Search
  • Follow NativePlanet
Share
» »ಬೌದ್ಧ ಧರ್ಮ ಮತ್ತು ಜೈನಧರ್ಮದ ತೀರ್ಥಸ್ಥಳವಾದ ವೈಶಾಲಿಯ ಕಡೆಗೆ ಒಂದು ನೋಟ

ಬೌದ್ಧ ಧರ್ಮ ಮತ್ತು ಜೈನಧರ್ಮದ ತೀರ್ಥಸ್ಥಳವಾದ ವೈಶಾಲಿಯ ಕಡೆಗೆ ಒಂದು ನೋಟ

ವೈಶಾಲಿ ಬಿಹಾರದ ಒಂದು ಪುರಾತನ ನಗರವಾಗಿದ್ದು, ಇದು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ ನಗರವಾಗಿದೆ. ಈಗ ಇದು ಒಂದು ಸಣ್ಣ ಗ್ರಾಮವಾಗಿದ್ದು ರಾಜಧಾನಿಯಾದ ಪಾಟ್ನಾದಿಂದ 32 ಕಿ.ಮಿ ದೂರದಲ್ಲಿದೆ. ರಾಮಾಯಣ ಕಾಲದ ರಾಜನಾಗಿದ್ದ ರಾಜಾ ವಿಶಾಲ್ ಎಂಬ

By Manjula Balaraj Tantry

ವೈಶಾಲಿ ಬಿಹಾರದ ಒಂದು ಪುರಾತನ ನಗರವಾಗಿದ್ದು, ಇದು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ ನಗರವಾಗಿದೆ. ಈಗ ಇದು ಒಂದು ಸಣ್ಣ ಗ್ರಾಮವಾಗಿದ್ದು ರಾಜಧಾನಿಯಾದ ಪಾಟ್ನಾದಿಂದ 32 ಕಿ.ಮಿ ದೂರದಲ್ಲಿದೆ. ರಾಮಾಯಣ ಕಾಲದ ರಾಜನಾಗಿದ್ದ ರಾಜಾ ವಿಶಾಲ್ ಎಂಬ ರಾಜನ ಹೆಸರನ್ನು ಈ ಪಟ್ಟಣಕ್ಕೆ ಇಡಲಾಗಿದೆ.

ದೇಶದ ಮೊದಲ ಗಣರಾಜ್ಯ ಹೊಂದಿದ ರಾಜ್ಯಗಳಲ್ಲಿ ಇದು ಮೊದಲನೆಯದು ಎಂದು ಹೇಳಲಾಗುತ್ತದೆ. ಕ್ರಿ.ಪೂ. 6ನೇ ಶತಮಾನದಲ್ಲಿ ಗಣತಂತ್ರವನ್ನು ಇಲ್ಲಿ ಆಚರಿಸಲಾಗಿತ್ತು. ಅಂದರೆ ಈ ಪಟ್ಟಣದಲ್ಲಿ ಬುದ್ದನ ಆಡಳಿತದ ಸಮಯದ ಮುಂಚೆಯೇ ಗಣರಾಜ್ಯದ ವಿಧಿವಿದಾನಗಳನ್ನು ಪಾಲಿಸಲಾಗುತ್ತಿತ್ತು.

ವೈಶಾಲಿ ನಗರದ ಇತಿಹಾಸ ಐತಿಹಾಸಿಕ ಮಹತ್ವ ಉಳ್ಳದ್ದಾಗಿದೆ. ಭಗವಾನ್ ಬುದ್ಧ ತಮ್ಮ ಜೀವನದ ಬಹುಪಾಲು ಸಮಯವನ್ನು ಈ ನಗರದಲ್ಲಿಯೇ ಕಳೆದಿದ್ದರು. ಆದುದರಿಂದ ಬೌದ್ಧ ಧರ್ಮದವರಿಗೆ ಈ ನಗರವು ಪ್ರಮುಖ ಯಾತ್ರಾ ಸ್ಥಳವಾಗಿದೆ. ಅಲ್ಲದೆ ವೈಶಾಲಿ ಭಗವಾನ್ ಮಹಾವೀರನ ಹುಟ್ಟಿದ ಸ್ಥಳವಾಗಿದೆ. ಆದ್ದರಿಂದ ನಮ್ಮ ದೇಶದ ಎರಡು ಪ್ರಮುಖ ಧರ್ಮಗಳಾದ ಬೌದ್ಧ ಹಾಗೂ ಜೈನ ಧರ್ಮಗಳು ಈ ನಗರದಲ್ಲಿ ಪ್ರಬಲವಾಗಿ ಪ್ರಚಲಿತವಾಗಿದೆ.

How to reach Vaishali?

PC: Shuklarajrishi

ವೈಶಾಲಿಯು ಭಗವಾನ್ ಬುದ್ಧ ಮತ್ತು ಭಗವಾನ್ ಮಹಾವೀರರ ಉಪಸ್ಥಿತಿಗೆ ಮುಂಚಿತವಾಗಿ ಲಿಚವಿ ಎಂಬ ಹೆಸರಿನ ಗಣತಂತ್ರ ರಾಜ್ಯದ ರಾಜಧಾನಿಯಾಗಿತ್ತು. ವೈಶಾಲಿಯು ಪ್ರಸಿದ್ದ ದೇವದಾಸಿಯಾದ ಅಮ್ರಪಾಲಿಯವರ ಜನ್ಮ ಸ್ಥಳವೂ ಆಗಿದೆ. ನಂತರ ಇವರು ಬುದ್ಧನ ಅನುಯಾಯಿಯಾದರು ಎಂದು ಹೇಳಲಾಗುತ್ತದೆ.

ವೈಶಾಲಿಯ ರಾಜಾ ಅಶೋಕನ ಆಳ್ವಿಕೆಯ ಅವಧಿಯಲ್ಲಿ ಬೌದ್ಧ ಧರ್ಮವನ್ನು ಅಳವಡಿಸಿಕೊಂಡರು ಇವರು ವೈಶಾಲಿಯಲ್ಲಿ ಅಶೋಕ ಸ್ಥಂಭವನ್ನು ಸ್ಥಾಪಿಸಿದರು. ವೈಶಾಲಿಗೆ ಭೇಟಿಕೊಡುವ ಮೊದಲು ಅಶೋಕ ಸ್ಥಂಭ ಮತ್ತು ಇತರ ಸ್ಥಳಗಳ ಬಗ್ಗೆ ಎಲ್ಲವನ್ನು ಓದಿ. ಅಶೋಕ ಕಂಬದಂತೆ ದೇಶದ ವಿವಿಧ ಭಾಗಗಳಲ್ಲಿ ರಾಜಾ ಅಶೋಕನು ಕಟ್ಟಿಸಿದ ಸ್ಥಂಭಗಳಂತೆ ಇವೆ. ವೈಶಾಲಿಯಲ್ಲಿಯೂ ಕೂಡ ಅಶೋಕ ಸ್ಥಂಭವಿದೆ.

ಭಗವಾನ್ ಬುದ್ಧನ ಕೊನೆಯ ಧರ್ಮೋಪದೇಶದ ನೆನಪಿಗಾಗಿ ಇದನ್ನು ನಿರ್ಮಿಸಲಾಯಿತು.ವೈಶಾಲಿಯ ಅಶೋಕ ಕಂಬದ ಮೇಲೆ ಯಾವುದೇ ಶಾಸನಗಳಿಲ್ಲ.ಇದು ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಮತ್ತು ಪುರಾತತ್ವ ಶಾಸ್ತ್ರ ಅಥವಾ ಇತಿಹಾಸದ ಬಗ್ಗೆ ಉತ್ಸಾಹ ಉಳ್ಳವರನ್ನು ಈ ಜಾಗವು ಆಕರ್ಷಿಸುತ್ತದೆ.

How to reach Vaishali?

PC: mself

ಬೌದ್ಧ ಧರ್ಮವನ್ನು ಮುಂದುವರಿಸುವುದಕ್ಕೆ ಶಾಂತಿ ಮತ್ತು ಸಾಮರಸ್ಯದ ಗುರುತಿಗಾಗಿ ವಿಶ್ವಶಾಂತಿ ಸ್ಥೂಪ ಮತ್ತು ಶಾಂತಿ ಸ್ಥೂಪವನ್ನು ದೇಶದಾದ್ಯಂತ ನಿರ್ಮಿಸಲಾಯಿತು.ಅಂತಹ ವಿಶ್ವಶಾಂತಿ ಸ್ಥೂಪ ಅಥವಾ ಪೀಸ್ ಪಗೋಡವನ್ನು ವೈಶಾಲಿಯಲ್ಲಿ ನಿರ್ಮಿಸಗಾಗಿದೆ ಇದನ್ನು 1969 ರಲ್ಲಿ ಉತ್ಕನನ ಮಾಡಲಾಯಿತು.

ಈ ಶಾಂತಿ ಸ್ಠೂಪಗಳು ಬಿಳಿ ಅಮೃತ ಶಿಲೆಯಿಂದ ಮಾಡಿದ ಸುಂದರ ರಚನೆಯಳಾಗಿವೆ. ವೈಶಾಲಿಯ ವಿಶ್ವ ಶಾಂತಿ ಸ್ಠೂಪದ ಸುತ್ತ ಪ್ರಶಾಂತವಾದ ಹಸಿರು ಪ್ರದೇಶವನ್ನು ಹೊಂದಿದೆ ಅಲ್ಲದೆ ಅಲ್ಲಿ ಒಂದು ಕೊಳವಿದ್ದು ಪ್ರವಾಸಿಗರಿಗೆ ಬೋಟಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಶಾಂತಿ ಸ್ತೂಪಗಳು ಶಾಂತಿ ಮತ್ತು ಸಮೃದ್ದಿಯ ಚಿಹ್ನೆ ಯಾಗಿರುವುದರಿಂದ ವೈಶಾಲಿಯ ಇತರ ಸ್ಥಳಗಳಲ್ಲೂ ಬೌದ್ಧ ಧರ್ಮ ಗಮನಾರ್ಹ ಪ್ರಭಾವವನ್ನು ಬೀರಿದೆ. ಭಗವಾನ್ ಬುದ್ಧನ ಎರಡು ಸ್ತೂಪಗಳು ಪಟ್ಟಣದಲ್ಲಿ ಕಂಡುಬರುತ್ತದೆ. ಈ ಎರಡೂ ಸ್ತೂಪಗಳು ಭಗವಾನ್ ಬುದ್ಧನ ಚಿತಾಭಸ್ಮವನ್ನು ಹೊಂದಿವೆ.

How to reach Vaishali?

PC: Neil Satyam

ಅಭಿಷೇಕ್ ಪುಷ್ಕರಣಿ ಎಂಬ ಹೆಸರಿನ ಒಂದು ಟ್ಯಾಂಕ್ ನಗರದಲ್ಲಿ ಕಂಡು ಬರುತ್ತದೆ. ವೈಶಾಲಿಯ ಹಿಂದಿನ ರಾಜರುಗಳ ಪಟ್ಟಾಭಿಷೇಕಕ್ಕಾಗಿ ಈ ಟ್ಯಾಂಕಿನ ಪವಿತ್ರ ನೀರನ್ನು ಬಳಸುತ್ತಿದ್ದ ಕಾರಣ ಇದು ಒಂದು ಜನಪ್ರೀಯ ಸ್ಥಳವಾಗಿದೆ.

ಇದು ಜೈನ ಭಕ್ತರ ಪ್ರಾಮುಖ್ಯತೆಯ ಒಂದು ಸ್ಥಳವಾಗಿದೆ. ಇಲ್ಲಿ 1ನೇ ತೀರ್ಥಂಕರರಾದ ಭಗವಾನ್ ಆದಿನಾಥರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಬವನ್ ಪೋಖರ್ ದೇವಾಲಯ ಮತ್ತು ರಾಮಚೌರ ಮಂದಿರ ವೈಶಾಲಿಯಲ್ಲಿ ಭೇಟಿ ಕೊಡಬಹುದಾದ ಎರಡು ಹಿಂದೂ ದೇವಾಲಯಗಳಾಗಿವೆ. ವಾಯು ಮಾರ್ಗದಿಂದ ವೈಶಾಲಿಯನ್ನು ತಲುಪುವುದು ಹೇಗೆ:

ವೈಶಾಲಿಯಿಂದ 65ಕಿ.ಮೀ ದೂರದಲ್ಲಿ ರುವ ಪಾಟ್ನಾ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು, ಕೊಲ್ಕತಾ, ಹೈದರಾಬಾದ್ ಮುಂತಾದ ವಿವಿಧ ನಗರಗಳಿಗೆ ಈ ವಿಮಾನ ನಿಲ್ದಾಣದಿಂದ ಉತ್ತಮ ಸಂಪರ್ಕವಿದೆ. ಇಲ್ಲಿಂದ ವೈಶಾಲಿ ತಲುಪಲು ಸುಮಾರು ಒಂದು ತಾಸು ತೆಗೆದುಕೊಳ್ಳುತ್ತದೆ. ರೈಲು ಮೂಲಕ ಪ್ರಯಾಣ ಮಾಡುವುದಾದರೆ: ಹಾಜಿಪುರ್ ರೈಲು ನಿಲ್ದಾಣವು ಸಮೀಪದ ರೈಲು ನಿಲ್ದಾಣವಾಗಿದೆ,

ಇದು ಕೋಲ್ಕತಾ, ಗೋರಖ್ಪುರ, ಚಂಡೀಗಢ, ಇತ್ಯಾದಿ ನಗರಗಳಿಂದ ಬರುವ ರೈಲುಗಳನ್ನು ಹೊಂದಿರುವ ಸಣ್ಣ ನಿಲ್ದಾಣವಾಗಿದೆ. ಇದು ಪಟ್ಟಣದಿಂದ ಸುಮಾರು 40ಕಿ. ಮೀ ದೂರದಲ್ಲಿದೆ. ರಸ್ತೆಯ ಮೂಲಕ: ರಸ್ತೆಗಳು ಮತ್ತು ರಾಜ್ಯ ಸರ್ಕಾರಿ ಬಸ್ಸುಗಳ ಮೂಲಕ ವೈಶಾಲಿ ರಾಜ್ಯದ ಇತರ ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಪಟ್ಟಣವನ್ನು ರಾಜಧಾನಿ, ಪಾಟ್ನಾ ಮತ್ತು ಇತರ ಸ್ಥಳಗಳಿಗೆ ಸಂಪರ್ಕಿಸುತ್ತದೆ.

Read more about: ಬಿಹಾರ india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X