Search
  • Follow NativePlanet
Share
» »ಹಂಪಿಯಲ್ಲಿರುವ ಹಿಪ್ಪಿ ದ್ವೀಪಕ್ಕೆ ಬಂದ್ರೆ ಎಷ್ಟೆಲ್ಲಾ ಎಂಜಾಯ್ ಮಾಡ್ಬೋದು ನೋಡಿ…

ಹಂಪಿಯಲ್ಲಿರುವ ಹಿಪ್ಪಿ ದ್ವೀಪಕ್ಕೆ ಬಂದ್ರೆ ಎಷ್ಟೆಲ್ಲಾ ಎಂಜಾಯ್ ಮಾಡ್ಬೋದು ನೋಡಿ…

ಹಂಪಿಯಲ್ಲಿ ನಿಮಗೆ ಪಾರಂಪರಿಕ ತಾಣಗಳು ಅಂದರೆ ಸ್ಮಾರಕಗಳು ಮತ್ತು ದೇವಾಲಯಗಳು ಇರುವ ಸ್ಥಳಗಳು. ಹಾಗೆಯೇ ಹಿಪ್ಪಿ ದ್ವೀಪ ಎಂದು ಜನಪ್ರಿಯವಾಗಿರುವ ವಿರುಪಾಪೂರ ಗ್ರಾಮ ಎರಡೂ ಜಾಗಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತದೆ. ವಿಶೇಷವೆಂದರೆ ಅನೇಕರಿಗೆ ಈ ಹಿಪ್ಪಿ ದ್ವೀಪದ ಬಗ್ಗೆ ಹೆಚ್ಚು ಪರಿಚಯವಿಲ್ಲ. ವಿರುಪಾಪೂರ ಗಡ್ಡೆ ಅಥವಾ ಹಿಪ್ಪಿ ದ್ವೀಪ ಎಂದು ಜನಪ್ರಿಯವಾಗಿರುವ ಈ ಸ್ಥಳ ಒಂದು ಸಣ್ಣ ದ್ವೀಪವಾಗಿದ್ದು, ಹೆಸರಿಗೆ ತಕ್ಕಂತೆ ಇದೆ. ಹಾಗಾಗಿ ನಿವೇನಾದರೂ ಮುಂದಿನ ಬಾರಿ ಹಂಪಿಗೆ ಭೇಟಿ ಕೊಟ್ಟರೆ ಹಿಪ್ಪಿ ದ್ವೀಪ ನೋಡುವುದನ್ನು ಮರೆಯದಿರಿ. ಹಿಪ್ಪಿ ದ್ವೀಪವನ್ನು ಸರಿಯಾಗಿ ಅನ್ವೇಷಿಸಲು ನಿಮಗೆ ಕನಿಷ್ಠ 2 ದಿನಗಳು ಬೇಕಾಗುತ್ತವೆ. ಒಂದು ವೇಳೆ ನೀವು ಪಾರಂಪರಿಕ ತಾಣ ನೋಡಲು ಬಯಸಿದರೆ, ಕನಿಷ್ಠ 3 ರಿಂದ 4 ದಿನಗಳವರೆಗೆ ಪ್ರವಾಸ ಯೋಜಿಸಿ.

ಹಿಪ್ಪಿ ಐಲ್ಯಾಂಡ್ ನಲ್ಲಿ ಹೆಣ್ಣುಮಕ್ಕಳು ಸಹ ಏಕಾಂಗಿಯಾಗಿ ಪ್ರವಾಸ ಮಾಡಬಹುದು. ಇದು ಸಂಪೂರ್ಣವಾಗಿ ಸುರಕ್ಷಿತ ಸ್ಥಳವಾಗಿದೆ. ಆದರೆ ಹಿಪ್ಪಿ ಐಲ್ಯಾಂಡ್ ಸಾಕಷ್ಟು ತಂಪಾಗಿರುವ ಸ್ಥಳವಾಗಿರುವುದರಿಂದ, ಸ್ನೇಹಿತರೊಂದಿಗೆ ಪ್ರಯಾಣಿಸುವಾಗ ಹೆಚ್ಚು ಖುಷಿ ಕೊಡುತ್ತದೆ. ಕತ್ತಲಾದ ನಂತರ ತಿರುಗಾಡಲು ಹೋಗಬೇಡಿ, ನಿಮ್ಮ ಮಕ್ಕಳ ಮೇಲೆ ವಿಶೇಷ ನಿಗಾ ಇರಿಸಿ, ಸುರಕ್ಷಿತವಾಗಿರಲು ಸೈನ್ ಬೋರ್ಡ್‌ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಹಂಪಿ ಬ್ಯಾಕ್‌ಪ್ಯಾಕರ್‌ಗಳ ಸ್ವರ್ಗ ಎಂದೇ ಫೇಮಸ್ ಆಗಿರುವುದರಿಂದ ಖರ್ಚಿನ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.

ತಡ ಮಾಡದೆ ದೋಣಿಯಲ್ಲಿ ತೆರಳಿ

ತಡ ಮಾಡದೆ ದೋಣಿಯಲ್ಲಿ ತೆರಳಿ

ಮೋಜಿನ ಸ್ಥಳವಾಗಿ ಖ್ಯಾತಿಯಾಗಿರುವ ಈ ದ್ವೀಪಕ್ಕೆ ಕೊರಾಕಲ್ ಅಥವಾ ದೋಣಿಯ ಮೂಲಕ ಪ್ರಯಾಣಿಸಲು 5 ನಿಮಿಷ ತೆಗೆದುಕೊಳ್ಳುತ್ತದೆ ಅಷ್ಟೇ. ದ್ವೀಪಕ್ಕೆ ಕೊನೆಯ ದೋಣಿ ಸಂಜೆ 5.30 ಕ್ಕೆ ಹೊರಡುತ್ತದೆ. ಹಂಪಿಯ ವಿರೂಪಾಕ್ಷ ದೇವಸ್ಥಾನದ ಬಳಿ ಬಂದರೆ ಹಿಪ್ಪಿ ದ್ವೀಪ ತಲುಪಲು ನಿಮಗೆ ದೋಣಿ ಸಿಗುತ್ತದೆ. ದೋಣಿಯಲ್ಲಿ 5 ನಿಮಿಷಗಳ ಸವಾರಿ. ದೋಣಿ ವಿಹಾರಕ್ಕೆ ಶುಲ್ಕವಿರುತ್ತದೆ. ದೋಣಿ ಬೆಳಗ್ಗೆ 8:00 ರಿಂದ ಸಂಜೆ 5:30 ರವರೆಗೆ ಇರುತ್ತದೆ. ಇದು ಅಧಿಕೃತ ಸಮಯವಾದರೂ ಜನರು ರಾತ್ರಿ 8:30 ರವರೆಗೆ ಸಣ್ಣ ಕೊರಾಕಲ್‌ಗಳಲ್ಲಿ ನದಿಯನ್ನು ದಾಟುವುದನ್ನು ನೋಡಬಹುದು. ಆದರೆ ತಡವಾದಷ್ಟು ಶುಲ್ಕಗಳು ಹೆಚ್ಚಾಗುತ್ತವೆ.

ಏನೆಲ್ಲಾ ಮಾಡಬಹುದು ನೋಡಿ…

ಏನೆಲ್ಲಾ ಮಾಡಬಹುದು ನೋಡಿ…

ಹಿಪ್ಪಿ ದ್ವೀಪಕ್ಕೆ ಹೋದಾಗ ನದಿ ಅಥವಾ ಸುಂದರವಾದ ಭತ್ತದ ಗದ್ದೆಗಳ ದೃಶ್ಯ ಕಣ್ಣುಗಳಿಗೆ ತಂಪು ನೀಡುತ್ತದೆ. ವಿರುಪಾಪೂರ ಗಡ್ಡೆ ಆಧುನಿಕ ಯುಗದಲ್ಲಿಯೂ ಪ್ರಾಚೀನ ಕಾಲದ ಅವಶೇಷಗಳಿಂದ ತುಂಬಿದೆ. ಹಾಗಾಗಿ ಇಲ್ಲಿಗೆ ನೀವು ಬಂದಾಗ ಬಂಡೆಗಳನ್ನು ಹತ್ತಿ ಸೂರ್ಯೋದಯ ನೋಡಬಹುದು, ಸಾಣಾಪೂರ ಕೆರೆಯಲ್ಲಿ ಕೊರಾಕಲ್ ಸವಾರಿ, ಕ್ಲಿಫ್ ಜಂಪಿಂಗ್ ಮಾಡಬಹುದು, ತೆಂಗಿನ ಮರಗಳು ಮತ್ತು ಬಾಳೆ ತೋಟಗಳ ಸುತ್ತಲೂ ಮೊಪೆಡ್ ಓಡಿಸಬಹುದು, ಕೊನೆಗೆ ಕೆಫೆಗಳಿಗೆ ಮರಳಿ ಒಂದೊಳ್ಳೆಯ ಆಹಾರ ಸವಿಯಬಹುದು. ಹಿಪ್ಪಿ ದ್ವೀಪ ವಿಶ್ರಾಂತಿ ಮತ್ತು ವಸತಿಗೃಹಗಳಿಗೆ ಹೆಸರುವಾಸಿಯಾಗಿದೆ. ಇದು ಅಕ್ಟೋಬರ್ ಅಂತ್ಯದಿಂದ ಮಾರ್ಚ್ ಮಧ್ಯದವರೆಗೆ ಕಾರ್ಯನಿರ್ವಹಿಸುವ ಶಾಕ್ಸ್ ಮತ್ತು ಕೆಫೆಗಳನ್ನು ಹೊಂದಿದೆ. ಇಲ್ಲಿ ಬಿಯರ್ ಜೊತೆಗೆ ಅದ್ಭುತವಾದ ಆಹಾರವನ್ನು ನೀಡುತ್ತಾರೆ.

ಹಳ್ಳಿಗಳ ಸುತ್ತಮುತ್ತ ಸವಾರಿ ಚೆನ್ನ

ಹಳ್ಳಿಗಳ ಸುತ್ತಮುತ್ತ ಸವಾರಿ ಚೆನ್ನ

ಹಿಪ್ಪಿ ದ್ವೀಪದಿಂದ ಹತ್ತಿರದ ಹಳ್ಳಿಗಳ ಸುತ್ತಲೂ ಸವಾರಿ ಮಾಡುವುದರಿಂದ ದೈತ್ಯ ಬಂಡೆಗಳು, ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಮರಗಳು, ತೆಂಗಿನ ಮರಗಳನ್ನು ನೋಡುತ್ತಾ ಹೋಗಬಹುದು. ಹಾಗಾಗಿ ಆನೆಗುಂದಿ ಗ್ರಾಮವನ್ನು ನೋಡಲು ಮಿಸ್ ಮಾಡ್ಕೊ ಬೇಡಿ. ಆನೆಗುಂದಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯೆ ಸಣಾಪುರ ಕೆರೆ ಸಿಗುತ್ತದೆ. ಇವೆಲ್ಲಾ ಫ್ಯಾಂಟಸಿ ಸಿನಿಮಾ ಸೆಟ್ ನಲ್ಲಿರುವ ಭಾವನೆಯನ್ನು ನೀಡುತ್ತವೆ. ಅಲ್ಲದೆ, ಆನೆಗುಂದಿಯಲ್ಲಿ ಅನೇಕ ಕರಕುಶಲ ಕೇಂದ್ರಗಳಿವೆ. ಇಲ್ಲಿ ಬಾಳೆ ನಾರಿನಿಂದ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾತ್ತದೆ. ಉತ್ಪನ್ನಗಳು ನಗರದ ಮಳಿಗೆಗಳಿಗಿಂತ ಹೆಚ್ಚು ಅಗ್ಗವಾಗಿರುತ್ತವೆ.

ಭಾರತೀಯ ಮತ್ತು ಪಾಶ್ಚಿಮಾತ್ಯ ಆಹಾರ ಲಭ್ಯ

ಭಾರತೀಯ ಮತ್ತು ಪಾಶ್ಚಿಮಾತ್ಯ ಆಹಾರ ಲಭ್ಯ

ಇಲ್ಲಿರುವ ಬಹಳಷ್ಟು ಕೆಫೆಗಳು ಅತಿಥಿ ಗೃಹಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ನೀವು ಅಗ್ಗದ ದರದಲ್ಲಿ ಸರಳವಾದ ಕೊಠಡಿಗಳನ್ನು ಇಲ್ಲಿ ಪಡೆಯಬಹುದು. ಐಷಾರಾಮಿ ಜೀವನದಿಂದ ದೂರವಾಗಿ, ಸಣ್ಣ ಗುಡಿಸಲುಗಳಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ಆಹಾರ ಸವಿಯುತ್ತಾ ನದಿಯ ದಡದಲ್ಲಿ ಮಲಗಿರುವಾಗ ನೀವು ಖಂಡಿತವಾಗಿಯೂ ಈ ಸ್ಥಳದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳುತ್ತೀರಿ. ಶಾಕ್ಸ್ ಮತ್ತು ಕೆಫೆಗಳು ಭಾರತೀಯರು ಮತ್ತು ವಿದೇಶಿಯರ ಜಂಟಿ ಉದ್ಯಮವಾಗಿದೆ. ಪೀಕ್ ಸೀಸನ್ ನಲ್ಲಿ ಸಮಂಜಸವಾದ ಬೆಲೆಯಲ್ಲಿ ಸಣ್ಣ ಪ್ರವಾಸಿ ಗುಡಿಸಲುಗಳನ್ನು ಹೊಂದಿದೆ. ಇಲ್ಲಿಗೆ ತಲುಪಲು ನಿಮಗೆ ಖಂಡಿತವಾಗಿ ಕೊರಾಕಲ್ ದೋಣಿ ಅಗತ್ಯವಿದೆ. ಮಳೆಗಾಲದಲ್ಲಿ ಟ್ಯಾಕ್ಸಿಯಲ್ಲಿ ಹೋಗುವುದು ಸೂಕ್ತ.

ಹಿಪ್ಪಿ ದ್ವೀಪಕ್ಕೆ ಭೇಟಿ ನೀಡಲು ಸೂಕ್ತ ಸಮಯ

ಹಿಪ್ಪಿ ದ್ವೀಪಕ್ಕೆ ಭೇಟಿ ನೀಡಲು ಸೂಕ್ತ ಸಮಯ

ಹಿಪ್ಪಿ ದ್ವೀಪಕ್ಕೆ ಭೇಟಿ ನೀಡಲು ಅಕ್ಟೋಬರ್ ಅಂತ್ಯದಿಂದ ಫೆಬ್ರವರಿ ಆರಂಭದವರೆಗೆ ಸೂಕ್ತ ಸಮಯವಾಗಿರುತ್ತದೆ. ದೋಣಿ ವಿಹಾರಕ್ಕೆ ಸಮಸ್ಯೆಯಾಗುವುದರಿಂದ ಭಾರೀ ಮಳೆಯ ಸಂದರ್ಭದಲ್ಲಿ ಹಿಪ್ಪಿ ದ್ವೀಪಕ್ಕೆ ತೆರಳುವುದು ಸೂಕ್ತವಲ್ಲ. ಆದ್ದರಿಂದ ಹೋಗುವ ಮೊದಲು ಇದನ್ನೆಲ್ಲಾ ಪರಿಶೀಲಿಸಿ. ವರ್ಷದ ಉಳಿದ ಅವಧಿಯಲ್ಲಿ ಹಂಪಿಯಲ್ಲಿ ತಾಪಮಾನವು ಗರಿಷ್ಠ ಮಟ್ಟದಲ್ಲಿರುತ್ತದೆ.

ಹಿಪ್ಪಿ ದ್ವೀಪಕ್ಕೆ ಹೋಗುವುದು ಹೇಗೆ?

ಹಿಪ್ಪಿ ದ್ವೀಪಕ್ಕೆ ಹೋಗುವುದು ಹೇಗೆ?

ರೈಲು: ಹಂಪಿಯಲ್ಲಿ ರೈಲು ನಿಲ್ದಾಣವಿಲ್ಲ. ಹತ್ತಿರದ ರೈಲು ನಿಲ್ದಾಣವೆಂದರೆ ಹೊಸಪೇಟೆ. ಇದು ಹಂಪಿಯಿಂದ ಸುಮಾರು 12 ಕಿಮೀ ದೂರದಲ್ಲಿದೆ. ಹೊಸಪೇಟೆಗೆ ಮೈಸೂರು ಮತ್ತು ಬೆಂಗಳೂರಿನಿಂದ ನೇರ ರೈಲುಗಳಿವೆ.

ಬಸ್: ಮೈಸೂರು, ಗೋವಾ, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಗೋಕರ್ಣದಿಂದ ಹಂಪಿ/ಹೊಸಪೇಟೆಗೆ ನೇರ ಬಸ್ಸುಗಳಿವೆ.

ವಿಮಾನ: ಹಂಪಿಗೆ ವಿಮಾನ ನಿಲ್ದಾಣವಿಲ್ಲ. ಹಂಪಿಯಿಂದ ಸುಮಾರು 150 ಕಿಮೀ ದೂರದಲ್ಲಿರುವ ಹುಬ್ಬಳ್ಳಿಯು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಹಂಪಿ ತಲುಪಲು ನೀವು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X