Search
  • Follow NativePlanet
Share
» »ಇದು ಅಪ್ಸರೆಯರ ಲೋಕ: ದೇವಲೋಕದ ಅಪ್ಸರೆಯರಿದ್ದಾರಂತೆ ಇಲ್ಲಿ

ಇದು ಅಪ್ಸರೆಯರ ಲೋಕ: ದೇವಲೋಕದ ಅಪ್ಸರೆಯರಿದ್ದಾರಂತೆ ಇಲ್ಲಿ

ಅಪ್ಸರೆಯರ ಬಗ್ಗೆ ನೀವು ಕೇಳಿರಬಹುದು. ಸಿನಿಮಾದಲ್ಲಿ, ಟಿವಿಯಲ್ಲಿ ಅಪ್ಸರೆಯರನ್ನು ಯಾವ ರೀತಿ ತೋಡಿಸುತ್ತಾರೆ. ಅದೇ ಚಿತ್ರಣ ನಮ್ಮ ಮನಸ್ಸಿನಲ್ಲೂ ಇರುತ್ತದೆ. ಅಪ್ಸರೆಯರೆಂದರೆ ದೇವಲೋಕದ ಸುಂದರಿಯರು ಎನ್ನುವುದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿದೆ. ಆದರೆ ಈ ಅಪ್ಸರೆಯರು ಹೇಗಿರುತ್ತಾರೆ. ಎಲ್ಲಿ ಇರುತ್ತಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ಅಪ್ಸರ ಲೋಕ

ಅಪ್ಸರ ಲೋಕ

ಸಮುದ್ರಮಟ್ಟದಿಂದ 10 ಸಾವಿರ ಫೀಟ್ ಎತ್ತರದಲ್ಲಿದೆ ಅಪ್ಸರ ಲೋಕ . ನಾವಿಂದು ಅಪ್ಸರ ಲೋಕದ ಅಪ್ಸರೆಯರ ಬಗ್ಗೆ ತಿಳಿಸಲಿದ್ದೇವೆ. ಹಿಮಾಲಯದ ಪರ್ವತದ ಕೈಟ್‌ ಪರ್ವತದಲ್ಲಿ ಈ ಅಪ್ಸರೆಯರು ವನದೇವಿಯ ರೂಪದಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತದೆ.

ಇಲ್ಲಿ ಪುರುಷರು ಮಹಿಳೆಯಾಗಿ ಬದಲಾದ್ರೆ ಮಾತ್ರ ಒಳ್ಳೆ ನೌಕರಿ ಸಿಗುತ್ತಂತೆ!ಇಲ್ಲಿ ಪುರುಷರು ಮಹಿಳೆಯಾಗಿ ಬದಲಾದ್ರೆ ಮಾತ್ರ ಒಳ್ಳೆ ನೌಕರಿ ಸಿಗುತ್ತಂತೆ!

ಕೈಟ್ ಪರ್ವತ

ಕೈಟ್ ಪರ್ವತ

ಭೃಂಗ ನದಿಯ ತೀರದಲ್ಲಿನ ಕೈಟ್ ಪರ್ವತದಲ್ಲಿ ಅಪ್ಸರೆಯರು ಬಂದು ಹೋಗುತ್ತಾ ಇರುತ್ತಾರೆ ಎನ್ನಲಾಗುತ್ತದೆ. ಹಿಮಾಲಯದಲ್ಲಿ ಮುಂದೆ ಸಾಗುತ್ತಾ ಹೋದಂತೆ ಕಾಡಿನ ಮಧ್ಯೆ ಹಿಮಾಲಯದ ತುದಿಗಳು ಕಾಣಸಿಗುತ್ತದೆ. ಹೀಗೆ ಮುಂದುವರೆದಾದ ಗುಂಬಜ್ ರೂಪದಲ್ಲಿ ಒಂದು ವಿಶಾಲವಾದ ಪರ್ವತ ಕಾಣಸಿಗುತ್ತದೆ. ಸುತ್ತಮುತ್ತಲಿನ ಪ್ರದೇಶಗಳು ಇಲ್ಲಿಂದ ಕಾಣಸಿಗುತ್ತದೆ. ಪ್ರಮುಖ ಹಿಮಶಿಖರಗಳಾದ ಯಮುನೋತ್ರಿ, ತ್ರಿಶೂಲ್, ಗಂಗೋತ್ರಿ, ಸ್ವರ್ಗರೋಹಿಣಿ ಮುಂತಾವುಗಳು ಸೇರಿವೆ. ಈ ಪರ್ವತ ಶೀಖರಗಳಲ್ಲಿ 9 ಅಪ್ಸರೆಯರು ನೆಲೆಸಿದ್ದಾರಂತೆ.

ವನದೇವಿ

ವನದೇವಿ

ಇಲ್ಲಿನ ಮಂದಿರದಲ್ಲಿ ಪ್ರತಿವರ್ಷ ಜೂನ್ ತಿಂಗಳಲ್ಲಿ ಉತ್ಸವ ನಡೆಯುತ್ತದೆ. ಈ ಉತ್ಸವವನ್ನು ಈ ವನದೇವಿಗಳಿಗಾಗಿಯೇ ಆಯೋಜಿಸಲಾಗುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಸಾಕಷ್ಟು ಜನರು ಆಗಮಿಸುತ್ತಾರೆ. ಪ್ರಾಕೃತಿಕ ಆಪತ್ತಿನಿಂದ ಕಾಪಾಡುವ ಉದ್ದೇಶದಿಂದ ವನದೇವಿಯನ್ನು ಪೂಜಿಸಲಾಗುತ್ತದೆ.

ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!

 ಅಪ್ಸರೆಯರ ಬೆಟ್ಟ

ಅಪ್ಸರೆಯರ ಬೆಟ್ಟ

ದಿನದಲ್ಲಿ ಬಿಳಿ ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದ ಅಪ್ಸರೆಯರನ್ನು ಸ್ಥಳೀಯರು ನೋಡಿದ್ದಾರಂತೆ. ಇಲ್ಲಿ ವಿಚಿತ್ರ ಶಬ್ಧಗಳಾಗುತ್ತದೆ. ಕೈ ಬಳೆ, ಕಾಲ್ಗೆಜ್ಜೆಯ ಸದ್ದು ಕೇಳಿಸುತ್ತದಂತೆ. ಸ್ವರ್ಗ ಲೋಕದ ಅಪ್ಸರೆಯನ್ನು ಹಿಮಾಲಯದಲ್ಲಿ ವನದೇವಿ ಎನ್ನುವ ಹೆಸರಿನಿಂದ ಪೂಜಿಸಲಾಗುತ್ತದೆ. ಸ್ಥಳೀಯರು ಈ ಬೆಟ್ಟವನ್ನು ಅಪ್ಸರೆಯರ ಬೆಟ್ಟ ಎಂದೂ ಹೇಳುತ್ತಾರೆ.

9 ಅಪ್ಸರೆಯರು

9 ಅಪ್ಸರೆಯರು

ಕೈಟ್ ಪರ್ವತದ ಹೆಸರು ಕೇಳುತ್ತಿದ್ದಂತೆ ಜನರು ಭಯಪಡುತ್ತಾರೆ. ಯಾರೂ ಒಂಟಿಯಾಗಿ ಬರಲು ಸಿದ್ಧರಿಲ್ಲ. ಇಂದಿಗೂ ಈ 9 ಅಪ್ಸರೆಯರು ಆ ಪರ್ವತದಲ್ಲಿ ಓಡಾಡುತ್ತಿದ್ದಾರೆ ಎನ್ನಲಾಗುತ್ತದೆ. ಅಲ್ಲಿ ಪ್ರಕೃತಿ ವಿರೋಧವಾದ ಯಾವುದೇ ಕೆಲಸ ಮಾಡುವಂತಿಲ್ಲ. ಋಷಿಕೇಶ್‌ನಿಂದ ಬಸ್‌ ಅಥವಾ ಟ್ಯಾಕ್ಸಿ ಸಿಗುತ್ತದೆ. ಅಲ್ಲಿಂದ ೫ ಕಿ.ಮಿ ನಡೆಯಬೇಕು.

ಹೊಳೆಯುವ ಬಟ್ಟೆ ಹಾಕುವಂತಿಲ್ಲ

ಹೊಳೆಯುವ ಬಟ್ಟೆ ಹಾಕುವಂತಿಲ್ಲ

ಯಾರೂ ಒಬ್ಬಂಟಿಯಾಗಿ ಹೋಗಬಾರದು. ಆ ಪರ್ವತದ ಬಳಿ ಹೊಳೆಯುವ ಬಟ್ಟೆ ಹಾಕಿಕೊಂಡರೆ , ಸುಂದರ ಪುರುಷರು ಅದರ ಬಳಿ ಹೋದರೆ ಅಪ್ಸರೆಯರು ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಂತೆ. ಕೈಟ್‌ ಪರ್ವತದಲ್ಲಿ ಭಗವತಿ ದೇವಿಯ ಮಂದಿರವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X