Search
  • Follow NativePlanet
Share
» »ಜಾರ್ಖಂಡ್‌ನ ಹಜಾರಿಬಾಗ್ ಸೌಂದರ್ಯ ಕಣ್ತುಂಬಿಸಿ

ಜಾರ್ಖಂಡ್‌ನ ಹಜಾರಿಬಾಗ್ ಸೌಂದರ್ಯ ಕಣ್ತುಂಬಿಸಿ

ಹಜಾರಿಬಾಗ್, ರಾಂಚಿಯಿಂದ 93 ಕಿ.ಮೀ ದೂರದಲ್ಲಿರುವ ನಗರವಾಗಿದೆ ಮತ್ತು ಜಾರ್ಖಂಡ್ ನ ಛೋಟಾನಾಗಪುರ್ ಪ್ರಸ್ಥಭೂಮಿ ಪ್ರದೇಶದ ಒಂದು ಭಾಗವಾಗಿದೆ.

ಸಾಮಾನ್ಯವಾಗಿ ಎಲ್ಲರೂ ರಜಾದಿನಗಳನ್ನು ಕಳೆಯಲು ಪ್ರಶಾಂತವಾದ ಸ್ಥಳವನ್ನೇ ಇಷ್ಟಪಡುತ್ತಾರೆ. ಮರೆಯಲಾಗದಂತಹ ರಜಾದಿನಗಳನ್ನು ಕಳೆಯಲು ಎಷ್ಟೋ ದೂರದ ಪ್ರದೇಶಗಳಿಗೂ ಹೋಗುತ್ತಾರೆ. ನಮ್ಮಲ್ಲಿ ಇಂತಹ ಸ್ಥಳಗಳಿಗೇನೂ ಕೊರತೆಯಿಲ್ಲ ಬಿಡಿ. ನೀವು ಪ್ರಶಾಂತವಾದ ನೈಸರ್ಗಿಕ ಸೌಂದರ್ಯವನ್ನು ಉಳಿಸಿಕೊಂಡಿರುವ ಸ್ಥಳಕ್ಕೆ ಭೇಟಿ ನೀಡಬೇಕೆಂದಿದ್ದರೆ ಹಜಾರಿಬಾಗ್ ಭೇಟಿ ನೀಡಿ.

ಕೊನಾರ್ ನದಿ

ಕೊನಾರ್ ನದಿ

PC: Boy 101
ಹಜಾರಿಬಾಗ್, ರಾಂಚಿಯಿಂದ 93 ಕಿ.ಮೀ ದೂರದಲ್ಲಿರುವ ನಗರವಾಗಿದೆ ಮತ್ತು ಜಾರ್ಖಂಡ್ ನ ಛೋಟಾನಾಗಪುರ್ ಪ್ರಸ್ಥಭೂಮಿ ಪ್ರದೇಶದ ಒಂದು ಭಾಗವಾಗಿದೆ. ಕಾಡುಗಳಿಂದ ಸುತ್ತುವರೆದಿರುವ, ಕೊನಾರ್ ನದಿ ಈ ಪಟ್ಟಣದ ಮೂಲಕ ಹರಿಯುತ್ತದೆ. ಚಂದ್ ವಾರಾ ಮತ್ತು ಜಿಲಿಂಜಾ ಹಜಾರಿಬಾಗ್ ಜಿಲ್ಲೆಯ ಎರಡು ಪ್ರಮುಖ ಪರ್ವತ ಶ್ರೇಣಿಗಳಾಗಿವೆ.

ಹಜಾರಿಬಾಗ್‌ನ ಪರ್ವತಗಳು

ಹಜಾರಿಬಾಗ್‌ನ ಪರ್ವತಗಳು

PC: Anup Sadi

ಹಜಾರಿಬಾಗ್ ನ ಅತ್ಯುನ್ನತ ಪರ್ವತಗಳು ಪ್ರಶಾಂತ ಬೆಟ್ಟಗಳಾಗಿವೆ. 23 ನೇ ಮತ್ತು 24 ನೇ ಜೈನ ತೀರ್ಥಂಕರರು ಇಲ್ಲಿ ಮುಕ್ತಿಯನ್ನು ಪಡೆದಿದ್ದಾರೆ ಎಂದು ನಂಬಲಾಗಿದೆ. ಇದು ಪ್ರಸಿದ್ಧ ಆರೋಗ್ಯಧಾಮವಾಗಿದ್ದು ಮತ್ತು ವಿವಿಧ ಸಸ್ಯ ಮತ್ತು ಪ್ರಾಣಿಗಳು ಇಲ್ಲಿ ಸಮೃದ್ಧವಾಗಿದೆ. ಇದು ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಅನೇಕ ಸುಂದರ ದೇವಾಲಯಗಳಿವೆ. ಇದು ಬ್ರಿಟಿಷ್ ಆಳ್ವಿಕೆಯಲ್ಲಿ ಒಂದು ಸೇನಾವಸತಿ ಆಗಿತ್ತು ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿತ್ತು. ಹಜಾರಿಬಾಗ್ ನಲ್ಲಿ ಅದಿರು ಮತ್ತು ಖನಿಜಗಳು ಕೂಡ ಸಮೃದ್ಧವಾಗಿದೆ.

 ಸೊಹರೈ ಹಬ್ಬ

ಸೊಹರೈ ಹಬ್ಬ

PC: youtube

ಹಜಾರಿಬಾಗ್ ನ ಸೊಹಾರಿ/ಸೊಹರೈ ವರ್ಣಚಿತ್ರಗಳು ಇಡೀ ವಿಶ್ವದಲ್ಲಿಯೇ ಜನಪ್ರಿಯವಾಗಿವೆ. ಈ ವರ್ಣಚಿತ್ರಗಳು ಸಾಂಪ್ರದಾಯಿಕ ಮತ್ತು ಕುರ್ಮಿ ಮತ್ತು ಪ್ರಜಾಪತಿ ಬುಡಕಟ್ಟು ಜನರು ಆಚರಿಸುವ ಸೊಹರೈ ಹಬ್ಬಕ್ಕೆ ಸಂಬಂಧಿಸಿವೆ. ಜಾನುವಾರುಗಳನ್ನು ಈ ಉತ್ಸವಗಳ ಒಂದು ಆಚರಣೆ ಅಂಗವಾಗಿ ತೊಳೆದು ನಂತರ ಪೂಜಿಸಲಾಗುತ್ತದೆ. ಸೊಹರೈ ವರ್ಣಚಿತ್ರಗಳು ಜುರಿಚ್ ನಲ್ಲಿ ರೈಟ್ ಬುರ್ಗ್ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲ್ಪಟ್ಟಿವೆ.

ಪ್ರಮುಖ ಪ್ರವಾಸಿ ತಾಣಗಳು

ಪ್ರಮುಖ ಪ್ರವಾಸಿ ತಾಣಗಳು

PC:Tom Mundakel

ಹಜಾರಿಬಾಗ್ ನ ಮತ್ತು ಸುತ್ತಲಿನ ಪ್ರವಾಸಿ ತಾಣಗಳು ಹಜಾರಿಬಾಗ್ ನಲ್ಲಿ ಮತ್ತು ಸುತ್ತ ಮತ್ತಲಿನ ಪ್ರಮುಖ ಪ್ರವಾಸಿ ತಾಣಗಳು ಪರಿಸರ ಪ್ರವಾಸಿ ತಾಣವಾಗಿದ್ದು, ಅವುಗಳಲ್ಲಿ, ಇಕೋ- ಪ್ರವಾಸಿ ತಾಣ ವನ್ಯಮೃಗ ಅಭಯಾರಣ್ಯ, ಸುಂದರ ಕ್ಯಾನರಿ ಬೆಟ್ಟಗಳು, ಬಿಸಿ ನೀರಿನ ಕಾರಂಜಿ ಸೂರಜ್‌ಕುಂಡ್, ಇಸ್ಕೊ ಹಳ್ಳಿ, ರಾಜರಪ್ಪಾ ಜಲಪಾತ, ಚಿನ್ನಮಸ್ತಾ ದೇವಸ್ಥಾನ, ಸಾತ್ ಪಹಾರ್, ತಿಲೈಯಾ ಅಣೆಕಟ್ಟು, ನರಸಿಗಸ್ತಾನ್ ದೇವಾಲಯ, ರಾಜ್ ದೆರ್ವಾಹ್, ಹಜಾರಿಬಾಗ್ ಸರೋವರ, ಸಿಲ್ವಾರ್ ಬೆಟ್ಟ ಕೊನಾರ್ ಅಣೆಕಟ್ಟು ಮೊದಲಾದ ಹತ್ತು ಹಲವು ಸ್ಥಳಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.

ಹಜಾರಿಬಾಗ್ ತಲುಪುವುದು ಹೇಗೆ?

ಹಜಾರಿಬಾಗ್ ತಲುಪುವುದು ಹೇಗೆ?

PC: Anup Sadi
ಹಜಾರಿಬಾಗ್ ರಸ್ತೆ, ರೈಲ್ವೆ ಮತ್ತು ವಿಮಾನ ಮಾರ್ಗಗಳ ಮೂಲಕ ಪಾಟ್ನಾ, ರಾಂಚಿಯಂತಹ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X