Search
  • Follow NativePlanet
Share
» »ಧಿಗಾವನ್ನು ಮರೆತು ಬಂಕಿಪತ್ ನ ಹುದುಗಿರುವ ಸೌಂದರ್ಯತೆಯ ಕಡೆಗೆ ಪ್ರಯಾಣ

ಧಿಗಾವನ್ನು ಮರೆತು ಬಂಕಿಪತ್ ನ ಹುದುಗಿರುವ ಸೌಂದರ್ಯತೆಯ ಕಡೆಗೆ ಪ್ರಯಾಣ

By Manjula Balaraj Tantry

ಪಶ್ಚಿಮ ಬಂಗಾಳದ ಬಗ್ಗೆ ಬಂದಾಗ ಮೊದಲ ಆಯ್ಕೆ ಅಲ್ಲಿನ ದಿಘಾ ಬೀಚ್. ಈ ಸ್ಥಳವು ಹೆಚ್ಚು ವಾಣಿಜ್ಯೀಕರಣಗೊಂಡಿರುವುದರಿಂದ ಇದು ತನ್ನ ಮೋಡಿಯನ್ನು ಕಳೆದುಕೊಳ್ಳುತ್ತಿದೆ. ಮತ್ತೊಂದೆಡೆ ಬಂಕಿಪತ್ ಒಂದು ಅಡಗಿರುವ ರತ್ನವೆನಿಸಿದೆ ಮತ್ತು ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ನಾವು ಕೊಲ್ಕತ್ತಾದ ಬೀಚ್ ಗಳ ಬಗ್ಗೆ ಮೊದಲು ನಮ್ಮ ಮನಸ್ಸಿಗೆ ಬರುವುದು ಧಿಗಾಬೀಚ್. ಆದರೆ ಧಿಗಾ ಬೀಚ್ ವಾಣಿಜ್ಯೀಕರಣಗೊಂಡು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ತಿಳಿದಿರದ ದಾರಿಯ ಅನ್ವೇಷಣೆಯು ಯಾವಾಗಲೂ ಒಂದು ಹೊಸತಾದ ನಿರೀಕ್ಷೆಗೆ ಮೀರಿದಂತಹ ಸುಂದರವಾದ ಜಾಗಗಳನ್ನು ಕಂಡು ಹಿಡಿಯಲು ದಾರಿ ಮಾಡಿಕೊಡುತ್ತದೆ. ಅವುಗಳಲ್ಲಿ ಒಂದು ಬಂಕಿಪತ್.

ಬಂಕಿಪತ್ ಒಂದು ಉತ್ತಮ ಕಡಲ ತೀರವಾಗಿದ್ದು ಇದರ ಗಡಿಗಳ ಸುತ್ತ ಕ್ಯಾಸುವಾರಿನ ಮರಗಳಿಂದ ಸುತ್ತುವರಿಯಲ್ಪಟ್ಟಿದೆ. ಈ ಕಚ್ಚಾ ಮತ್ತು ಹೆಚ್ಚು ಅನ್ವೇಷಣೆಗೊಳಗಾಗದ ಕಡಲತೀರವು ವಾಣಿಜ್ಯೀಕರಣದಿಂದ ದೂರ ಉಳಿದಿದೆ. ಹಾಗಾಗಿ, ಇಲ್ಲಿ ಕಾರುಗಳ ಶಬ್ದ ಮತ್ತು ಜನರ ಗದ್ದಲಗಳು ಅಷ್ಟೇನೂ ಇರುವುದಿಲ್ಲ. ಕೆಲವೊಮ್ಮೆ, ಅಲ್ಲಿ, ಒಂದು ಜೀವ ಜಾತಿಯನ್ನು ಕಾಣ ಸಿಗುವುದಿಲ್ಲ ಆದರೆ ನೂರಾರು ಕೆಂಪು ಏಡಿಗಳು ನಿಮ್ಮ ದಾರಿಯುದ್ದಕ್ಕೂ ನಿಮಗೆ ಜೊತೆ ನೀಡುತ್ತದೆ.

ಇಲ್ಲಿಯ ವಿಶಾಲವಾದ ಸಮುದ್ರದ ಅಲೆಗಳು ದಡದ ಹಳದಿ ಮಣ್ಣಿಗೆ ಮುತ್ತಿಡುವಂತೆ ಕಾಣುತ್ತದೆ. ಇಲ್ಲಿಯ ನಿಶ್ಯಬ್ದತೆಯನ್ನು ಇಲ್ಲಿಯ ಅಲೆಗಳ ಶಬ್ದವು ಭೇಧಿಸುವಂತೆ ಆರ್ಭಟಿಸುತ್ತದೆ. ಈ ಜಾಗವು ನಿಮಗೆ ಸೂಕ್ತವಾದುದಾಗಿದ್ದು ಇದು ನಗರದ ಜೀವನದಿಂದ ದೂರವಿರುವ ಮತ್ತು ವಿಶ್ರಾಂತಿ ಪಡೆಯುವ, ಅಗತ್ಯವಾದ ಮತ್ತು ವಿರಾಮವನ್ನು ಕಳೆಯಲು ಪರಿಪೂರ್ಣವಾದ ಸ್ಥಳವಾಗಿದೆ.

ದರೈಪುರ್ ದೀಪಸ್ತಂಭ (ಲೈಟ್ ಹೌಸ್)

ದರೈಪುರ್ ದೀಪಸ್ತಂಭ (ಲೈಟ್ ಹೌಸ್)

PC: Biswarup Ganguly

ದರೈಪುರ್ ದೀಪಸ್ತಂಭವು ಇಲ್ಲಿಯ ಒಂದು ಪ್ರಮುಖ ಆಕರ್ಷಣೆಯಾಗಿದೆ. 96 ಅಡಿ ಎತ್ತರವನ್ನು ಅಳೆಯುವ ಈ ಲೈಟ್ ಹೌಸ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರತಿ ದಿನ 3 ಗಂಟೆಗೆ ಭೇಟಿ ನೀಡುವವರಿಗೆ ಅದರ ಬಾಗಿಲು ತೆರೆದಿರುತ್ತದೆ. ದೀಪಸ್ತಂಭದ ಮೇಲೆ ಹೋಗಿ ಇಡೀ ಸಮುದ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ವಿಹಂಗಮ ನೋಟವನ್ನು ಪಡೆಯುವ ಅವಕಾಶ ಸಿಗುತ್ತದೆ.

ಕಪಾಲ್ ಕುಂಡಲ ದೇವಾಲಯ

ಕಪಾಲ್ ಕುಂಡಲ ದೇವಾಲಯ

PC: Biswarup Ganguly

ಕಪಾಲಕುಂಡಲ ಕಡಲತೀರದ ಪಟ್ಟಣದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ದೇವಾಲಯವಾಗಿದ್ದು ಇದರ ಹೆಸರನ್ನು ಬಂಕಿಂಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿಯಲ್ಲಿ ಉಲ್ಲೇಖಿಸಲಾಗಿದೆ.

ಈ ದೇವಾಲಯವು ಕಾಳಿ ದೇವಿಗೆ ಸಮರ್ಪಿತವಾಗಿದ್ದು ಪಶ್ಚಿಮ ಬಂಗಾಳದ ನಾನಾ ಕಡೆಯ ಅನೇಕ ಸಂಖ್ಯೆಯ ಯಾತ್ರಿಗಳನ್ನು ಆಕರ್ಷಿಸುತ್ತದೆ. ಒಡಿಶಾ ಮತ್ತು ಬಿಹಾರ ವಾರ್ಷಿಕ ಉತ್ಸವವು ಬೆಂಗಾಲಿ ಕ್ಯಾಲೆಂಡರಿನನ ಚೈತ್ರದ ತಿಂಗಳಲ್ಲಿ ನಡೆಯುತ್ತದೆ.

ಪೆತುವಾಘಾಟ್ ಬಂದರು

ಪೆತುವಾಘಾಟ್ ಬಂದರು

PC: Nayeem siddiquee

ಬಂಗಾಳ ಕೊಲ್ಲಿಯ ತೀರದಲ್ಲಿ ನೆಲೆಗೊಂಡಿರುವ ಅತ್ಯಂತ ಆಕರ್ಷಕವಾದ ಬಂದರುಗಳಲ್ಲಿ ಒಂದಾದ ಪೆತುವಾಘಾಟ್ ಅಥವಾ ದೇಶಪ್ರಾಣ್ ಬಂದರು ರಸಲ್ಪುರ್ ನದಿ ಮತ್ತು ಬಂಗಾಳಕೊಲ್ಲಿಯು ಸೇರುವ ಜಾಗದಲ್ಲಿದೆ. ಈ ಬಂದರಿನಲ್ಲಿ ಮೀನುಗಾರರು ಬೋಟ್ ಗಳಲ್ಲಿ ಬಲೆ ಹಿಡಿದುಕೊಂಡು ಮೀನು ಹಿಡಿಯುವುದನ್ನು ನೋಡಬಹುದು. ಅಲ್ಲದೆ ಇಲ್ಲಿ ಹಿಡಿಯಲ್ಪಟ್ಟ ತಾಜಾ ಮೀನಿನ ರಾಶಿಗಳನ್ನೂ ಕೂಡ ಕಾಣಬಹುದು.

ಬೀಚ್ ನ ಉದ್ದಕ್ಕೂ ಸ್ವಲ್ಪ ದೂರ ಒಮ್ಮೆ ಅಡ್ಡಾಡಿ

ಬೀಚ್ ನ ಉದ್ದಕ್ಕೂ ಸ್ವಲ್ಪ ದೂರ ಒಮ್ಮೆ ಅಡ್ಡಾಡಿ

PC: StockSnap

ಕಡಲತೀರವು ಏಕಾಂತ ಮತ್ತು ಪ್ರಶಾಂತವಾದ ಸ್ಥಳವಾದುದರಿಂದ , ನೀವು ಯಾವುದೇ ಅಡ್ದಿ ಇಲ್ಲದೆ ತಿರುಗಾಡಬಹುದು . ಇಲ್ಲಿಯ ಮರಳಿನಿಂದ ಕೂಡಿದ ದಡ ಹಾಗೂ ನಿಮ್ಮ ಪಾದಗಳಿಗೆ ಹೊಡೆಯುವ ಸಮುದ್ರದ ಅಲೆಗಳು ಇವೆಲ್ಲ ಸೇರಿ ಒಂದು ಅದ್ಭುತವಾದ ಅನುಭವವನ್ನು ನೀಡುತ್ತದೆ.

ಇಲ್ಲಿ ಕುಳಿತುಕೊಳ್ಳುವುದನ್ನೂ ಕೂಡಾ ನೀವು ಆಯ್ಕೆ ಮಾಡಿಕೊಂಡು ವಿಶ್ರಾಂತಿ ತೆಗೆದುಕೊಳ್ಳಬಹುದು ಮತ್ತು ಬರುವ ಅಲೆಗಳನ್ನು ಲೆಕ್ಕ ಹಾಕಬಹುದು ಇಲ್ಲಿ ನಿಮಗೆ ಸಮಯ ಕಳೆದುದುರ ಅರಿವೇ ಆಗುವುದಿಲ್ಲ!

ಭೇಟಿ ಮಾಡಲು ಸೂಕ್ತ ಸಮಯ

ಭೇಟಿ ಮಾಡಲು ಸೂಕ್ತ ಸಮಯ

PC: Nilanjan Majumdar

ಬಂಕಿಪತ್ ವರ್ಷದ ಎಲ್ಲಾ ಕಾಲದಲ್ಲಿಯೂ ಭೇಟಿ ನೀಡಬಹುದಾದ ಸ್ಥಳವಾಗಿದ್ದು ಪ್ರತೀ ಪ್ರತಿ ಋತುವಿನಲ್ಲಿಯೂ ಕೂಡಾ ತನ್ನದೇ ಆದ ಸೌಂದರ್ಯ ಮತ್ತು ಅರ್ಥವನ್ನು ಹೊಂದಿದೆ - ಮಾನ್ಸೂನ್ ಒರಟಾದ ಮೋಡಗಳನ್ನು ಸಮುದ್ರದುದ್ದಕ್ಕೂ ತಂದು ಸ್ವಲ್ಪ ಸಮುದ್ರವನ್ನು ಸ್ವಲ್ಪ ಒರಟುಗೊಳಿಸುತ್ತದೆ. ಚಳಿಗಾಲದಲ್ಲಿ ಇಲ್ಲಿಗೆ ಭೇಟಿಯು ತುಂಬಾ ಸೂಕ್ತವಾದುದಾಗಿದೆ. ಈ ಸಮಯದಲ್ಲಿ ಕಡಲ ದಡದಲ್ಲಿ ವಾಕ್ ಹೋಗಬಹುದು .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X