Search
  • Follow NativePlanet
Share
» »ರೋಡ್‌ ಟ್ರಿಪ್ ಹೋದಾಗ ಹೈವೇ ಡಾಬಾಗಳಲ್ಲಿ ತಿನ್ನೋದನ್ನು ಮಿಸ್‌ ಮಾಡಬೇಡಿ

ರೋಡ್‌ ಟ್ರಿಪ್ ಹೋದಾಗ ಹೈವೇ ಡಾಬಾಗಳಲ್ಲಿ ತಿನ್ನೋದನ್ನು ಮಿಸ್‌ ಮಾಡಬೇಡಿ

ಯಾವುದೇ ದೂರದ ಊರುಗಳಿಗೆ ಪ್ರಯಾಣ ಬೆಳೆಸಿದರೆ ಅಲ್ಲಿ ಆಗುವ ಸಮಸ್ಯೆ ಎಂದರೆ ಸರಿಯಾಗಿ ಊಟ ತಿಂಡಿ ಸಿಗದೇ ಇರುವುದು. ಸಿಕ್ಕರೂ ನಮಗೆ ಹೊಂದೋ ರೀತಿ ಇರೋದಿಲ್ಲ. ಆಯಾ ಆಯಾ ಊರಿನ ರುಚಿಗನುಗುಣವಾಗಿ ಅಲ್ಲಿ ಆಹಾರವನ್ನು ತಯಾರಿಸ್ತಾರೆ. ಇನ್ನೂ ರೋಡ್ ಟ್ರಿಪ್ ಹೋಗುವಾಗಂತೂ ಸರಿಯಾದ ಒಂದು ಹೋಟೆಲ್ ಅಥವಾ ಡಾಬಾ ಸಿಕ್ಕರೆ ಸಾಕು ಎಂದು ಅಂದುಕೊಳ್ಳುತ್ತೇವೆ. ಹಾಗಾಗಿ ಕೆಲವು ಫೇಮಸ್ ರುಚಿಕರ ಡಾಬಾದ ಬಗ್ಗೆ ನಾವಿಲ್ಲಿ ನೀಡಿದ್ದೇವೆ. ನೀವು ರೋಡ್ ಟ್ರಿಪ್ ಹೋದಾಗ ಈ ಡಾಬಾದಲ್ಲಿ ತಿನ್ನೋದನ್ನು ಮಾತ್ರ ಮರೀಬೇಡಿ.

ಮಲಗಿರುವ ಹನುಮನಿಗೆ ಕುಂಕುಮದ ಲೇಪ ಹಚ್ಚಿದ್ರೆ ಇಷ್ಟ ಈಡೇರುತ್ತಂತೆ!ಮಲಗಿರುವ ಹನುಮನಿಗೆ ಕುಂಕುಮದ ಲೇಪ ಹಚ್ಚಿದ್ರೆ ಇಷ್ಟ ಈಡೇರುತ್ತಂತೆ!

ಶರ್ಮಾ ಡಾಬಾ

ಶರ್ಮಾ ಡಾಬಾ

PC:Paridh

ನಿಮಗೆ ರಾಜಸ್ತಾನಿ ಫುಡ್ ಅಂದ್ರೆ ಇಷ್ಟ ಅಂತಾದ್ರೆ ಜೈಪುರ್ ಹಾಗೂ ಶಿಕರ್ ರಸ್ತೆಯಲ್ಲಿರುವ ಶರ್ಮಾ ಡಾಬಾಕ್ಕೆ ಭೇಟಿ ನೀಡಲೇ ಬೇಕು. ಇಲ್ಲಿ ರಾಜಸ್ತಾನದ ಫೇಮಸ್ ಫುಡ್ ಸಿಗುತ್ತದೆ. ಪ್ಯೂರ್ ಸಸ್ಯಹಾರಿ ಆಹಾರ ದೊರೆಯುತ್ತದೆ. ಇಲ್ಲಿನ ಮಾವಾ ನಾನ್,ಮಿಸ್ಸಿ ರೋಟಿ, ಪನೀರ್ ಮಸಾಲ್ ತುಂಬಾನೇ ಫೇಮಸ್.

ಸಂಜಯ್ ಡಾಬಾ

ಸಂಜಯ್ ಡಾಬಾ

PC: Meghna17

ಶ್ರೀನಗರ-ಲೇಹ್ ಹೈವೇಯಲ್ಲಿರುವ ಈ ಡಾಬಾವು ಬ್ಲ್ಯಾಕ್ ಟೀ ಹಾಗೂ ಆಲೂ ಪರಾಟಕ್ಕೆ ಸಖತ್ ಫೇಮಸ್. ಇದು ಹಸಿದಿರುವ ಬೈಕ್ ಸವಾರರಿಗೆ ಹಾಗು ಪ್ರವಾಸಿಗಳಿಗೆ ಹೊಟ್ಟೆ ತುಂಬಾ ರುಚಿಕರ ಆಹಾರವನ್ನು ನೀಡುತ್ತದೆ. ಹಾಗಾಗಿ ಹಿಮಾಲಯಕ್ಕೆ ತಲುಪುವ ಮೊದಲು ಈ ಡಾಬಾದ ಅಡಿಗೆ ರುಚಿಯನ್ನು ಸವಿಯಲೇ ಬೇಕು.

ಗಿಯಾನಿ ದಾ ಡಾಬಾ

ಗಿಯಾನಿ ದಾ ಡಾಬಾ

PC:Ashlyak

ಶಿಮ್ಲಾದ ಎನ್.ಹೆಚ್ 22 ನಿಂದ ಕಲ್ಕಾ-ಶಿಮ್ಲಾಕ್ಕೆ ಹೋಗುವ ರಸ್ತೆಯಲ್ಲಿ ಈ ಡಾಬಾ ಸಿಗುತ್ತದೆ. ಯಾವಾಗಲೂ ಗ್ರಾಹಕರಿಂದ ತುಂಬಿರುತ್ತದೆ. ಬಹಳ ಹಳೆಯ ಈ ಡಾಬಾ ಕಂ ರೆಸ್ಟೋರೆಂಟ್‍ಗೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ. ತಂದೂರಿ ರೋಟಿ, ತಂದೂರಿ ಪರಾಠ ಹಾಗು ಚಹ ಇಲ್ಲಿ ಸಖತ್ ಫೇಮಸ್.

ಚೀತಲ್ ಗ್ರ್ಯಾಂಡ್

ಚೀತಲ್ ಗ್ರ್ಯಾಂಡ್

PC: Sumit Surai

ದೆಹಲಿ-ಡೆಹ್ರಾಡೂನ್ ಹೈವೇಯಲ್ಲಿರುವ ಈ ಡಾಬಾವು ಒಂದು ರೆಸ್ಟೋರೆಂಟ್. ಆದರೆ ಇಲ್ಲಿ ಸಿಗುವ ಟೇಸ್ಟಿ ಫುಡ್‍ನಿಂದಾಗಿ ಜನರನ್ನು ಇದನ್ನು ಡಾಬಾ ಎಂದು ಕರೆಯುತ್ತಾರೆ. ರೆಸ್ಟೋರೆಂಟ್‍ನ ಒಳಗಡೆಯೂ ಊಟ ಮಾಡಬಹುದು. ಹಾಗೆಯೇ ಹೊರಗಡೆ ವಾತಾವರಣ ಚೆನ್ನಾಗಿದ್ದರೆ ಹೊರಗಡೆ ಓಪನ್ ಪ್ಲೇಸ್‍ನಲ್ಲಿ ಕೂತು ತಿನ್ನಬಹುದು. ಪರಾಟ, ಪನ್ನೀರ್ ಕರೀ, ದೋಸಾ, ಇಡ್ಲಿ ಇಲ್ಲಿ ಬಹಳ ಫೇಮಸ್.

ರಾವ್ ಡಾಬಾ

ರಾವ್ ಡಾಬಾ

PC: Dina Said

ನೀವು ದೆಹಲಿಯಿಂದ ಜೈಪುರ್‌ಗೆ ಪ್ರಯಾಣಿಸುತ್ತಿದ್ದೀರೆಂದಾದರೆ ಹಳೆ ರಾವ್ ಡಾಬಾದ ಬಳಿ ಒಮ್ಮೆ ನಿಲ್ಲಿಸಿ. ಈ ಡಾಬಾವು ನೋಡಲು ಸಿಂಪಲ್ ಆಗಿದೆ. ಆದರೆ ಇಲ್ಲಿನ ಫುಡ್‍ನ್ನು ಒಮ್ಮೆ ಸವಿದರೆ ಬೆರಳು ನಕ್ಕುತ್ತಾ ಇರುತ್ತೀರಾ. ಅಷ್ಟೊಂದು ಟೇಸ್ಟಿಯಾಗಿದೆ. ಯಾವಗಲೂ ಈ ಡಾಬಾದ ಹೊರಗಡೆ ವಾಹನಗಳು ಪಾರ್ಕಿಂಗ್ ಇದ್ದೇ ಇರುತ್ತದೆ. ಈ ರಸ್ತೆಯಲ್ಲಿ ಪ್ರಯಾಣಿಸುವವರು ಈ ಡಾಬಾಕ್ಕೆ ಭೇಟಿ ನೀಡಿ ತಮ್ಮ ಹೊಟ್ಟೆ ತುಂಬಿಸಿಕೊಂಡು ಮುಂದಿನ ಪ್ರಯಾಣ ಕೈಗೊಳ್ಳುತ್ತಾರೆ. ಸ್ಟಫ್‍ಡ್ ನಾನ್, ದಾಲ್ ಮಕ್‍ನಿ, ಚನ್ನಾ ಮಸಲ್ ಇಲ್ಲಿ ಬಹಳ ಫೇಮಸ್.

ಕಾರ್ನಾಲ್ ಹವೇಲಿ

ಕಾರ್ನಾಲ್ ಹವೇಲಿ

PC:Tomkeene

ಕರ್ನಾಲ್‍ನ ಜಿಟಿ ರೋಡ್‍ನಲ್ಲಿರುವ ಈ ಡಾಬಾವು ಪಂಜಾಬಿ ಫುಡ್‍ನ್ನು ಒದಗಿಸುತ್ತದೆ. ಇದನ್ನು ಸ್ಟೈಲಿಶ್ ಪೋಶ್ ಡಾಬಾ ಎಂದೂ ಕರೆಯುತ್ತಾರೆ. ಇಡೀ ವಿಶ್ವದ ರುಚಿಯನ್ನು ಬೆರೆಸಿ ಇಲ್ಲಿ ಆಹಾರ ತಯಾರಿಸಲಾಗುತ್ತದೆ. ಅಮೃತಸರ್ ಚೋಲೆ, ಕಡಿ, ಲಸ್ಸಿ, ಪರಾಟ ಇಲ್ಲಿ ಫೇಮಸ್.

ಚಿಲ್ಲಿಕಾ ಡಾಬಾ

ಚಿಲ್ಲಿಕಾ ಡಾಬಾ

PC: Jakub Hałun

ನೀವು ಒರಿಸ್ಸಾಕ್ಕೆ ಟ್ರಿಪ್ ಹೋಗುವ ಪ್ಲ್ಯಾನ್‍ನಲ್ಲಿದ್ದರೆ ಎನ್.ಹೆಚ್ 5ರಲ್ಲಿರುವ ಚಿಲ್ಲಿಕಾ ಡಾಬಾದಲ್ಲಿ ಒಮ್ಮೆ ಊಟ ಮಾಡಲೇ ಬೇಕು. ಸೀ ಫುಡ್ ಇಷ್ಟ ಪಡುವವರಿಗೆ ಉತ್ತಮವಾದ ರುಚಿಕರ ಸೀಫುಡ್ ಡಿಶ್ ಇಲ್ಲಿ ದೊರೆಯುತ್ತದೆ. ಇಲ್ಲಿನ ಚಿಲ್ಲಿ ಪ್ರಾನ್, ಏಡಿ, ಮೀನಿನ ಸಾರು ಬಹಳ ಫೇಮಸ್.

ಬಜನ್ ತಡ್‍ಕಾ ಡಾಬಾ

ಬಜನ್ ತಡ್‍ಕಾ ಡಾಬಾ

PC: Johny shill

ಉತ್ತರ ಪ್ರದೇಶದ ಎನ್.ಹೆಚ್ 24 ನಲ್ಲಿರರುವ ಸಲಾರ್‍ಪುರದಲ್ಲಿರುವ ಈ ಡಾಬಾದಲ್ಲಿ ಕಡಿಮೆ ಬಜೆಟ್‍ನಲ್ಲಿ ಟೇಸ್ಟಿ ಫುಡ್ ಸವಿಯಬಹುದಾಗಿದೆ. ಪನ್ನೀರ್ ಬಟರ್ ಮಸಾಲ, ತಂದೂರಿ ರೋಟಿ, ದಾಲ್ ಚನ್ನಾ ಮಸಾಲ ಇಲ್ಲಿ ಫೇಮಸ್.

Read more about: india food travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X