ತಿಂಗಳಲ್ಲಿ ಭಾರತದಲ್ಲಿ ಭೇಟಿ ನೀಡಲು ಯೋಗ್ಯವಾದಂತಹ ಕೆಲವು ಅತ್ಯುತ್ತಮ ಮಧುಚಂದ್ರದ ಸ್ಥಳಗಳನ್ನು ನಿಮ್ಮ ಮುಂದಿಡಲು ಬಯಸುತ್ತೇವೆ ಅಲ್ಲದೆ ಈ ಸ್ಥಳಗಳು ನಿಮ್ಮ ಸಂಬಂಧದಲ್ಲಿಯ ಮಧುರತೆಯನ್ನು ಹೆಚ್ಚಿಸಲು ಹಾಗೂ ನಿಮ್ಮ ರಜಾದಿನಗಳನ್ನು ಸ್ಮರಣೀಯಗೊಳಿಸುವಲ್ಲಿ ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ

ಈ ಕೆಳಗೆ ಭಾರತದಲ್ಲಿ ಮೇ ಯಲ್ಲಿ ಭೇಟಿ ನೀಡಬಹುದಾದ ಹಾಗೂ ಮಧುಚಂದ್ರಕ್ಕೆ ಯೋಗ್ಯವಾದಂತಹ 10 ಅತ್ಯುತ್ತಮ ಸ್ಥಳಗಳ ಪಟ್ಟಿ ಇದೆ.

1. ಊಟಿ, ತಮಿಳುನಾಡು

1. ಊಟಿ, ತಮಿಳುನಾಡು

ಗಿರಿಧಾಮಗಳ ರಾಣಿ ಎಂದೇ ಪ್ರಖಾತಿಗೊಂಡಿರುವ ಊಟಿಯು ಮೇ ತಿಂಗಳಿನಲ್ಲಿ ಭೇಟಿ ನೀಡಬಹುದಾದಂತಹ ದಕ್ಷಿಣ ಭಾರತದ ಅತ್ಯುತ್ತಮ ಹನಿಮೂನ್ ತಾಣವಾಗಿದೆ. ಕೊಯಮತ್ತೂರಿನಿಂದ ಉತ್ತರಕ್ಕೆ 80 ಕಿ.ಮೀ ದೂರದಲ್ಲಿರುವ ನೀಲಗಿರಿ ಬೆಟ್ಟಗಳ ರಾಜಧಾನಿ ಎನಿಸಿರುವ ಹಾಗೂ ಸುಂದರವಾದ ಬೆಟ್ಟಗಳ ಮಧ್ಯೆ ನೆಲೆಸಿರುವ ಊಟಿಯು ಜನಪ್ರಿಯ ಗಿರಿಧಾಮವಾಗಿದೆ. ಇದು ಭಾರತದ ಕೆಲವೇ ರಜಾ ತಾಣಗಳಲ್ಲಿ ಒಂದಾಗಿದ್ದು, ಈ ಸ್ಥಳವು ನಿಮ್ಮ ಜೀವನದಲ್ಲಿ ಅವಿಸ್ಮರಣೀಯ ನೆನಪಾಗಿ ಖಂಡಿತವಾಗಿಯೂ ಉಳಿಯುತ್ತದೆ.

2. ಮುನ್ನಾರ್, ಕೇರಳ

2. ಮುನ್ನಾರ್, ಕೇರಳ

ಪರ್ವತಗಳು, ಸರೋವರಗಳು, ಹೌಸ್ ಬೋಟ್ ಗಳು, ಸ್ಪಾ, ಮಸಾಲೆಗಳು ಇವೆಲ್ಲವನ್ನೂ ಕೇರಳವು ತನ್ನಲ್ಲಿ ಹೊಂದಿದೆ ! ಮೈಗೆ ಸೋಕುವ ತಣ್ಣನೆಯ ಗಾಳಿಯೊಂದಿಗೆ ಸೊಂಪಾದ ಹಚ್ಚ ಹಸಿರು ಚಹಾ ತೋಟಗಳ ಮಧ್ಯೆ ಸಂಗಾತಿಯೊಂದಿಗೆ ನಡೆದಾಡಬಹುದು ಅಥವಾ ಅಲ್ಲಿಯ ಕಾಟೇಜ್ ನ ಯಾವುದಾದರೂ ಮುಖಮಂಟಪದಲ್ಲಿ ಕುಳಿತು ಅಲ್ಲಿಯ ಸೌಂದರ್ಯತೆಯನ್ನು ಅನುಭವಿಸಬಹುದಾಗಿದೆ. ಕೇರಳದ ಮೋಡಿ ನಿಮ್ಮನ್ನು ಹೆಚ್ಚು ಹೆಚ್ಚು ಮರಳುವಂತೆ ಮಾಡುತ್ತದೆ . ಇಂತಹ ಹಿನ್ನೀರಿನ ತಾಣಗಳನ್ನು ಹೊಂದಿರುವ ಕೇರಳದಲ್ಲಿ ಪಡೆಯುವ ಸಂತೋಷವನ್ನು ನೀವು ಬೇರೆಲ್ಲಿಯೂ ಪಡೆಯಲು ಸಾಧ್ಯವಿಲ್ಲ. ವರ್ಷದ ಆರಂಭದಲ್ಲಿ ಈ ಸ್ಥಳದಲ್ಲಿನ ಹವಾಮಾನವು ನಿಜವಾಗಿಯೂ ಸಂತೋಷಕರವಾಗಿರುತ್ತದೆ. ಆದ್ದರಿಂದ ಇದು ಮೇ ತಿಂಗಳಲ್ಲಿ ಭಾರತದಲ್ಲಿಯ ಭೇಟಿ ನೀಡಲು ಮತ್ತು ಮಧುಚಂದ್ರಕ್ಕೆ ಸೂಕ್ತವಾದ ತಾಣವಾಗಿದೆ.

3. ಕೂರ್ಗ್, ಕರ್ನಾಟಕ

3. ಕೂರ್ಗ್, ಕರ್ನಾಟಕ

ಮಧುಚಂದ್ರಕ್ಕಾಗಿ ಸ್ಥಳಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬಹುದಾದ ಅತ್ಯುತ್ತಮ ಹಾಗೂ ಆಕರ್ಷಕ ಸ್ಥಳಗಳಲ್ಲಿ ಕೂರ್ಗ್ ಕೂಡಾ ಒಂದಾಗಿದೆ. ಇದು ಬೇಸಿಗೆಯ ಸಮಯದಲ್ಲಿ ಭೇಟಿ ನೀಡಬಹುದಾದಂತಹ ವಾರಾಂತ್ಯದ ಸ್ಥಳವೂ ಹೌದು. ಇಲ್ಲಿಯ ಅಲೌಕಿಕ ದೃಷ್ಟಿಕೋನಗಳು, ಸುಂದರ ಪರಿಸರ ಮತ್ತು ಅದ್ಭುತ ದೃಶ್ಯಗಳು ಜನರನ್ನು ಖಂಡಿತವಾಗಿಯೂ ತನ್ನಲ್ಲಿಗೆ ಸೆಳೆಯುತ್ತದೆ.

4. ಉದಯ್ ಪುರ್, ರಾಜಸ್ತಾನ

4. ಉದಯ್ ಪುರ್, ರಾಜಸ್ತಾನ

ಉದಯ್ ಪುರ್ ಒಂದು ಅತ್ಯಂತ ಪ್ರವಾಸಿ ತಾಣವಾಗಿದ್ದು, ಇದು ಅದರ ಇತಿಹಾಸ, ಸಂಪ್ರದಾಯ , ನಯನ ಮನೋಹರ ತಾಣಗಳು ಮತ್ತು ರಜಪೂತ ಯುಗದ ಅರಮನೆಗಳು ಮುಂತಾದವುಗಳಿಗೆ ಹೆಸರುವಾಸಿಯಾಗಿದೆ ಅಲ್ಲದೆ ಮೇ ತಿಂಗಳಲ್ಲಿ ಭೇಟಿ ಕೊಡಬಹುದಾದಂತಹ ಮುಖ್ಯ ಸ್ಥಳಗಳಲ್ಲಿ ಇದೂ ಒಂದಾಗಿದೆ. ಅಪ್ರತಿಮ ಅರಮನೆಗಳು, ವಸ್ತುಸಂಗ್ರಹಾಲಯಗಳು ಮತ್ತು ಸುಂದರವಾಗಿ ಕಂಗೊಳಿಸುವ ಸರೋವರಗಳನ್ನು ಹೊಂದಿರುವ ಉದಯ್ ಪುರವು ಭಾರತದ ರೊಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿ ಪರಿಗಣಿಸುವಂತೆ ಮಾಡಿದ್ದು, ಮಧುಚಂದ್ರಕ್ಕೆ ಸೂಕ್ತವಾದ ಸ್ಥಳವಾಗಿದೆ. ಬಣ್ಣಗಳು ಮತ್ತು ವೈವಿಧ್ಯಮಯ ಸಂಸ್ಕೃತಿಯಲ್ಲಿ ತುಂಬಿ ತುಳುಕಿರುವ ಉದಯಪುರದ ಬೀದಿಗಳಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ನಡೆಯುತ್ತಾ ನಿಮ್ಮ ರಜಾ ದಿನಗಳನ್ನು ಆನಂದಿಸಿ.

5. ಕಾಶ್ಮೀರ

5. ಕಾಶ್ಮೀರ

ಭಾರತದ ಸ್ವಿಟ್ಜರ್ಲ್ಯಾಂಡ್ ಎಂದು ಕರೆಯಲ್ಪಡುವ ಕಾಶ್ವೀರವು ತನ್ನಲ್ಲಿ ಹೊಂದಿರುವ ಅದ್ಬುತವಾದ ದೃಶ್ಯಗಳು ಮತ್ತು ಅಪ್ರತಿಮ ಸೌಂದರ್ಯತೆಯ ಕಾರಣದಿಂದಾಗಿ ಭಾರತದಲ್ಲಿಯ ಭೇಟಿ ಕೊಡಲು ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ. ನೀವು ಇಲ್ಲಿಗೆ ಭೇಟಿ ನೀಡಲು ಖರ್ಚು ಮಾಡುವುದು ಎಂದಿಗೂ ವ್ಯರ್ಥವೆನಿಸಲು ಸಾಧ್ಯವೇ ಇಲ್ಲ ಹಾಗೂ ಇದು ಭಾರತದ ಅತ್ಯುತ್ತಮ ಮಧುಚಂದ್ರಕ್ಕೆ ಯೋಗ್ಯವಾದ ತಾಣವಾಗಿದೆ. .

6. ಕೊಡೈಕೆನಾಲ್, ತಮಿಳುನಾಡು

6. ಕೊಡೈಕೆನಾಲ್, ತಮಿಳುನಾಡು

ಕೊಡೈಕನಾಲ್ ಅನ್ನು ಗಿರಿಧಾಮಗಳ ರಾಜಕುಮಾರಿ ಎಂದೂ ಕರೆಯುತ್ತಾರೆ, ಇದು ಭಾರತದಲ್ಲಿಯ ಸುಲಭವಾಗಿ ಮಧುಚಂದ್ರಕ್ಕೆ ಹೋಗಬಹುದಾದ ತಾಣವಾಗಿದೆ. ಮಾನ್ಸೂನ್ ಗೆ ಪ್ರಭಾವಿತವಾಗಿರುವ ಹವಾಗುಣವನ್ನು ಹೊಂದಿದೆ ಮತ್ತು ನಗರವು ಎತ್ತರದಲ್ಲಿರುವುದರಿಂದ ಕೊಡೈಕೆನಾಲ್ ವರ್ಷವಿಡೀ ತಂಪಾದ ವಾತಾವರಣವನ್ನು ಹೊಂದಿರುತ್ತದೆ. ಆದುದರಿಂದ ಈ ಸ್ಥಳವು ಮಧುಚಂದ್ರಕ್ಕಾಗಿ ಮೇ ತಿಂಗಳಲ್ಲಿ ಭೇಟಿ ನೀಡಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ ಅಷ್ಟೇ ಅಲ್ಲದೆ ಇದು ಅನ್ವೇಷಿಸಲು ಸಾಕಷ್ಟು ಸುಂದರವಾದ ಸ್ಥಳಗಳನ್ನು ಹೊಂದಿದೆ.

7. ಸಿಕ್ಕಿಂ

7. ಸಿಕ್ಕಿಂ

ಮಾಂತ್ರಿಕ ಮೋಡಿ ಮಾಡುವ ಹಿಮಾಲಯದ ಮಡಿಲಲ್ಲಿರುವ ಸಿಕ್ಕಿಂನ ಮನಮೋಹಕ ಸೌಂದರ್ಯ ಹಾಗೂ ಮೋಡಿ ಮಾಡುವಂತಹ ಪರಿಸರವು ನಿಮ್ಮತ್ತು ಅಚ್ಚರಿಗೊಳಿಸುತ್ತದೆ ಅಲ್ಲದೆ "ಅದ್ಬುತಗಳು ಸಣ್ಣ ಪ್ಯಾಕೇಜ್ ನಲ್ಲಿಯೂ ಸಿಗುತ್ತವೆ "ಎಂದು ನೀವು ಅಂದುಕೊಳ್ಳುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ನೀವು ಸಾಂಪ್ರದಾಯಿಕ ಮಧುಚಂದ್ರದ ಸ್ಥಳಗಳಿಂದ ಬೇಸತ್ತಿದ್ದರೆ, ಸಿಕ್ಕಿಂ ನಿಮಗೆ ಮತ್ತು ನಿಮ್ಮ ಜೀವನ ಸಂಗಾತಿಗೆ ಸೂಕ್ತವಾದ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ.

8. ಗೋವಾ

8. ಗೋವಾ

ನಿಸ್ಸಂದೇಹವಾಗಿಯೂ ಗೋವಾ ಮೇ ತಿಂಗಳಿನಲ್ಲಿ ಮಧುಚಂದ್ರಕ್ಕೆ ಹೋಗುವವರಿಗೆ ಸೂಕ್ತವಾದ ಸ್ಥಳವಾಗಿದೆ. ಗೋವಾವು ಮಧುಚಂದ್ರದ ಸುಂದರ ನೆನಪುಗಳನ್ನು ಮೆಲುಕು ಹಾಕಲು ಬೇಕಾದಂತಹ ಎಲ್ಲಾ ವಿಷಯಗಳನ್ನೂ ತನ್ನಲ್ಲಿ ಹೊಂದಿದೆ. ಇದೊಂದು ಕರಾವಳಿ ಪಟ್ಟಣವಾಗಿದೆ ಮತ್ತು ನಿಮ್ಮ ಪ್ರೀತಿಯನ್ನು ಹೆಚ್ಚಿಸುವಂತೆ ಮತ್ತು ಅದರ ನೆನಪುಗಳು ಎಂದೆಂದಿಗೂ ಮಾಸದೆ ಇರುವಂತೆ ಮಾಡಲು ಗೋವಾದ ತಾಣಗಳು ಹೆಚ್ಚು ಸೂಕ್ತವಾಗಿವೆ. ಗೋವಾ ವಾರಾಂತ್ಯದಲ್ಲಿ ಭೇಟಿ ಕೊಡುವ ಸ್ಥಳಗಳ ಪಟ್ಟಿಯಲ್ಲಿ ಬರುತ್ತದೆ ಅಲ್ಲದೆ ಮೋಜು ಪ್ರಿಯರಿಗೆ ಹೆಚ್ಚು ಸೂಕ್ತವಾದ ಸ್ಥಳವಾಗಿದೆ.

9. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

9. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಅಂಡಮಾನ್ ನಿರ್ವಿವಾದವಾಗಿಯೂ ಭಾರತದ ಅತ್ಯುತ್ತಮ ಕಡಲತೀರಗಳ ಸ್ವರ್ಗಗಳಲ್ಲಿ ಒಂದಾಗಿದೆ. ಸೂರ್ಯ-ಚುಂಬಿಸಿದಂತಿರುವ ಕಡಲತೀರಗಳು ಅಥವಾ ದ್ವೀಪದ ಅದ್ಭುತ ಹಿನ್ನೆಲೆಗಳನ್ನು ಹೊಂದಿರುವ ಈ ಸ್ಥಳವು ಮಧುಚಂದ್ರಕ್ಕೆ ಹೋಗುವವರಿಗೆ ಸೂಕ್ತವಾದ ಸ್ಥಳವಾಗಿದೆ. ಈ ದ್ವೀಪಗಳು ಅದರ ಸೌಂದರ್ಯ ಮತ್ತು ಸೊಬಗಿನ ಏಕೈಕ ಕಾರಣಕ್ಕಾಗಿ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕೆನ್ನುವಂತಹ ತಾಣವಾಗಿದೆ.

10. ಆಗ್ರಾ, ಉತ್ತರಪ್ರದೇಶ

10. ಆಗ್ರಾ, ಉತ್ತರಪ್ರದೇಶ

ಆಗ್ರಾವು ಯಮುನಾ ತೀರದಲ್ಲಿರುವ ಸುಂದರವಾದ ಮತ್ತು ಅತ್ಯಾಕರ್ಷಕ ನಗರವಾಗಿದೆ. ಅನೇಕ ಪ್ರವಾಸೀ ತಾಣಗಳನ್ನು ತನ್ನಲ್ಲಿ ಹೊಂದಿರುವ ಭವ್ಯವಾದ ಈ ನಗರವು ಖಂಡಿತವಾಗಿಯೂ ಮೇ ತಿಂಗಳಿನಲ್ಲಿ ಮಧುಚಂದ್ರಕ್ಕೆ ಸೂಕ್ತವಾದ ಅತ್ಯುತ್ತಮವಾದ ಸ್ಥಳವಾಗಿದೆ. ಇದು ಭೇಟಿ ನೀಡಲು ಯೋಗ್ಯವಾದ ಮತ್ತು ನೆನಪಿನಲ್ಲಿ ಉಳಿಸುವಂತಹ ಸಾಕಷ್ಟು ಮೊಘಲ್ ಸ್ಮಾರಕಗಳನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X