Search
  • Follow NativePlanet
Share
» » ಸಮುದ್ರ ಮಂಥನಕ್ಕೆ ಬಳಸಿದ ಬೆಟ್ಟ ಇದು, ರಾವಣ ತನ್ನ 10 ತಲೆಗಳನ್ನು ಕಡಿದದ್ದು ಇಲ್ಲೇ !

ಸಮುದ್ರ ಮಂಥನಕ್ಕೆ ಬಳಸಿದ ಬೆಟ್ಟ ಇದು, ರಾವಣ ತನ್ನ 10 ತಲೆಗಳನ್ನು ಕಡಿದದ್ದು ಇಲ್ಲೇ !

ಜಾರ್ಖಂಡ್‌ನಲ್ಲಿ ಪವಿತ್ರವಾದ ಧಾರ್ಮಿಕ ಸ್ಥಳವೊಂದಿದೆ. ಅದು ಇಡೀ ಭಾರತದಲ್ಲೇ ಬೈದ್ಯನಾಥ ಧಾಮಕ್ಕೆ ಪ್ರಸಿದ್ಧವಾಗಿದೆ. ಇದು ಹಿಂದೂಗಳ ಪ್ರಮುಖ ತೀರ್ಥಸ್ಥಾನವಾಗಿದೆ. ಇಲ್ಲಿ ಶ್ರಾವಣ ತಿಂಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶಿವ ಭಕ್ತರು ಆಗಮಿಸುತ್ತಾರೆ. ಈ ಸ್ಥಳವನ್ನು ಇಂದಿಗೂ ರಹಸ್ಯಮಯ ಸ್ಥಳದ ಪಟ್ಟಿಯಲ್ಲಿಡಲಾಗಿದೆ. ಇಲ್ಲಿ ಇಂದಿಗೂ ಬೌದ್ಧ ಮಠಗಳ ಪಳೆಯುಳಿಕೆಯನ್ನು ಕಾಣಬಹುದು.

ಫಸ್ಟ್‌ ಟೈಮ್ ಗೋವಾಕ್ಕೆ ಹೋಗ್ತಿದ್ದೀರಾ ಹಾಗಾದ್ರೆ ಇದನ್ನ ನೆನಪಿಟ್ಟುಕೊಳ್ಳಿಫಸ್ಟ್‌ ಟೈಮ್ ಗೋವಾಕ್ಕೆ ಹೋಗ್ತಿದ್ದೀರಾ ಹಾಗಾದ್ರೆ ಇದನ್ನ ನೆನಪಿಟ್ಟುಕೊಳ್ಳಿ

ಈ ಗುಪ್ತ ಸ್ಥಳವು ಬಿಹಾರದ ಪಟ್ನಾದಿಂದ 229 ಕಿ.ಮೀ ದೂರ ಹಾಗೂ 833 ಮೀಟರ್ ಎತ್ತರದಲ್ಲಿದೆ. ಇಲ್ಲಿ ಶ್ರಾವಣ ತಿಂಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶಿವಭಕ್ತರು ಜೋರ್ತಿರ್ಲಿಂಗದ ಮೇಲೆ ಅಭಿಷೇಕ ಮಾಡಲು ಬರುತ್ತಾರೆ ಎನ್ನಲಾಗುತ್ತದೆ.

ಬಾಬಾ ಬೈದ್ಯನಾಥ ಮಂದಿರ

ಬಾಬಾ ಬೈದ್ಯನಾಥ ಮಂದಿರ

PC- Ravishekharojha

ದಿಯೋಘರ್ ನ ಪ್ರಮುಖ ಆಕರ್ಷಣಾ ಸ್ಥಳಗಳಲ್ಲಿ ಒಂದು ಇಲ್ಲಿನ ಬೈದ್ಯನಾಥ ಜ್ಯೋತಿರ್ಲಿಂಗ. ಇದು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ಸ್ಥಳಕ್ಕೆ ಪೌರಾಣಿಕ ಕಥೆಯೂ ಇದೆ. ಇದೇ ಸ್ಥಳದಲ್ಲಿ ರಾವಣನು ಶಿವನನ್ನು ಪೂಜಿಸಿದ್ದನು. ಹಾಗೂ ತನ್ನ 12 ತಲೆಗಳನ್ನು ಬಲಿದಾನ ಮಾಡಿದ್ದನು. ನಂತರ ರಾವಣನನ್ನು ಗುಣಮುಖಪಡಿಸಲು ಶಿವನು ಓರ್ವ ವೈದ್ಯನ ರೂಪದಲ್ಲಿ ಬಂದಿದ್ದನು. ಈ ಕಥೆಯಿಂದಾಗಿ ಈ ಮಂದಿರದ ಹೆಸರು ಬೈದ್ಯನಾಥ ಎಂದಾಯಿತು.

ಚತುರ ಬುದ್ಧಿಯ ಶಕುನಿಯನ್ನೂ ಪೂಜಿಸುತ್ತಾರಂತೆ ಜನ...ದೇವಾಲಯವೂ ಇದೆ ಗೊತ್ತಾ?ಚತುರ ಬುದ್ಧಿಯ ಶಕುನಿಯನ್ನೂ ಪೂಜಿಸುತ್ತಾರಂತೆ ಜನ...ದೇವಾಲಯವೂ ಇದೆ ಗೊತ್ತಾ?

ಶಿವಶಕ್ತಿಯ ಪವಿತ್ರ ಬಂಧನ

ಶಿವಶಕ್ತಿಯ ಪವಿತ್ರ ಬಂಧನ

PC: youtube

ಈ ಮಂದಿರವು ಭಾರತದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದು. ಇಲ್ಲಿನ ಇನ್ನೊಂದು ಮಂದಿರವು ದೇವಿ ಪಾರ್ವತಿಗೆ ಸಮರ್ಪಿತವಾಗಿದ್ದು. ಇದು ಶಿವಶಕ್ತಿಯ ಪವಿತ್ರ ಬಂಧನವನ್ನು ಪ್ರದರ್ಶಿಸುತ್ತದೆ. ಶ್ರಾವಣ ಮಾಸದಂದು ಭಕ್ತರು ಜ್ಯೋತಿರ್ಲಿಂಗಕ್ಕೆ ಪವಿತ್ರ ಗಂಗೆಯಿಂದ ಜಲಾಭಿಷೇಕ ಮಾಡುತ್ತಾರೆ.

ರಾಮಕೃಷ್ಣ ಮಿಶನ್ ವಿದ್ಯಾಪೀಠ

ರಾಮಕೃಷ್ಣ ಮಿಶನ್ ವಿದ್ಯಾಪೀಠ

PC-TheMandarin

ಬಾಬಾ ಬೈದ್ಯನಾಥ ಮಂದಿರವನ್ನು ಹೊರತುಪಡಿಸಿ ಇಲ್ಲಿ ಇನ್ನಿತರ ಧಾರ್ಮಿಕ ಸ್ಥಳಗಳ ಪ್ಲ್ಯಾನ್ ಕೂಡಾ ಮಾಡಬಹುದಾಗಿದೆ. ದಿಯೋಘರ್ ನ ಹೃದಯ ಭಾಗದಲ್ಲಿರುವ ರಾಮಕೃಷ್ಣ ಮಿಶನ್ ವಿದ್ಯಾಪೀಠದ ದಿವ್ಯ ವಾತಾವರಣದ ಅನುಭವವನ್ನು ಪಡೆಯಬಹುದು. 1922ರಲ್ಲಿ ಈ ವಿದ್ಯಾಪೀಠವನ್ನು ಸ್ಥಾಪಿಸಲಾಯಿತು. ಇದು ರಾಮಕೃಷ್ಣ ಮಿಶನ್‌ನ ಅತಿ ಪುರಾತನ ಶಿಕ್ಷಣ ಸಂಸ್ಥೆಯಾಗಿದೆ.
ಪ್ರಸ್ತುತ ಇಲ್ಲಿ ಬಾಲಕರಿಗೆ ಪ್ರೌಢಶಾಲೆ ಇದೆ. ಇದನ್ನು ವಿವೇಕಾನಂದರ ಶಿಷ್ಯರು ನಡೆಸುತ್ತಿದ್ದಾರೆ. ಈ ಸಂಸ್ಥೆಯು ಭಿಕ್ಷುಗಳು ಹಾಗೂ ಬ್ರಹ್ಮಚಾರಿಗಳಿಗಳಿಂದ ನಡೆಸಲ್ಪಡುತ್ತಿದೆ. ಇಲ್ಲಿನ ಶಿಕ್ಷರು ಭಾರತದ ವಿಭಿನ್ನ ರಾಜ್ಯದವರೂ ಇದ್ದಾರೆ. ಇಲ್ಲಿ ಪ್ರಾಚೀನಭಾರತವನ್ನು ಬಿಂಬಿಸುವ ವಸ್ತುಸಂಗ್ರಹಾಲವೂ ಇದೆ.

ಮಂದಾರ ಬೆಟ್ಟ

ಮಂದಾರ ಬೆಟ್ಟ

PC- Raja ravi varma

ಇಲ್ಲಿನ ಧಾರ್ಮಿಕ ಸ್ಥಳಗಳ ದರ್ಶನ ಮಾಡಿದನಂತರ ಇಲ್ಲಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಮಂದಾರ ಬೆಟ್ಟಕ್ಕೊಮ್ಮೆ ಭೇಟಿ ನೀಡಿ. ಈ ಬೆಟ್ಟವು ಸುಮಾರು 700ಫೀಟ್ ಎತ್ತರದಲ್ಲಿದೆ. ಪೌರಾಣಿಕ ಕಥೆಗಳಲ್ಲಿ ಈ ಪರ್ವತವನ್ನು ಸುಮೆರೂ ಪರ್ವತದ ರೂಪದಲ್ಲಿ ವರ್ಣೀಸಲಾಗಿದೆ. ಈ ಬೆಟ್ಟವನ್ನು ದೇವತೆಗಳು ಹಾಗೂ ರಾಕ್ಷಸರು ಮಂಥನದ ಸಂದರ್ಭ ಬಳಸಿದ್ದರು.

ಬೆಟ್ಟದ ಮೇಲೆ ದೇವಸ್ಥಾನ

ಬೆಟ್ಟದ ಮೇಲೆ ದೇವಸ್ಥಾನ

PC:bazaar art print

ಈ ಬೆಟ್ಟದ ಮೇಲೆ ಒಂದು ಸುಂದರವಾದ ದೇವಾಲಯವಿದೆ. ಇದನ್ನು 12ನೇ ಜೈನ ತೀರ್ಥಂಕರ ವಾಸುಪೂಜ್ಯರ ಸಮ್ಮುಖದಲ್ಲಿ ನಿರ್ಮಿಸಲಾಗಿತ್ತು. ಇಲ್ಲಿ ವಿಷ್ಣು ಹಾಗೂ ಲಕ್ಷ್ಮೀ ವಿರಾಜಮಾನರಾಗಿದ್ದಾರೆ.

ದೇವ್‌ ಸಂಘ್ ಆಶ್ರಮ

ದೇವ್‌ ಸಂಘ್ ಆಶ್ರಮ

ದೇವ್‌ ಸಂಘ್ ಆಶ್ರಮವನ್ನು ನವದುರ್ಗ ಮಂದಿರ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ಧಾರ್ಮೀಕ ಸ್ಥಳವು ದೇವಿ ದುರ್ಗೆಯ 9 ಅವತಾರಗಳಿಗೆ ಸಮರ್ಪಿತವಾದ ಮಂದಿರವಾಗಿದೆ. ಇಲ್ಲಿಗೆ ದೂರ ದೂರದಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿ ದೇವಿ ಸರಸ್ವತಿ, ಅನ್ನಪೂರ್ಣ ಹಾಗೂ ಶಿವನ ಮೂರ್ತಿಗಳಿವೆ. ಇಲ್ಲಿ ದುರ್ಗೆಯ ವಾರ್ಷಿಕ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅ ಸಂದರ್ಭ ಪಶ್ಚಿಮ ಬಂಗಾಳ, ಒಡಿಸ್ಸಾ, ಜಾರ್ಖಂಡ್‌ನಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ನೋಲಕಾ ಮಂದಿರ

ನೋಲಕಾ ಮಂದಿರ

ಬಾಬಾ ಬೈದ್ಯನಾಥ ಮಂದಿರದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ನೋಲಕ ಮಂದಿರದ ದರ್ಶನವನ್ನೂ ಮಾಡಬಹುದು. ಈ ಭವ್ಯ ಮಂದಿರವು ರಾಧಾ ಕೃಷ್ಣರಿಗೆ ಸಮರ್ಪಿತವಾದುದು. ಈ ಮಂದಿರದಲ್ಲಿ ನೀವು ಶಾಂತಿಯ ವಾತಾವರಣವನ್ನು ಕಾಣಬಹುದು. 146 ಫಿಟ್ ಎತ್ತರದಲ್ಲಿರುವ ಈ ಮಂದಿರವನ್ನು ಶ್ರೀ ಬಾಲಾನಂದ ಬ್ರಹ್ಮಚಾರಿ1948ರಲ್ಲಿ ನಿರ್ಮಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X