Search
  • Follow NativePlanet
Share
» »ಖುಷಿಯ ಜೊತೆ ಜೊತೆಗೆ ಭಯ ಹುಟ್ಟಿಸುವ 'ಬಂಡೀಪುರ'!

ಖುಷಿಯ ಜೊತೆ ಜೊತೆಗೆ ಭಯ ಹುಟ್ಟಿಸುವ 'ಬಂಡೀಪುರ'!

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬರುವ ಪ್ರಖ್ಯಾತ ರಾಷ್ಟ್ರೀಯ ಉದ್ಯಾನವಾದ ಬಂಡೀಪುರವು ಮೈಸೂರಿನಿಂದ ಸುಮಾರು 78 ಕಿ.ಮೀ. ದೂರದಲ್ಲಿದೆ

By Divya Pandit

ಮಕ್ಕಳು ಆನೆ, ಹುಲಿ ಹೇಗಿರುತ್ತವೆ? ಎಂದು ಕೇಳಿದಾಗ ಚಿತ್ರ ತೋರಿಸುವುದು ಅಥವಾ ವೀಡಿಯೋ ತೋರಿಸುವುದು ಸಹಜ. ಅದೇ ಪ್ರಶ್ನೆಗೆ ಉತ್ತರವಾಗಿ ಕಣ್ಮುಂದೆ ನಿಲ್ಲಿಸಿದರೆ!? ಮಕ್ಕಳಿಗೆ ಉಂಟಾಗುವ ಆ ಸಂತಸ ಹಾಗೂ ಭಯಕ್ಕೆ ಪಾರವೇ ಇರುವುದಿಲ್ಲ. ಅಂತಹ ಒಂದು ಅನುಭವವನ್ನು ನಿಮ್ಮ ಮಗುವಿಗೆ ನೀಡಲು ಬಯಸುತ್ತೀರಾ ಎಂದಾದರೆ ಬೆಂಗಳೂರಿಗೆ ಹತ್ತಿರ ಇರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ...

ರಾಷ್ಟ್ರೀಯ ಉದ್ಯಾನವನ ಆಗುವ ಮೊದಲು ಮೈಸೂರು ಅರಸರು ಬೇಟೆಯಾಡಲು ಬರುವ ಪ್ರದೇಶವಾಗಿತ್ತು. ಪಶ್ವಿಮ ಘಟ್ಟದಲ್ಲಿ ಬರುವ ಈ ಅಭಯಾರಣ್ಯ ಕರ್ನಾಟಕದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.

ಬಂಡೀಪುರದ ವಿವರ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬಂಡೀಪುರ ಬರುತ್ತದೆ. ಇದು ಮೈಸೂರಿನಿಂದ ಸುಮಾರು 78 ಕಿ.ಮೀ. ದೂರದಲ್ಲಿದೆ.

ಖುಷಿಯ ಜೊತೆ ಜೊತೆಗೆ ಭಯ ಹುಟ್ಟಿಸುವ ಬಂಡೀಪುರ!

ಚಿತ್ರಕೃಪೆ: Manoj K

ಸಸ್ಯಗಳ ವಿವರ

ಈ ಉದ್ಯಾನವನದಲ್ಲಿ ವಿವಿಧ ಬಗೆಯ ಪೊದೆಗಳಿಂದ ಕೂಡಿರುವ ಪ್ರದೇಶ, ಬೋಳಾದ ಮರಗಿಡಗಳನ್ನು ಹೊಂದಿರುವ ಪ್ರದೇಶ, ಬಯಲು-ಬೇಣದಂತಹ ಪ್ರದೇಶ, ಕಬಿನಿ ನದಿ, ಮಯೂರ ನದಿಯನ್ನು ಕಾಣಬಹುದು. ಇಲ್ಲಿಯ ವನ್ಯ ಜೀವಿಗಳಿಗೆ ಈ ಎರಡು ನದಿಗಳೇ ಜೀವಾಳ.

ಪ್ರಾಣಿಗಳ ಬೀಡು

ಇಲ್ಲಿ ಆನೆ, ಹುಲಿ, ನರಿ, ತೋಳ, ಜಿಂಕೆ, ಮಂಗ, ಕಾಡೆಮ್ಮೆ ಸೇರಿದಂತೆ ವಿವಿಧ ಬಗೆಯ ಪ್ರಾಣಿಗಳಿವೆ.

ಖುಷಿಯ ಜೊತೆ ಜೊತೆಗೆ ಭಯ ಹುಟ್ಟಿಸುವ ಬಂಡೀಪುರ!

ಚಿತ್ರಕೃಪೆ: Chengappabb

ಮರಗಳ ವಿವರ

ಇಲ್ಲಿ ನೀಲಗಿರಿ, ಬಿದಿರು, ಬೀಟೆ, ತೇಗ ಸೇರಿದಂತೆ ಹಲವು ಬಗೆಯ ಮರಗಳನ್ನು ನೋಡಬಹುದು.

ಭೇಟಿ ನೀಡಲು ಸಮಯ

ಭೇಟಿ ನೀಡಲು ಒಳ್ಳೆಯ ಸಮಯ ಎಂದರೆ ನವೆಂಬರ್ ನಿಂದ ಫೆಬ್ರವರಿ. ಈ ಸಮಯದಲ್ಲಿ ವಾತಾವರಣವೂ ಸೂಕ್ತವಾಗಿರುವುದರಿಂದ ಪ್ರಾಣಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

ಖುಷಿಯ ಜೊತೆ ಜೊತೆಗೆ ಭಯ ಹುಟ್ಟಿಸುವ ಬಂಡೀಪುರ!

ಚಿತ್ರಕೃಪೆ: Aditya945

ಬೆಂಗಳೂರಿನಿಂದ ಬಂಡೀಪುರ

ಬೆಂಗಳೂರಿನಿಂದ ಬಂಡೀಪುರಕ್ಕೆ 220 ಕಿ.ಮೀ. ಇರುವುದರಿಂದ ವಾರದ ರಜೆಯಲ್ಲಿ ಇಲ್ಲಿಗೆ ಬರಬಹುದು.

ಬಂಡೀಪುರಕ್ಕೆ ಸಮೀಪ

ಬಂಡೀಪುರ ನೋಡಿದ ನಂತರ ಮೈಸೂರು, ಬಿ.ಎಲ್.ಆರ್ ಹಿಲ್ಸ್, ಮಲಾಯಿ ಮಹದೇಶ್ವರ ದೇವಸ್ಥಾನ, ಶ್ರೀರಂಗ ಪಟ್ಟಣ, ಮುದುಮಲೈ ರಾಷ್ಟ್ರೀಯ ಉದ್ಯಾನವನಕ್ಕೂ ಭೇಟಿ ನೀಡಬಹುದು.

ಖುಷಿಯ ಜೊತೆ ಜೊತೆಗೆ ಭಯ ಹುಟ್ಟಿಸುವ ಬಂಡೀಪುರ!

ಚಿತ್ರಕೃಪೆ: Nikhilvrma

ಪಕ್ಷಿಗಳ ತವರು

ಇಲ್ಲಿ ನವಿಲು, ಹದ್ದು, ಮರಕುಟುಕ, ಕೋಗಿಲೆ, ಮೈನಾ, ಗಿಳಿ ಸೇರಿದಂತೆ ವಿವಿಧ ಬಗೆಯ ಪಕ್ಷಿಗಳನ್ನು ವೀಕ್ಷಿಸಬಹುದು.

ಉದ್ಯಾನದ ಸುತ್ತ-ಮುತ್ತ

ಈ ಉದ್ಯಾನದ ಹತ್ತಿರವೇ ಎನ್.ಎಚ್ 212 ಹಾಗೂ ಎನ್.ಎಚ್ 67 ರಸ್ತೆ ಮಾರ್ಗ ಇರುವುದರಿಂದ ಕೆಲವೊಮ್ಮೆ ಕಾಡು ಪ್ರಾಣಿಗಳು ಅಪಘಾತಕ್ಕೆ ಒಳಗಾಗುತ್ತವೆ. ಅಲ್ಲದೆ ಹತ್ತಿರ ಇರುವ ಹಳ್ಳಿಗಳಿಗೂ ದಾಳಿ ಮಾಡುತ್ತವೆ.

ಎಚ್ಚರಿಕೆ

ಉದ್ಯಾನವನಕ್ಕೆ ಹೋದಾಗ ಪ್ರಾಣಿಗಳಿಗೆ ಹಿಂಸೆ ಮಾಡುವುದು, ಅಲ್ಲಿರುವ ಗಿಡ-ಮರಗಳನ್ನು ಮುಟ್ಟುವಂತಿಲ್ಲ. ಅದೆಲ್ಲವೂ ನಿಷೇಧ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X