Search
  • Follow NativePlanet
Share
» »ಅದ್ಭುತ ಹಯಗ್ರೀವ ಮಾಧವ ದೇವಾಲಯ!

ಅದ್ಭುತ ಹಯಗ್ರೀವ ಮಾಧವ ದೇವಾಲಯ!

ಅಸ್ಸಾಮಿನ ಗುವಾಹಟಿ ನಗರದಿಂದ 24 ಕಿ.ಮೀ ದೂರದಲ್ಲಿರುವ ಬ್ರಹ್ಮಪುತ್ರ ನದಿ ತಟದ ಮೇಲಿನ ಹಾಜೊ ಎಂಬಲ್ಲಿರುವ ಮೋನಿಕೂಟ ಎಂಬ ಗುಡ್ಡದ ಮೆಲಿರುವ ಹಯಗ್ರೀವ ಮಾಧವ ದೇವಾಲಯ ಗಮನಸೆಳೆಯುತ್ತದೆ

By Vijay

ಅಸ್ಸಾಂ ರಾಜ್ಯದ ಗುವಾಹಟಿ ನಗರದಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಬ್ರಹ್ಮಪುತ್ರ ನದಿ ತಟದ ಮೆಲೆ ನೆಲೆಸಿರುವ ಹಾಜೊ ಎಂಬ ಸ್ಥಳವು ಸಾಕಷ್ಟು ಪ್ರಾಚೀನತೆಯಿಂದ ಕೂಡಿದ್ದು ಒಂದು ಅದ್ಭುತ ಪ್ರದೇಶವಾಗಿ ಪ್ರವಾಸಿಗರ ಕುತೂಹಲ ಕೆರಳಿಸುತ್ತದೆ.

ಇದರ ವಿಶೇಷತೆ ಎಂದರೆ ಇದು ಹಿಂದುಗಳು, ಬೌದ್ಧರು ಹಾಗೂ ಮುಸ್ಲಿಮರಿಗೆ ಪವಿತ್ರವಾಗಿರುವ ಸ್ಥಳವಾಗಿದೆ. ಹಾಗಾಗಿ ಸಾಕಷ್ಟು ಧಾರ್ಮಿಕಾಸಕ್ತರು ಈ ಪ್ರಾಚೀನ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಇಲ್ಲಿರುವ ಮೋನಿ ಕೂಟ ಎಂಬ ಗುಡ್ಡದ ಮೇಲೆ ವಿಷ್ಣುವಿಗೆ ಮುಡಿಪಾದ ಅತ್ಯಂತ ಪುರಾತನ ದೇವಾಲಯವೊಂದು ಸಾಕಷ್ಟು ಗಮನಸೆಳೆಯುತ್ತದೆ.

ಅದ್ಭುತ ಹಯಗ್ರೀವ ಮಾಧವ ದೇವಾಲಯ!

ಚಿತ್ರಕೃಪೆ: Jugal Bharali

ವಿಷ್ಣು ದೇವರನ್ನು ಈ ದೇವಾಲಯದಲ್ಲಿ ಹಯಗ್ರೀವನ ರೂಪದಲ್ಲಿ ಆರಾಧಿಸಲಾಗಿದೆ. ಹಾಗಾಗಿ ಇದನ್ನು ಹಯಗ್ರೀವ ಮಾಧವನ ದೇವಾಲಯ ಎಂದು ಕರೆಯಲಾಗುತ್ತದೆ. ಪ್ರಸ್ತುತ ದೇವಾಲಯದ ರಚನೆಯನ್ನು ಹದಿನಾರನೇಶ ಶತಮಾನದಲ್ಲಿ ರಘುದೇವ ನಾರಾಯಣನೆಂಬಾತನು ನಿರ್ಮಿಸಿದನೆಂದು ತಿಳಿದುಬರುತ್ತದೆ.

ಇದಕ್ಕೂ ಮುಂಚೆಯೆ ಈ ದೇವಾಲಯವಿತ್ತು ಹಾಗೂ ಆರನೇಯ ಶತಮಾನದಲ್ಲಿಯೆ ಪಾಲ ಸಾಮ್ರಾಜ್ಯದ ದೊರೆಯೊಬ್ಬಾತನಿಂದ ಈ ದೇವಾಲಯದ ನಿರ್ಮಾಣವಾಗಿತ್ತೆಂಬ ನಂಬಿಕೆಯೂ ಸಹ ಚಾಲ್ತಿಯಲ್ಲಿದೆ. ಬೌದ್ಧರ ಪ್ರಕಾರವೂ ಸಹ ಈ ದೇವಾಲಯವು ಸಾಕಷ್ಟು ಪವಿತ್ರಮಯವಾಗಿದ್ದು ನಿರ್ವಾಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಹತ್ವ ಪಡೆದಿದೆ.

ಅದ್ಭುತ ಹಯಗ್ರೀವ ಮಾಧವ ದೇವಾಲಯ!

ಚಿತ್ರಕೃಪೆ: Junak4u

ಆದಾಗ್ಯೂ ಈ ದೇವಾಲಯದಲ್ಲಿ ಪ್ರಧಾನ ದೇವತೆಯಾಗಿ ವಿಷ್ಣುವಿನ ಅವತಾರವಾದ ನರಸಿಂಹನನ್ನು ಪೂಜಿಸಲಾಗುತ್ತದೆ. ಇನ್ನು ಶಿಲ್ಪಕಲೆಗೆ ಸಂಬಂಧಿಸಿದಂತೆ ದೇವಾಲಯ ಗೋಡೆಗಳ ಮೇಲೆ ಆನೆಗಳ ಸುಂದರ ಮೂರ್ತಿಗಳನ್ನು ಕೆತ್ತಲಾಗಿದ್ದು ಇದು ವಿಶೇಷವಾಗಿ ಅಸ್ಸಾಮಿನ ಕಲಾತ್ಮಕತೆಯನ್ನು ಅನಾವರಣಗೊಳಿಸುತ್ತದೆ.

1461 ರಿಂದಲೂ ಉರಿಯುತ್ತಿರುವ ದೀಪ ಮಂದಿರ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X