Search
  • Follow NativePlanet
Share
» »ಬೆಂಗಳೂರಿನಲ್ಲಿರುವ 300 ಕೋಟಿ ವರ್ಷದ ಬಂಡೆ!

ಬೆಂಗಳೂರಿನಲ್ಲಿರುವ 300 ಕೋಟಿ ವರ್ಷದ ಬಂಡೆ!

300 ಕೋಟಿ ವರ್ಷಗಳಷ್ಟು ಪುರಾತನವಾದ ಪೆನಿನ್ಸುಲಾರ್ ನೈಸ್ಸ್ ಶಿಲಾ ರಚನೆಗಳು ಬೆಂಗಳೂರಿನ ಎರಡು ಪ್ರವಾಸಿ ಪ್ರಖ್ಯಾತಿಯ ಸ್ಥಳಗಳಲ್ಲಿ ಕಂಡುಬರುತ್ತವೆ ಹಾಗೂ ರಾಷ್ಟ್ರೀಯ ಮಹತ್ವದ ರಚನೆಗಳಾಗಿವೆ

By Vijay

ಏನಪ್ಪಾ ಇದು, ಎಂದು ಒಂದು ಕ್ಷಣ ಅಚ್ಚರಿಯಾಗಿರಬೇಕಲ್ಲವೆ? ಇಂತಹ ಪುರಾತನ ಬಂಡೆಯೊಂದು ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿದೆಯೆ ಎಂಬ ಆಶ್ಚರ್ಯ ಉಂಟಾಗಿರಬೇಕಲ್ಲವೆ? ಆದರೆ ಇದು ಖಂಡಿತ ಸತ್ಯ. ಸುಮಾರು 300 ಕೋಟಿಗೂ (ಮೂರು ಬಿಲಿಯನ್) ಅಧಿಕ ವರ್ಷಗಳಷ್ಟು ಪುರಾತನವಾದ ಬಂಡೆಯ ರಚನೆಯೊಂದು ಬೆಂಗಳೂರಿನಲ್ಲಿದೆ

ಅಲ್ಲದೆ, ಈ ರೀತಿಯ ಎರಡು ಬಂಡೆ ರಚನೆಗಳನ್ನು ಬೆಂಗಳೂರಿನಲ್ಲಿಯೆ ಕಾಣಬಹುದಾಗಿದ್ದು ಕರ್ನಾಟಕದ ಮಟ್ಟಿಗೆ ಹೆಮ್ಮೆಯ ವಿಷಯವೆ ಆಗಿದೆ. ಅಷ್ಟೆ ಅಲ್ಲ ಆ ಎರಡೂ ರಚನೆಗಳು ನಗರದ ಅತಿ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿಯೂ ಒಂದಾಗಿವೆ.

ಬೆಂಗಳೂರಿನ ಸಖತ್ ಶಾಪಿಂಗ್ ಸ್ಥಳಗಳು!

ಪ್ಯಾಲಿಯೋಜಿಯೋಗ್ರಫಿ ಎನ್ನುವುದು ವಿಜ್ಞಾನದ ಒಂದು ಶಾಖೆಯಾಗಿದ್ದು ಇದರಲ್ಲಿ ಮುಖ್ಯವಾಗಿ ಐತಿಹಾಸಿಕ ಭುಗೋಳಶಾಸ್ತ್ರದ ಕುರಿತು ಅಧ್ಯಯನ ಮಾಡಲಾಗುತ್ತದೆ. ಅಂದರೆ ಪ್ರದೇಶದ ಐತಿಹಾಸಿಕ ಭೂಶಿಲಾ ರಚನೆಗಳು, ಬಂಡೆಗಳ ಪ್ರಾಚೀನತೆ ಹಾಗೂ ಅವುಗಳ ವಿಕಸನದ ಕುರಿತು ಅಧ್ಯಯನ ಮಾಡಲಾಗುತ್ತದೆ.

ಆ ಪ್ರಕಾರವಾಗಿ ವಿಜ್ಞಾನಿಯೊಬ್ಬಾತ ಪೆನಿನ್ಸುಲಾರ್ ನೆಸ್ಸ್ (Peninsular Gneiss) ಎಂಬ ಪದವೊಂದನ್ನು ಅತ್ಯಂತ ಪ್ರಾಚೀನ ಬಂಡೆ ರಚನೆಗಳಿಗೆ ಆವಿಷ್ಕರಿಸಿದ್ದು ಆ ಪ್ರಕಾರವಾಗಿ, ಬೆಂಗಳೂರಿನ ಈ ಬಂಡೆಯು ಒಂದು ಪೆನಿನ್ಸುಲಾರ್ ನೆಸ್ಸ್ ರಚನೆಯಾಗಿದೆ. ಈ ರೀತಿಯ ರಚನೆಗಳು ಭಾರತದಲ್ಲಿ ಕೇವಲ 26 ಮಾತ್ರ ಇವೆ. ಅವುಗಳಲ್ಲಿ ಬೆಂಗಳೂರೊಂದರಲ್ಲೆ ಎರಡು ರಚನೆಗಳನ್ನು ಕಾಣಬಹುದು. ಹಾಗಾದರೆ ಆ ಬಂಡೆಗಳು ಯಾವುದು? ಅವು ಎಲ್ಲಿವೆ? ಎಂಬುದರ ಕುರಿತು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ.

ಲೇಖನದಲ್ಲಿ ಬಳಸಲಾದ ಚಿತ್ರಗಳಿಗೆ ಚಿತ್ರಕೃಪೆ: Akshatha Vinayak and Brunda Nagaraj

ಹೃದಯ ಭಾಗದಲ್ಲಿ

ಹೃದಯ ಭಾಗದಲ್ಲಿ

ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಸುಂದರ ಸ್ಥಳ ಬಸವನಗುಡಿ. ಬಸವನಗುಡಿ ಬೆಂಗಳೂರಿನ ಹಳೆಯ ಸಾಂಪ್ರದಾಯಿಕ ಸ್ಥಳಗಳ ಪೈಕಿ ಒಂದಾಗಿದ್ದು ಬೆಂಗಳೂರಿನ ಅಪ್ಪಟ ಸಂಸ್ಕೃತಿಯನ್ನು ಬಲು ಹತ್ತಿರದಿಂದ ನೋಡಬಯಸುವವರಿಗೆ ವಿಫುಅಲವಾದ ಅವಕಾಶ ನೀಡುತ್ತದೆ.

ಸಾಂಪ್ರದಾಯಿಕತೆ

ಸಾಂಪ್ರದಾಯಿಕತೆ

ಬಸವನಗುಡಿಯು ಮುಖ್ಯವಾಗಿ ದೇವಾಲಯಗಳು, ವೈದಿಕ ಸಂಸ್ಕೃತಿ, ಸಾಂಸ್ಕೃತಿಕ ಭವನಗಳು, ಸಾಂಪ್ರದಾಯಿಕ ಅಂಗಡಿ ಮುಗ್ಗಟ್ಟುಗಳಿಗಾಗಿ ಸಾಕಷ್ಟು ಹೆಸರುವಾಸಿಯಾಗಿದೆ. ಅಲ್ಲದೆ ಏಕಶಿಲೆಯಲ್ಲಿ ಕೆತ್ತಲಾದ ಬಸವಣ್ಣನ ಪ್ರತಿಮೆ ಹಾಗೂ ದೊಡ್ಡ ಗಣಪತಿ ದೇವಸ್ಥಾನದಿಂದಾಗಿ ಸಾಕಷ್ಟು ಜನರ ಗಮನಸೆಳೆಯುತ್ತದೆ ಬಸವನಗುಡಿ.

ಅತಿ ಪುರಾತನ

ಅತಿ ಪುರಾತನ

ಆದರೆ ನಿಮಗೆ ಗೊತ್ತೆ, ದೊಡ್ಡಬಸವನಗುಡಿಯು ಚಿಕ್ಕದಾದ ಬೆಟ್ಟವೊಂದರ ಮೇಲೆ ನೆಲೆಸಿದ್ದು ಆ ಬೆಟ್ಟವೆ ಪೆನಿನ್ಸುಲಾ ನೆಸ್ಸ್ ರಚನೆ ಆಗಿದೆ ಎಂದು. ಹೌದು ಭೂಮಿಯು ಆಗತಾನೆ ರೂಪಗೊಂಡ ಸಮಯದಲ್ಲಿ ನಿರ್ಮಿತವಾದ ಅತಿ ಪುರಾತನ ಶಿಲಾ ರಚನೆಗಳ ಪೈಕಿ ಒಂದಾಗಿದೆ ಈ ರಚನೆ!

ಬ್ಯೂಗಲ್ ರಾಕ್

ಬ್ಯೂಗಲ್ ರಾಕ್

ಇಂದು ಆ ಚಿಕ್ಕ ಬೆಟ್ಟದ ತಾಣದಲ್ಲಿ ಉದ್ಯಾನವನ್ನು ನಿರ್ಮಿಸಲಾಗಿದ್ದು ಅದನ್ನೆ ಬ್ಯುಗಲ್ ರಾಕ್ಸ್ ಉದ್ಯಾನ ಎಂಬ ಹೆಸರಿನಿಂದ ಕರೆಯುತ್ತಾರೆ. ಅಂದರೆ ನೀವೆ ಊಹಿಸಿಕೊಳ್ಳಿ ನೀವು ಅಲ್ಲಿಗೆ ಭೇಟಿ ನೀಡಿದ್ದಾಗ ಜಗತ್ತಿನ ಅತ್ಯಂತ ಪುರಾತನ ಶಿಲಾ ರಚನೆಗಳ ಮೇಲೆ ನೀವು ನಿಂತಿದ್ದಿರಿ ಎಂಬುದು ಗಮನಾರ್ಹ.

ಕರೆಯಬಹುದು

ಕರೆಯಬಹುದು

ಬ್ಯುಗಲ್ ರಾಕ್ಸ್ ಅನ್ನು ಕನ್ನಡದಲ್ಲಿ ಕಹಳ ಬಂಡೆ ಎಂತಲೂ ಅರ್ಥಿಸಬಹುದಾಗಿದೆ ಹಾಗೂ ಈ ರಚನೆಯು ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತಿಕೆಯನ್ನು ಪಡೆದ ಸ್ಥಳವಾಗಿಯೂ ಹೆಸರುವಾಸಿಯಾಗಿದೆ. ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರಿಗೆ ಬಲು ಪ್ರೀಯವಾದ ಸ್ಥಳ ಇದಾಗಿತ್ತೆಂದು ಕೆಲವು ಇತಿಇಹಾಸಕಾರರ ಅಭಿಪ್ರಾಯವಾಗಿದೆ.

ಎತ್ತುಗಳ ಆಕ್ರಮಣ

ಎತ್ತುಗಳ ಆಕ್ರಮಣ

ಹಿಂದೊಮ್ಮೆ ಈ ಪ್ರದೇಶದ ಸುತ್ತಮುತ್ತಲಿನಲ್ಲಿ ಕಡಲೆ ಬೀಜದ ಹೊಲಗಳಿದ್ದವು. ಒಮ್ಮೆ ಆ ಪ್ರದೇಶದಲ್ಲಿದ್ದ ಅನೇಕ ಎತ್ತುಗಳು ಕಡಲೆ ಬೀಜದ ಬೆಳೆಗಳನ್ನು ಹಾನಿ ಮಾಡತೊಡಗಿದವಂತೆ! ಆದ್ದರಿಂದ ಸ್ಥಳೀಯರು ಬಸವನ ಪ್ರತಿಮೆ ತಯಾರಿಸಿ ಪೂಜಿಸಿದಾಗ ಅವುಗಳ ಹಾವಳಿ ಕಡಿಮೆಯಾಯಿತಂತೆ.

ಕಡಲೆಕಾಯಿ ಪರಿಷೆ

ಕಡಲೆಕಾಯಿ ಪರಿಷೆ

ಹಾಗಾಗಿ ಆ ಒಂದು ಆಚರಣೆಯನ್ನು ಇಂದಿಗೂ ಬೆಂಗಳೂರಿನಲ್ಲಿ ಆಚರಿಸಲಾಗುತ್ತದೆ. ಆಧುನಿಕವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಆ ಜಾತ್ರೆಯು ಕಡಲಕಾಯಿ ಪರಿಷೆ ಎಂದೆ ಪ್ರಸಿದ್ಧವಾಗಿದ್ದು ನಗರದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿದು ತೋರಿಸುತ್ತದೆ. ಪ್ರತಿ ವರ್ಷ ನವಂಬರ್-ಡಿಸೆಂಬರ್ ಅವಧಿಯಲ್ಲಿ ಎರಡು-ಮೂರು ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ.

ಜನಸಾಗರ ಸೇರಿರುತ್ತದೆ

ಜನಸಾಗರ ಸೇರಿರುತ್ತದೆ

ಈ ಜಾತ್ರೆಯು ಬ್ಯುಗಲ್ ಉದ್ಯಾನದ ಆಸು ಪಾಸಿನಲ್ಲೆ ನಡೆಯುವುದರಿಂದ ಪ್ರತಿ ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆ ಸಮಯದಲ್ಲಿ ಬ್ಯುಗಲ್ ಉದ್ಯಾನಕ್ಕೆ ಭೇಟಿ ನೀಡುತ್ತಾರೆ. ಬ್ಯುಗಲ್ ಉದ್ಯಾನವು ಇಂದು ಸಾಕಷ್ಟು ನವೀಕರಣಗೊಳ್ಳಲ್ಪಟ್ಟಿದ್ದು ಹಾಯಾಗಿ ಸ್ವಲ್ಪ ಕಾಲ ವಿರಮಿಸ ಬಯಸುವವರಿಗೆ ಸ್ವರ್ಗವಂತೆಯೆ ಭಾಸವಾಗುತ್ತದೆ.

ಇಲ್ಲಿದೆ ಕಥೆ

ಇಲ್ಲಿದೆ ಕಥೆ

ಇನ್ನೂ ಇದಕ್ಕೆ ಹೆಸರು ಬಂದಿರುವುದರ ಕುರಿತು ತಿಳಿಯಬಯಸಿದಾಗ ಗೊತ್ತಾಗುವ ವಿಷಯವೆಂದರೆ, ಹಿಂದೆ ಕೆಂಪೇಗೌಡರು ಬೆಂಗಳೂರಿನ ಜವಾಬ್ದಾರಿ ಹೊತ್ತಿದ್ದಾಗ ಈ ಬಂಡೆ ಬೆಟ್ಟದ ಮೇಲೆ ವೀಕ್ಷಣಾ ಗೋಪುರವೊಂದನ್ನು ನಿರ್ಮಿಸಿ ಅಲ್ಲಿ ಕಹಳೆ ಹಿಡಿದುಕೊಂಡುಕಾವಲುಗಾರನೊಬ್ಬನನ್ನು ನೇಮಿಸಿದ್ದರು.

ಕಾವಲುಗಾರ

ಕಾವಲುಗಾರ

ಯಾವುದಾದ ಅಪಾಯದ ಸಂದರ್ಭ ಎದುರಾದಾಗ ಅಥವಾ ಶತ್ರು ಪಾಳಯ ಬರುವುದು ಕಂಡಾಗ ಹಾಗೂ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ತಿಳಿಸುವ ನಿಮಿತ್ತ ಆ ಕಾವಲುಗಾರ ಆಯಾ ಸಂದರ್ಭದಲ್ಲಿ ಕಹಳೆಯನ್ನು ಜೋರಾಗಿ ಊದಿ ಪ್ರತಿಯೊಬ್ಬರಿಗೂ ಸಂದೇಶ ನೀಡುತ್ತಿದ್ದ.

ಬ್ಯೂಗಲ್ ಬಂಡೆ

ಬ್ಯೂಗಲ್ ಬಂಡೆ

ಹೀಗೆ ಆ ರಚನೆಯು ಕಹಳೆ ಊದುವ ಕಹಳೆ ಬಂಡೆಯಾಗಿ ಕ್ರಮೇಣವಾಗಿ ಆಂಗ್ಲದಲ್ಲಿ ಬ್ಯೂಗಲ್ ರಾಕ್ಸ್ ಎಂಬ ಹೆಸರು ಪಡೆದುಕೊಂಡಿತು. ಇನ್ನೂ ಭೂವಿಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ಈ ಕಲ್ಲು ಬಂಡೆಯು ಅತ್ಯಂತ ಪುರಾತನವಾದ ಶಿಲಾ ರಚನೆಯಾಗಿದೆ.

ಸುಸ್ತಾಗುತ್ತೀರಿ!

ಸುಸ್ತಾಗುತ್ತೀರಿ!

ವಿಜ್ಞಾನಿಗಳ ಪ್ರಕಾರ ಈ ಶಿಲಾ ರಚನೆ ಎಷ್ಟು ಪುರಾತವಾದದ್ದೆಂದರೆ ಸೂಪರ್ ಕಾಂಟಿನೆಂಟ್ ಎಂದು ಕರೆಯಲಾಗುವ ಗೊಂಡವಾನಾ ಖಂಡದ ರಚನೆಗಳು ಈ ಶಿಲಾರಚನೆಗಳಿದ್ದ ಸಾಂದರ್ಭದಲ್ಲಾಗಿತ್ತೆಂದು ಹೇಳಲಾಗುತ್ತದೆ. ಅಂದರು ಐದು ನೂರು ಮಿಲಿಯನ್ ವರ್ಷಗಳಕ್ಕೂ ಅಧಿಕ ವರ್ಷಗಳ ಹಿಂದೆ.

ಪರಿಣಾಮ

ಪರಿಣಾಮ

ಮುಂದೆ ಈ ಖಂಡಗಳು ಕಾಂಟಿನೆಂಟಲ್ ಡ್ರಿಫ್ಟ್ ಮುಲಕ ರೂಪ ಪಡೆಯುತ್ತ ಕ್ರಮೇಣವಾಗಿ ಈಗ ನೋಡುತ್ತಿರುವ ಖಂಡಗಳಾಗಿ ಮಾರ್ಪಾಟುಗಳಾದವು ಎನ್ನಲಾಗುತ್ತದೆ. ಆ ಸಂದರ್ಭದಲ್ಲೆ ಇದ್ದ ಶಿಲಾ ರಚನೆ ಇಂದಿನ ಬ್ಯೂಗಲ್ ರಾಕ್ ಆಗಿದೆ ಎಂದರೆ ಯಾರಿಗಾದರೂ ಸರಿ ಒಂದು ಕ್ಷಣ ರೋಮಾಂಚನವಾಗದೆ ಇರಲಾರದಲ್ಲವೆ?

ಕಾಪಾಡಬೇಕು

ಕಾಪಾಡಬೇಕು

ಇಂದು ಬ್ಯೂಗಲ್ ರಾಕ್ ಉದ್ಯಾನವನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಪ್ರಖ್ಯಾತ ಬರಹಗಾರ, ಕನ್ನಡ ಕಂಡ ಶ್ರೇಷ್ಠ ಸಾಹಿತಿಗಳಲ್ಲೊಬ್ಬರಾದ ಡಿ.ವಿ.ಗುಂಡಪ್ಪನವರ ಸ್ಮರಣಾರ್ಥವಾಗಿ ಇಲ್ಲಿ ಸ್ಮಾರಕವೂ ಇರುವುದನ್ನು ಕಾಣಬಹುದು. ನೀವೇನಾದರೂ ಈ ಉದ್ಯಾನಕ್ಕೆ ಭೇಟಿ ನೀಡಿದರೆ ಇದರ ಪುರಾತನತೆಯನ್ನು ಆಸ್ವಾದಿಸಲು ಮರೆಯಬೇಡಿ.

ಶ್ರೀಮಂತಿಕೆ

ಶ್ರೀಮಂತಿಕೆ

ಇನ್ನೊಂದು ವಿಶೇಷವೆಂದರೆ ಇದು ಚಿಕ್ಕದಾದ ಉದ್ಯಾನವಾದರೂ ಬಲು ಶ್ರೀಮಂತಿಕೆಯಿಂದ ಕೂಡಿದ ವನ್ಯಸಂಪತ್ತನ್ನು ಇದು ಹೊಂದಿದೆ. ಅಪಾರ ಪ್ರಮಾಣದ ವೈವಿಧ್ಯಮಯ ಸಸ್ಯರಾಶಿಗಳು ಹಾಗೂ ಕೀಟಲೋಕವನ್ನು ಇಲ್ಲಿ ಕಾಣಬಹುದು.

ಕಂಡುಬರುತ್ತವೆ

ಕಂಡುಬರುತ್ತವೆ

ಅದರಂತೆ ಇಲ್ಲಿರುವ ದಟ್ಟ ಹಾಗೂ ದೊಡ್ಡ ಮರಗಳಲ್ಲಿ ಫ್ರುಟ್ ಬ್ಯಾಟ್ಸ್ ಅಂದರೆ ಹಣ್ಣು ತಿಂದುಬದುಕುವ ಬಾವಲಿಗಳನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮರಗಳ ರೆಂಬೆ ಕೊಂಬೆಗಳಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು.

ಚಿತ್ರಕೃಪೆ: Bernard Gagnon

ನಿಮಗಿದು ಗೊತ್ತೆ?

ನಿಮಗಿದು ಗೊತ್ತೆ?

ಇನ್ನೂ ಇದೆ ರೀತಿಯ ಶಿಲಾ ರಚನೆಗೆ ಹೆಸರುವಾಸಿಯಾದ ಮತ್ತೊಂದು ಸ್ಥಳ ಬೆಂಗಳೂರಿನ ಪ್ರಖ್ಯಾತ ಲಾಲ್ ಬಾಗ್ ಉದ್ಯಾನ. ಈ ಸಸ್ಯಕಾಶಿಯ ದಕ್ಷಿಣ ದ್ವಾರದಿಂದ ಪ್ರವೇಶಿಸಿದಾಗ ಸಾಮಾನ್ಯವಾಗಿ ಶಿಲಾ ರಚನೆಯ ಕಲ್ಲಿನ ಹಾಸೊಂದನ್ನು ಕಾಣಬಹುದು. ಇದೆ ಆ ಪ್ರಾಚೀನ ಶಿಲಾ ರಚನೆ ಅರ್ಥಾತ್ ಪೆನಿನ್ಸುಲಾರ್ ನೈಸ್ಸ್.

ಚಿತ್ರಕೃಪೆ: Nvvchar

ನಿತ್ಯ ಭೇಟಿ

ನಿತ್ಯ ಭೇಟಿ

ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಕಲ್ಲು ಹಾಸಿನ ಮೇಲೆ ಓಡಾಡುತ್ತಾರೆ. ಕೆಲವರು ವ್ಯಯಾಮದಂತಹ ಚಟುವಟಿಕೆಗಳನ್ನೂ ಸಹ ಮಾಡುವುದನ್ನು ಕಾಣಬಹುದು. ಇಲ್ಲೆ ಕೆಂಪೇಗೌಡ ವೀಕ್ಷಣಾ ಗೋಪುರವಿದ್ದು ಪ್ರವಾಸಿಗರ ಗಮನಸೆಳೆಯುತ್ತದೆ.

ಚಿತ್ರಕೃಪೆ: Polytropos-Commons

ಸಸ್ಯಕಾಶಿ

ಸಸ್ಯಕಾಶಿ

ಲಾಲ್ ಬಾಗ್ ಒಂದು ಬಟಾನಿಕಲ್ ಉದ್ಯಾನವಾಗಿದ್ದು ನೂರಾರು ಎಕರೆಗಳಷ್ಟು ವಿಶಾಲವಾದ ಭೂಮಿಯಲ್ಲಿ ವ್ಯಾಪಿಸಿದೆ. ಇಲ್ಲಿ ಹಲವು ಬಗೆಯ, ವಿವಿಧ ಪ್ರಬೇಧಗಳ ನೂರಾರು ಸಸ್ಯಗಳನ್ನೂ, ಗಾಜಿನ ಮನೆಯನ್ನೂ ಸಹ ಕಾಣಬಹುದು. ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಉದ್ಯಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Muhammad Mahdi Karim

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X