Search
  • Follow NativePlanet
Share
» »ಇಲ್ಲಿನ ವಿಗ್ರಹಕ್ಕೆ ಮನುಷ್ಯರಂತೆ ಚರ್ಮ, ರೋಮವಿದೆಯಂತೆ ಏನಿದರ ವಿಶೇಷತೆ?

ಇಲ್ಲಿನ ವಿಗ್ರಹಕ್ಕೆ ಮನುಷ್ಯರಂತೆ ಚರ್ಮ, ರೋಮವಿದೆಯಂತೆ ಏನಿದರ ವಿಶೇಷತೆ?

ಸಾಮಾನ್ಯವಾಗಿ ವಿಗ್ರಹಗಳು ಪಂಚಲೋಹದಿಂದ, ಕಲ್ಲಿನಿಂತ ತಯಾರಿಸಲಾಗಿರುತ್ತದೆ. ಆದರೆ ಇಲ್ಲೊಂದು ವಿಗ್ರಹವಿದೆ. ಅದು ನೋಡಲು ಕಲ್ಲಿನ ಶಿಲಾ ವಿಗ್ರಹದಂತೆ ಕಾಣಿಸುತ್ತದೆ. ಆದರೆ ಆ ವಿಗ್ರಹವನ್ನು ಮುಟ್ಟಿದರೆ ಮೆತ್ತಗಿರುತ್ತದೆ. ಮನುಷ್ಯನ ಶರೀರವನ್ನು ಮುಟ್ಟಿದಂತೆ ಆಗುತ್ತದಂತೆ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

ಹೇಮಾಚಲ ನರಸಿಂಹ ದೇವಸ್ಥಾನ. ತೆಲಂಗಾಣ ರಾಜ್ಯದಲ್ಲಿನ ಜೈ ಶಂಕರ್ ಭೂಪಾಲ್ ಜಿಲ್ಲೆ, ಮಂಗಂ ಪೇಟ ಮಂಡಲ, ಮಲ್ಲೂರು ಗ್ರಾಮಕ್ಕೆ ಸಮೀಪದ ಹೇಮಾಚಲ ನರಸಿಂಹನ ದೇವಾಲಯವಿದೆ. ಅರಣ್ಯದಲ್ಲಿ ವೃಕ್ಷಗಳ ಹಾಗು ಪೊದೆಗಳ ಮಧ್ಯೆ ದಾಟಿಕೊಂಡು ಈ ಸ್ವಾಮಿಯ ದೇವಾಲಯಕ್ಕೆ ತೆರಳಬೇಕು.

ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?ಹಂಪಿಯಲ್ಲಿರುವ ಈ ಬಡವಿಲಿಂಗ ದೇವಸ್ಥಾನ ನೋಡಿದ್ದೀರಾ?

ಸಂತಾನ ಭಾಗ್ಯ

ಸಂತಾನ ಭಾಗ್ಯ

ಇಲ್ಲಿನ ನರಸಿಂಹನಿಗೆ ಚರ್ಮವಿದೆಯಂತೆ. ವಿಗ್ರಹದ ನಾಭಿಯಲ್ಲಿ ಸ್ರಾವವಾಗುತ್ತಿರುತ್ತದೆ. ಆ ಸ್ರಾವನ್ನು ಪೂಜಾರಿಗಳು ಪ್ರಸಾದವಾಗಿ ನೀಡುತ್ತಾರೆ. ಈ ಪ್ರಸಾದವನ್ನು ಸ್ವೀಕರಿಸಿದರೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತಂತೆ. ವೈದ್ಯರೂ ಬಗೆಹರಿಸಲಾಗದ ಸಂತಾನ ಸಮಸ್ಯೆಗೆ ಇಲ್ಲಿ ಪರಿಹಾರ ಸಿಗುತ್ತದೆ.

ಪಾದದ ಬಳಿ ನೀರು ಹರಿಯುತ್ತದೆ

ಪಾದದ ಬಳಿ ನೀರು ಹರಿಯುತ್ತದೆ

ನರಸಿಂಹನ ಕಾಲಿನ ಬಳಿಯಿಂದ ನೀರು ಹರಿಯುತ್ತಲೇ ಇರುತ್ತದೆ. ವಿಗ್ರಹದ ಯಾವುದೇ ಭಾಗದಲ್ಲಿ ಮುಟ್ಟಿದರೂ ಚರ್ಮ ಒಳಕ್ಕೆ ಹೋಗುತ್ತದಂತೆ. ಸ್ವಲ್ಪ ಹೊತ್ತಲೇ ಮತ್ತೆ ಸರಿಯಾಗುತ್ತದೆ.

ಭಕ್ತರು ತಮ್ಮ ಕೋರಿಕೆಯನ್ನು ದೇವರ ಕಿವಿಯಲ್ಲಿ ಹೇಳ್ತಾರೆ ಇಲ್ಲಿ!ಭಕ್ತರು ತಮ್ಮ ಕೋರಿಕೆಯನ್ನು ದೇವರ ಕಿವಿಯಲ್ಲಿ ಹೇಳ್ತಾರೆ ಇಲ್ಲಿ!

ಚಿಂತಾಮಣಿಧಾರ

ಚಿಂತಾಮಣಿಧಾರ

ಇಲ್ಲಿ ಅಕ್ಕಧಾರ ಹಾಗೂ ಚೆಲ್ಲಿ ಧಾರ ಎನ್ನುವ ಎರಡು ಜಲಧಾರೆಗಳೆವೆ. ಇವು ಸೇರಿ ಚಿಂತಾಮಣೀ ಜಲಧಾರ ಎನ್ನುತ್ತಾರೆ. ಇಲ್ಲಿನ ನೀರು ಯಾವತ್ತೂ ಬತ್ತೋದಿಲ್ಲವಂತೆ. ಮಳೆಗಾಲದಲ್ಲಿ ಹೆಚ್ಚೂ ಆಗೋದಿಲ್ಲ.

ರಾಣಿ ರುದ್ರಮಾ ದೇವಿ

ರಾಣಿ ರುದ್ರಮಾ ದೇವಿ

ಚಿಂತಾಮಣಿಧಾರ ಎನ್ನುವ ಹೆಸರು ಇಟ್ಟಿದ್ದು ರಾಣಿ ರುದ್ರಮಾ ದೇವಿ ಎಂದು ಹೆಸರಿಟ್ಟಿದ್ದು ರಾಣೀ ರುದ್ರಮಾದೇವಿ. ರಾಣಿ ರುದ್ರಮ್ಮ ದೇವಿ ದೇಶದಲ್ಲಿ ಯಾರಿಗೂ ಬಾರದ ಖಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದ ಸಂದರ್ಭದಲ್ಲಿ ರಾಜವೈದ್ಯರ ಸೂಚನೆಯ ಮೇರೆಗೆ ಈ ಜಲಧಾರೆಯನ್ನು ಕುಡಿದು ಆಕೆಯ ರೋಗವನ್ನು ಗುಣಪಡಿಸಿಕೊಂಡಳಂತೆ ಎಂದು ಹೇಳುತ್ತಾರೆ. ಇದೇ ವಿಷಯವನ್ನು ಭಕ್ತರು ಕೂಡ ನಂಬುತ್ತಾರೆ.

ಹುಬ್ಬಳ್ಳಿಯಲ್ಲಿರುವ ನೃಪತುಂಗ ಬೆಟ್ಟ ಹತ್ತಿದ್ದೀರಾ?ಹುಬ್ಬಳ್ಳಿಯಲ್ಲಿರುವ ನೃಪತುಂಗ ಬೆಟ್ಟ ಹತ್ತಿದ್ದೀರಾ?

ರೋಗಗಳು ಗುಣವಾಗುತ್ತವೆ

ರೋಗಗಳು ಗುಣವಾಗುತ್ತವೆ

ಈ ಧಾರೆಯ ನೀರು ಸೇವಿಸಿದರೆ ಎಲ್ಲಾ ರೋಗಗಳು ದೂರಹೋಗುತ್ತವೆ ಎನ್ನಲಾಗುತ್ತದೆ. ಹಾಗಾಗಿ ಸಾಕಷ್ಟು ಭಕ್ತರು ಇಲ್ಲಿಗೆ ಬಂದು ತೀರ್ಥವನ್ನು ಬಾಟಲಿಯಲ್ಲಿ ತುಂಬಿಸಿ ಹೋಗುತ್ತಾರೆ. ಇದು ಸಕಲ ರೋಗಗಳು ಗುಣವಾಗುತ್ತೆ ಎನ್ನಲಾಗುತ್ತದೆ.

ಲಕ್ಷ್ಮೀ ಸಮೇತ ನರಸಿಂಹ

ಲಕ್ಷ್ಮೀ ಸಮೇತ ನರಸಿಂಹ

ಇಲ್ಲಿನ ವಿಗ್ರಹವು ಸ್ವಯಂ ಭೂವಾಗಿದ್ದು, ವಿಗ್ರಹದ ಚರ್ಮವು ಅತ್ಯಂತ ಮೆತ್ತಗೆ ಇರುತ್ತದೆ. ಇತನನ್ನು ಹೇಮಾಲಚಲ ನರಸಿಂಹನು ಎಂದು ಕರೆಯುತ್ತಾರೆ. ಅನೇಕ ಸ್ಥಳಗಳಲ್ಲಿ ನರಸಿಂಹನು ಲಕ್ಷ್ಮೀ ಸಮೇತನಾಗಿ ಇರುತ್ತಾನೆ. ಇಲ್ಲಿ ಮಾತ್ರ ನರಸಿಂಹನು ಒಬ್ಬನೇ ಸ್ವಯಂ ಭೂವಾಗಿ ನೆಲೆಸಿದ್ದಾನೆ. ವಿಗ್ರಹವು ಪೂರ್ತಿ ಕಪ್ಪು ಬಣ್ಣದಲ್ಲಿ ಕಾಣಬಹುದು.

ದಂಪತಿ ಸಮೇತರಾಗಿ ಬಂದು ಇಲ್ಲಿ ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?ದಂಪತಿ ಸಮೇತರಾಗಿ ಬಂದು ಇಲ್ಲಿ ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?

ವಿಗ್ರಹಕ್ಕೆ ಚರ್ಮವೂ ಇದೆ

ವಿಗ್ರಹಕ್ಕೆ ಚರ್ಮವೂ ಇದೆ

ಚರ್ಮವನ್ನು ಹೊಂದಿರುವ ನರಸಿಂಹಸ್ವಾಮಿ ವಿಗ್ರಹವೇ ಅಲ್ಲದೇ ಇಂತಹ ದೇವರ ವಿಗ್ರಹಗಳು ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲ. ಅಭಿಷೇಕ ಮಾಡುವ ಸಮಯದಲ್ಲಿ ಸ್ವಾಮಿಯವರ ವಿಗ್ರಹದಿಂದ ಕೂದಲುಗಳು ಉದುರುವ ಅನುಭೂತಿ ಉಂಟಾಗುತ್ತದೆ ಎಂದು ಅಲ್ಲಿನ ಪೂಜಾರಿಗಳು ಹೇಳುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಬೆಂಗಳೂರಿನಿಂದ ಮೊದಲು ಹೈದ್ರಾಬಾದ್‍ಗೆ ತೆರಳಿ. ಹೈದ್ರಾಬಾದ್‍ನಿಂದ ಮಲ್ಲೂರು ಗ್ರಾಮಕ್ಕೆ 145 ಕಿ.ಮೀ ದೂರದಲ್ಲಿದೆ. ಪ್ರಯಾಣ ಸಮಯವು ಸುಮಾರು 3:30 ಗಂಟೆಗಳು ತೆಗೆದುಕೊಳ್ಳುತ್ತದೆ. ದೇಶದ ಅನೇಕ ಸ್ಥಳಗಳಿಂದ ಹೈದ್ರಾಬಾದ್‍ಗೆ ಪ್ರಯಾಣ ಸೌಕರ್ಯಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X