Search
  • Follow NativePlanet
Share
» » ಕಾಫಿ ತೋಟದ ನಡುವೆ ಧುಮ್ಮಿಕ್ಕುವ ಈ ಜಲಧಾರೆಯಲ್ಲಿ ಸ್ನಾನ ಮಾಡಿದ್ರೆ ಚರ್ಮವ್ಯಾಧಿ ಗುಣವಾಗುತ್ತಂತೆ!

ಕಾಫಿ ತೋಟದ ನಡುವೆ ಧುಮ್ಮಿಕ್ಕುವ ಈ ಜಲಧಾರೆಯಲ್ಲಿ ಸ್ನಾನ ಮಾಡಿದ್ರೆ ಚರ್ಮವ್ಯಾಧಿ ಗುಣವಾಗುತ್ತಂತೆ!

ಯಾವುದೇ ಜಲಪಾತಗಳಾಗಿರಲಿ ಮಳೆಗಾಲದಲ್ಲಿ ಅದನ್ನು ನೋಡುವ ಮಜಾನೇ ಬೇರೆ. ನೀರಿನಿಂದ ತುಂಬಿರುತ್ತದೆ. ತಂಪಾದ ಗಾಳಿ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳ ಸೌಂದರ್ಯ ಬಣ್ಣಿಸಲಸಾಧ್ಯ. ಅಂತಹದ್ದೇ ಒಂದು ಸುಂದರ ಜಲಪಾತಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

ಹೆಬ್ಬೆ ಜಲಪಾತ

ಹೆಬ್ಬೆ ಜಲಪಾತ

PC:Man On Mission

ಹೆಬ್ಬೆ ಜಲಪಾತವು ಚಿಕ್ಕಮಗಳೂರಿನಲ್ಲಿದೆ. ಕೆಮ್ಮಣ್ಣುಗುಂಡಿನಿಂದ 10 ಕಿ.ಮೀ ದೂರದಲ್ಲಿದೆ. ಈ ಜಲಪಾತಗಳು ಒಂದು ಕಾಫಿ ಎಸ್ಟೇಟ್ ಒಳಗಿನಿಂದ ನಡೆದುಕೊಂಡು ಹೋಗಬಹುದು ಅಥವಾ ವಾಹನಗಳ ಮೂಲಕವೂ ತಲುಪಬಹುದು. ಹೆಬ್ಬೆ ಫಾಲ್ಸ್ ಎರಡು ಹಂತಗಳಲ್ಲಿ 551 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ. ಇದು ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎನ್ನಲಾಗುತ್ತದೆ.

ಏಷ್ಯಾದ ಅತ್ಯಂತ ದೊಡ್ಡ ವೈಲ್ಡ್‌ ಲೈಫ್‌ ಸಫಾರಿ ಪಾರ್ಕ್ ಇದುಏಷ್ಯಾದ ಅತ್ಯಂತ ದೊಡ್ಡ ವೈಲ್ಡ್‌ ಲೈಫ್‌ ಸಫಾರಿ ಪಾರ್ಕ್ ಇದು

ಟ್ರಕ್ಕಿಂಗ್‌ ಅವಕಾಶ

ಟ್ರಕ್ಕಿಂಗ್‌ ಅವಕಾಶ

PC:Man On Mission

ಟ್ರೆಕ್ಕಿಂಗ್‌ ಆಯ್ಕೆ ಲಭ್ಯವಿದೆ, ಆದರೆ ಈ ಪ್ರದೇಶವು ವಿಶೇಷವಾಗಿ ಮಳೆಯ ಋತುವಿನಲ್ಲಿ ಗಿಡಮರಗಳು ಪೊದೆಗಳಿಂದ ತುಂಬಿರುತ್ತದೆ. ಹಾಗಾಗಿ ಖಾಸಗಿ ಎಸ್ಟೇಟ್‌ಗಳ ಮೂಲಕ ಸಾಗುವ ಸರ್ಕಾರಿ ಅಂಗೀಕೃತ ಅರಣ್ಯ ಜೀಪ್ ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಫಾಲ್ಸ್ ತಲುಪುವ ಕೊನೆಯ ಕೆಲವು ಕಿಲೋಮೀಟರ್ ಟ್ರೆಕ್ಕಿಂಗ್ ಮಾಡಬೇಕಾಗುತ್ತದೆ.

ಕಾಫಿ ತೋಟದ ನಡುವೆ ಧುಮ್ಮಿಕ್ಕುವ ಜಲಧಾರೆ

ಕಾಫಿ ತೋಟದ ನಡುವೆ ಧುಮ್ಮಿಕ್ಕುವ ಜಲಧಾರೆ

PC: Srinivasa83

ಹೆಬ್ಬೆ ಫಾಲ್ಸ್‌ನ ಸುತ್ತಲೂ ದಟ್ಟ ಅರಣ್ಯ ಹಾಗೂ ಕಾಫಿ ತೋಟದ ಹಸಿರಿನ ವಿಹಂಗಮ ದೃಶ್ಯವಿದೆ. ಈ ಜಲಪಾತದ ನೀರಿನ ಹರಿವು ಎರಡು ಭಾಗಗಳಾಗಿ ವಿಂಗಡನೆಯಾಗಿ ಬೀಳುವುದರಿಂದ ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎಂದು ಹೆಸರಿಸಲಾಗಿದೆ. ಜಲಪಾತದ ಸುಂದರ ಸೊಬಗು ನೋಡುತ್ತ, ರಭಸದಿಂದ ಬೀಳುವ ನೀರಿನ ಶಬ್ದವನ್ನು ಕೇಳುತ್ತ ಪ್ರವಾಸಿಗರು ಇಲ್ಲಿ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಕಳೆಯಬಹುದು.

ಇಲ್ಲಿನ ಮಹಾಲಕ್ಷ್ಮೀಯನ್ನು ಪೂಜಿಸಿದ್ರೆ ಸಿರಿವಂತರಾಗ್ತಾರಂತೆ !ಇಲ್ಲಿನ ಮಹಾಲಕ್ಷ್ಮೀಯನ್ನು ಪೂಜಿಸಿದ್ರೆ ಸಿರಿವಂತರಾಗ್ತಾರಂತೆ !

ಚರ್ಮವ್ಯಾಧಿ ಗುಣವಾಗುತ್ತಂತೆ

ಚರ್ಮವ್ಯಾಧಿ ಗುಣವಾಗುತ್ತಂತೆ

PC:Deepakckm

ಎತ್ತರದಿಂದ ಕೆಳಕ್ಕೆ ಹರಿಯುವ ಈ ಜಲಪಾತದಲ್ಲಿ ಸ್ನಾನ ಮಾಡಿದ್ರೆ ಚರ್ಮ ಸಂಬಂಧಿ ರೋಗಗಳು ಗುಣಮುಖವಾಗುತ್ತವೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಸಾಕಷ್ಟು ಜರನು ಈ ಜಲಪಾತದಲ್ಲಿ ಸ್ನಾನ ಮಾಡುತ್ತಾ ಜಲಪಾತದ ಆನಂದವನ್ನು ಪಡೆಯುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ರಸ್ತೆಯ ಮೂಲಕ: ಬಿರುರ್ ಎನ್ನುವುದು ಕಡೂರು ತಾಲೂಕಿನಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಬೆಂಗಳೂರು-ಚಿಕ್ಕಮಗಳೂರು ಅಥವಾ ಬೆಂಗಳೂರು-ಶಿವಮೊಗ್ಗ ಬಸ್ಸುಗಳ ನಡುವೆ ಸಾಕಷ್ಟು ಬಸ್‌ಗಳಿವೆ. ಬೀರೂರ್ ನಿಂದ, ಸ್ಥಳೀಯ ಟ್ಯಾಕ್ಸಿ ಅಥವಾ ಖಾಸಗಿ ಬಸ್‌ಗಳಂತಹ ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನೂ ಬಳಸಬಹುದು.

ರೈಲಿನ ಮೂಲಕ: ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ದಾವಣಗೆರೆ ನಡುವಿನ ದಕ್ಷಿಣ ರೈಲ್ವೇ ಮಾರ್ಗದಲ್ಲಿದೆ ಬೀರೂರ್ . ಇಲ್ಲಿಂದ ಸ್ಥಳೀಯ ಟ್ಯಾಕ್ಸಿ ಅಥವಾ ಖಾಸಗಿ ಬಸ್‌ ಮೂಲಕ ಹೆಬ್ಬೆ ಫಾಲ್ಸ್ ತಲುಪಬಹುದು.

ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣ. ಹಾಗಾಗಿ ರಸ್ತೆ ಮಾರ್ಗವೇ ಹೆಬ್ಬೆ ಫಾಲ್ಸ್ ತಲುಪಲು ಉತ್ತಮವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X