Search
  • Follow NativePlanet
Share
» »ಹಣಗೆರೆಯ ಈ ದೇವಸ್ಥಾನದಲ್ಲಿರುವ ಮರಕ್ಕೆ ಬೀಗ ಕಟ್ಟಿದ್ರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತಂತೆ

ಹಣಗೆರೆಯ ಈ ದೇವಸ್ಥಾನದಲ್ಲಿರುವ ಮರಕ್ಕೆ ಬೀಗ ಕಟ್ಟಿದ್ರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತಂತೆ

ಯಾವತ್ತಾದರೂ ನೀವು ದರ್ಗಾದ ಒಳಗೆ ದೇವಸ್ಥಾನ ಇರುವುದನ್ನು ನೋಡಿದ್ದೀರಾ? ಇಲ್ಲವೆಂದಾದಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಣಗೆರೆಯಲ್ಲಿದೆ ಇಂತಹದ್ದೊಂದು ಪವಿತ್ರ ಕ್ಷೇತ್ರ. ಇಲ್ಲಿ ಹಿಂದೂ ಮುಸ್ಲಿಂರು ಎನ್ನುವ ಭೇಧವಿಲ್ಲ. ಭಕ್ತರು ದರ್ಗಾ ಹಾಗೂ ದೇವಸ್ಥಾನವನ್ನು ಒಂದೇ ರೀತಿಯಾಗಿ ಪೂಜಿಸುತ್ತಾರೆ. ಹಾಗಾದರೆ ಬನ್ನಿ ಹಣಗೆರೆಯಲ್ಲಿರುವ ಈ ಕ್ಷೇತ್ರದ ವಿಶೇಷತೆ ಏನು ಆನ್ನೋದನ್ನು ತಿಳಿಯೋಣ.

ತೀರ್ಥಹಳ್ಳಿ

ತೀರ್ಥಹಳ್ಳಿ

PC: Manjeshpv

ತೀರ್ಥಹಳ್ಳಿಯು ಶಿವಮೊಗ್ಗ ಜಿಲ್ಲೆಯ ತುಂಗ ನದಿ ತೀರದಲ್ಲಿ ನೆಲೆಗೊಂಡಿದೆ.ತೀರ್ಥಹಳ್ಳಿ ಪಶ್ಚಿಮ ಘಟ್ಟಗಳ ದಟ್ಟವಾದ ಕಾಡುಗಳಿಂದ ಆವೃತವಾಗಿದೆ ಮತ್ತು ಸಮುದ್ರ ಮಟ್ಟದಿಂದ 591 ಮೀಟರ್ ಎತ್ತರದಲ್ಲಿ ಇದೆ. ತೀರ್ಥಹಳ್ಳಿ ಪಟ್ಟಣವು ಶಿವಮೊಗ್ಗದಿಂದ 61 ಕಿಮಿ ದೂರದಲ್ಲಿದೆ. ಸಂಪೂರ್ಣವಾಗಿ ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿ ತಾಲೂಕು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ಬತ್ತ, ಅಡಕೆ, ಏಲಕ್ಕಿ, ಮೆಣಸು ಇಲ್ಲಿಯ ಮುಖ್ಯ ಬೆಳೆಗಳು. ತಾಲ್ಲೂಕಿನ ಬೇರೆ ಬೇರೆ ಭಾಗಗಳಲ್ಲಿ ಭೂಮಿ ಮತ್ತು ನೀರಾವರಿ ಸೌಲಭ್ಯವನ್ನನುಸರಿಸಿ ರಾಗಿ, ಜೋಳ, ತೊಗರಿ, ಕಬ್ಬು, ಮೆಣಸಿನ ಕಾಯಿಗಳನ್ನು ಬೆಳೆಯುತ್ತಾರೆ.

ಈ ಕಾಮ್ನಾ ದೇವಿಯನ್ನು ಬೇಡಿಕೊಂಡರೆ ನಿಮ್ಮ ಕಾಮನೆಗಳೆಲ್ಲಾ ಈಡೇರುತ್ತಂತೆ

ಹಜರತ್ ಸಯೀದ್ ಸದಾತ್ ದರ್ಗಾ

ಹಜರತ್ ಸಯೀದ್ ಸದಾತ್ ದರ್ಗಾ

ಶಿವಮೊಗ್ಗದಿಂದ 30 ಕಿ.ಮೀ ದೂರದಲ್ಲಿರುವ ಹಣಗೆರೆ ಗ್ರಾಮದಲ್ಲಿ ಹಜರತ್ ಸಯೀದ್ ಸದಾತ್ ದರ್ಗಾ ಇದೆ. ಈ 500 ವರ್ಷ ಹಳೆಯ ದರ್ಗಾವು ತನ್ನೊಂದಿಗೆ ದೇವಸ್ಥಾನವನ್ನೂ ಹೊಂದಿದೆ. ಇದು ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದಲ್ಲಿ ನೆಲೆಗೊಂಡಿದೆ, 400 ಹಿಂದೂಗಳು ಮತ್ತು 100 ಮುಸ್ಲಿಂರ ಮನೆಗಳನ್ನು ಹೊಂದಿರುವ ಹಣಗೆರೆ ಹಳ್ಳಿಯಲ್ಲಿ ಈ ವರೆಗೆ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲವಂತೆ.

 ಭ್ರೂತರಾಯ ಚೌಡೇಶ್ವರಿ ದೇವಾಲಯ

ಭ್ರೂತರಾಯ ಚೌಡೇಶ್ವರಿ ದೇವಾಲಯ

PC: youtube

ಈ ದೇವಾಲಯದ ಇತಿಹಾಸ ಬಗ್ಗೆ ಯಾರಿಗೂ ಖಚಿತ ಮಾಹಿತಿ ಇಲ್ಲ. ಹಜರತ್ ಸಯೀದ್ ಸದಾತ್ ದರ್ಗಾವು ಭಾರತದಾದ್ಯಂತ ಭಕ್ತರನ್ನು ಆಕರ್ಷಿಸಿದೆ. ದರ್ಗಾದ ಜೊತೆ ಒಂದು ದೇವಸ್ಥಾನವಿದೆ. ಇದು ಭ್ರೂತರಾಯ ಚೌಡೇಶ್ವರಿಗೆ ಸಮರ್ಪಿತವಾಗಿದೆ. ಹಿಂದೂ ಮುಸ್ಲಿಂ ದೇವರುಗಳನ್ನು ಇಲ್ಲಿ ಪೂಜಿಸಲಾಗುತ್ತದೆ. ಭಕ್ತರು ಇಲ್ಲಿ ತಮ್ಮ ಆರೋಗ್ಯ ಸಮಸ್ಯೆ ಹಾಗೂ ವೈಯಕ್ತಿಕ ಸಮಸ್ಯೆಗಳ ನಿವಾರಣೆಗೆ ಇಲ್ಲಿಗೆ ಬರುತ್ತಾರೆ.

ಸೋಮವಾರಪೇಟೆ ಬಳಿ ಇರುವ ಈ ಅದ್ಭುತ ತಾಣಗಳನ್ನು ನೋಡಿದ್ದೀರಾ?

ಮರಕ್ಕೆ ಬೀಗ ಕಟ್ಟಬೇಕು

ಮರಕ್ಕೆ ಬೀಗ ಕಟ್ಟಬೇಕು

PC: youtube

ಈ ದೇವಸ್ಥಾನದ ವಿಶೇಷತೆ ಎಂದರೆ ದೇವಸ್ಥಾನದ ಆವರಣದ ಒಳಗೆ ಒಂದು ದೊಡ್ಡ ಮರವಿದೆ. ಈ ಮರದಲ್ಲಿ ನೀವು ಸಾಕಷ್ಟು ಬೀಗಗಳನ್ನು ಕಾಣಬಹುದು. ಈ ಬೀಗಗಳನ್ನು ಭಕ್ತರು ಕಟ್ಟಿರುತ್ತಾರೆ. ಇಲ್ಲಿ ನಿಮ್ಮ ಯಾವುದೇ ಬೇಡಿಕೆಗಳೂ ಈಡೇರಬೇಕೆಂದರೆ ನಿಮ್ಮ ಮನೋಕಾಮನೆಗಳು ಈಡೇರಬೇಕೆಂದಾದರೆ ಈ ಮರಕ್ಕೆ ನೀವು ಬೀಗವನ್ನು ಕಟ್ಟಬೇಕು.. ಹೀಗೆ ಮಾಡುವುದರಿಂದ ನಿಮ್ಮ ಬೇಡಿಕೆ ಈಡೇರುತ್ತದೆ ಎನ್ನುವುದು ಭಕ್ತರ ನಂಬಿಕೆ.

ಪುರಾಣದ ಪ್ರಕಾರ

ಪುರಾಣದ ಪ್ರಕಾರ

PC: youtube

ಪುರಾಣದ ಪ್ರಕಾರ, ದರ್ಗಾದಲ್ಲಿ ಬೇಡಿದರೆ ಎಲ್ಲಾ ಕನಸುಗಳು ನಿಜವಾಗುತ್ತವೆ. ನಿಮ್ಮ ಬೇಡಿಕೆ ನೆರವೇರಿದ ಮೇಲೆ ವ್ಯಕ್ತಿಯು ದರ್ಗಾಕ್ಕೆ ಹಿಂದಿರುಗಿ ದರ್ಗಾದ ಹೆಸರಿನಲ್ಲಿ ದಾನ ನೀಡಬೇಕು. ಪ್ರತಿದಿನವೂ ಎರಡೂ ಸಮುದಾಯಗಳ ಜನರು ಬಂದು ಇಲ್ಲಿ ಪೂಜೆ ಮಾಡುತ್ತಾರೆ.

ಈ ಗುಹೆಯೊಳಗಿರುವ ನೀರಿನ ಕುಂಡದಲ್ಲಿ ಸ್ನಾನ ಮಾಡಿದ್ರೆ ದುಷ್ಟಶಕ್ತಿ ದೂರವಾಗುತ್ತಂತೆ

ಹಿಂದೂ-ಮುಸ್ಲಿಂ ಅಂಗಡಿಗಳು

ಹಿಂದೂ-ಮುಸ್ಲಿಂ ಅಂಗಡಿಗಳು

ದರ್ಗಾದ ಹೊರಭಾಗದಲ್ಲಿ ಅನೇಕ ಹಿಂದೂ ಮತ್ತು ಮುಸ್ಲಿಂ ಅಂಗಡಿಗಳು ಕಾಣಸಿಗುತ್ತವೆ. ದರ್ಗಾದಲ್ಲಿ ಭಕ್ತರು ಪ್ರಸಾದ ಮತ್ತು ಇತರ ವಸ್ತುಗಳನ್ನು ಖರೀದಿಸಬಹುದು. ಹಣಗೆರೆಯ ಜನರು ಸಾಮಾನ್ಯವಾಗಿ ಶಾಂತಿ ಪ್ರೀತಿಯರಾಗಿದ್ದಾರೆ ಮತ್ತು ಇದು ಒಂದು ಸಣ್ಣ ಗ್ರಾಮವಾಗಿದ್ದು, ಅವರು ಧರ್ಮದ ಮೇಲೆ ಹೋರಾಡುವ ಬದಲು ಒಟ್ಟಾಗಿ ಜೀವಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.

ಒಂದೇ ಕೋಣೆಯಲ್ಲಿ ದೇವಸ್ಥಾನ, ದರ್ಗಾ

ಒಂದೇ ಕೋಣೆಯಲ್ಲಿ ದೇವಸ್ಥಾನ, ದರ್ಗಾ

PC: youtube

ಒಂದೇ ಕೋಣೆಯಲ್ಲಿ ದೇವಸ್ಥಾನ ಮತ್ತು ದರ್ಗಾದಲ್ಲಿ ನಡೆಯುವ ವಿಭಿನ್ನ ಪದ್ಧತಿಗಳು ನಡೆಯುತ್ತವೆ. ಬುರ್ಖಾ ಧರಿಸಿದವರೂ ಮಂಗಳ ಸೂತ್ರ ಧರಿಸಿದವರೂ ಇಲ್ಲಿಗೆ ಬರುತ್ತಾರೆ. ಯಾವುದೇ ಭೇಧ ಭಾವವಿಲ್ಲದೆ ಒಟ್ಟಾಗಿ ಪೂಜೆ ಪುನಸ್ಕಾರ ನಡೆಸುತ್ತಾರೆ. ಈ ಅನನ್ಯ ಆಚರಣೆಗಳನ್ನು ಯಾರೂ ಪ್ರಶ್ನಿಸುವುದಿಲ್ಲ. ಇಲ್ಲಿಗೆ ಬರುವ ಭಕ್ತರು ದರ್ಗಾಕ್ಕೆ ಶಾಲನ್ನು ಅರ್ಪಿಸಿದರೆ ಚೌಡೇಶ್ವರಿ ಹಾಗೂ ಭೂತರಾಯನಿಗೆ ಹಣ್ಣೂ ಕಾಯಿ ಅರ್ಪಿಸಬೇಕು.

ವಿಶಿಷ್ಟ ಆಚರಣೆಗಳು

ವಿಶಿಷ್ಟ ಆಚರಣೆಗಳು

PC: youtube

ಇಲ್ಲಿನ ಮತ್ತಿಮರದಲ್ಲಿ ನೆಲೆ ನಿಂತಿರುವ ಭೂತಪ್ಪನಿಗೆ ಹರಕೆ ಹೊತ್ತ ಭಕ್ತರು ಮೊಳೆ ಹೊಡೆದು ತಾಯತ, ತ್ರಿಶೂಲವನ್ನು ಅರ್ಪಿಸುತ್ತಾರೆ. ಬೀಗ ಹಾಕುತ್ತಾರೆ. ತಮ್ಮ ಎದುರಾಳಿಗಳನ್ನು ಸದೆಬಡಿಯಲು, ಮಾಟ ಮಂತ್ರ ಮಾಡಿದವರಿಗೆ ವಾಪಾಸ್ಸಾಗಲು ಈ ರೀತಿಯ ವಿಭಿನ್ನ ಆಚರಣೆಗಳನ್ನು ನಡೆಸಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube

ಹಣಗೆರೆಗೆ 10 ಕಿ.ಮೀ ಸಮೀಪದಲ್ಲಿ ಯಾವುದೇ ರೈಲು ನಿಲ್ದಾಣವಿಲ್ಲ. ಶಿವಮೊಗ್ಗ ರೈಲು ನಿಲ್ದಾಣವೇ ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ತೀರ್ಥಹಳ್ಳಿ, ಶೃಂಗೇರಿ, ಶಿವಮೊಗ್ಗ ಹಣಗೆರೆಗೆ ರಸ್ತೆ ಸಂಪರ್ಕವನ್ನು ಹೊಂದಿದೆ. ಶಿವಮೊಗ್ಗ ಬಸ್‌ನಲ್ಲಿ ಹಣಗೆರೆ ರಸ್ತೆ ಮಾರ್ಗವಾಗಿ ಪ್ರಯಾಣಿಸಿ, ನಿಮ್ಮ ಪ್ರಯಾಣವು ಆರಾಮದಾಯಕವಾಗಿರುತ್ತದೆ. ಅಕ್ಟೋಬರ್‌ನಿಂದ ಮಾರ್ಚ್‌ ನಡುವೆ ತೀರ್ಥಹಳ್ಳಿಗೆ ಭೇಟಿ ನೀಡಲು ಯೋಗ್ಯವಾದ ಸಮಯವಾಗಿದೆ.

 ಶ್ರೀ ರಾಮೇಶ್ವರ ದೇವಾಲಯ

ಶ್ರೀ ರಾಮೇಶ್ವರ ದೇವಾಲಯ

PC:Manjeshpv

ತೀರ್ಥಹಳ್ಳಿಯಲ್ಲಿರುವ ಅನೇಕ ಪ್ರವಾಸಿ ತಾಣಗಳಲ್ಲಿ ಶ್ರೀ ರಾಮೇಶ್ವರ ದೇವಾಲಯವು ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ತುಂಗಾ ನದಿಯ ದಂಡೆಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಮತ್ತು ಇದನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. . ಶ್ರೀ ರಾಮೇಶ್ವರ ದೇವಸ್ಥಾನವು ಪರಶುರಾಮ ತೀರ್ಥಕ್ಕೆ ಸಮೀಪದಲ್ಲಿದೆ. ಪರಮರಾಮದಿಂದ ಸ್ಥಾಪಿಸಲ್ಪಟ್ಟಿದೆ ಎಂದು ನಂಬಲಾದ ಶಿವ ಲಿಂಗವನ್ನು ದೇವಾಲಯದ ಗರ್ಭಗುಡಿಯಲ್ಲಿ ಹೊಂದಿದೆ. ಎಳ್ಳು ಅಮಾವಾಸ್ಯೆ ಜಾತ್ರೆಯಂದು ಅಮಾವಾಸೇ ದಿನದಲ್ಲಿ ತೀರ್ಥಹಳ್ಳಿಯ ಈ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಕುಪ್ಪಳ್ಳಿ

ಕುಪ್ಪಳ್ಳಿ

PC: Amarrg

ತೀರ್ಥಹಳ್ಳಿ-ಕೊಪ್ಪ ರಸ್ತೆಯಲ್ಲಿರುವ ತೀರ್ಥಹಳ್ಳಿಯಿಂದ 18 ಕಿ.ಮೀ ದೂರದಲ್ಲಿದೆ ಕುಪ್ಪಳ್ಳಿ . ರಾಷ್ಟ್ರಕವಿ ಕುವೆಂಪು ಅವರು ಜನಿಸಿದ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. ಹಲವು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಾಣವಾಗಿದ್ದು ಒಂದು ಪ್ರವಾಸೀ ಸ್ಥಳವಾಗಿಯೂ ರೂಪುಗೊಂಡಿದೆ. ಕಪಿಶೈಲಾ ಮತ್ತು ಕವಿಮೇನ್ ಕುಪ್ಪಳ್ಳಿಯ ಎರಡು ಪ್ರಮುಖ ಆಕರ್ಷಣೆಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more