Search
  • Follow NativePlanet
Share
» »ಹೊಗೆನಕಲ್ - ಹೊಗೆಯ ಬಂಡೆಯಂತೆ ಕಾಣುವ ಬಂಡೆಗಳಿಂದ ಧುಮುಕುವ ಸುಂದರ ಜಲಪಾತ

ಹೊಗೆನಕಲ್ - ಹೊಗೆಯ ಬಂಡೆಯಂತೆ ಕಾಣುವ ಬಂಡೆಗಳಿಂದ ಧುಮುಕುವ ಸುಂದರ ಜಲಪಾತ

ಕಾವೇರಿ ದಡದಲ್ಲಿಯ ಹೊಗೆನಕಲ್ ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಕಣ್ಮನ ತಣಿಸುವ ಅದ್ಬುತ ಜಲಧಾರೆ

ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಕಾವೇರಿ ನದಿ ದಡದಲ್ಲಿರುವ ಹೊಗೆನಕಲ್ ಒಂದು ಸಣ್ಣ ಗ್ರಾಮವಾಗಿದೆ. ಈ ಹೆಸರು ಕನ್ನಡದಿಂದ ಬಂದಿದ್ದು ಹೊಗೆ ಅಂದರೆ ಹೊಗೆ ಎಂದೂ ಕಲ್ ಎಂದರೆ ಬಂಡೆಗಳು ಎಂಬುದಾಗಿಯೂ ಆದುದರಿಂದ ಇವೆರಡು ಒಟ್ಟಿಗೆ ಸೇರಿ 'ಹೊಗೆಯ ಬಂಡೆಗಳು " ಎಂದೂ ಅರ್ಥೈಸುತ್ತದೆ. ಇವೆಲ್ಲದರ ಉಪಸ್ಥಿತಿಯಿಂದಾಗಿ ಈ ಸ್ಥಳಕ್ಕೆ ಇದಕ್ಕೆ ಹೊಗೆನಕಲ್ ಎಂಬ ಹೆಸರು ಬಂದಿದೆ. ನೀರಿನ ಮಂಜಿನಿಂದ ಕೂಡಿದ ಹೊಗೆಭರಿತ ವಾತವರಣವನ್ನು ಇಲ್ಲಿಯ ಪರ್ವತಗಳ ಬಂಡೆಗಳ ಮೇಲೆ ಕಾಣಬಹುದಾಗಿದ್ದು, ಇಲ್ಲಿಂದ ನೀರು ಭೋರ್ಗರೆಯುತ್ತಾ ಧುಮುಕುತ್ತದೆ. ಈ ನದಿ ದಡದಲ್ಲಿರುವ ಗ್ರಾಮವು ಜನಭರಿತ ಮೆಟ್ರೋಪಾಲಿಟನ್ ನಗರ ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿದೆ ಮತ್ತು ಈ ಹಳ್ಳಿಯು ಕರ್ನಾಟಕ ಮತ್ತು ತಮಿಳುನಾಡು ಇವೆರಡು ರಾಜ್ಯಗಳ ಗಡಿಯನ್ನು ಹಂಚಿಕೊಳ್ಳುತ್ತದೆ.

ಈ ಸ್ಥಳವು ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರಲ್ಲಿ ಅತ್ಯಂತ ಪ್ರಸಿದ್ದಿಯನ್ನು ಪಡೆದಿದ್ದು ಅತ್ಯಂತ ಪ್ರಮುಖ ವಾರಾಂತ್ಯದಲ್ಲಿ ಭೇಟಿ ಕೊಡುವ ತಾಣಗಳಲ್ಲೊಂದೆನಿಸಿದೆ. ಕಾವೇರಿ ನದಿಯ ಭೋರ್ಗರೆಯುತ್ತಾ ಹರಿಯುವ ಸದ್ದು, ನದಿಯ ಅಕ್ಕಪಕ್ಕದ ಅನೇಕ ಅಡಿಗೆಮನೆಗಳಲ್ಲಿ ಹುರಿಯುವ ಹೊಸದಾಗಿ ಹಿಡಿದ ಮೀನಿನ ವಾಸನೆ, ಸ್ಥಳೀಯ ಗಿಡಮೂಲಿಕೆಗಳನ್ನು ಬಳಸಿ ಪರಿಣಿತ ಮಸಾಜ್ ಮಾಡುವ ತೈಲ ಮಸಾಜ್, ವಿಶೇಷ ತೈಲಗಳು ಮತ್ತು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸುವ ಮಸಾಜ್ ಪರಿಣಿತರ ಪುರಾತನ ಜ್ಞಾನ, ಹೊಗೇನಕಲ್ ಅನ್ನು ಆಸಕ್ತಿದಾಯಕ ತಾಣವನ್ನಾಗಿಸಿ ಒಂದು ಅವಿಸ್ಮರಣೀಯ ಅನುಭವ ನೀಡುವಂತೆ ಮಾಡುತ್ತದೆ.

hogenakkalfalls1

ಹೊಗೆನಕಲ್ ತನ್ನಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಇನ್ನೂ ಅನೇಕ ವಿಷಯಗಳನ್ನು ಒದಗಿಸಿಕೊಡುತ್ತದೆ. ಇಲ್ಲಿ ಸ್ವಲ್ಪ ಮಟ್ಟಿಗೆ ಸಾಹಸವನ್ನು ಮಾಡ ಬಯಸುವವರಿಗಾಗಿ ಜಲಪಾತದ ಪಕ್ಕದಲ್ಲಿರುವ ತೊರೆಯಲ್ಲಿ ಈಜುವುದನ್ನು ಆಯ್ಕೆ ಮಾಡಬಹುದಾಗಿದೆ ಆದರೂ ಇದು ಅಂದುಕೊಂಡಷ್ಟು ಸುಲಭವಲ್ಲ ಆದ್ದರಿಂದ ಪರಿಣಿತ ಈಜುಗಾರರು ಮಾತ್ರ ಇಲ್ಲಿ ಪ್ರಯತ್ನಿಸಬೇಕು. ಅಥವಾ ಮೇಲಗಿರಿ ಬೆಟ್ಟಗಳ ಉದ್ದಕ್ಕೂ ದೀರ್ಘ ಚಾರಣಕ್ಕೆ ಹೋಗಬಹುದು, ಇಲ್ಲಿಯ ಕಾಡಿನ ತಾಜಾ ಗಾಳಿಯು ರೋಮಾಂಚನಕಾರಿ ಅನುಭವವನ್ನು ನೀಡುವುದಲ್ಲದೆ, ಹಚ್ಚ ಹಸಿರಿನ ಮತ್ತು ಸ್ಥಳದ ಸೌಂದರ್ಯದ ಮನಮೋಹಕ ನೋಟಗಳನ್ನು ನೀಡುತ್ತದೆ. ಇಂತಹ ಪರಿಸರವನ್ನು ಹೊಂದಿರುವ ಹೊಗೆನಕಲ್ ಅನ್ನು ಅನೇಕ ಚಿತ್ರ ನಿರ್ಮಾಪಕರು ಅನೇಕ ರೊಮ್ಯಾಂಟಿಕ್ ಹಾಡುಗಳಿಗೆ ಸೆಟ್ ಆಗಿ ಆರಿಸಿಕೊಳ್ಳುವುದು ವ್ಯರ್ಥವೇನಲ್ಲ.

Hogennakal -waterfalls-2

ಹೊಗೆನಕಲ್ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಹೊಗೆನಕಲ್ ನಲ್ಲಿಯ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಕಾವೇರಿ ನದಿಯಲ್ಲಿ ಕೊರಾಕಲ್ ರೈಡ್ ಹೆಚ್ಚು ಮೆಚ್ಚುಗೆ ಪಡೆದಿದೆ. ಕೊರಾಕಲ್ ಅಂದರೆ ಇಲ್ಲಿ ವಿಶೇಷವಾದ ವೃತ್ತಾಕಾರದ ಬುಟ್ಟಿ ದೋಣಿಗಳಾಗಿವೆ, ಇವುಗಳನ್ನು ಕೆಳಭಾಗದಿಂದ ನೀರು ಪ್ರವೇಶಿಸದಂತೆ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗುತ್ತದೆ. ದೋಣಿ ನಡೆಸುವವರೊಂದಿಗೆ ಒಪ್ಪಂದ ಮಾಡಿಕೊಳ್ಳಿ ಮತ್ತು ಕಾವೇರಿಯಲ್ಲಿ ಸವಾರಿ ಮಾಡಿ ಆನಂದಿಸಿ. ನೋಡಲು ಚಿಕ್ಕದಾದರೂ, ಒಂದು ದೋಣಿ 8 ಜನರನ್ನು ಸಾಗಿಸಬಲ್ಲದು.

ಆಹಾರದ ಹೊರತಾಗಿ, ಸ್ಥಳೀಯರು ಮಾಡುವ ಮಸಾಜ್‌ನ ತಾತ್ಕಾಲಿಕ ಸ್ಪಾ ಚಿಕಿತ್ಸೆಯನ್ನು ಮಾಲಿಶ್- ಕಾರನ್ಸ್ ಎಂದೂ ಕರೆಯುತ್ತಾರೆ ಇದರ ಅನುಭವವನ್ನೂ ಪಡೆಯಬಹುದಾಗಿದೆ, ಹೊಗೇನಕಲ್‌ನಲ್ಲಿರುವ ಮತ್ತೊಂದು ವಿಶಿಷ್ಟ ಆಕರ್ಷಣೆಯೆಂದರೆ, ಸ್ಥಳೀಯ ಮಕ್ಕಳು 30 ಅಡಿ ಎತ್ತರದ ಬಂಡೆಯಿಂದ ನದಿಗೆ ತಮ್ಮ ಡೈವಿಂಗ್ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ. ಇದಕ್ಕಾಗಿ ಮಕ್ಕಳು ಸಾಮಾನ್ಯವಾಗಿ ಪ್ರತಿ ಡೈವ್‌ಗೆ 5/- ಶುಲ್ಕ ವಿಧಿಸ ಬೇಕಾಗುತ್ತದೆ.

FAQ's
  • ಹೊಗೇನಕಲ್‌ಗೆ ಭೇಟಿ ನೀಡಲು ಉತ್ತಮ ಸಮಯ

    ಹೊಗೇನಕಲ್ಲು ವರ್ಷವಿಡೀ ಆಹ್ಲಾದಕರ ವಾತಾವರಣವನ್ನು ಅನುಭವಿಸುತ್ತದೆ. ಆದರೂ ಮಾನ್ಸೂನ್ ನಂತರದ ಅವಧಿಯಲ್ಲಿ ನದಿಯು ಉಕ್ಕಿ ಹರಿಯುತ್ತದೆ ಮತ್ತು ಭೇಟಿ ನೀಡಲು ಸೂಕ್ತ ಸಮಯವಾಗಿದೆ

  • ಹೊಗೆನಕಲ್ ತಲುಪುವುದು ಹೇಗೆ

    ಈ ಸ್ಥಳವನ್ನು ಎಲ್ಲಾ ಕಡೆಯಿಂದಲೂ ಉತ್ತಮವಾಗಿ ಸಂಪರ್ಕಿಸಬಹುದಾಗಿದೆ.

     

     

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X