Search
  • Follow NativePlanet
Share
» »ಜೈಪುರದಿಂದ ಫತೇಪುರ್ ಸಿಕ್ರಿಗೆ ಐತಿಹಾಸಿಕ ಪ್ರವಾಸ ಮಾಡೋಣ

ಜೈಪುರದಿಂದ ಫತೇಪುರ್ ಸಿಕ್ರಿಗೆ ಐತಿಹಾಸಿಕ ಪ್ರವಾಸ ಮಾಡೋಣ

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಒಂದು ಐತಿಹಾಸಿಕ ಸ್ಥಳವು ಯಾವಾಗಲೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಎಂದಾದರೆ ಅದು ಖಚಿತವಾಗಿಯೂ ಫತೇಪುರ್ ಸಿಕ್ರಿ. ಅಲ್ಲದೆ ಬೇರೆ ಯಾವುದೂ ಆಗಿರಲು ಸಾಧ್ಯವಿಲ್ಲ. ಗುಜರಾತಿನ ಮೇಲೆ ತನ್ನ ವಿಜಯದ ನಂತರ ಮೊಘಲರ ಚಕ್ರಾಧಿಪತಿಯಾದ ಅಕ್ಬರನಿಂದ ಈ ನಗರವು 16ನೇ ಶತಮಾನದಲ್ಲಿ ಸ್ಥಾಪಿತವಾಯಿತು . ಈ ಪ್ರಾಚೀನ ನಗರವು ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸಿದೆ. ಈ ನಗರದ ಹೆಸರನ್ನು ಸಣ್ಣ ಹಳ್ಳಿಯಾಗಿದ್ದ ಫತೇಪುರ್ ಸಿಕ್ರಿ ನಗರಕ್ಕೆ ಇಡಲಾಯಿತು. ಇಂದು ಈ ನಗರವು ಪ್ರತೀವರ್ಷ ಜಗತ್ತಿನಾದ್ಯಂತದ ಲಕ್ಷಾಂತರ ಪ್ರವಾಸಿಗರಿಂದ ಅದರಲ್ಲೂ ವಿಶೇಷವಾಗಿ ಇತಿಹಾಸ ಪ್ರಿಯರಿಂದ ಭೇಟಿ ಕೊಡಲ್ಪಡುತ್ತದೆ.

ಫತೇಪುರ್ ಸಿಕ್ರಿಗೆ ಭೇಟಿ ನೀಡಲು ಸೂಕ್ತವಾದ ಸಮಯ

ಫತೇಪುರ್ ಸಿಕ್ರಿಗೆ ಭೇಟಿ ನೀಡಲು ಸೂಕ್ತವಾದ ಸಮಯ

PC: Diego Delso

ಫತೇಪುರ್ ಸಿಕ್ರಿಯ ಪ್ರದೇಶವು ವಿಪರೀತ ರೀತಿಯ ತಾಪಮಾನವನ್ನು ಅನುಭವಿಸುತ್ತದೆ. ಆದುದರಿಂದ ಇಲ್ಲಿ ಚಳಿಗಾಲವು ತಂಪಾಗಿದ್ದು ಬೇಸಿಗೆಯು ಬಿಸಿಯಾಗಿರುತ್ತದೆ. ಆದುದರಿಂದ ಈ ಐತಿಹಾಸಿಕ ಪಟ್ಟಣಕ್ಕೆ ಭೇಟಿ ಕೊಡಲು ಉತ್ತಮವಾದ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳ ಕೊನೆಯವರೆಗೆ. ಆದರೂ ಈ ಪಟ್ಟಣವು ಜಗತ್ತಿನಾದ್ಯಂತದ ಪ್ರವಾಸಿಗರಿಂದ ವರ್ಷವಿಡೀ ತುಂಬಿ ತುಳುಕುತ್ತಿರುತ್ತದೆ.

ಜೈಪುರ್ ನಿಂದ ಫತೇಪುರ್ ಸಿಕ್ರಿಗೆ ತಲುಪುವುದು ಹೇಗೆ ?

ಜೈಪುರ್ ನಿಂದ ಫತೇಪುರ್ ಸಿಕ್ರಿಗೆ ತಲುಪುವುದು ಹೇಗೆ ?

PC: Ziaur Rahman

ವಾಯುಮಾರ್ಗದ ಮೂಲಕ : ಫತೇಪುರ್ ಸಿಕ್ರಿಗೆ ವಿಮಾನದಲ್ಲಿ ಹೋಗಬೇಕೆಂದರೆ ಆಗ್ರಾ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ ಮತ್ತು ಅಲ್ಲಿಂದ ಬಾಡಿಗೆ ವಾಹನ ಅಥವಾ ಬಸ್ಸಿನ ಮೂಲಕ ಫತೇಪುರ್ ಸಿಕ್ರಿಗೆ ಪ್ರಯಾಣ ಮಾಡಬಹುದಾಗಿದೆ. ವಿಮಾನ ನಿಲ್ದಾಣ ಮತ್ತು ಈ ನಗರದ ಅಂತರ ಕೇವಲ 35 ಕಿ.ಮೀ ಆಗಿದ್ದು ವಿಮಾನ ನಿಲ್ದಾಣದಿಂದ ಈ ಗಮ್ಯಸ್ಥಾನವನ್ನು ತಲುಪಬೇಕಾದರೆ ಸುಮಾರು 1 ಗಂಟೆಗಳ ಸಮಯ ಬೇಕಾಗುವುದು.

ರೈಲಿನ ಮೂಲಕ : ಫತೇಪುರ್ ಸಿಕ್ರಿಯಲ್ಲಿ ತನ್ನದೇ ಆದ ರೈಲ್ವೇ ನಿಲ್ದಾಣವಿಲ್ಲವಾದುದರಿಂದ ನೀವು ಆಗ್ರಾ ರೈಲ್ವೇ ನಿಲ್ದಾಣಕ್ಕೆ ಪ್ರಯಾಣ ಮಾಡಬೇಕಾಗುತ್ತದೆ. ನಂತರ ಅಲ್ಲಿಂದ ಬಾಡಿಗೆ ವಾಹನ ಅಥವಾ ಬಸ್ಸಿನ ಮೂಲಕ ಫತೇಪುರ್ ಸಿಕ್ರಿಗೆ ಪ್ರಯಾಣ ಮಾಡಬಹುದಾಗಿದೆ.

ರಸ್ತೆ ಮೂಲಕ : ಉತ್ತಮವಾಗಿ ನಿರ್ವಹಿಸಲ್ಪಡುವ ರಸ್ತೆ ಸಂಪರ್ಕ ಜಾಲವನ್ನು ಹೊಂದಿರುವ ಫತೇಪುರ್ ಸಿಕ್ರಿಯನ್ನು ರಸ್ತೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ಮಾರ್ಗ 1: ಜೈಪುರ - ದೌಸಾ-ಭತ್ರಾಪುರ - ಫತೇಪುರ್ ಸಿಕ್ರಿ

ಮಾರ್ಗ 2: ಜೈಪುರ್- ದೌಸಾ- ಭರತ್ ಪುರ್- ಫತೇಪುರ್ ಸಿಕ್ರಿ

ಬೇರೆ ಮಾರ್ಗಗಳಿಗೆ ಹೋಲಿಸಿದರೆ ಮಾರ್ಗ ಒಂದರಲ್ಲಿ ಪ್ರಯಾಣ ಮಾಡಿದರೆ ಗಮ್ಯಸ್ಥಾನ ತಲುಪಲು ಎರಡು ಗಂಟೆಗಳಷ್ಟು ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ. ಮಾರ್ಗ . 1ರಲ್ಲಿ ಪ್ರಯಾಣ ಮಾಡಿದಲ್ಲಿ ನಿಮ್ಮ ಗಮ್ಯಸ್ಥಾನ ತಲುಪಲು 3 ಗಂಟೆ 30 ನಿಮಿಷಗಳ ಕಾಲ ಬೇಕಾಗುವುದು. ಈ ಮಾರ್ಗದಲ್ಲಿ ಪ್ರಯಾಣಿಸುವಾಗ ಇಲ್ಲಿಯ ಕೆಲವು ಸ್ಥಳಗಳಿಗೆ ಭೇಟಿ ಕೊಡಿ ಮತ್ತು ಅಲ್ಲಿಯ ಸೌಂದರ್ಯತೆಯ ಅನ್ವೇಷಣೆ ಮಾಡಿ.

ದೌಸಾ

ದೌಸಾ

PC: Chetan

ಫತೇಪುರ್ ಸಿಕ್ರಿಯಿಂದ ಸುಮಾರು 147 ಕಿ.ಮೀ ಹಾಗೂ ಜೈಪುರ್ ನಿಂದ ಸುಮಾರು 59 ಕಿ.ಮೀ ಅಂತರದಲ್ಲಿರುವ ದೌಸಾ ಒಂದು ಐತಿಹಾಸಿಕ ನಗರವಾಗಿದ್ದು ಈ ನಗರಕ್ಕೆ ಭಾರತದ ಮಧ್ಯಕಾಲೀನ ಅವಧಿಯಷ್ಟು ಹಿಂದಿನ ಇತಿಹಾಸವಿದೆ. ಆದುದರಿಂದ ಇದು ಅನೇಕ ಐತಿಹಾಸಿಕ ಸ್ಮಾರಕಗಳನ್ನು ಮತ್ತು ಪ್ರಾಚೀನ ದೇವಾಲಯಗಳನ್ನು ತನ್ನ ಗಡಿಯೊಳಗೆ ಹೊಂದಿದೆ.

ಇಲ್ಲಿ ಭೇಟಿ ಕೊಡಬಹುದಾದ ಸ್ಥಳಗಳಲ್ಲಿ ಅಭಾನೇರಿ , ಭಂದಾರೇಜ್, ಶ್ರೀಪಪ್ಲಾಜ್ ಮಾತಾ ಮಂದಿರ್, ಮತ್ತು ನೀಲ್ಕಾತ್ ಮತ್ತು ಪಂಚ್ ಮಹಾದೇವ್ ಇತ್ಯಾದಿಗಳು ಸೇರಿವೆ. ನಿಮಗೆ ಕಡಿಮೆ ಪ್ರಚಾರದಲ್ಲಿರುವ ಐತಿಹಾಸಿಕ ಸ್ಥಳಗಳ ಅನ್ವೇಷಣೆ ಮಾಡುವ ಹವ್ಯಾಸ ಇದ್ದಲ್ಲಿ, ಫತೇಪುರ್ ಸಿಕ್ರಿ ಮಾರ್ಗದಲ್ಲಿಯ ದೌಸಾ ನೀವು ಭೇಟಿ ಕೊಡಲು ಯೋಗ್ಯವಾದ ಸ್ಥಳವೆನಿಸಿದೆ.

ಭರತ್ಪುರ್

ಭರತ್ಪುರ್

PC:Bornav27may

ಗೋಲ್ಡನ್ ಪ್ರವಾಸೋದ್ಯಮದ ತಿಕೋಣ ಮಾರ್ಗದಲ್ಲಿರುವ ಭರತ್ ಪುರ್ ನಲ್ಲಿ ದೇಶದ ಎಲ್ಲಾ ಕಡೆಯ ಮತ್ತು ಎಲ್ಲಾ ತರಹದ ಪ್ರಯಾಣಿಕರು ಆಸೆ ಪಡುವಂತಹ ವಿಷಯಗಳನ್ನು ತನ್ನಲ್ಲಿ ಒಳಗೊಂಡಿದೆ. ಇಲ್ಲಿ ಕೋಟೆಗಳು ಮತ್ತು ಸರೋವರಗಳಿಂದ ರಾಷ್ಟ್ರೀಯ ಉದ್ಯಾನವನಗಳ ವರೆಗೆ ಪ್ರಯಾಣಿಕರನ್ನು ತೃಪ್ತಿಪಡಿಸುವಂತಹ ಅನೇಕ ಸ್ಥಳಗಳಿವೆ.

ಈ ಸ್ಥಳವು ಪ್ರಮುಖವಾದ ಮತ್ತು ಜನಪ್ರಿಯವಾಗಿರುವ ಹಾಗೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿರುವ ಕಿಯೋಲಾಡಿಯೋ ರಾಷ್ಟ್ರೀಯ ಉದ್ಯಾನವನ್ನು ಹೊಂದಿರುವುದಕ್ಕೆ ಪ್ರಸಿದ್ದವಾಗಿದೆ. ಅಲ್ಲದೆ ಒಂದು ಕಡೆ ನೀವು ಇಲ್ಲಿಯ ಐತಿಹಾಸಿಕ ಸ್ಮಾರಕಗಳ ದಾರಿಯಲ್ಲಿ ಸಾಗಬಹುದಾದರೆ ಇನ್ನೊಂದೆಡೆ ಇಲ್ಲಿಯ ಪ್ರಶಾಂತವಾದ ಹಾಗೂ ಸಂಯೋಜಿತವಾದ ಪ್ರಕೃತಿಯ ಮಧ್ಯೆ ತಿರುಗಾಡಬಹುದಾಗಿದೆ.

ಅನ್ವೇಷಣೆ ಮಾಡಲು ಇದೊಂದು ಸೂಕ್ತವಾದ ಸ್ಥಳವೆನಿಸುವುದಿಲ್ಲವೆ? ಇಲ್ಲಿಯ ಪ್ರಮುಖವಾದ ಸ್ಥಳಗಳಲ್ಲಿ ಭರತ್ ಪುರ ಅರಮನೆ , ಲೋಹಘರ್ ಕೋಟೆ ಮತ್ತು ಕಿಯೋಲಾಡಿಯೋ ರಾಷ್ಟ್ರೀಯ ಉದ್ಯಾನವನ ಇವು ಸೇರಿವೆ. ಭರತ್ ಪುರವು ಜೈಪುರ್ ನಿಂದ 184 ಕಿ.ಮೀ ಹಾಗೂ ಫತೇಪುರ್ ಸಿಕ್ರಿಯಿಂದ 25 ಕಿ.ಮೀ ಅಂತರದಲ್ಲಿ ನೆಲೆಸಿದೆ.

ಅಂತಿಮ ಗಮ್ಯಸ್ಥಾನ - ಫತೇಪುರ್ ಸಿಕ್ರಿ

ಅಂತಿಮ ಗಮ್ಯಸ್ಥಾನ - ಫತೇಪುರ್ ಸಿಕ್ರಿ

PC: Sanyam Bahga

ಜೈಪುರ್ ನಿಂದ 205 ಕಿ.ಮೀ ಅಂತರದಲ್ಲಿ ಫತೇಪುರ್ ಸಿಕ್ರಿಯು ನೆಲೆಸಿದೆ ಮತ್ತು ಭಾರತದ ಇತಿಹಾಸದ ಅನ್ವೇಷಣೆ ಮಾಡ ಬಯಸುವವರಿಗೆ ಇದೊಂದು ಅತ್ಯಂತ ಸೂಕ್ತವಾದ ವಾರಾಂತ್ಯದ ರಜಾದಿನದಲ್ಲಿ ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಅಷ್ಟೇ ಅಲ್ಲದೆ ಈ ಸ್ಥಳವು ವಾಸ್ತುಶಿಲ್ಪ ಶೈಲಿಯ ಬಗ್ಗೆ ಉತ್ಸಾಹವಿರುವವರನ್ನೂ ಕೂಡಾ ಸೆಳೆಯುತ್ತದೆ.

ಇಲ್ಲಿ ಸಮಾಧಿಯಿಂದ ಸ್ಮಾರಕ ಗೋಡೆಗಳವರೆಗೆ ಮತ್ತು ಕೊಳಗಳಿಂದ ಅನೇಕ ಸ್ಥಳಗಳವರೆ ಹೊಂದಿದ್ದು ಇವು ನಿಮ್ಮನ್ನು ಮೊಘಲರ ಯುಗದ ಕಡೆಗೆ ಒಮ್ಮೆ ಕರೆದೊಯ್ಯುತ್ತದೆ. ಕೆಳಗಿನ ಕೆಲವು ಸ್ಥಳಗಳು ಈ ವಿಜಯದ ನಗರಕ್ಕೆ ಪ್ರಯಾಣದ ಸಮಯದಲ್ಲಿ ಯಾವುದೇ ಪ್ರವಾಸಿಗನೂ ಕೂಡಾ ಭೇಟಿ ಕೊಡಲು ತಪ್ಪಿಸಲೇ ಬಾರದೆನ್ನುವಂತಹ ಸ್ಥಳಗಳಾಗಿವೆ.

ಬುಲಂಧ್ ದರ್ವಾಜಾ

ಬುಲಂಧ್ ದರ್ವಾಜಾ

PC: Marcin Białek

ಪ್ರಾಚೀನ ಭಾರತದ ಒಂದು ಅತ್ಯಂತ ಹೆಚ್ಚಾಗಿ ಗುರುತಿಸಲ್ಪಡುವಂತಹ ರಚನೆಗಳಲ್ಲಿ ಬುಲಂದ್ ದರ್ವಾಜ ಕೂಡಾ ಒಂದಾಗಿದ್ದು ಅನೇಕ ಕಾಲದಿಂದಲೂ ಫತೇಪುರ್ ಸಿಕ್ರಿಗೆ ಇದೊಂದು ಸಮನಾರ್ಥಕ ಪದವೆನಿಸಿರುವ ಸ್ಥಳವಾಗಿದೆ. ಆದುದರಿಂದ ಈ ಸ್ಮಾರಕದಂತಿರುವ ರಚನೆಗೆ ಭೇಟಿ ಕೊಡಲು ತಪ್ಪಿಸಲೇ ಬಾರದು ಈ ರಚನೆಯು ಸುಮಾರು 180 ಅಡಿ ಎತ್ತರದ್ದಾಗಿದೆ.

ಇದು ಫತೇಪುರ್ ಸಿಕ್ರಿ ಸಂಕೀರ್ಣಕ್ಕೆ ಒಂದು ಭವ್ಯವಾದ ಮಹಾ ಪ್ರವೇಶ ದ್ವಾರವಾಗಿದ್ದು ಮೊಘಲ್ ಚಕ್ರಾಧಿಪತಿ ಅಕ್ಬರನ ಗುಜರಾತ್ ತನ್ನ ಯಶಸ್ವೀ ಜಯದ ಸಂಕೇತವಾಗಿ ಇದನ್ನು ಕಟ್ಟಿಸಲಾಯಿತು. ಇತಿಹಾಸ ಪ್ರಿಯರ ಹೊರತಾಗಿ ಇದು ವಾಸ್ತುಶಿಲ್ಪದ ಅಭಿಮಾನಿಗಳ ಕಣ್ಣುಗಳಿಗೆ ಒಂದು ರಸದೌತಣ ನೀಡುತ್ತದೆ.

ಪಂಚ್ ಮಹಲ್

ಪಂಚ್ ಮಹಲ್

PC: Bruno Girin

ಮೊಘಲರ ಕಾಲದ ವಾಸ್ತು ಶಿಲ್ಪ ಕೌಶಲ್ಯತೆಯನ್ನು ಪ್ರತಿಬಿಂಬಿಸುವ ಇನ್ನೊಂದು ಮಹತ್ವದ ರಚನೆಯೆಂದರೆ ಅದು ಪಂಚ್ ಮಹಲ್ . ಇದು ಐದು ಅಂತಸ್ತಿನ ಅರಮನೆಯಾಗಿದೆ ಮತ್ತು ಇದು ರಾಜ ಕುಟುಂಬದ ನಿವಾಸವಾಗಿತ್ತು. ಇದು ಸೂಕ್ಷ್ಮವಾಗಿ ವಿನ್ಯಾಸಗೊಳಿಸಿದ ಮತ್ತು ದೋಷರಹಿತವಾದ ರಚನೆಯಾಗಿದೆ. ಪಂಚಮಹಲ್ ನಿಜವಾಗಿಯೂ ವಾಸ್ತುಶಿಲ್ಪ ಅದ್ಬುತವಾಗಿದ್ದು ಇದನ್ನು ಪ್ರತಿಯೊಬ್ಬ ಪ್ರವಾಸಿಗನೂ ಆಸ್ವಾದಿಸುವ ಅಗತ್ಯವಿದೆ.

ಜಾಮ ಮಸೀದಿ

ಜಾಮ ಮಸೀದಿ

PC: Diego Delso

ಐತಿಹಾಸಿಕ ದಾಖಲೆಗಳ ಪ್ರಕಾರ ಜಾಮಾ ಮಸೀದಿ ಫತೇಪುರ್ ಸಿಕ್ರಿ ಸಂಕೀರ್ಣದ ಪ್ರಥಮ ಕಟ್ಟಡಗಳಲ್ಲೊಂದಾಗಿದೆ. ಮತ್ತು ಇದನ್ನು 1971 ರಲ್ಲಿ ನಿರ್ಮಿಸಲಾಯಿತು. ಈ ಮಸೀದಿಯು ದೊಡ್ಡ ಸಭಾಂಗಣಗಳು , ಕೇಂದ್ರ ಅಂಗಣ ಮತ್ತು ಬೃಹತ್ ಪ್ರವೇಶದ್ವಾರವನ್ನು ಒಳಗೊಂಡಿದೆ.

ನೀವು ಯಾವಾಗಲೂ ಪ್ರಾಚೀನ ಸೌಂದರ್ಯತೆಗಳಿಂದ ಆಕರ್ಷಿತರಾಗುವವರಾಗಿದ್ದಲ್ಲಿ, ಸುಂದರ ಕಮಾನುಗಳು, ಅಲಂಕೃತವಾದ ಗೋಡೆಗಳು ಮತ್ತು ಚಾವಣಿಗಳು ಮತ್ತು ಅಲಂಕೃತವಾದ ಕಂಬಗಳು ಇವೆಲ್ಲವನ್ನೂ ಹೊಂದಿರುವ ಈ ಸ್ಮಾರಕ ರಚನೆಯು ನಿಮ್ಮನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತದೆ.

ಸಲೀಮ್ ಚಿಸ್ಟಿ ಯ ಸಮಾಧಿ

ಸಲೀಮ್ ಚಿಸ್ಟಿ ಯ ಸಮಾಧಿ

PC: Marcin Białek

ಬಿಳಿಯ ಮಾರ್ಬಲ್ ನಿಂದ ನಿರ್ಮಿತವಾದ ಒಂದು ಅಂತಸ್ತಿನ ಘೋರಿಯು ಸಲೀಂ ಚಿಸ್ಟೀಯವರ ಸಮಾಧಿಯನ್ನು ಹೊಂದಿದೆ. ಇವರು ಮೊಘಲರ ಕಾಲದ ಸೂಫೀ ಸಂತರಾಗಿದ್ದರು ಮತ್ತು ಈ ಸ್ಥಳವು ಈ ವಿಜಯದ ನಗರದಲ್ಲಿ ನೀವು ಭೇಟಿ ಕೊಡಲೇಬೇಕಾದ ಸ್ಥಳವಾಗಿದೆ. ಇದು ಒಂದು ಮಹತ್ವದ ಧಾರ್ಮಿಕ ತಾಣವೂ ಆಗಿದ್ದು ಪ್ರತೀ ವರ್ಷ ಸಾವಿರಾರು ಭಕ್ತರಿಂದ ಭೇಟಿ ನೀಡಲ್ಪಡುತ್ತದೆ.

ಇಲ್ಲಿಯ ಇನ್ನಿತರ ಗಮನಾರ್ಹವಾದ ಸ್ಮಾರಕಗಳು

ಮೇಲೆ ಹೇಳಲಾಗಿರುವ ಸ್ಮಾರಕಗಳ ಮತ್ತು ಐತಿಹಾಸಿಕ ತಾಣಗಳ ಹೊರತಾಗಿ ನೀವು ಇಲ್ಲಿ ಇನ್ನಿತರ ಸೌಂದರ್ಯತೆಗಳ ಅನ್ವೇಷಣೆಯನ್ನೂ ಮಾಡಬಹುದಾಗಿದೆ ಅವುಗಳಲ್ಲಿ ಅನುಪ್ ತಾಲವೋ, ದಿವಾನ್-ಇ-ಆಮ್, ದಿವಾನ್-ಇ -ಖಾಸ್, ಮರಿಯಮ್ -ಉಜ್-ಝಾಮಾನಿಯ ಅರಮನೆ , ನೌಬತ್ ಖಾನಾ ಮತ್ತು ಬೀರ್ಬಲ್ ನ ಮನೆ ಮುಂತಾದವುಗಳೂ ಸೇರಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X