Search
  • Follow NativePlanet
Share
» »ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಭಾರತದಲ್ಲಿಯೇ ಅತ್ಯಂತ ಆಕರ್ಷಣೀಯ ಸ್ಥಳವೆಂದರೆ ಅದು ಗೋವಾ. ಇಲ್ಲಿಗೆ ಸಾವಿರಾರು ಮಂದಿ ಎಂಜಾಯ್ ಮಾಡಲು ಭೇಟಿ ನೀಡುತ್ತಿರುತ್ತಾರೆ. ವಿಹಾರಕ್ಕೆ, ವಾಟರ್ ಗೇಮ್ಸ್ ಆಡಲು, ತಮ್ಮ ಏಕಾಂತವನ್ನು ಕಳೆಯಲು, ಪಾರ್ಟಿ ಆಚರಿಸಲು ಹೀಗೆ ಹಲವಾರು ಪ್ರವಾಸಿಗರನ್ನ

ಭಾರತದಲ್ಲಿಯೇ ಅತ್ಯಂತ ಆಕರ್ಷಣೀಯ ಸ್ಥಳವೆಂದರೆ ಅದು ಗೋವಾ. ಇಲ್ಲಿಗೆ ಸಾವಿರಾರು ಮಂದಿ ಎಂಜಾಯ್ ಮಾಡಲು ಭೇಟಿ ನೀಡುತ್ತಿರುತ್ತಾರೆ. ವಿಹಾರಕ್ಕೆ, ವಾಟರ್ ಗೇಮ್ಸ್ ಆಡಲು, ತಮ್ಮ ಏಕಾಂತವನ್ನು ಕಳೆಯಲು, ಪಾರ್ಟಿ ಆಚರಿಸಲು ಹೀಗೆ ಹಲವಾರು ಪ್ರವಾಸಿಗರನ್ನು ಗೋವಾ ಆಕರ್ಷಿಸುತ್ತದೆ. ಇಲ್ಲಿನ ಕಡಲತೀರಗಳು ಎಲ್ಲರ ಆತ್ಮೀಯ ಗೆಳೆಯನಾಗಿರುತ್ತದೆ. ಕೇವಲ ಯುವಕರಿಗೆ ಅಲ್ಲದೇ ವೃದ್ಧರಿಗೂ ಕೂಡ ಒಂದೇ ಸಮನಾದ ಎಂಜಾಯ್ ನೀಡುವ ಒಂದೇ ಒಂದು ಸ್ಥಳವೆಂದರೆ ಅದು ಗೋವಾ. ದೇಶದ ಮೂಲೆ ಮೂಲೆಗಳಿಂದ ಭೇಟಿ ನೀಡುವ ಈ ತಾಣಕ್ಕೆ ಹೇಗೆ ಎಂಜಾಯ್ ಮಾಡಬೇಕು ಎಂಬುದು ತಿಳಿದಿರುವುದಿಲ್ಲ.

ಗೋವಾದಲ್ಲಿನ ರಹಸ್ಯವಾದ ಶೃಂಗಾರಕ್ಕಾಗಿಯೇ ಅನೇಕ ಬೀಚ್‍ಗಳಿವೆ. ಆ ಬೀಚ್‍ಗಳಲ್ಲಿ ಏಕಾಂತವಾಗಿ ಕಾಲಕಳೆಯಲು ಹೇಳಿ ಮಾಡಿಸಿದ ಸ್ಥಳವೆಂದೇ ಹೇಳಬಹುದು. ದೇಶ-ವಿದೇಶಗಳಿಂದ ಭೇಟಿ ನೀಡುವ ಈ ಸ್ಥಳಕ್ಕೆ ತನ್ನ ಸಂಗಾತಿಯೊಂದಿಗೆ ಸಂತೋಷದಿಂದ ಮುಖ್ಯವಾಗಿ ಏಕಾಂತವಾಗಿರಲು ಬಯಸುತ್ತಾರೆ. ನಿಮ್ಮ ಏಕಾಂತಕ್ಕೆ ಭಂಗಬಾರದಂತೆ ಇರಲು ಗೋವಾದಲ್ಲಿ ಈ ಬೀಚ್‍ಗಳಿಗೆ ಭೇಟಿ ನೀಡಿ ಬನ್ನಿ.

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ವೆಲ್ಸಾವ್ ಬೀಚ್
ಇದು ಗೋವಾದಲ್ಲಿನ ಅದ್ಭುತವಾದ ಬೀಚ್‍ಗಳಲ್ಲಿ ಒಂದಾಗಿದೆ. ವೆಲ್ಸಾವ್ ಕ್ಯಾನ್ಸುಲಿಮ್ ಹಳ್ಳಿಗೆ ಸಮೀಪದಲ್ಲಿರುವ ಒಂದು ದೊಡ್ಡ ಮರಳು ತೀರ ಇದಾಗಿದೆ. ಈ ಬೀಚ್ ತನ್ನ ಸುಂದರವಾದ ಹಾಗು ಮೃದುವಾದ ಮರಳಿನಿಂದ ಕಂಗೊಳಿಸುತ್ತಿರುತ್ತದೆ. ಈ ಬೀಚ್ ಮುಖ್ಯವಾಗಿ ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಬೀಚ್ ಪಾಮ್ ಮರಗಳಿಂದ ಕೂಡಿದೆ. ಪಣಜಿಯಿಂದ ಸುಮಾರು 14 ಕಿ.ಮೀ ದೂರದಲ್ಲಿರುವುದರಿಂದ ಅನೇಕ ಪ್ರವಾಸಿಗರು ಈ ಸುಂದರವಾದ ಬೀಚ್‍ಗೆ ಭೇಟಿ ನೀಡುತ್ತಿರುತ್ತಾರೆ. ಇದೊಂದು ರಹಸ್ಯವಾದ ಶೃಂಗಾರವನ್ನು ಹೆಚ್ಚಿಸುವ ಬೀಚ್ ಇದಾಗಿದೆ.

PC:Tanya Dedyukhina

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಸಿರಿಡಾವೋ ಬೀಚ್
ಸಿರಿಡಾವೋ ಬೀಚ್ ಏಕಾಂತವಾಗಿ ಶೃಂಗಾರಮಯವಾದ ಸಮಯವನ್ನು ಕಳೆಯಲು ಸೂಕ್ತವಾದ ಬೀಚ್ ಇದಾಗಿದೆ. ಸಿರಿಡಾವೋ ಬೀಚ್ ಎಂಬುದು ಗೋವಾ ರಾಜ್ಯದಲ್ಲಿನ ಉತ್ತರ ಭಾಗದ ಜಿಲ್ಲೆಯ ತಾಲ್ಲೂಕಿನಲ್ಲಿ ಈ ಹಳ್ಳಿ ಇದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳು ಕೂಡ ಇವೆ. ಸಿರಿಡಾವೋ ಬೀಚ್ ಪಣಜಿಯಿಂದ ಸುಮಾರು 7.5 ಮೈಲಿ ದೂರದಲ್ಲಿದೆ. ಈ ಬೀಚ್ ಕಲ್ಲು ಹಾಗು ಮರಳಿನಿಂದ ಕೂಡಿದೆ. ಈ ತಾಣಕ್ಕೆ ಭೇಟಿ ನೀಡಲು ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸ್ವಿಮ್ಮಿಂಗ್, ಫಿಷಿಂಗ್, ಬೋಟ್ ರೈಡಿಂಗ್‍ನಂತಹ ಆನಂದಮಯ ಚಟುವಟಿಕೆಗಳು ಕೂಡ ಮಾಡಬಹುದಾಗಿದೆ.

PC:abcdz2000

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಲವರ್ರ್ಸ್ ಬೀಚ್
ಲವರ್ರ್ಸ್ ಬೀಚ್ ಅತ್ಯಂತ ರಹಸ್ಯ ಹಾಗು ಶೃಂಗಾರವನ್ನು ಹೊಂದಿರುವ ಬೀಚ್ ಇದಾಗಿದ್ದು, ಅನೇಕ ಪ್ರವಾಸಿಗರು ಈ ಬೀಚ್‍ಗೆ ಭೇಟಿ ನೀಡುತ್ತಿರುತ್ತಾರೆ. ಇದು ಬೆಟ್ಟಾಲ್ಬಾಟಿಮ್ ಬೀಚ್‍ನ ಉತ್ತರ ಭಾಗದಲ್ಲಿದೆ. ಲವರ್ಸ್ ಬೀಚ್ ಎಂದು ಸ್ಥಳೀಯರು ಹೆಸರು ಇಟ್ಟಿದ್ದಾರೆ. ಏಕೆಂದರೆ ಸಂಜೆಯ ಸಮಯದಲ್ಲಿ ಪ್ರಣಯ ಪೂರ್ವ ದಂಪತಿಗಳು ಇಲ್ಲಿ ಭೇಟಿ ನೀಡುತ್ತಿರುತ್ತಾರೆ. ಈ ಬೀಚ್ ಗೋವಾದಿಂದ ಸುಮಾರು 6 ಕಿ.ಮೀ ದೂರದಲ್ಲಿದೆ. ದಂಪತಿಗಳು ಮತ್ತು ಪ್ರೇಮಿಗಳೇ ಅಲ್ಲದೇ ಅನೇಕ ಪ್ರವಾಸಿಗರು ಕೂಡ ಬೀಚ್‍ಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಪೈನ್ ಮರಗಳನ್ನು ಕಾಣಬಹುದು.


PC:Adi

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಹೊಲಂಟ್ ಬೀಚ್
ಗೋವಾದಲ್ಲಿನ ಹೊಲಂಟ್ ಬೀಚ್ ದಂಪತಿಗಳಿಗೆ ಹಾಗು ಪ್ರವಾಸಿಗರಿಗೆ ಹೆಚ್ಚು ಆಕರ್ಷಿಸುತ್ತದೆ. ಇಲ್ಲಿ ಸೂರ್ಯೋದಯವನ್ನು ವೀಕ್ಷಿಸಲು ಅತ್ಯುತ್ತಮವಾದ ಸ್ಥಳವಾಗಿದೆ. ಬೋಗ್ಮಾಲೋ ಬೀಚ್‍ಗೆ ಭೇಟಿ ನೀಡುವವರು ಈ ಅದ್ಭುತವಾದ ಬೀಚ್ ಅನ್ನು ಯಾರು ಕೂಡ ತಪ್ಪಿಸಿಕೊಳ್ಳುವುದಿಲ್ಲ. ಇದೊಂದು ಶೃಂಗಾರಮಯವಾದ ಬೀಚ್ ಆಗಿದೆ. ಗೋವಾದಿಂದ ಸುಮಾರು 2 ಕಿ,ಮೀ ದೂರದಲ್ಲಿದೆ. ಗೋವಾದ ಪ್ರಮುಖ ದಕ್ಷಿಣ ಕಡಲತೀರಗಳು ಮತ್ತು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿನ ಸುಂದರವಾದ ನೋಟವನ್ನು ಇದು ನೀಡುತ್ತದೆ.


PC:ShadesofIndia


ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗ್ರ್ಯಾಂಡ್ ಮದರ್ ಹೋಲ್ ಬೀಚ್
ಗೋವಾದಲ್ಲಿನ ಅತ್ಯಂತ ಸುಂದರವಾದ ಹಾಗು ಏಕಾಂತವಾದ ಬೀಚ್‍ಗಳಲ್ಲಿ ಈ ಗ್ಯ್ರಾಂಡ್ ಮದರ್ ಹೋಲ್ ಬೀಚ್ ಕೂಡ ಒಂದು. ಈ ಬೀಚ್ ಅತಿ ಸ್ವಚ್ಛವಾಗಿರುತ್ತದೆ. ಇಲ್ಲಿ ದುರ್ಗಾಮಾತೆಯ ಹಾಗು ಶಿವನ ದೇವಾಲಯವು ಕೂಡ ಇದೆ. ಬಂಡೆಗಳ ಮೇಲೆ ಜಪಾನ್ ಉದ್ಯಾನವನವೂ ಕೂಡ ಇದೆ. ಇದು ಭಾರತದಲ್ಲಿ ವಿಶಿಷ್ಟವಾದ ಉದ್ಯಾನವನವಾಗಿದೆ.

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗಾಲ್ಗಿಬಾಗಾ ಬೀಚ್
ಗೋವಾದ ದಕ್ಷಿಣ ಭಾಗದಲ್ಲಿ ಕ್ಯಾನಕೋನಾ ಪ್ರದೇಶ ಎಂಬಲ್ಲಿ ಸುಮಾರು 7 ಕಿ.ಮೀ ದೂರದಲ್ಲಿ ಗಾಲ್ಗಿಬಾಗಾ ಬೀಚ್ ಇದೆ. ಇಡೀ ಅರಬ್ಬೀ ಸಮುದ್ರದ ಕರಾವಳಿಯು ತಲ್ಪೂನಾ ನದಿಯಿಂದ ಗಲ್ಗಿಬಾಗಾ ನದಿಯ ಬದಿಗೆ ಇಡೀ ಕರಾವಳಿಯಲ್ಲಿದೆ. ಈ ಬೀಚ್ ನವದಂಪತಿಗಳು ಏಕಾಂತವಾಗಿ ಕಾಲ ಕಳೆಯಲು ಸೂಕ್ತವಾದ ಬೀಚ್ ಇದಾಗಿದೆ.

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಡೌನಾ ಪೌಲಾ ಬೀಚ್, ಗೋವಾ
ಇದೊಂದು ಸುಂದರವಾದ ಬೀಚ್ ಆಗಿದ್ದು, ಅನೇಕ ನವ ದಂಪತಿಗಳು, ಪ್ರೇಮಿಗಳು ತಮ್ಮ ಏಕಾಂತವನ್ನು ಕಳೆಯಲು ಭೇಟಿ ನೀಡುತ್ತಿರುತ್ತಾರೆ. ಪಣಜಿಯಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಈ ಬೀಚ್ ಗೋವಾದ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಹೊಂದಿರುವ ಬೀಚ್‍ಗಳಲ್ಲಿ ಇದು ಕೂಡ ಒಂದಾಗಿದೆ. ಈ ಬೀಚ್ ಮುಖ್ಯವಾಗಿ "ಪ್ರೇಮಿಗಳ ಸ್ವರ್ಗ" ಎಂದೇ ಹೆಸರುವಾಸಿಯಾಗಿದೆ. ಇದು ಮರ್ಮುಗೋ ಬಂದರಿನ ಅದ್ಭುತವಾದ ನೋಟವನ್ನು ನೀಡುತ್ತದೆ. ಇಲ್ಲಿ ಹೆಚ್ಚಾಗಿ ಪಾಮ್ ಮರಗಳಿಂದ ಸುತ್ತುವರಿದಿದೆ.

PC:SahilSahadevan

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಕೋಲಾ ಬೀಚ್ ಬ್ಯೂಟಿ
ಕೋಲಾ ಬೀಚ್ ಅನ್ನು ಖೋಲಾ ಬೀಚ್ ಎಂದು ಕೂಡ ಕರೆಯುತ್ತಾರೆ. ಇದೊಂದು ರಹಸ್ಯ ಹಾಗು ಶೃಂಗಾರಮಯವಾದ ಬೀಚ್ ಇದಾಗಿದೆ. ಶಾಂತಿಯುತವಾದ ರಜೆಯ ಅನುಭವವಕ್ಕಾಗಿ ಗೋವಾಕ್ಕೆ ಬಂದವರು ಖಂಡಿತವಾಗಿ ಅವರು ಸ್ವರ್ಗಕ್ಕೆ ಪ್ರವೇಶಿಸುವಂತೆ ಇರುತ್ತದೆ. ಗೋವಾದಲ್ಲಿನ ತೀರಗಳಿಗಿಂತ ಹೆಚ್ಚು ಸ್ವಚ್ಛ ಹಾಗು ನಿಶ್ಯಬ್ಧವಾದ ಬೀಚ್ ಇದಾಗಿದೆ. ಇದು ವಿಲಕ್ಷಣ ಸೌಂದರ್ಯ ಮತ್ತು ಪ್ರಶಾಂತತೆಯನ್ನು ಉಂಟು ಮಾಡುತ್ತದೆ.

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಕ್ಯಾಂಡೋಲಿಮ್ ಬೀಚ್
ಗೋವಾದ ಬಾಗಾ ಮತ್ತು ಕ್ಯಾಲಂಗುಟೆ ಬೀಚ್ ಒಂದು ಸುಂದರವಾದ ಬೀಚ್‍ಗಳಲ್ಲಿ ಒಂದಾಗಿದೆ. ಇಲ್ಲಿ ಏಕಾಂತವಾಗಿ ಕಳೆಯಲು ಹೇಳಿ ಮಾಡಿಸಿದ ಜೋಡಿ ಇದಾಗಿದೆ. ಸಾಕಷ್ಟು ಮನರಂಜನಾ ಆಯ್ಕೆಗಳಾಗಿ ಜನಪ್ರಿಯವಾಗಿದೆ. ಈ ಬೀಚ್ ಮಧುಚಂದ್ರ ದಂಪತಿಗಳಿಗೆ, ಸ್ನೇಹಿತರಿಗೆ ಅಥವಾ ಕುಟುಂಬದವರ ಜೊತೆ ಕಾಲ ಕಳೆಯಲು ಸೂಕ್ತವಾದ ಸ್ಥಳವೆಂದೇ ಹೇಳಬಹುದು. ಪಣಜಿಯಿಂದ ಸುಮಾರು 14 ಕಿ.ಮೀ ದೂರದಲ್ಲಿದೆ. ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಬೀಚ್‍ಗೆ ಭೇಟಿ ನೀಡುತ್ತಾರೆ.

PC:Vishalnagula

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಗೋವಾದಲ್ಲಿನ ರಹಸ್ಯ ಶೃಂಗಾರ ಬೀಚ್‍ಗಳು ಇವೆ....

ಬಟರ್ ಫ್ಲೈ ಬೀಚ್
ಬಟರ್ ಫ್ಲೈ ಬೀಚ್ ದಕ್ಷಿಣ ಗೋವಾದ ಪೆಟ್ಟಿಟ್ ಬೀಚ್‍ನಲ್ಲಿದೆ. ಇದು ದಟ್ಟವಾದ ಮರಗಳಿಂದ ಆವೃತ್ತವಾದ ಸಣ್ಣ ಕೋವ್ ಮತ್ತು ಪ್ರಕೃತಿ ಪ್ರೇಮಿಗಳಿಗೆ ಸುಂದರವಾದ ಸ್ಥಳವಾಗಿದೆ. ಸುತ್ತಮುತ್ತಲಿನ ಮರಗಳು ಆಗಾಗ್ಗೆ ವಿವಿಧ ಚಿಟ್ಟೆಗಳನ್ನು ಆಕರ್ಷಿಸುತ್ತವೆ. ಈ ಅದ್ಭುತವಾದ ಕಡಲತೀರವು ಚಿಟ್ಟೆಯ ಆಕಾರದಲ್ಲಿರುವುದರಿಂದ ಈ ಬೀಚ್‍ಗೆ ಈ ಹೆಸರು ಇಡಲಾಗಿದೆ. ವರ್ಣರಂಜಿತವಾದ ಚಿಟ್ಟೆ ವಿಶೇಷವಾಗಿ ಸೂರ್ಯಾಸ್ತದ ಸಮಯದಲ್ಲಿ ಅದು ಸುಂದರವಾಗಿರುತ್ತದೆ. ಏಂಕಾತವಾಗಿ ಕಾಲ ಕಳೆಯಲು ಇದೊಂದು ಪ್ರಶ್ಯಸ್ತವಾದ ಸ್ಥಳವೇ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X