Search
  • Follow NativePlanet
Share
» »ಮೋಡಿ ಮಾಡುವ ಐತಿಹಾಸಿಕ ಗಡಿಯಾರ ಗೋಪುರಗಳು

ಮೋಡಿ ಮಾಡುವ ಐತಿಹಾಸಿಕ ಗಡಿಯಾರ ಗೋಪುರಗಳು

By Vijay

ಇಂದು ಸಾಕಷ್ಟು ವಿಧ ವಿಧವಾದ ಕೈಗಡಿಯಾರಗಳು, ಗೋಡೆ ಗಡಿಯಾರಗಳು ಅಷ್ಟೆ ಏಕೆ, ಸಂಚಾರಿ ದೂರವಾಣಿ ಸಾಧನಗಳ (ಮೊಬೈಲ್ ಫೋನುಗಳು) ಮೂಲಕವು ಸಮಯವನ್ನು ಕರಾರುವಕ್ಕಾಗಿ ತಿಳಿದುಕೊಳ್ಳಬಹುದು.

ಆದರೆ ಒಂದೊಮ್ಮೆ ಯೋಚಿಸಿ ಹಿಂದೆ ಅಂದರೆ 18 ನೆಯ ಶತಮಾನದ ಅಂತ್ಯದಲ್ಲಿ ಹಾಗು 19 ನೇಯ ಶತಮಾನದ ಪ್ರಾರಂಭ ಹಾಗೂ ಮಧ್ಯದಲ್ಲಿ ಸಮಯ ತಿಳಿಯುವುದು ಯಾವ ರೀತಿಯಾಗಿತ್ತೆಂದು.

ಆ ಸಮಯದಲ್ಲಿ ಗಡಿಯಾರಗಳ ಆವಿಷ್ಕಾರವಾಗಿತ್ತೇನೊ ನಿಜ. ಆದರೆ ಪ್ರತಿಯೊಬ್ಬರೂ ಗಡಿಯಾರ ಹೊಂದುವುದು ಹೆಚ್ಚು ಕಮ್ಮಿ ಅಸಾಧ್ಯವೆ ಆಗಿತ್ತು. ಹೀಗೆ ಹಲವಾರು ಪ್ರಾಂತ್ಯಗಳಲ್ಲಿ ಜನರು ತಮ್ಮ ನಿತ್ಯ ಕೆಲಸ ಪ್ರಾರಂಭಿಸಲು ತಕ್ಕ ಸಮಯವನ್ನು ತಿಳಿಯಬೇಕಾಗಿತ್ತು.

ಅದಕ್ಕೆಂದು ಪ್ರದೇಶದ ಒಂದು ನಿರ್ದಿಷ್ಟ ಸ್ಥಳದಲ್ಲಿ ಎಲ್ಲರಿಗೂ ಗೋಚರಿಸುವಂತೆ ದೊಡ್ಡ ಗೋಪುರಗಳನ್ನು ಉದ್ದವಾಗಿ ಹಾಗೂ ಚೌಕಾಕಾರದಲ್ಲಿ ನಿರ್ಮಿಸಿ ಅದರ ನಾಲ್ಕು ಮುಖಗಳಲ್ಲಿ ಗಡಿಯಾರಗಳನ್ನು ಅಳವಡಿಸಲಾಗುತ್ತಿತ್ತು. ಅವುಗಳನ್ನೆ ಗಡಿಯಾರ ಗೋಪುರಗಳೆಂದು ಕರೆಯಲಾಗುತ್ತದೆ.

ನಿಮಗಿಷ್ಟವಾಗಬಹುದಾದ : ಕರ್ನಾಟಕದ ಭವ್ಯ ದೇವಾಲಯಗಳ ಆಕರ್ಷಕ ಗೋಪುರಗಳು

ಮೊದ ಮೊದಲು ಗೋಪುರಗಳು ಮಾತ್ರವೆ ಇದ್ದು ಪ್ರತಿ ಘಂಟೆಗೆ ಅದರಲ್ಲಿ ತಾಕಿಸಲಾಗಿರುವ ಘಂಟೆಯಿಂದ ಶಬ್ದ ಹೊರಡುತ್ತಿದ್ದವು. ನಂತರ ಗಡಿಯಾರದ ಮುಖ ಭಾಗವನ್ನು ಅಳವಡಿಸಲಾಯಿತು.

ಆ ಸಮಯದಲ್ಲಿ ಇವು ಮಹತ್ವದ ರಚನೆಗಳಾಗಿದ್ದರೂ ಇಂದು ಕೇವಲ ಐತಿಹಾಸಿಕವಾಗಿ ಮಹತ್ವ ಪಡೆದಿರುವ, ಅಂದಿನ ಸಮಯದ ವೈಭವ ನೆನೆಸಿಕೊಳ್ಳುವ, ಸುಂದರ ಕಲಾತ್ಮಕತೆಯಿಂದ ಕೂಡಿರುವ ಪ್ರವಾಸಿ ಆಕರ್ಷಣೆಗಳಾಗಿವೆ. ಅಷ್ಟೆ ಅಲ್ಲ ಕೆಲ ನಗರಗಳ ಪ್ರಮುಖ ಹೆಗ್ಗುರುತು ಅಥವಾ "ಲ್ಯಾಂಡ್ ಮಾರ್ಕ್" ಗಳಾಗಿಯೂ ಇವು ಇಂದು ಕಾರ್ಯನಿರ್ವಹಿಸುತ್ತಿವೆ.

ಭಾರತದಲ್ಲಿ ನೂರಾರು ಸಮ್ಖ್ಯೆಯಲ್ಲಿ ಇಂತಹ ಗಡಿಯಾರ ಗೋಪುರಗಳಿದ್ದು, ಪ್ರಸ್ತುತ ಲೇಖನದಲ್ಲಿ ಐತಿಹಾಸಿಕವಾಗಿ ಮಹತ್ವ ಪಡೆದಿರುವ ಕೆಲವು ಆಯ್ದ ಗೋಪುರಗಳ ಕುರಿತು ತಿಳಿಸಲಾಗಿದೆ. ಈ ಸ್ಳಗಳಿಗೆ ತೆರಳಿದಾಗ ಈ ಸುಂದರ, ಕಲಾತ್ಮಕತೆಯಿಂದ ಕೂಡಿರುವ ಈ ಗಡಿಯಾರ ಗೋಪುರಗಳಿಗೆ ಭೇಟಿ ನೀಡಲು ಮರೆಯದಿರಿ.

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ದಕ್ಷಿಣ ಮುಂಬೈನ ಮುಂಬೈ ವಿಶ್ವವಿದ್ಯಾಲಯದ ಆವರಣದಲ್ಲಿರುವ ಈ ಸುಂದರ ಗಡಿಯಾರ ಗೋಪುರವು ರಾಜಾಬಾಯಿ ಗಡಿಯಾರ ಗೋಪುರ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. 1878 ರಲ್ಲಿ ಪೂರ್ಣಗೊಂಡ ಈ ರಚನೆಯ ವಿನ್ಯಾಸವನ್ನು ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್ ಅವರು ಮಾಡಿದ್ದು ಲಂಡನ್ನಿನ ಪ್ರಖ್ಯಾತ ಬಿಗ್ ಬೆನ್ ಗೋಪುರದಿಂದ ಸ್ಫೂರ್ತಿ ಪಡೆದಿದೆ. ಇದರ ಎತ್ತರ 280 ಅಡಿಗಳು. ಇಂದು ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ಸಂಗಿತ ರಾಗವನ್ನು ಹೊರಹೊಮ್ಮಿಸುತ್ತದೆ.

ಚಿತ್ರಕೃಪೆ: Nikkul

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಸಿಕಂದರಾಬಾದ್ ಗಡಿಯಾರ ಗೋಪುರ: ತೆಲಂಗಾಣದ ರಾಜಧಾನಿ ನಗರವಾದ ಹೈದರಾಬಾದಿನ ಸಿಕಂದರಾಬಾದ್ ಪ್ರದೇಶದಲ್ಲಿ ಈ ಸುಂದರವಾದ ಗೋಪುರವಿದೆ. 1897 ರಲ್ಲಿ ಉದ್ಘಾಟನೆಗೊಂಡ 120 ಅಡಿಗಳಷ್ಟು ಎತ್ತರದ ಈ ಗಡಿಯಾರ ಗೋಪುರವು ಇಂದು ಪಾರಮ್ಪರಿಕ ತಾಣವಾಗಿ ಘೋಷಿಸಲ್ಪಟ್ಟಿದೆ. ಸುಂದರವಾದ ಉದ್ಯಾನವೊಂದರಲ್ಲಿ ನಿರ್ಮಿತವಾಗಿರುವ ಈ ಗೋಪುರವು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Bhaskaranaidu

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಹುಸೈನಾಬಾದ್ ಗಡಿಯಾರ ಗೋಪುರ : ಉತ್ತರಪ್ರದೇಶದ ರಾಜಧಾನಿ ನಗರವಾದ ಲಖನೌನ ಹುಸೈನಾಬಾದ್ ಪ್ರದೇಶದಲ್ಲಿ ಈ ಗೋಪುರವಿದೆ. 1881 ರಲ್ಲಿ ನವಾಬ್ ನಾಸಿರ್ ಉದ್ ದಿನ್ ಹೈದರ್ ರಾಜನಿಂದ ಈ ಗೋಪುರವು ನಿರ್ಮಿಸಲ್ಪಟ್ಟಿದೆ. 219 ಅಡಿಗಳಷ್ಟು ಎತ್ತರದ ಈ ಗಡಿಯಾರ ಗೋಪುರವು ನಗರದ ಪ್ರಖ್ಯಾತ ಸ್ಥಳವಾದ ರುಮಿ ದರ್ವಾಜಾ ಪಕ್ಕದಲ್ಲಿ ಸ್ಥಿತವಿದ್ದು ವಿಕ್ಟೋರಿಅಯ್ನ್ ಹಾಗೂ ಗೋಥಿಕ್ ಎರಡೂ ಬಗೆಯ ವಾಸ್ತುಶೈಲಿಯನ್ನು ಒಳಗೊಂಡಿದೆ. ಅಂದಿನ ಅವಧ್ ಪ್ರಾಂತ್ಯದ ಲೆಫ್ಟಿನೆಂಟ್ ಜನರಲ್ ಆಗಿದ್ದ ಸರ್ ಜಾರ್ಜ್ ಕೂಪರ್ ಲಖನೌಗೆ ಪ್ರಥಮ ಬಾರಿಗೆ ಬಂದಿದ್ದ ಗೌರವಾರ್ಥವಾಗಿ ಇದು ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Asitjain

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಮೇತನ್ ಮಣಿ : ಇದೊಂದು ವಿಶಿಷ್ಟವಾದ ಗಡಿಯಾರ ಗೋಪುರವಾಗಿದೆ. ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಾಲಯದ ಬಳಿ ಪುರಾತನ ಕೋಟೆಯೊಂದರಲ್ಲಿ ಇದನ್ನು ಕಾಣಬಹುದು. ಗಡಿಯಾರದ ಚಟುವಟಿಕೆಯು ಸಂಕೀರ್ಣವಾದ ರಾಟೆಯ ವ್ಯವಸ್ಥೆಯೊಂದನ್ನು ಒಳಗೊಂಡಿದ್ದು ಗಡಿಯಾರದ ಮುಖದ ಮೇಲೆ ಗಡ್ಡ ಬಿಟ್ಟ ಒಬ್ಬ ಮನುಷ್ಯನ ಮುಖ ಹಾಗೂ ಅಕ್ಕ ಪಕ್ಕಗಳಲ್ಲಿ ಎರಡು ಟಗರುಗಳಿವೆ. ಪ್ರತಿ ಘಂಟೆಗೊಮ್ಮೆ ಇದು ಸಮ್ಗೀತದ ಶಬ್ದ ಹೊರಡಿಸಿದಾಗ ಆ ಟಗರುಗಳು ಮನುಷ್ಯನ ಮುಖದ ಗಲ್ಲಗಳನ್ನು ಚುಂಬಿಸುವಂತೆ ಚಲಿಸುತ್ತವೆ.

ಚಿತ್ರಕೃಪೆ: Jithindop

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಚಿನ್ನಕ್ಕಾಡಾ ಗಡಿಯಾರ ಗೋಪುರ : ಕೇರಳದ ಕೊಲ್ಲಂ ಪಟ್ಟಣದಲ್ಲಿದೆ ಈ ಚಿಕ್ಕ ಗಡಿಯಾರ ಗೋಪುರ. ಇದು ಭೌತಿಕವಾಗಿ ಇತರೆ ಗಡಿಯಾರ ಗೋಪುರಗಳ ಮುಂದೆ ಚಿಕ್ಕದಾಗಿ ಕಂಡರೂ ಇದರ ಕೀರ್ತಿ ಅಪಾರ. ಅಂದಿನ ಕೇರಳದಲ್ಲಿದ್ದ ತಿರುವಾಂಕೂರು ಸಾಮ್ರಾಜ್ಯದ ಮೊದಲ ಗಡಿಯಾರ ಗೋಪುರ ಇದಾಗಿತ್ತು. ಅಲ್ಲದೆ ಕೊಲ್ಲಂ ಪಟ್ಟಣದ ಅತಿ ಪ್ರಮುಖ ಹೆಗ್ಗುರುತಾಗಿ ಇಂದು ಈ ಗೋಪುರ ಸ್ಥಾನಮಾನ ಪಡೆದಿದೆ.

ಚಿತ್ರಕೃಪೆ: Drajay1976

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಘಂಟಾ ಘರ್ : ರಾಜಸ್ಥಾನದ ಜೋಧಪುರ ಪಟ್ಟಣದಲ್ಲಿದೆ ಈ ಪ್ರಸಿದ್ಧ ಗಡಿಯಾರ ಗೋಪುರ. ಇದನ್ನು ರಾಜಸ್ಥಾನದ ಗಡಿಯಾರ ಗೋಪುರ ಎಂತಲು ಸಹ ಕರೆಯಲಾಗುತ್ತದೆ. ಮಹಾರಾಜಾ ಸರ್ದಾರ್ ಸಿಂಗ್ ನಿಂದ ಈ ಗೋಪುರ ನಿರ್ಮಿಸಲ್ಪಟ್ಟಿದ್ದು ಪ್ರಸ್ತುತ ಇದು ಸರ್ದಾರ್ ಮಾರುಕಟ್ಟೆ ಅಥವಾ ಘಂಟಾ ಘರ್ ಮಾರುಕಟ್ಟೆ ಪ್ರದೇಶದಲ್ಲಿದೆ. ಈ ಮಾರುಕಟ್ಟೆ ಪ್ರದೇಶವು ಜೋಧಪುರದಲ್ಲೆ ಅತ್ಯಂತ ಜನಪ್ರೀಯ ಸ್ಥಳವಾಗಿದೆ.

ಚಿತ್ರಕೃಪೆ: Ramesh Thadani

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಕಾಚಿಗುಡಾ ರೈಲು ನಿಲ್ದಾಣ ಗಡಿಯಾರ ಗೋಪುರ : 1916 ರಲ್ಲಿ ನಿರ್ಮಿಸಲ್ಪಟ್ಟ ಹೈದರಾಬಾದಿನ ಕಚಿಗುಡಾ ರೈಲು ನಿಲ್ದಾಣದ ಮುಖ್ಯ ರಚನೆಯ ಮೇಲೆ ಸ್ಥಿತವಿರುವ ಈ ಗಡಿಯಾರ ಗೋಪುರವು ಗತಿಸಿ ಹೋದ ಇತಿಹಾಸದ ವೈಭವವನ್ನು ಮರುಕಳಿಸುತ್ತದೆ.

ಚಿತ್ರಕೃಪೆ: World8115

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಚೆನ್ನೈ ಸೆಂಟ್ರಲ್ : ಚೆನ್ನೈ ನಗರದ ಪ್ರಮುಖ ಕೇಂದ್ರಿಯ ರೈಲು ನಿಲ್ದಾಣದ ಮೆಲಿರುವ ಗಡಿಯಾರ ಗೋಪುರವು ಸಾಕಷ್ಟು ಜನರನ್ನು ತನ್ನ ವೈಭವಯುತ ವಾಸ್ತು ಶೈಲಿಯಿಂದ ಆಕರ್ಷಿಸುತ್ತದೆ.

ಚಿತ್ರಕೃಪೆ: wikipedia

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಶ್ರೀಮಂತ ಇತಿಹಾಸ ಹೊಂದಿರುವ ಬೆಂಗಳೂರು ವಿಶ್ವ ವಿದ್ಯಾಲಯದೊಳಗಿನ ಗಡಿಯಾರ ಗೋಪುರ.

ಚಿತ್ರಕೃಪೆ: Blueyonder1978

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ವಿರಾಜಪೇಟೆ ಗಡಿಯಾರ ಗೋಪುರ : ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ಈ ಗಡಿಯಾರ ಗೋಪುರವು ಪಟ್ಟಣದ ಪ್ರಮುಖ ಹೆಗ್ಗುರುತಾಗಿದೆ. 1911 ರಲ್ಲಿ ಐದನೇಯ ಕಿಂಗ್ ಜಾರ್ಜ್ ನ ದೆಹಲಿ ದರ್ಬಾರಿನಲ್ಲಿ ಪಟ್ಟಾಭಿಷೇಕದ ನಂತರ ಅದರ ನೆನಪಿನಾರ್ಥವಾಗಿ ಈ ಗಡಿಯಾರ ಗೋಪ್ರವನ್ನು ಇಲ್ಲಿ 1915 ರಲ್ಲಿ ನಿರ್ಮಿಸಲಾಯಿತು. ಇತಿಹಾಸ ಪ್ರಿಯ ಪ್ರವಾಸಿಗರಿಗೆ ಇದೊಂದು ಆಕರ್ಷಣೀಯ ಸ್ಥಳವಾಗಿದೆ.

ಚಿತ್ರಕೃಪೆ: Shyamal

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಗುಜರಾತ್ ರಾಜ್ಯದ ಅಹ್ಮದಾಬಾದಿನಲ್ಲಿರುವ ಗುಜರಾತ್ ವಿಶ್ವ ವಿದ್ಯಾಲಯದ ಗಡಿಯಾರ ಗೋಪುರ.

ಚಿತ್ರಕೃಪೆ: Jigar Brahmbhatt

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಮುತಿಯಾಲ್ಪೆಟ್ ಗಡಿಯಾರ ಗೋಪುರ : ಪುದುಚೆರಿ ಅಥವಾ ಪಾಂಡಿಚೆರಿಯ ಮುತಿಯಾಲ್ಪೇಟ್ ಪ್ರದೇಶದ ಗಾಮ್ಧಿ ರಸ್ತೆಯಲ್ಲಿರುವ ಆರು ಭುಜಗಳ ಈ ಗಡಿಯಾರ ಗೋಪುರವು ಪ್ರದೇಶದ ಪ್ರಖ್ಯಾತ ಹೆಗ್ಗುರುತಾಗಿದೆ. ಹಿಂದೆ ಪೋರ್ಚುಗೀಸರು, ಫ್ರೆಂಚರು, ಆಂಗ್ಲರು ಆಳಿದ ವೈಭವವನ್ನು ಸಾರುತ್ತದೆ ಈ ಗಡಿಯಾರ ಗೋಪುರ.

ಚಿತ್ರಕೃಪೆ: Jothipazhani Nagarajan

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಪಂಜಾಬಿನ ಅಮೃತಸರದಲ್ಲಿರುವ ಸುವರ್ಣ ಮಂದಿರ ಅಥವಾ "ಗೋಲ್ಡನ್ ಟೆಂಪಲ್" ಸಿಖ್ಖರ ಪವಿತ್ರ ಆಲಯವಾಗಿದೆ. ಅಲ್ಲದೆ ಅನ್ಯ ಧರ್ಮಿಯರೂ ಸಹ ಇಲ್ಲಿ ಭೇಟಿ ನೀಡಬಹುದಾಗಿದ್ದು ಮಂದಿರದ ಒಂದು ಭಾಗವಾಗಿರುವ ಗಡಿಯಾರ ಗೋಪುರವು ನೋಡುಗರ ಮನ ಸೆಳೆಯುತ್ತದೆ.

ಚಿತ್ರಕೃಪೆ: Ppyoonus

ಸುಂದರ ಗಡಿಯಾರ ಗೋಪುರಗಳು;

ಸುಂದರ ಗಡಿಯಾರ ಗೋಪುರಗಳು;

ಉತ್ತರಾಖಂಡದಲ್ಲಿರುವ ಹರಿದ್ವಾರವು ದೇಶದಲ್ಲಿ ಭೇಟಿ ನೀಡಬೇಕಾದ ಪ್ರಮುಖ ಧಾರ್ಮಿಕ ಸ್ಥಳಗಳ ಪೈಕಿ ಒಂದಾಗಿದೆ. ಅದರಲ್ಲೂ ವಿಶೇಷವಾಗಿ ಇಲ್ಲಿರುವ ಹರ್ ಕಿ ಪೌರಿ ಸ್ಥಳವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಇಲ್ಲಿರುವ ಗಡಿಯಾರ ಗೋಪುರವು ನೆರೆದಿರುವ ಭಕ್ತ ಸಮೂಹ ಹಾಗೂ ಪ್ರವಾಸಿಗರಿಗೆ ಒಂದು ವಿಶಿಷ್ಟ ಅನುಭವವನ್ನು ಕರುಣಿಸುತ್ತದೆ.

ಚಿತ್ರಕೃಪೆ: mckaysavage

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X