Search
  • Follow NativePlanet
Share
» »ಗಣೇಶ ಕರಾವಳಿಯ 6 ಮಹಾಗಣಪತಿಯರಿವರು!

ಗಣೇಶ ಕರಾವಳಿಯ 6 ಮಹಾಗಣಪತಿಯರಿವರು!

By Vijay

ಶಿವ, ರಾಮ, ಕೃಷ್ಣ, ಹನುಮ, ವಿಷ್ಣು ಮುಂತಾದವರು ಭಾರತದಲ್ಲಿ ಹೆಚ್ಚು ಹೆಚ್ಚು ಪೂಜಿಸಲ್ಪಡುವ ತಾರಾ ಮೌಲ್ಯವುಳ್ಳ ದೇವರಾಗಿದ್ದಾರೆ. ಇದರಲ್ಲಿ ಗಣೇಶನೂ ಸಹ ಬಹು ಪ್ರಮುಖ. ವಿಶೇಷವೆಂದರೆ ಗಣೇಶ ಎಲ್ಲ ವರ್ಗದ, ಎಲ್ಲ ವಯೋಮಾನದವರ ನೆಚ್ಚಿನ ದೇವ.

ಹೀಗಾಗಿ ಇಂದು ಭಾರತದಲ್ಲಿ ಯಾವುದಾದರೂ ಪಟ್ಟಣ ತೆಗೆದುಕೊಳ್ಳಿ ಅಲ್ಲಿ ಗಣೇಶನ ಗುಡಿಯಿಲ್ಲವೆಂದರೆ ನಂಬುವುದು ಕಷ್ಟವೆ ಸರಿ. ಇನ್ನೂ ಹಿಂದುಗಳಲ್ಲಿ ದೇವರುಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಹಾಗೂ ವಿಶೇಷವಾದ ಯಾತ್ರೆಗಳಿವೆ. ಉದಾಹರಣೆಗೆ ಪುಣೆ ಬಳಿ ಕಂಡುಬರುವ ಎಂಟು ವಿವಿಧ ಸ್ಥಳಗಳಲ್ಲಿರುವ ಅಷ್ಟ ವಿನಾಯಕರ ಯಾತ್ರೆ ಅಥವಾ ತಮಿಳುನಾಡಿನ ನವಗೃಹ ಯಾತ್ರೆ.

ವಿಘ್ನಗಳನ್ನು ದೂರ ಮಾಡುವ ಅಷ್ಟ ವಿನಾಯಕರಿವರು!

ಇದೆ ರೀತಿಯಾಗಿ ಕರ್ನಾಟಕದಲ್ಲೂ ಸಹ ಒಂದು ಗಣೇಶನಿಗೆ ಮುಡಿಪಾದ ಒಂದು ವಿಶೇಷ ಯಾತ್ರೆಯಿದೆ. ಭಾರತದ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿರುವ ಹೆಸರುವಾಸಿಯಾದ ಯಾತ್ರೆ ಇದಾಗಿದೆ. ಇದು ಗಣೇಶ ಕರಾವಳಿ ಎಂಬ ಹೆಸರಿನಿಂದಲೂ ಜನಜನಿತವಾಗಿದೆ. ಕೇರಳದ ಕಾಸರಗೋಡಿನಿಂದ ಪ್ರಾರಂಭವಾಗುವ ಈ ಯಾತ್ರೆ ಕರಾವಳಿ ಮಾರ್ಗವಾಗಿ ಗೋಕರ್ಣದವರೆಗೆ ಹರಡಿದ್ದು ಆರು ಶಕ್ತಿಶಾಲಿ ಗಣೇಶನ ದೇವಾಲಯಗಳನ್ನು ಹೊಂದಿದೆ.

ಈ ಯಾತ್ರೆಯ ಆರಂಭದ ದೇವಾಲಯದಿಂದ ಗೋಕರ್ಣದ ಕೊನೆಯ ದೇವಾಲಯದವರೆಗೂ ಇರುವ ಅಂತರ 270 ಕಿ.ಮೀ. ಈ ಯಾತ್ರೆ ಕಠಿಣವಾಗಿದ್ದರೂ ಅಸಾಧ್ಯವಂತೂ ಅಲ್ಲವೆ ಅಲ್ಲ. ಹಾಗಾಗಿ ಯೋಜನಾಬದ್ಧವಾಗಿ ಈ ಯಾತ್ರೆಯನ್ನು ಕೈಗೊಳ್ಳಬಹುದಾಗಿದೆ. ಇನ್ನೂ ಈ ಲೇಖನದ ಮೂಲಕ ಆ ಆರು ಮಹಾಗಣಪತಿ ಸನ್ನಿಧಾನಗಳು ಯಾವುವೆಂದು ತಿಳಿಯಿರಿ.

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ನಂಬಿಕೆಯಂತೆ ದಿನದ ಸಮಯದಲ್ಲೆ ಸಂಜೆ ಸೂರ್ಯಾಸ್ತವಾಗುವುದಕ್ಕಿಂತ ಮುಂಚೆಯೆ ಯಾರು ಈ ಆರು ಮಹಾಗಣಪತಿಯರ ದರ್ಶನ ಪಡೆಯುತ್ತಾರೊ ಅವರಿಗೆ ಗಣೇಶನ ವಿಶೇಷವಾದ ಕೃಪೆ ಉಂಟಾಗುತ್ತದೆಂದು ನಂಬಲಾಗುತ್ತದೆ. ಈ ಯಾತ್ರೆಯ ಮೊದಲನೆಯ ಗಣೇಶನ ದೇವಾಲಯ ಕಾಸರಗೋಡಿನ ಮಧುರ ಎಂಬಲ್ಲಿರುವ ಗಣೇಶನ ಸನ್ನಿಧಿಯಿಂದ ಪ್ರಾರಂಭವಾಗುತ್ತದೆ.

ಚಿತ್ರಕೃಪೆ: Vinayaraj

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಕಾಸರಗೋಡು ಪಟ್ಟಣದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ಮಧುರ ಎಂಬಲ್ಲಿ ವಿನಾಯಕನ ಈ ಸನ್ನಿಧಿಯನ್ನು ಕಾಣಬಹುದು. ದೇವಾಲಯವೂ ಸಹ ವಿನ್ಯಾಸದಲ್ಲಿ ಇತರೆ ದೇವಾಲಯಗಳಂತಿರದೆ ಸಾಕಷ್ಟು ವಿಶೇಷವಾಗಿದೆ.

ಚಿತ್ರಕೃಪೆ: ARUNKUMAR P.R

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಇದು ಮೂಲತಃ ಮಧನೆಂತೇಶ್ವರ ಅಂದರೆ ಶಿವನಿಗೆ ಮುಡಿಪಾದ ದೇವಾಲಯವಾಗಿತ್ತು. ಸ್ವಯಂ ಉದ್ಭವವಾದ ಶಿವಲಿಂಗವೊಂದನ್ನು ಈ ಪ್ರದೇಶದ ಮದರು ಎಂಬ ಮಹಿಳೆ ನೋಡಿದ್ದಳು. ನಂತರ ಇದರ ಗರ್ಭಗೃಹದಲ್ಲಿ ಅರ್ಚಕನ ಮಗನೊಬ್ಬ ಗಣೇಶನ ಚಿತ್ರ ಬರೆದ. ದಿನಕಳೆದಂತೆ ಅದು ದಪ್ಪಗಾಗತೊಡಗಿತು. ಹೀಗೆ ಇದು ಪ್ರಸಿದ್ಧವಾಗಿ ಗಣೇಶನ ಪ್ರಖ್ಯಾತ ದೇವಾಲಯವಾಗಿ ಪರಿವರ್ತಿತವಾಯಿತು.

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಮಧುವಾಹಿನಿ ಎಂಬ ನೀರಿನ ತೊರೆಯ ತಟದಲ್ಲಿರುವ ಈ ಮಧುರ ಮಹಾಗಣಪತಿ ದೇವಾಲಯವು ಗಣೇಶ ಕರಾವಳಿಯ ಪ್ರಸಿದ್ಧ ಆರು ಗಣೇಶರ ಪೈಕಿ ಮೊದಲನೇಯ ಗಣಪತಿ ದೇವಾಲಯವಾಗಿ ಪ್ರಸಿದ್ಧಿ ಪಡೆದಿದೆ. ಹಬ್ಬ ಹರಿದಿನಗಳಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮಧುವಾಹಿನಿ ಜಲಧಾರೆ.

ಚಿತ್ರಕೃಪೆ: ARUNKUMAR P.R

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಶರವು ಮಹಾಗಣಪತಿ : ಮಧುರದಿಂದ 55 ಕಿ.ಮೀ ದೂರದಲ್ಲಿರುವ ಕರ್ನಾಟಕದ ಮಂಗಳೂರಿನಲ್ಲಿರುವ ಮಹಾಗಣಪತಿಯ ದೇವಾಲಯ ಇದಾಗಿದೆ. ಗಣೇಶ ಪುರಾಣದ ಪ್ರಕಾರ, ಗಣೇಶನು ಕಾಲದ ಹಲವು ಸ್ತರಗಳಲ್ಲಿ ವಿವಿಧ ರೂಪಗಳನ್ನು ತಳೆದಿದ್ದಾನೆ. ಕ್ರಿತ ಯುಗದಲ್ಲಿ ಗಣೇಶನಿಗೆ ಹತ್ತು ಕೈಗಳು, ಸಿಂಹ ವಾಹನವೂ ಇತ್ತು. ನಂತರ ತ್ರೇತಾ ಯುಗದಲ್ಲಿ ಆರು ಕೈಗಳು ಹಾಗೂ ನವೀಲು ವಾಹನವಾಗಿತ್ತು. ಬ್ರಹ್ಮನ ಪುತ್ರಿಯರಾದ ಸಿದ್ಧಿ ಹಾಗೂ ರಿದ್ಧಿ ಪತ್ನಿಯರಾಗಿದ್ದರು.

ಚಿತ್ರಕೃಪೆ: sharavu.org

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಹೀಗೆ ಹಲವು ರೂಪಗಳನ್ನು ಪಡೆಯುತ್ತ ಬಂದಿರುವ ಗಣೇಶ ಕಲಿಯುಗದಲ್ಲಿ ತನ್ನ ಎಡದಲ್ಲಿ ಸಿದ್ಧಿ ಲಕ್ಷ್ಮಿಯೊಂದಿಗೆ ಅವತರಿಸಿದ್ದಾನೆ ಎನ್ನಲಾಗಿದೆ. ಶರವು ಮಹಾಗಣಪತಿ ದೇವಾಲಯದಲ್ಲಿ ಗಣೇಶ ಹಾಗೂ ಅವನ ಎಡದಲ್ಲಿ ಸಿದ್ಧಿಲಕ್ಷ್ಮಿಯಿರುವುದನ್ನು ಕಾಣಬಹುದು. ಇದರ ವಿಶೇಷವೆಂದರೆ ಕಲಿಯುಗದಲ್ಲಿ ಆಸೆಗಳನ್ನು ಪೂರೈಸು ಎಂದು ಬೇಡಿ ಬರುವ ಭಕ್ತಾದಿಗಳನ್ನು ನಿರಾಸೆಗೊಳಿಸುವುದಿಲ್ಲ.

ಚಿತ್ರಕೃಪೆ: sharavu.org

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಆನೆಗುಡ್ಡೆ ವಿನಾಯಕ ದೇವಸ್ಥಾನ : ಕುಂಭಾಶಿ ಎಂದೂ ಕರೆಯಲ್ಪಡುವ ಆನೆಗುಡ್ಡೆಯ ಈ ವಿನಾಯಕನ ದೇವಾಲಯ ಆರು ಮಹಾಗಣಪತಿಗಳ ಪೈಕಿ ಮೂರನೇಯ ಗಣಪತಿಯಾಗಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆಯಲ್ಲಿದೆ. ಮಂಗಳೂರಿನಿಂದ 96 ಕಿ.ಮೀ, ಉಡುಪಿಯಿಂದ 30 ಕಿ.ಮೀ ಹಾಗೂ ಕುಂದಾಪುರದಿಂದ 9 ಕಿ.ಮೀ ದೂರದಲ್ಲಿ ಆನೆಗುಡ್ಡೆಯಿದೆ.

ಚಿತ್ರಕೃಪೆ: Raghavendra Nayak Muddur

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಹಟ್ಟಿಯಂಗಡಿ ಸಿದ್ಧಿ ವಿನಾಯಕ ದೇವಾಲಯ : ಕುಂದಾಪುರ ತಾಲೂಕಿನಲ್ಲೆ ಇರುವ ಹಟ್ಟಿಯಂಗಡಿ ಗ್ರಾಮದಲ್ಲಿರುವ ಸಿದ್ಧಿ ವಿನಾಯಕನ ದೇವಾಲಯವು ಆರು ಮಹಾಗಣಪತಿಗಳ ಯಾತ್ರೆಯಲ್ಲಿ ನಾಲ್ಕನೇಯ ವಿನಾಯಕನ ಸನ್ನಿಧಿಯಾಗಿದೆ. ಎಂಟನೇಯ ಶತಮಾನದ ಪುರಾತನ ದೇವಾಲಯ ಹಾಗೂ ವಿಗ್ರಹ ಇದಾಗಿದ್ದು ಸಾಕಷ್ಟು ಪ್ರಖ್ಯಾತಿಗಳಿಸಿದೆ. ಕುಂದಾಪುರದಿಂದ ಕೇವಲ ಎಂಟು ಕಿ.ಮೀ ಗಳಷ್ಟು ದೂರದಲ್ಲಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: rohit gowaikar

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಇಡಗುಂಜಿ ಮಹಾಗಣಪತಿ ದೇವಾಲಯ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿ ಎಂಬ ಪುಟ್ಟ ಗ್ರಾಮದಲ್ಲಿ ದಟ್ಟ ಶಕ್ತಿ ಹೊಂದಿರುವ ಮಹಾಗಣಪತಿಯ ದೇವಾಲಯವಿದೆ. ಸಾಕಷ್ಟು ಪುರಾತನವಾಗಿರುವ ಈ ದೇವಾಲಯವು ತುಂಬಾನೆ ವಿಶೇಷವೆಂದೆ ಹೇಳಬಹುದು. ವಾರ್ಷಿಕವಾಗಿ ಹತ್ತು ಲಕ್ಷಕ್ಕೂ ಅಧಿಕ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಗಣಪತಿ ದ್ವಿಭುಜನಾಗಿ ನೆಲೆಸಿರುವುದೆ ವಿಶೇಷವಾಗಿದೆ.

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಹೊನ್ನಾವರದಿಂದ ಕೇವಲ 14 ಕಿ.ಮೀ ದೂರದಲ್ಲಿರುವ ಇಡಗುಂಜಿಯ ಎರಡೆ ಕೈಗಳನ್ನು ಹೊಂದಿರುವ ಪ್ರಭಾವಿ ಗಣೇಶನ ವಿಗ್ರಹವಿರುವ ಈ ವಿನಾಯಕನ ಸನ್ನಿಧಿಯೂ ರೋಚಕವಾದ ದಂತಕಥೆಯಿಂದ ಕೂಡಿದೆ.

ಚಿತ್ರಕೃಪೆ: Brunda Nagaraj

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಕಥೆಯ ಪ್ರಕಾರವಾಗಿ, ಹಿಂದೆ ದ್ವಾಪರ ಯುಗ ಅಂತ್ಯಗೊಂಡು ಕಲಿಯುಗ ಪ್ರಾರಂಭವಾಗುತ್ತಿರುವಾಗ ಅದರ ಘೋರ ಪರಿಣಾಮಗಳಿಂದ ತಮ್ಮನ್ನು ರಕ್ಷಿಸುವಂತೆ ಭಗವಂತನನ್ನು ಕೋರಿ ಋಷಿ ವಾಲಖಿಲ್ಯರು ತಮ್ಮ ಶಿಷ್ಯರು ಹಾಗೂ ನಾರದ ಮಹರ್ಷಿಯ ಜೊತೆಗೆ ಒಡಗೂಡಿ ಶರಾವತಿ ನದಿಯ ತಟದ ಕುಂಜವನದಲ್ಲಿ ಯಜ್ಞ ಪ್ರಾರಂಭಿಸಿದ್ದರು.

ಚಿತ್ರಕೃಪೆ: Brunda Nagaraj

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಹೀಗೆ ಯಜ್ಞವು ಪ್ರಾರಂಭವಾಯಿತಾದರೂ ಕಲಿಯುಗದ ಸಂಕೇತವಾಗಿ ಸಾಕಷ್ಟು ತೊಂದರೆಗಳು, ಅಡೆ-ತಡೆಗಳುಂಟಾದವು. ಇದರಿಂದ ಬೇಸತ್ತ ಋಷಿಗಳು ನಾರದನ ಸಹಾಯ ಕೇಳಿದಾಗ ನಾರದರು ಪಾರ್ವತಿಯನ್ನು ಕುರಿತು ಮಗನಾದ ಹಾಗೂ ವಿಘ್ನ ವಿನಾಶಕನಾದ ಗಣೇಶನನ್ನು ಕಳುಹಿಸಲು ಪ್ರಾರ್ಥಿಸಿದರು.

ಚಿತ್ರಕೃಪೆ: Brunda Nagaraj

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಅದರ ಪ್ರಕಾರವಾಗಿ ನಾರದರು ಮತ್ತೆ ಕುಂಜವನದಲ್ಲಿ ಮತ್ತೊಂದು ಸ್ಥಳ ನಿರ್ಧರಿಸಿ ಋಷಿಗಳ ಜೊತೆ ಸೇರಿ ದೇವತೀರ್ಥವನ್ನು ಸೃಷ್ಟಿಸಿದರು ಹಾಗೂ ಯಜ್ಞ ಕಾರ್ಯಗಳು ಯಾವುದೆ ಅಡೆ-ತಡೆಗಳಿಲ್ಲದಂತೆ ಪೂರ್ಣಗೊಳಿಸಿದರು. ಇದಕ್ಕೆ ಮುಖ್ಯ ಕಾರಣ ಅಲ್ಲಿ ಗಣೇಶ ಬಂದು ನೆಲೆಸಿದ್ದುದಾಗಿತ್ತು. ಇಡಗುಂಜಿಯ ದೇವಾಲಯದಾವರಣದಲ್ಲಿರುವ ಅಂಗಡಿ ಮುಗ್ಗಟ್ಟುಗಳು.

ಚಿತ್ರಕೃಪೆ: Brunda Nagaraj

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಈ ಸಂದರ್ಭದಲ್ಲೆ ದೇವಾಲಯದ ದಿನ ಬಳಕೆಗೆಂದು ಗಣೇಶ ತೀರ್ಥವೊಂದನ್ನು ಸೃಷ್ಟಿಸಿದರು. ಆ ಗಣೇಶ ತೀರ್ಥವೆ ಇಂದಿನ ಇಡಗುಂಜಿ ಸ್ಥಳವಾಗಿದೆ ಹಾಗೂ ನಾಲ್ಕನೇಯ ಶತಮಾನದ ಸಂದರ್ಭದಲ್ಲಿ ಗಣೇಶನಿಗೆ ಮುಡಿಪಾಗಿ ಈ ದೇವಾಲಯ ನಿರ್ಮಿಸಲಾಗಿದೆ. ಈ ಗಣೇಶನ ದೇವಾಲಯದಿಂದ ಸ್ವಲ್ಪ ದೂರದಲ್ಲೆ ದೇವತೀರ್ಥವಿರುವುದನ್ನು ಕಾಣಬಹುದು. ದೇವತೀರ್ಥ.

ಚಿತ್ರಕೃಪೆ: Brunda Nagaraj

ಆರು ಮಹಾಗಣಪತಿ ದೇಗುಲಗಳು:

ಆರು ಮಹಾಗಣಪತಿ ದೇಗುಲಗಳು:

ಗೋಕರ್ಣ ಮಹಾಗಣಪತಿ ದೇವಾಲಯ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಗೋಕರ್ಣವು ಪ್ರಖ್ಯಾತ ತೀರ್ಥ ಕ್ಷೇತ್ರವಾಗಿದೆ. ಗೋಕರ್ಣನಾಥೇಶ್ವರನ ಮುಖ್ಯ ದೇವಾಲಯ ಹೊರತು ಪಡಿಸಿ ಇಲ್ಲಿರುವ ಮಹಾಗಣಪತಿಯ ದೇವಾಲಯ ಆರು ಗಣೇಶರ ಕೊನೆಯ ತಾಣವಗಿದೆ. ಇಡಗುಂಜಿಯಿಂದ ಸುಮಾರು 70 ಕಿ.ಮೀ ಗಳಷ್ಟು ದೂರದಲ್ಲಿ ಗೋಕರ್ಣವಿದ್ದು ಇಲ್ಲಿರುವ ಮಹಾಗಣಪತಿ ದೇವಾಲಯ ಸಾಕಷ್ಟು ವಿಶೆಷವಾಗಿದೆ.

ಚಿತ್ರಕೃಪೆ: Sohini Basu

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X