Search
  • Follow NativePlanet
Share
» »ಮಾನ್ಸೂನ್ ಸಮಯದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಭಾರತದ ಆಕರ್ಷಕ ರಜಾ ತಾಣಗಳು

ಮಾನ್ಸೂನ್ ಸಮಯದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಭಾರತದ ಆಕರ್ಷಕ ರಜಾ ತಾಣಗಳು

ಬಿಸಿಯಾದ ಪಾನೀಯಗಳನ್ನು ಕುಡಿಯುತ್ತಾ ಜೊತೆಗೆ ಹಬೆಯಾಡುವ ಆಹಾರವನ್ನು ಸವಿಯುವುದರಿಂದ ಹಿಡಿದು ಜಾಕೇಟುಗಳನ್ನು ಹಾಕಿಕೊಂಡು ಆನಂದದ ಮಳೆಗಾಲದ ಸಮಯವನ್ನು ಆನಂದಿಸುವುದರವರೆಗೆ ಮಳೆಗಾಲದಲ್ಲಿ ಪ್ರವಾಸದ ಉತ್ಸಾಹದ ಅನುಭವವೇ ವಿಭಿನ್ನ ಅನುಭವ ನೀಡುವಂತಹುದು. ಭಾರತವು ಈ ಸಮಯದಲ್ಲಿ ಹಲವೆಡೆ ತಂಪಾದ ಹವಾಮಾನವನ್ನು ಅನುಭವಿಸುತ್ತದೆ ಆದುದರಿಂದ ಸರಿಯಾದ ಮಳೆಗಾಲದ ತಾಣವನ್ನು ಆಯ್ಕೆ ಮಾಡುವುದು ಕಷ್ಟವಾಗಬಹುದು. ಅದಕ್ಕಾಗಿ ನಿಮ್ಮ ಹುಡುಕಾಟಕ್ಕೆ ನೆರವಾಗುವಂತೆ ನಿಮಗಾಗಿ ಪರಿಪೂರ್ಣ ಮಾನ್ಸೂನ್ ರಜಾ ಸ್ಥಳಗಳ ಪಟ್ಟಿಯನ್ನು ಮಾಡುತ್ತಾ ಅದರ ಜೊತೆಗೆ ಅಲ್ಲಿಯ ಸಾಹಸ ಚಟುವಟಿಕೆಗಳು ಮತ್ತು ಮನರಂಜನಾ ಆಯ್ಕೆಗಳು, ವಸತಿಗಳು, ಪಾಕಪದ್ಧತಿಗಳು ಮತ್ತು ಹವಾಮಾನದಂತಹ ಅಂಶಗಳ ಮಾಹಿತಿಯನ್ನು ಈ ಲೇಖನದ ಮೂಲಕ ನಾವು ನೀಡುತ್ತಿದ್ದೇವೆ. ಅದಕ್ಕಾಗಿ ಈ ಕೆಳಗಿನ ಭಾರತದ ಮಳೆಗಾಲದಲ್ಲಿ ಭೇಟಿಗೆ ಯೋಗ್ಯವಾದ ಮತ್ತು ನಿಮಗೆ ಸೂಕ್ತವಾದ ರಜಾದಿನಗಳನ್ನು ಕಳೆಯಲು ಬೇಕಾಗುವ ಸ್ಥಳಗಳ ಪಟ್ಟಿ ಈ ಕೆಳಗಿನಂತಿವೆ.

ಕೂರ್ಗ್

ಕೂರ್ಗ್

ಮಳೆಗಾಲದಲ್ಲಿ ರಜಾದಿನಗಳನ್ನು ಕಳೆಯಲು ಸ್ಥಳಗಳ ಜೊತೆಗೆ ಹವಾಮಾನವು ಅನುಕೂಲಕರವಾಗಿರಬೇಕೆಂದು ಹುಡುಕಾಟ ಮಾಡುತ್ತಿರುವವರಿಗೆ ಕೊಡಗಿಗೆ ಪ್ರವಾಸದ ಆಯ್ಕೆ ಅತ್ಯುತ್ತಮವಾದುದಾಗಿದೆ. ಈ ಸಮಯದಲ್ಲಿ ಕೊಡಗಿನ ಹೊರಾಂಗಣದ ಆಕರ್ಷಣೆಗಳಲ್ಲಿ ಅಬ್ಬೆ ಜಲಪಾತಗಳು, ರಾಜಾ'ಸ್ ಸೀಟ್ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಿಗೆ ಭೇಟಿ ಕೊಡುವುದು ಅತ್ಯಂತ ಸೂಕ್ತವಾದುದಾಗಿದೆ. ಕೊಡಗಿನ ಬೆಚ್ಚಗಿನ ಹವಾಮಾನವು ಇತರ ಅಪ್ರತಿಮ ನಗರದ ಇನ್ನಿತರ ಆಕರ್ಷಣೆಗಳಾದ ತಡಿಯಂಡೋಮಲ್ ಪೀಕ್ ಮತ್ತು ಹನಿ ವ್ಯಾಲಿಗಳಿಗೆ ಭೇಟಿ ನೀಡಲು ಸೂಕ್ತವಾಗಿದ್ದು ಹೆಚ್ಚು ಆನಂದದಾಯಕವಾಗಿಸುತ್ತದೆ. ರಾತ್ರಿಯಲ್ಲಿ, ಪುನಶ್ಚೇತನಗೊಳಿಸುವ ಉತ್ತಮ ಸಮಯಕ್ಕಾಗಿ ಹಲವಾರು ಅತ್ಯುತ್ತಮ ಹೋಮ್‌ಸ್ಟೇಗಳು ಮತ್ತು ಅವುಗಳ ಸುತ್ತಮುತ್ತಲಿನಲ್ಲಿ ನೆಲೆಸಿರುವ ಬೆಟ್ಟಗಳಲ್ಲಿ ವಿಶ್ರಾಂತಿ ಪಡೆಯಿರಿ!

ಮುನ್ನಾರ್

ಮುನ್ನಾರ್

ಮಾನ್ಸೂನ್ ಸಮಯದಲ್ಲಿ ಮುನ್ನಾರ್ ನ ನಯನ ಮನೋಹರ ದೃಶ್ಯಾವಳಿಗಳನ್ನು ನೋಡುವ ಸಲುವಾಗಿ ಇಲ್ಲಿಯ ಬೆಟ್ಟಗಳ ತಪ್ಪಲಿಗೆ ಪ್ರವಾಸಿಗರು ಇಲ್ಲಿ ಭೇಟಿ ಕೊಡಲು ಹಾತೊರೆಯುತ್ತಿರುತ್ತಾರೆ. ಹಗಲು ಹೊತ್ತಿನಲ್ಲಿ ಇಲ್ಲಿ ಹವಾಮಾನ ಆಹ್ಲಾದಕರವಾಗಿದ್ದು, ಸ್ವಲ್ಪ ಬಿಸಿಲಿನ ಅನುಭವವಾಗುವಂತೆ ಮಾಡುತ್ತದೆ. ಬೆಟ್ಟದ ಬದಿಯಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ, ಪ್ರಯಾಣಿಕರು ಕುಟುಂಬದೊಂದಿಗೆ ಟ್ರಯಂಡ್ ಟ್ರಯಲ್ ಉದ್ದಕ್ಕೂ ಒಂದು ರಮಣೀಯ ಸೈಕ್ಲಿಂಗ್ ಪ್ರವಾಸವನ್ನು ಯೋಜಿಸಬಹುದು ಅಥವಾ ಪ್ರಶಾಂತವಾದ ಚೋಕ್ರಮೋಡಿ ಮೂಲಕ ಸುತ್ತಾಡಬಹುದು. ಮುನ್ನಾರ್ ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಮಾನ್ಸೂನ್ ರಜಾ ತಾಣಗಳಲ್ಲಿ ಒಂದಾಗಿರುವುದರಿಂದ, ನೀವು ಲಭ್ಯತೆಯನ್ನು (ವಿಶೇಷವಾಗಿ ವಾರಾಂತ್ಯಗಳಲ್ಲಿ) ಮೊದಲೇ ಖಚಿತಪಡಿಸಿಕೊಳ್ಳಬೇಕು, ನಿಮ್ಮ ಹೋಟೆಲ್ ಕೊಠಡಿಗಳು ಅಥವಾ ರಜೆಯ ಬಾಡಿಗೆಗಳನ್ನು ಸಾಧ್ಯವಾದಷ್ಟು ಬೇಗ ಕಾಯ್ದಿರಿಸಿ

ಲಕ್ಷದ್ವೀಪ

ಲಕ್ಷದ್ವೀಪ

ಡೈವಿಂಗ್ ನಂತಹ ಮೋಜಿನ ನೀರಿನಲ್ಲಿ ಆಡುವ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಲಕ್ಷದ್ವೀಪವು ಚಳಿಗಾಲದ ಹೊರತಾಗಿಯೂ ಮಾನ್ಸೂನ್ ಸಮಯದಲ್ಲಿಯೂ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಇದು ವರ್ಷಪೂರ್ತಿ ಭೇಟಿಗೆ ಯೋಗ್ಯವಾದ ತಾಣವಾದರೂ ಸಹ, ಮಳೆಗಾಲದ ಆಹ್ಲಾದಕರ ಹವಾಮಾನ,ಇಲ್ಲಿಯ ದ್ವೀಪಗಳು, ಅತ್ಯುತ್ತಮವಾದ ಕಡಲತೀರಗಳು ಮತ್ತು ಸುಂದರವಾದ ಜಲಕ್ರೀಡೆ ಚಟುವಟಿಕೆಗಳು ಇನ್ನೂ ಹೆಚ್ಚಾಗಿ ಜನರು ಭೇಟಿ ಕೊಡುವಂತೆ ಮಾಡುತ್ತದೆ.ಬೆರಗುಗೊಳಿಸುವ ತೀರಗಳ ಜೊತೆಗೆ, ಲಕ್ಷದ್ವೀಪವು ಸುಂದರವಾದ ಕಲ್ಪೇನಿ ಮತ್ತು ಮಿನಿಕಾಯ್ ದ್ವೀಪಗಳಿಗೆ ನೆಲೆಯಾಗಿದೆ, ಇದು ಸುಲಭ ಮತ್ತು ಸವಾಲಿನ ಪಾದಯಾತ್ರೆಗಳ ಅನುಭವ ನೀಡುತ್ತದೆ.

ಶಿಮ್ಲಾ

ಶಿಮ್ಲಾ

ಶಿಮ್ಲಾವು ತನ್ನಲ್ಲಿ ಎಲ್ಲಾ ತರಹದ ಪ್ರವಾಸಿಗರನ್ನು ಆಕರ್ಷಿಸುವಂತಹ ಸಾಕಷ್ಟು ಎಲ್ಲಾ ತರಹದ ಹೊರಾಂಗಣ ಆಕರ್ಷಣೆಗಳನ್ನು ಹೊಂದಿದೆ. ಕುಟುಂಬದ ಸದಸ್ಯರು ಆನಂದ ಪಡುವಂತಹ ಟೋಯ ಟ್ರೈನ್ ಸವಾರಿ, ಪ್ರಕೃತಿ ಪ್ರೇಮಿಗಳು ಅತ್ಯುನ್ನತ ಸ್ಥಳಗಳನ್ನು ರೂಪಿಸುವ ಪ್ರಭಾವಶಾಲಿ ಭೂದೃಶ್ಯಗಳನ್ನು ಈ ಸ್ಥಳವು ಹೊಂದಿದೆ. ಅಲ್ಲದೆ ಇತಿಹಾಸ ಪ್ರಿಯರು ಇಲ್ಲಿಯ ಮಿಲಿಟರಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಡಬಹುದು, ಅನ್ವೇಷಿಸಲು ಬಯಸುವವರು ಶಿಮ್ಲಾ ರಿಡ್ಜ್‌ನಲ್ಲಿ ಆನಂದಿಸಬಹುದು, ನೀವು ಯಾವುದೇ ರೀತಿಯ ಪ್ರಯಾಣಿಕ ಎಂದು ಗುರುತಿಸಿಕೊಂಡರೂ, ಶಿಮ್ಲಾದಲ್ಲಿಯ ಕಣ್ಮನ ಸೆಳೆಯುವ ವಾಸ್ತುಶಿಲ್ಪ ಮತ್ತು ಸುಂದರವಾದ ಭೂದೃಶ್ಯವು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಮತ್ತು ಮೋಜಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಶಿಮ್ಲಾದಲ್ಲಿ ವಿವಿಧ ಮನರಂಜನಾ ಹಾಟ್‌ಸ್ಪಾಟ್‌ಳಿದ್ದು, ನಿಮ್ಮನ್ನು ಖಂಡಿತವಾಗಿಯೂ ಎಂದಿಗೂ ಬೇಸರಗೊಳಿಸುವುದಿಲ್ಲ.

ಅಂಡಮಾನ್ ದ್ವೀಪಗಳು

ಅಂಡಮಾನ್ ದ್ವೀಪಗಳು

ಹವಾಮಾನ ಬದಲಾವಣೆಗಳಿಂದ ಉಂಟಾಗುವ ಹವಳದ ನಿಕ್ಷೇಪಗಳು ಸೃಷ್ಟಿಯಾಗುವ ಕಾರಣದಿಂದಾಗಿ, ನೀವು ಆದಷ್ಟು ಬೇಗ ಅಂಡಮಾನ್ ದ್ವೀಪಕ್ಕೆ ಹೋಗಬೇಕು. ನಾರ್ಕೊಂಡಮ್ ದ್ವೀಪ ಮತ್ತು ಉತ್ತರ ರೀಫ್ ದ್ವೀಪದ ನಡುವೆ ಇರುವ ರೀಫ್ ಪ್ರದೇಶದಲ್ಲಿ ಡೈವಿಂಗ್ ಮತ್ತು ಸ್ನಾರ್ಕ್ಲಿಂಗ್ ಇನ್ನೂ ರಮಣೀಯವಾಗಿದೆ. ಅದರ ಜೊತೆಗೆ ಅಂಡಮಾನ್‌ನಲ್ಲಿನ ಸಮುದ್ರ ಜೀವನವನ್ನು ಸಂಪೂರ್ಣವಾಗಿ ಆನಂದಿಸಲು ನೀವು ಡೈವರ್ ಆಗಬೇಕಾಗಿಲ್ಲ. ಇಲ್ಲಿಯ ನೀಲಿ ಸಾಗರವನ್ನು ನೌಕಾಯಾನ ಮಾಡುವುದು ಮತ್ತು ಸುಂದರವಾದ ಹ್ಯಾವ್‌ಲಾಕ್ ದ್ವೀಪಗಳ ಬೀಚ್‌ಗಳಿಗೆ ಭೇಟಿಯು ನಿಸ್ಸಂದೇಹವಾಗಿ ವಿಶ್ರಾಂತಿ ಪಡೆಯ ಬಯಸುವವರನ್ನು ತೃಪ್ತಿಪಡಿಸುತ್ತದೆ. ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವನಗಳು ಮತ್ತು ಸ್ಯಾಡಲ್ ಪೀಕ್ ರಾಷ್ಟ್ರೀಯ ಉದ್ಯಾನವನದಲ್ಲಿ ನೀವು ಭಾರತದ ಕೆಲವು ಅಪರೂಪದ ಪ್ರಾಣಿಗಳನ್ನು ಸಹ ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X