India
Search
  • Follow NativePlanet
Share
» »ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!

ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!

ಬಾದಾಮಿಯ ಬಗ್ಗೆ ಹೇಳಬೇಕೆಂದರೆ, ಇದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿದೆ. ಈ ಪಟ್ಟಣವುಇಲ್ಲಿರುವ ಕಲ್ಲಿನ ದೇವಾಲಯಗಳಿಗಾಗಿ ಈ ಪಟ್ಟಣವು ಸಾಕಷ್ಟು ಪ್ರಸಿದ್ದಿಯನ್ನು ಹೊಂದಿದೆ. ಮನಮೋಹಕ ಗುಹಾಂತರ ದೇವಾಲಯಗಳ ಜೊತೆಗೆ ಬಾದಾಮಿ ಕೋಟೆಯೂ ಕೂಡಾ ಅಷ್ಟೇ ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿಯ ಪ್ರಮುಖ ಆಕರ್ಷಣೆಗಳಲ್ಲಿ ಅಗಸ್ತ್ಯ ಲೇಕ್, ಮತ್ತು ಪುರಾತತ್ವದ ವಸ್ತುಸಂಗ್ರಹಾಲಯವೂ ಸೇರಿದೆ. ಅಲ್ಲದೆ ಇಲ್ಲಿಯ ಭೂತನಾಥ ದೇವಾಲಯವೂ ಕೂಡಾ ಕಣ್ಣಿಗೆ ಹಬ್ಬವನ್ನು ನೀಡುತ್ತದೆ. ಮಲಪ್ರಭಾ ನದಿಯ ಬಗ್ಗೆ ಕೇಳಿದ್ದೀರಾ? ಐಹೊಳೆ ಪ್ರಸ್ತುತ ಬಾದಾಮಿಯಲ್ಲಿ ಭೇಟಿ ನೀಡಲು ಅದ್ಭುತವಾದ ಸ್ಥಳವಾಗಿದೆ . ನೀವು ಆಕರ್ಷಕವಾದ ರಾಕ್-ಕಟ್ ವಾಸ್ತುಶೈಲಿಯ ಬಗ್ಗೆ ಹೇಳಬೇಕೆಂದರೆ ಬಾದಾಮಿಯು ಅಂತಹ ದೇವಾಲಯಗಳಿಗೆ ನೆಲೆಯಾಗಿದೆ ಎನ್ನಬಹುದು.
ಬಾದಾಮಿಯನ್ನು ಅದರ ಪೌರಾಣಿಕ ಹೆಸರಾದ ವಾತಾಪಿಯ ಮೂಲಕ ಕರೆಯುವುದು ಹೇಗೆ? ಕ್ರಿ.ಶ 540 ರಿಂದ ಕ್ರಿ.ಶ 757 ರವರೆಗೆ ಈ ಹೆಮ್ಮೆಯ ಪಟ್ಟಣವು ಬಾದಾಮಿ ಚಾಲುಕ್ಯರ ರಾಜಧಾನಿಯಾಗಿತ್ತು ಆದರೂ ಇದು ವಾತಾಪಿಯ ರಾಜಧಾನಿ ಹೇಗಾಯಿತು ಎನ್ನುವ ಪ್ರಶ್ನೆಯು ಇನ್ನೂ ಉಳಿದಿದೆ. ಕ್ರಿ.ಶ. 500 ರಲ್ಲಿ ಚಾಲುಕ್ಯರ ಸಾಮ್ರಾಜ್ಯವು ಪ್ರಾಮುಖ್ಯತೆಯನ್ನು ಪಡೆದ ನಂತರ ಚಾಲುಕ್ಯರ ರಾಜನಾದ ಪುಲಕೇಶಿಯು ತನ್ನ ಕೋಟೆಯನ್ನು ನಿರ್ಮಿಸಲು ವಾತಾಪಿಯನ್ನು ಆಶ್ರಯಿಸಿದನು ಮತ್ತು ಅದನ್ನು ತನ್ನ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡನು ಎಂದು ಇತಿಹಾಸ ಹೇಳುತ್ತದೆ.
ಬಾದಾಮಿ ಚಾಲುಕ್ಯರು ಹಲವಾರು ಅತ್ಯದ್ಬುತವಾದ ವಾಸ್ತುಶಿಲ್ಪವುಳ್ಳ ಸ್ಮಾರಕಗಳನ್ನು ನಿರ್ಮಿಸಿದ್ದು ಯಾರೆ ಆಗಲಿ ಇದನ್ನು ನೋಡಿದರೆ ಹೆಮ್ಮೆ ಪಡುವಂತಿದೆ. ಚಾಲುಕ್ಯರು ತಮ್ಮ ಕಟ್ಟಡಗಳ ವಾಸ್ತುಶಿಲ್ಪಗಳಲ್ಲಿ ದ್ರಾವಿಡ ಶೈಲಿಯನ್ನು ಬಳಸುತ್ತಿದ್ದ ರೀತಿಯು ಸಹ ಸಾಕಷ್ಟು ಪಭಾವಶಾಲಿಯಾಗಿದೆ.ಬಾದಾಮಿಯು ವಿಜಯನಗರ ಸಾಮ್ರಾಜ್ಯ, ಆದಿ ಶಾಹಿ ರಾಜವಂಶ, ಮೊಘಲರು, ಮರಾಠರು, ಮೈಸೂರು ಸಾಮ್ರಾಜ್ಯ ಮತ್ತು ಬ್ರಿಟಿಷರಂತಹ ಹಲವಾರು ರಾಜರುಗಳು ಮತ್ತು ರಾಜವಂಶಗಳ ನಿಯಂತ್ರಣದಲ್ಲಿತ್ತು.

badami palces to explore

ಬಾದಾಮಿಯನ್ನು ತಲುಪುವುದು ಹೇಗೆ?

ವಾಯುಮಾರ್ಗದ ಮೂಲಕ : ಬಾದಾಮಿಗೆ ಅತ್ಯಂತ ಹತ್ತಿರವಿರುವ ವಿಮಾನ ನಿಲ್ದಾಣಗಳೆಂದರೆ ಹುಬ್ಬಳಿ (ಸುಮಾರು 106ಕಿ.ಮೀ) ಮತ್ತು ಬೆಳಗಾಮ್ (ಸುಮಾರು150 ಕಿ.ಮೀ) ಈ ವಿಮಾನ ನಿಲ್ದಾಣಗಳು ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಉತ್ತಮವಾಗಿ ಸಂಪರ್ಕವನ್ನು ಹೊಂದಿದೆ. ಒಮ್ಮೆ ನೀವು ಹುಬ್ಬಳ್ಳಿ ಅಥವಾ ಬೆಳಗಾಮ್ ತಲುಪಿದ ನಂತರ ಬಾದಾಮಿಗೆ ಟ್ಯಾಕ್ಸಿ ಅಥವಾ ಬಸ್ಸುಗಳ ಮೂಲಕ ಪ್ರಯಾಣಿಸಬಹುದಾಗಿದೆ.

ರೈಲಿನ ಮೂಲಕ: ಸುಮಾರು 5 ಕಿ.ಮೀ ದೂರದಲ್ಲಿರುವ 'ಬಾದಾಮಿ ಬಸ್ ನಿಲ್ದಾಣ'ಕ್ಕೆ 'ಬಾದಾಮಿ ರೈಲು ನಿಲ್ದಾಣ' ಸಾಕಷ್ಟು ಹತ್ತಿರದಲ್ಲಿದೆ. ಬೆಂಗಳೂರು, ಹುಬ್ಬಳ್ಳಿ, ಬಿಜಾಪುರ, ಗದಗ, ಸೋಲಾಪುರ ಮತ್ತು ಇತರ ಕೆಲವು ನಗರಗಳಿಂದ ಬಲವಾದ ರೈಲು ಸಂಪರ್ಕವಿದೆ. ಬಾದಾಮಿಗೆ ಹತ್ತಿರದ ರೈಲ್ವೇ ಜಂಕ್ಷನ್ ಖಂಡಿತವಾಗಿಯೂ ಹುಬ್ಬಳ್ಳಿ ಆಗಿದ್ದು, ಇಲ್ಲಿಂದ ಭಾರತದ ಇನ್ನಿತರ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನೀವು ಬೆಂಗಳೂರಿನ ಯಶವಂತಪುರ ಜಂಕ್ಷನ್ ನಿಂದ ಬಾದಾಮಿಗೆ ನೇರವಾಗಿ ರೈಲು ಪ್ರಯಾಣ ಮಾಡಬಹುದಾಗಿದೆ. ನಿಮಗೆ ಅನುಕೂಲಕ್ಕಾಗಿ ಕೆಲವು ರೈಲು ನಿಲ್ದಾಣ ಕೋಡ್ ಗಳು ಇಲ್ಲಿವೆ ಬಾದಾಮಿ ರೈಲು ನಿಲ್ದಾಣ ಕೋಡ್ (ಬಿಡಿಎಂ), ಹುಬ್ಬಳ್ಳಿ ರೈಲು ನಿಲ್ದಾಣ ಕೋಡ್ (ಯುಬಿಎಲ್) ಮತ್ತು ಬೆಂಗಳೂರು ರೈಲು ನಿಲ್ದಾಣ ಕೋಡ್ (ಎಸ್ ಬಿಸಿ). ಎಂದು ಆಗಿರುತ್ತದೆ.

ರಸ್ತೆ ಮೂಲಕ : ಬಾದಾಮಿಯು ರಸ್ತೆಯ ಮೂಲಕ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೆಂಗಳೂರು, ಬಾಗಲಕೋಟೆ, ಹಂಪಿ, ಬಿಜಾಪುರ ಮತ್ತು ಇತರ ನಗರಗಳಿಂದ ರಸ್ತೆ ಸಂಪರ್ಕದ ಮೂಲಕ ಬಾದಾಮಿಯನ್ನು ತಲುಪಬಹುದಾಗಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಬಿಜಾಪುರದಿಂದ ಹಲವಾರು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ಮೂಲಕವೂ ಪ್ರಯಾಣಿಸಬಹುದಾಗಿದೆ ಅಲ್ಲದೆ ಸ್ಥಳೀಯ ಸಾರಿಗೆಯ ಮತ್ತೊಂದು ಸಾಧನವೆಂದರೆ ಕುದುರೆ ಗಾಡಿ ,ಟಾಂಗಾಗಳು, ಮತ್ತು ಆಟೋ ರಿಕ್ಷಾಗಳು ಇವುಗಳು ನಗರದಲ್ಲಿ ಸುಲಭವಾಗಿ ಲಭ್ಯವಿರುತ್ತವೆ.

ಬಾದಾಮಿಗೆ ಭೇಟಿ ಕೊಡಲು ಉತ್ತಮವಾದ ಸಮಯ

ಬಾದಾಮಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅದು ಜುಲೈನಿಂದ ಮಾರ್ಚ್ ನಡುವೆ ಇರುತ್ತದೆ. ಇಡೀ ವರ್ಷದಲ್ಲಿ ತಾಪಮಾನದಲ್ಲಿ ಬದಲಾವಣೆಗಳು ವಿಪರೀತವೂ ಅಲ್ಲದೆ ಮತ್ತು ಸಾಕಷ್ಟು ಕಡಿಮೆ ಇರುತ್ತದೆ. ಬಾದಾಮಿಯಲ್ಲಿ ಚಳಿಗಾಲವು ಹಿತವಾಗಿರುತ್ತದೆ ಮತ್ತು ಮಾನ್ಸೂನ್ ಋತುವಿನಲ್ಲಿ ಮಳೆಯು ಸರಾಸರಿ ಮಳೆಯಿಂದ ಭಾರಿ ಮಳೆ ಬೀಳುವರೆಗೆ ಅನಿಶ್ಚಿತವಾದ ಹವಾಮಾನವಿರುವುದು ಕಂಡು ಬರುತ್ತದೆ.

ಬಾದಾಮಿಯಲ್ಲಿ ಪ್ರವಾಸಿಗರ ಆಕರ್ಷಣೆಯ ಸ್ಥಳಗಳ ಪಟ್ಟಿ ಹೀಗಿದೆ ನೋಡಿ

badami caves

1)ಬಾದಾಮಿಯ ಗುಹಾಂತರ ದೇವಾಲಯಗಳು

ಬಾದಾಮಿಯಲ್ಲಿರುವ ಅದ್ಬುತವಾದ ದೇವಾಲಯಗಳ ಶ್ರೇಯಸ್ಸು 6ನೇ ಮತ್ತು 7ನೇ ಶತಮಾನದಲ್ಲಿ ಆಳಿದ ಬಾದಾಮಿ ಚಾಲುಕ್ಯರಿಗೆ ಸಲ್ಲುತ್ತದೆ. ಬಾದಾಮಿ ಗುಹಾಂತರ ದೇವಾಲಯಗಳು ಹೇಗೆ ನಿರ್ಮಾಣವಾದವು ಎಂದು ನಿಮಗೆ ತಿಳಿದಿದೆಯೇ? ಹೌದು ಈ ದೇವಾಲಯಗಳನ್ನು ನಗರದಲ್ಲಿಯೇ ನೆಲೆಗೊಂಡಿರುವ ಭವ್ಯವಾದ ಮರಳುಗಲ್ಲಿನ ಬಂಡೆಯಿಂದ ಅವುಗಳನ್ನು ಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ.

ಬಂಡೆಯಿಂದ ಮರಳುಗಲ್ಲನ್ನು ಆಯ್ಕೆ ಮಾಡುವುದು ಅದು ಕೆತ್ತನೆಯ ಉದ್ದೇಶಕ್ಕಾಗಿ ಪರಿಪೂರ್ಣವಾದ ಉತ್ತಮ ಆಯ್ಕೆಯಾಗಿದ್ದು,ಇವುಗಳನ್ನು ಉಪಯೋಗಿಸಿಯೇ ಗುಹಾಂತರ ದೇವಾಲಯಗಳನ್ನು ನಿರ್ಮಿಸಲಾಗುತ್ತಿತ್ತು ಇವು ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ಅತ್ಯಂತ ಬೆರಗುಗೊಳಿಸುವ ಉದಾಹರಣೆಗಳಾಗಿವೆ. ಈ ದೇವಾಲಯಗಳು ಎಲ್ಲಿವೆ ಎಂದರೆ ಇವುಗಳು ಕಂದಕಗಳ ನಡುವೆ ನೆಲೆಗೊಂಡಿದ್ದು ಸುತ್ತಮುತ್ತಲಿನಲ್ಲಿ ಬೃಹತ್ ಬಂಡೆಗಳನ್ನು ಒಳಗೊಂಡಿದೆ. ಈ ದೇವಾಲಯಗಳ ವಾಸ್ತುಶಿಲ್ಪಗಳು ಉತ್ತರಭಾರತದ ನಾಗರ ಮತ್ತು ದಕ್ಷಿಣಭಾರತದ ದ್ರಾವಿಡ ಶೈಲಿಯ ಮಿಶ್ರಣವಾಗಿದೆ.

ಬಾದಾಮಿಯಲ್ಲಿರುವ ನಾಲ್ಕು ಗುಹಾಂತರ ದೇವಾಲಯಗಳ ಬಗ್ಗೆ ನಾವು ವಿವರಗಳನ್ನು ಪರಿಶೀಲಿಸಬಹುದು. ಸುಮಾರು ೪೦ ಮೆಟ್ಟಿಲುಗಳನ್ನು ಹೊಂದಿರುವ ಮೊದಲ ಗುಹೆಯು ಸಂಪೂರ್ಣವಾಗಿ ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿ ನಟರಾಜನ ಅವತಾರವನ್ನು ಎತ್ತಿದ 18 ಕೈಗಳ ಶಿವನ ಶಿಲ್ಪದ ಜೊತೆಗೆ ಸುಮಾರು 81 ಶಿವದೇವರ ಶಿಲ್ಪಗಳನ್ನು ತನ್ನಲ್ಲಿ ಹೊಂದಿದೆ . ಕೆಂಪು ಮರಳುಗಲ್ಲಿನ ಸೌಂದರ್ಯತೆಯಿಂದ ಹೊಳೆಯುತ್ತಿರುವ ಈ ಗುಹೆಯು ಹಲವಾರು ಸ್ತಂಭಗಳು ಮತ್ತು ಗರ್ಭಗುಡಿ, ತೆರೆದ ವರಾಂಡ, ಚಾವಣಿಗಳು ಮತ್ತು ಕಂಬಗಳಲ್ಲಿ ಸುಂದರವಾದ ವರ್ಣ ಚಿತ್ರಗಳಿಂದ ಅಲಂಕೃತವಾದ ದಂಪತಿಗಳ ಚಿತ್ರಗಳನ್ನು ಹೊಂದಿರುವ ಸಭಾಂಗಣವನ್ನು ಪ್ರದರ್ಶಿಸುತ್ತದೆ.
ಮರಳುಗಲ್ಲಿನ ಬೆಟ್ಟದ ತುದಿಯಲ್ಲಿರುವ ಇನ್ನೊಂದು ಗುಹೆಯನ್ನು ನೀವು ನೋಡ ಬಯಸುವಿರಾ? ಈ ಎರಡನೆ ಗುಹೆಯು ಬ್ರಹ್ಮಾಂಡ ರಕ್ಷಕನೆಂದು ಪರಿಗಣಿಸಲ್ಪಟ್ಟಿರುವ ವಿಷ್ಣು ದೇವರಿಗೆ ಅರ್ಪಿತವಾದುದಾಗಿದೆ ಇಲ್ಲಿ ಭಗವಂತನನ್ನು ಕುಬ್ಜ ಅಥವಾ ತ್ರಿವಿಕ್ರಮನಂತೆ ಚಿತ್ರಿಸಲಾಗಿದೆ , ವಿಷ್ಣು ದೇವರು ತನ್ನ ಒಂದು ಪಾದವನ್ನು ನೆಲದ ಮೇಲೆ ಇಟ್ಟು ಭೂಮಿಯ ಮೇಲೆ ತನ್ನ ನಿಯಂತ್ರಣವನ್ನು ಘೋಷಿಸುತ್ತಾನೆ. ಇನ್ನೊಂದು ಪಾದವನ್ನು ಆಕಾಶಕ್ಕೆ ಇಟ್ಟು ಭೂಮಿ ಮತ್ತು ಆಕಾಶದವರೆಗೆ ತನ್ನ ಅಧಿಕಾರವನ್ನು ಸ್ಥಾಪಿಸುತ್ತಾನೆ ಈ ಕಥೆಯನ್ನು ಬಿಂಬಿಸುವ ಚಿತ್ರಗಳನ್ನು ಇಲ್ಲಿ ಚಿತ್ರಿಸಲಾಗಿದೆ.

ಇದಾದ ನಂತರ ಇಲ್ಲಿ ಕಾಣ ಸಿಗುವ ಮೂರನೇ ಗುಹಾಂತರ ದೇವಾಲಯದ ಮುಂಬಾಗವು ಸುಮಾರು 70ಅಡಿ ಅಗಲವಿದೆ. ಈ ದೇವಾಲಯವು ಗಣಗಳ ಚಿತ್ರಗಳಿಂಡ ಅಲಂಕರಿಸಲ್ಪಟ್ಟಿದೆ. ಡೆಕ್ಕನ್ ಶೈಲಿಯ ವಾಸ್ತುಶಿಲ್ಪಸೌಂದರ್ಯತೆಯ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಬೇಕೆಂದಾದಲ್ಲಿ ಈ ದೇವಾಲಯವು ಒಂದು ಉದಾಹರಣೆಯಾಗಿದ್ದು,ಇದರ ಆಕಾರವು ಡೆಕ್ಕನ್ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ನರಸಿಂಹ, ವರಾಹ, ಹರಿಹರ, ಮತ್ತು ತ್ರಿವಿಕ್ರಮ ರೂಪಗಳ ಜೊತೆಗೆ ವಿಷ್ಣು ದೇವರ ನಾನಾ ರೂಪಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇವುಗಳ ಜೊತೆಗೆ ವಿಷ್ಣು ದೇವರು ಇಲ್ಲಿ ಸರ್ಪದ ಜೊತೆಗಿರುವ ಬೃಹತ್ ವಿಗ್ರಹವು ಗಮನ ಸೆಳೆಯುತ್ತದೆ.

ನಾಲ್ಕನೇ ಗುಹೆ ದೇವಾಲಯವು ಜೈನರ 24ನೇತೀರ್ಥಂಕರರಾದ ಭಗವಾನ್ ಮಹಾವೀರರಿಗೆ ಅರ್ಪಿತವಾದುದಾಗಿದೆ. ಈ ದೇವಾಲಯವು 7ನೇ ಶತಮಾನಕ್ಕೆ ಸೇರಿದುದಾಗಿದ್ದು ಹಿಂದಿನ ಗುಹೆಗಳು ಅಸ್ತಿತ್ವಕ್ಕೆ ಬಂದ ಸುಮಾರು 100 ವರ್ಷಗಳ ನಂತರ ಬೆಳಕಿಗೆ ಬಂತು. ಇಲ್ಲಿ ನಿಸ್ಸಂದೇಹವಾಗಿ ನೀವು ಭಗವಾನ್ ಮಹಾವೀರನು ಕುಳಿತಿರುವ ಭಂಗಿಯ ದೇಗುಲವನ್ನು ಕಾಣಬಹುದಾಗಿದೆ.

ಅಲ್ಲದೆ, ಈ ಸ್ಥಳಕ್ಕೆ ಭೇಟಿ ನೀಡುವ ವ್ಯಕ್ತಿಗಳಿಗೆ ಪ್ರವೇಶ ಶುಲ್ಕವನ್ನು ವಿಧಿಸಲಾಗುತ್ತದೆ. ಇಲ್ಲಿ 15 ವರ್ಷವರೆಗಿನ ವಯಸ್ಸಿನ ಮಕ್ಕಳಿಗೆ ಪ್ರವೇಶಉಚಿತವಾಗಿದೆ ಮತ್ತು ಉಳಿದವರಿಗೆ 10ರೂಪಾಯಿಗಳ ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ ಹಾಗೂ ವಿದೇಶಿಯರಿಗೆ ಇಲ್ಲಿ 100 ರೂ. ಪ್ರವೇಶ ಶುಲ್ಕ ವಿಧಿಸಲಾಗುತ್ತದೆ.

2)ಭೂತನಾಥ ದೇವಾಲಯಗಳ ಸಮೂಹ

ಕಿ.ಶ 7 ನೇ ಮತ್ತು 11ನೇ ಶತಮಾನಗಳ ಮಧ್ಯದಲ್ಲಿ ಬಾದಾಮಿ ಚಾಲುಕ್ಯರಿಂದ ಮೃದುವಾದ ಮರಳುಗಲ್ಲಿನಿಂದ ನಿರ್ಮಿತವಾದ ಈ ದೇವಾಲಯವು ಈ ಪ್ರದೇಶದಲ್ಲಿ ಸಾಕಷ್ಟು ಪ್ರಸಿದ್ದಿಯನ್ನು ಪಡೆದ ದೇವಾಲಯವಾಗಿದೆ. ಇನ್ನು ಹಿಂದುಗಳ ಭಕ್ತಿಯ ವಿಷಯಕ್ಕೆ ಬರುವುದಾದರೆ ಈ ದೇವಾಲಯವು ಭೂತನಾಥ ದೇವರಿಗೆ ಅರ್ಪಿತವಾಗಿದ್ದು ಇಲ್ಲಿ ಜನರ ಪ್ರೀತಿ ಪಾತ್ರನಾದ ಶಿವದೇವರಿಗೆ ಅರ್ಪಿತವಾದ ದೇವಾಲಯಗಳ ಗುಂಪನ್ನು ಕಾಣಬಹುದಾಗಿದೆ.
ದೇವಾಲಯದ ಪ್ರದೇಶವು ಅದ್ಭುತವಾದ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪದ ಒಂದು ಅನುಕರಣೀಯ ಉದಾಹರಣೆಯಾಗಿದೆ, ಇದು ಉತ್ತರ ಮತ್ತು ದಕ್ಷಿಣ ಶೈಲಿಗಳ ಸುಂದರ ಮಿಶ್ರಣವಾಗಿದೆ! ಇಲ್ಲಿ ಕಲ್ಲಿನ ಶಿಲ್ಪಗಳಾಗಲಿ ಅಥವಾ ಕಲ್ಲಿನಿಂದ ಕೆತ್ತಿದ ರಚನೆಗಳಾಗಲಿ, ಅದರ ಸೌಂದರ್ಯತೆಯು ನಿಮ್ಮನ್ನು ಮೂಕರನ್ನಾಗಿಸುತ್ತದೆ!

3)ಮಲ್ಲಿಕಾರ್ಜುನ ದೇವಾಲಯಗಳ ಸಮೂಹ

ಭೂತನಾಥ ದೇವಾಲಯಗಳ ಸಮೂಹದ ಪಕ್ಕದಲ್ಲಿಯೇ ಈ ದೇವಾಲಯಗಳ ಸಮೂಹವನ್ನು ಕಾಣಬಹುದಾಗಿದೆ. ಈ ದೇವಾಲಯಗಳು ಸುಮಾರು 11 ನೇ ಶತಮಾನದಷ್ಟು ಹಿಂದಿನದಾಗಿದ್ದು, ಇದನ್ನು ಬಾದಾಮಿ ಚಾಲುಕ್ಯರು ನಿರ್ಮಿಸಿದರು.ಇಲ್ಲಿಯ ವಿಶಿಷ್ಟ ರಚನೆಗಳು ಅವುಗಳ ಪಿರಮಿಡ್ ಆಕಾರದೊಂದಿಗೆ ಎದ್ದು ಕಾಣುತ್ತವೆ.

4) ಬಾದಾಮಿ ಕೋಟೆ

ಕ್ರಿ.ಶ 543 ರಲ್ಲಿ ಚಾಲುಕ್ಯ ರಾಜ ಪುಲಕೇಶಿ ನಿರ್ಮಿಸಿದ ಪುರಾತನವಾದ ಈ ಕೋಟೆಗೆ ನೀವು ಏಕೆ ಭೇಟಿ ನೀಡಬೇಕು? ಏಕೆಂದರೆ ಈ ಸ್ಥಳವು ತನ್ನ ಸುತ್ತಮುತ್ತಲು ಮತ್ತು ಕೋಟೆಯಲ್ಲಿ ಅಪಾರವಾದ ಸೌಂದರ್ಯತೆಯನ್ನು ಹೊಂದಿದ್ದು, ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ನಂತರ ಕ್ರಿ.ಶ 642 ರಲ್ಲಿ ಪಲ್ಲವರ ಆಗಮನದ ನಂತರ ಈ ಕೋಟೆಯು ಸಂಪೂರ್ಣವಾಗಿ ನಾಶವಾಯಿತು. ಕೋಟೆಯ ಗೋಡೆಗಳನ್ನು ಮತ್ತು ಅವುಗಳ ವಾಸ್ತುಶಿಲ್ಪದ ಅವಶೇಷಗಳನ್ನು ಮಾತ್ರ ಇಲ್ಲಿ ಗುರುತಿಸಲು ಮಾತ್ರ ನಿಮಗೆ ಸಾಧ್ಯವಾಗುತ್ತದೆ. ಗುಹೆ ದೇವಾಲಯಗಳ ಮೇಲಿರುವ ಈ ಕೋಟೆಯು ಹಿಂದಿನ ಕೆಲವು ಅಹಿತಕರ ಘಟನೆಗಳಿಂದ ಸಾರ್ವಜನಿಕರಿಗೆ ಮುಚ್ಚಲ್ಪಟ್ಟಿದೆ. ಆದರೂ, ನೀವು ಇಲ್ಲಿಯ ಕಚೇರಿಗೆ ಭೇಟಿ ನೀಡಿ ವಿಶೇಷ ಪರವಾನಗಿಯನ್ನು ಪಡೆದು ಈ ಸುಂದರ ದೃಶ್ಯವನ್ನು ಹೊಂದಿರುವ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.

5)ಮಾಲೆಗಿತ್ತಿ ಶಿವಾಲಯ

ಅಗಸ್ತ್ಯ ಸರೋವರದ ಮೇಲೆ ಎಂದಾದರೂ ಕಣ್ಣಾಡಿಸಿದ್ದೀರಾ? ಇಲ್ಲಿಯ ಶಿವ ದೇವಾಲಯದ ಮೇಲ್ಭಾಗದಲ್ಲಿ ನಿರ್ಮಿಸಲಾದ ಈ ಮಾಲೆಗಿತ್ತಿ ದೇವಾಲಯವು ನಿಮಗೆ ಹೊಳೆಯುವ ಜಲಮೂಲದ ಸುಂದರವಾದ ನೋಟವನ್ನು ನೀಡುತ್ತದೆ. ಈ ಶಿವ ದೇವಾಲಯವನ್ನು ಕ್ರಿ.ಶ. 6 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಇದು ಬಾದಾಮಿಯ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ.
ಚಾಲುಕ್ಯರ ಸಾಮ್ರಾಜ್ಯದ ಭವ್ಯ ರಾಜಧಾನಿಯಾದ ಬಾದಾಮಿಯು ಕರ್ನಾಟಕದ ಅತ್ಯುತ್ತಮ ಪ್ರವಾಸಿ ತಾಣವಾಗಿದೆ. ಈ ಭವ್ಯ ಸಾಮ್ರ್ಯಾಜ್ಯದ ಗತಕಾಲವನ್ನು ನೆನಪಿಸುವ ಸಾಕಷ್ಟು ದೊಡ್ಡ ಸಂಖ್ಯೆಯ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಮತ್ತು ಸ್ಮಾರಕಗಳಿಗೆ ಖಂಡಿತವಾಗಿಯೂ ಭೇಟಿ ನೀಡಬೇಕು!

6)ಪುರಾತತ್ವದ ವಸ್ತು ಸಂಗ್ರಹಾಲಯ (ಆರ್ಕಿಯೊಲಾಜಿಕಲ್ ಮ್ಯೂಸಿಯಂ)

ಬಾದಾಮಿ ಬಸ್ಸು ನಿಲ್ದಾಣದಿಂದ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿ ಹಾಗೂಅಗಸ್ತ್ಯ ಸರೋವರದ ಉತ್ತರ ಭಾಗದಲ್ಲಿರುವ ಬಾದಾಮಿ ಕೋಟೆಯ ತಪ್ಪಲಿನಲ್ಲಿರುವ ಸುಂದರವಾದ ಪುರಾತತ್ವದ ವಸ್ತುಸಂಗ್ರಹಾಲಯವು ನಿಮ್ಮನ್ನು ಬೆರಗುಗೊಳಿಸುವುದು ಖಚಿತ. ವಸ್ತುಸಂಗ್ರಹಾಲಯವು ಕಲ್ಲಿನ ಉಪಕರಣಗಳು, ವಾಸ್ತುಶಿಲ್ಪದ ಭಾಗಗಳು, ಶಾಸನಗಳು ಮತ್ತು ಕ್ರಿ.ಶ. 16 ನೇ ಶತಮಾನದವರೆಗಿನ ಅನೇಕ ಆಸಕ್ತಿದಾಯಕ ಕಲಾಕೃತಿಗಳ ನಿಧಿಗಳನ್ನು ಹೊಂದಿದೆ ಅಲ್ಲದೆ ಈ ಮ್ಯೂಸಿಯಂ ನ ಪ್ರವೇಶದ್ವಾರದ ಬಳಿ ಇರುವ ಶಿವನ ವಾಹನ ನಂದಿಯ ವಿಗ್ರಹವು ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ. ವಸ್ತುಸಂಗ್ರಹಾಲಯವು ಹೆಮ್ಮೆ ಪಡುವಂತಹ ಎಲ್ಲವನ್ನೂ ಹೊಂದಿದೆ.
ನಾಲ್ಕು ಗ್ಯಾಲರಿಗಳು ವರಾಂಡಾದಲ್ಲಿ ಮತ್ತು ಮುಂಭಾಗದಲ್ಲಿ ತೆರೆದ ಗ್ಯಾಲರಿಗಳನ್ನೊಳಗೊಂಡ ಇದು ಸ್ಥಳೀಯ ಶಿಲ್ಪಗಳನ್ನು ಅಸಾಧಾರಣವಾಗಿ ಪ್ರತಿನಿಧಿಸುತ್ತದೆ ಇಲ್ಲಿಯ ಅತ್ಯಂತ ಗಮನಾರ್ಹವಾದವುಗಳು ಕೃಷ್ಣ ಫಲಕ ಮತ್ತು ಕೆಲವು ಇತರ ಫಲಕಗಳು ಜನಪ್ರಿಯ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ ಮತ್ತು ಭಗವದ್ಗೀತೆಯ ಭಾಗಗಳನ್ನು ಒಳಗೊಂಡಿವೆ. ಪೂರ್ವ-ಐತಿಹಾಸಿಕ ಗುಹೆಯ ಪ್ರತಿಕೃತಿಯನ್ನು ಮತ್ತು ಗುಹೆ ಸಂಖ್ಯೆ 3 ರಲ್ಲಿರುವ ಅನೇಕ ಬಣ್ಣ ರಹಿತ ಹಳೆಯದಾದ ಭಿತ್ತಿಚಿತ್ರಗಳನ್ನು ನೋಡಲು ಮರೆಯದಿರಿ.

ದುಃಖಕರವೆಂದರೆ, ಈ ವಸ್ತುಸಂಗ್ರಹಾಲಯದಲ್ಲಿ ನಿಮ್ಮ ಛಾಯಾಗ್ರಹಣ ನಿಷೇಧವಿರುವುದರಿಂದ ಇಲ್ಲಿ ಛಾಯಾಗ್ರಾಹಕರಿಗೆ ನಿರಾಸೆಯಾಗಬಹುದು ಇದು ಸಾಮಾನ್ಯವಾಗಿ ಶುಕ್ರವಾರದಂದು ಮುಚ್ಚಿದ್ದು, ಬೇರೆ ದಿನಗಳಲ್ಲಿ ವಸ್ತುಸಂಗ್ರಹಾಲಯದ ಸಮಯವು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

Badami banashankari Temple

7)ಬನಶಂಕರಿ ದೇವಾಲಯ

ಈ ದೇವಾಲಯವು ಬಾದಾಮಿಯಿಂದ ಸುಮಾರು 5 ಕಿ.ಮೀ ಅಂತರದಲ್ಲಿರುವ ಚೋಳಚಗುಡ್ಡದಲ್ಲಿದೆ. ಈ ದೇವಾಲಯವು ಸಂಪೂರ್ಣವಾಗಿ ಪಾರ್ವತಿ ದೇವಿಯ ಅವತಾರವಾಗಿರುವ ಬನಶಂಕರಿ ದೇವಿಗೆ ಅರ್ಪಿತವಾದುದಾಗಿದ್ದು ಆ ಜಿಲ್ಲೆಯ ಸುತ್ತಲೂ ಸಾಕಷ್ಟು ಜನಪ್ರಿಯವಾಗಿದೆ.
ಇಲ್ಲಿನ ಅತ್ಯಂತ ಆಕರ್ಷಕ ದೃಶ್ಯಾವಳಿ ಯಾವುದದೆಂದರೆ ಇಲ್ಲಿ ನೆಲೆಸಿರುವ ಹರಿದ ತೀರ್ಥ ಎನ್ನುವ ಸುಂದರವಾದ ದೇವಾಲಯ.ಮೂರು ಅಂತಸ್ತಿನ ರಚನೆಯ ಮೇಲೆ ನಿರ್ಮಿಸಲಾದ ಎತ್ತರದ ದೀಪದ ಗೋಪುರವನ್ನು ಹೊಂದಿರುವ ಭವ್ಯವಾದ ದೇವಾಲಯದ ಕೊಳವು ದೇವಾಲಯದ ಪಕ್ಕದಲ್ಲಿದ್ದು, ಇದು ವೀಕ್ಷಿಸಲು ಒಂದು ಅದ್ಭುತ ದೃಶ್ಯವಾಗಿದೆ ಮತ್ತು ಸಂಪೂರ್ಣವಾಗಿ ಕಲ್ಲಿನಿಂದ ಕೆತ್ತಲಾದ ಚಾವಡಿ ಅದರ ಸಮೀಪದಲ್ಲಿದೆ! ನೀವು ಅಲ್ಲಿ ಏನೆಲ್ಲಾ ನೋಡಬಹುದು ಎಂಬುದರ ವಿವರ ಇಲ್ಲಿದೆ

ಇಲ್ಲಿ ದೇವಿಯು ಎಂಟು ತೋಳುಗಳು ಹೊಂದಿದ್ದು ಹಾಗೂ ಭಯಂಕರ ರೂಪದ ಸಿಂಹದ ಮೇಲೆ ಆಸೀನಳಾಗಿದ್ದು ತನ್ನ ಪಾದಗಳ ಕೆಳಗೆ ರಾಕ್ಷಸನನ್ನು ತುಳಿಯುವ ದೃಶ್ಯವನ್ನು ಹೊಂದಿದ ವಿಗ್ರಹವು ಮನಮೋಹಕವಾಗಿದೆ. ದೇವಿಯ ಈ ವಿಗ್ರಹವನ್ನು ಸಂಪೂರ್ಣವಾಗಿ ಹೊಳೆಯುವ ಕಪ್ಪು ಕಲ್ಲಿನಿಂದ ಕೆತ್ತಲ್ಪಟಿದೆ. ದೇವಾಲಯದ ಮುಖ್ಯ ಆವರಣವು ಮೂರು ಬೃಹತ್ ದೀಪದಿಂದ ಕೂಡಿದ್ದು, ಇದು ಎಲ್ಲಾ ಸಮಯದಲ್ಲೂ ಎಲ್ಲಾ ಆಚರಣೆಗಳಲ್ಲಿಯೂ ತನ್ನ ಬೆಳಕನ್ನು ಚೆಲ್ಲುತ್ತಾ ರಾರಜಿಸುತ್ತದೆ.
ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ನಡೆಯುವ ವಾರ್ಷಿಕ ಉತ್ಸವವು ಬಹಳಷ್ಟು ಜನರನ್ನು ಸೆಳೆಯುತ್ತದೆ. ಉತ್ಸವದ ಋತುವಿನಲ್ಲಿ ಸುಂದರವಾದ ಮೆರವಣಿಗೆಯ ಜೊತೆಗೆ ರಥದ ಮೇಲೆ ಕುಳಿತಿರುವ ದೇವತೆಯನ್ನು ನೀವು ಕಾಣಬಹುದಾಗಿದೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ ಈ ದೇವಾಲಯಕ್ಕೆ ಭೇಟಿ ನೀಡುವ ಯೋಜನೆಗಳನ್ನು ಖಾತ್ರಿಪಡಿಸಿಕೊಳ್ಳಿ.

8)ಮಹಾಕೂಟೇಶ್ವರ

ಬಾದಮಿಯಿಂದ ಸುಮಾರು 14 ಕಿಮೀ ದೂರದಲ್ಲಿರುವ, ಶೈವ ಆರಾಧನೆಯನ್ನು ಪೋಷಿಸುವ ಅದ್ಭುತ ಸ್ಥಳವಾದ ಮಹಾಕೂಟವು ಬೆಟ್ಟಗಳ ಗಡಿಯಲ್ಲಿರುವ ಸುಂದರವಾದ ಸ್ಥಳವಾಗಿದೆ. ಈ ದೇವಾಲಯವು ಶಿವ ದೇವರನ್ನು ಆರಾಧಿಸುವ ಹೆಸರುವಾಸಿಯಾದ ಮಹಾಕೂಟೇಶ್ವರ ದೇವಾಲಯಗಳಿಗೆ ಹೆಸರುವಾಸಿಯಾಗಿದೆ ಹಾಗೂ ದ್ರಾವಿಡ ಶೈಲಿಯನ್ನು ಪ್ರದರ್ಶಿಸುವ ಈ ದೇವಾಲಯದ ಸಮೀಪದಲ್ಲಿ ಹಲವಾರು ದೇವಾಲಯಗಳನ್ನು ಹೊಂದಿದೆ. ದೇವಾಲಯದ ಗೋಡೆಗಳ ಮೇಲೆ ಮನಮೋಹಕ ಬಾಸ್-ರಿಲೀಫ್ ಕೃತಿಗಳು ಮತ್ತು ಉತ್ತಮ ಕಲಾತ್ಮಕ ಕೆತ್ತನೆಗಳನ್ನು ಗಮನಿಸಬಹುದಾಗಿದೆ ಅಲ್ಲದೆ, ಮಹಾಕೂಟ ದೇವಾಲಯದ ಸಮೀಪದಲ್ಲಿರುವ ವಿಷ್ಣು ಪುಷ್ಕರಣಿಯು ಒಂದು ಕಾರಂಜಿಯ ಕೊಳವಾಗಿದ್ದು ಅವುಗಳಿಂದ ಚಿಮ್ಮುವ ಹನಿಗಳು ನಿಮ್ಮ ಮನಸ್ಸಿಗೆ ಮುದ ನೀಡುತ್ತವೆ.

Agasththya lake badami

9)ಅಗಸ್ತ್ಯ ಲೇಕ್

ಬಾದಾಮಿ ಬಸ್ಸು ನಿಲ್ದಾಣದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಐದನೇ ಶತಮಾನದಲ್ಲಿ ನಿರ್ಮಿಸಲಾದ ಸರೋವರವಿದೆ ಈ ಸರೋವರದ ನೀರಿಗೆ ರೋಗವನ್ನು ಗುಣಪಡಿಸುವ ಮಾಂತ್ರಿಕ ಶಕ್ತಿಯಿದೆ ಎನ್ನುವ ನಂಬಿಕೆ ಇದೆ. ಅಗಸ್ತ್ಯ ಸರೋವರದ ಪೂರ್ವ ದಡದಲ್ಲಿ ಭೂತನಾಥ ದೇವಾಲಯಗಳು ಅಲಂಕರಿಸಲ್ಪಟ್ಟಿದೆ, ನೈಋತ್ಯ ಭಾಗಗಳಲ್ಲಿ ಗುಹಾಂತರ ದೇವಾಲಗಳಿವೆ.ಈ ಸರೋವರದ ಬಗ್ಗೆ ಇರುವ ದಂತ ಕಥೆಗಳ ಪ್ರಕಾರ ವಿಷ್ಣುವಿನ ವಾಹನವಾದ ಗರುಡರಿಂದ ಪುಷ್ಕರಿಣಿ ಯನ್ನು ಇಲ್ಲಿಗೆ ತರಲಾಯಿತು ಎಂದು ಹೇಳಲಾಗುತ್ತದೆ ಹಾಗೂ ಅದರಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆ ಜನರದ್ದು.

ಈ ಸರೋವರವು ಸಾಮಾನ್ಯವಾಗಿ ಹಳ್ಳಿಯ ನಿವಾಸಿಗಳು ಬಟ್ಟೆ ತೊಳೆಯಲು ಮತ್ತು ಸ್ನಾನ ಮಾಡಲು ಬಳಸುತ್ತಾರೆ. ನೀರಿನ ಗುಣಮಟ್ಟವು ಈಜಲು ಯೋಗ್ಯವಾಗಿಲ್ಲ. ಸರೋವರದ ಸುತ್ತಮುತ್ತಲ ಪ್ರದೇಶಗಳು ಐತಿಹಾಸಿಕ ಸ್ಮಾರಕಗಳಿಂದ ಆವೃತವಾದ ಬೆಟ್ಟಗಳ ಉತ್ತಮ ನೋಟವನ್ನು ನೀಡುತ್ತವೆ. ನೀವು ಇದನ್ನು ನಿಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿಯಬಹುದಾಗಿದೆ.
ಹಾಗಿದ್ದಲ್ಲಿ, ತಡವೇಕೆ ಬಾದಾಮಿಗೆ ಭೇಟಿ ಕೊಡಲು ಸಿದ್ದರಾಗಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X