Search
  • Follow NativePlanet
Share
» »ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು

ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು

ರಜಾದಿನಗಳಲ್ಲಿ ಕರ್ನಾಟಕದ ಈ ಸ್ಥಳಗಳಲ್ಲಿ ನಿಮ್ಮ ಮಕ್ಕಳ ಜೊತೆ ಮಜಾ ಮಾಡಿ!

ಭಾರತದಲ್ಲಿ ದಸರಾ ಸಮಯವೆಂದರೆ ಸಾಕು ರಜಾದಿನಗಳು ಸುದೀರ್ಘ ವಾರಾಂತ್ಯ ರಜಾದಿನಗಳು ಬಂತೆಂದೇ ಅರ್ಥ. ಹೌದು ಮೋಜು ಕೇವಲ ಮಕ್ಕಳಿಗೆ ಮಾತ್ರ ಮೀಸಲಾಗಿರುವುದು ಅಲ್ಲದೆ ಇದು ವಯಸ್ಕರಿಗೂ ತಮ್ಮ ರಜಾದಿನಗಳನ್ನು ಕೆಲಸದಿಂದ ರಜಾ ಪಡೆದು ಆನಂದಿಸ ಬಯಸುವುದು ಸಹಜ. ಈ ಸಮಯದಲ್ಲಿ ಮಕ್ಕಳು ತಮ್ಮ ಯಾವುದೇ ಶಾಲಾ ಕೆಲಸಗಳಿಲ್ಲದೆ ಆನಂದವಾಗಿರುತ್ತದೆ. ಮತ್ತು ತಂದೆತಾಯಿಗಳಿಗೂ ತಮ್ಮ ದಿನನಿತ್ಯದ ನಿರಂತರ ಜೀವನದಿಂದ ಬಿಡುವು ಸಿಗುತ್ತದೆ. ಬೇಸರವು ಮನಸ್ಸಿನ ಸ್ಥಿತಿಯಾದಾಗ ಉತ್ಸಾಹವು ಕಡಿಮೆಯಾಗುತ್ತದೆ.

ಪ್ರಯಾಣ ಮಾಡಬೇಕೆಂದು ಕೊಂಡಾಗ ರಜೆಯ ತಾಣವನ್ನು ನಿರ್ಧರಿಸಲು ಸಾಧ್ಯವಾಗದ ಅಂತಹ ಪೋಷಕರಿಗೆ, ಬೇಸರವನ್ನು ಹೋಗಲಾಡಿಸಲು ತಮ್ಮ ಮಕ್ಕಳೊಂದಿಗೆ ಭೇಟಿ ನೀಡಲು ಕರ್ನಾಟಕದ ಕೆಲವು ರೋಮಾಂಚಕಾರಿ ಸ್ಥಳಗಳು ಇಲ್ಲಿವೆ.

ನಾಗರಹೊಳೆ

ನಾಗರಹೊಳೆ

ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ಪ್ರವಾಸವು ಮಕ್ಕಳಿಗೆ ಶಿಕ್ಷಣ ಕೊಡಲು ಅತ್ಯಂತ ಉತ್ತಮವಾದ ಮಾರ್ಗವಾಗಿದ್ದು, ಇಲ್ಲಿಗೆ ಪ್ರವಾಸ ಕೈಗೊಳ್ಳುವುದರಿಂದ ಪ್ರಾಣಿಗಳು ಮತ್ತುಅಭಯಾರಣ್ಯಗಳ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆ ಮೂಡಿಸಲು ಉಪಯೋಗವಾಗುತ್ತದೆ. ಮಕ್ಕಳು ಪ್ರಾಣಿಗಳನ್ನು ನೋಡುವುದನ್ನು ಇಷ್ಟಪಡುತ್ತಾರೆ ಇದರಿಂದಾಗಿ ಪೋಷಕರಿಗೂ ಆನಂದದ ಅನುಭವವಾಗುತ್ತದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಶ್ರೀಮಂತ ವನ್ಯಜೀವಿ ಅಭಯಾರಣ್ಯಕ್ಕೆ ಹೆಸರುವಾಸಿಯಾಗಿದೆ. ಅಕ್ಟೋಬರ್ ತಿಂಗಳಿನಿಂದ ಮೇ ವರೆಗಿನ ಸಮಯ ಕೊಡಗಿನಲ್ಲಿರುವ ನಾಗರಹೊಳೆ ಅಭಯಾರಣ್ಯವನ್ನು ಭೇಟಿಗೆ ಸೂಕ್ತ ಸಮಯವಾಗಿರುತ್ತದೆ ಇಲ್ಲಿ ವನ್ಯಜೀವಿ ಸಫಾರಿಗೆ ಹೋಗುವುದನ್ನು ತಪ್ಪಿಸಬೇಡಿ!

ಗೋಕರ್ಣ

ಗೋಕರ್ಣ

ಕಡಲತೀರವನ್ನು ಇಷ್ಟ ಪಡದೇ ಇರಲು ಸಾಧ್ಯವೆ? ಮಕ್ಕಳು ದೊಡ್ಡವರು ಎಲ್ಲರೂ ನೀರಿನಲ್ಲಿ ಆಟವಾಡಲು ಇಷ್ಟ ಪಡುತ್ತಾರೆ ಕರ್ನಾಟಕವು ತನ್ನಲ್ಲಿ ಅದ್ಬುತ ಕಡಲ ತೀರಗಳನ್ನು ಹೊಂದಿರುವುದಕ್ಕೆ ದೇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗದು! ಇಂತಹ ಕಡಲತೀರಗಳಲ್ಲಿ ಕರ್ನಾಟಕದ ಅತ್ಯುತ್ತಮ ಬೀಚ್ ಪಟ್ಟಣಗಳಲ್ಲಿ ಗೋಕರ್ಣ ಕೂಡಾ ಒಂದಾಗಿದೆ. ಇಲ್ಲಿ ನಿಮ್ಮ ಗಮನವನ್ನು ಸುಂದರ ಕಡಲತೀರಗಳು ಸೆಳೆಯುವುದು ಒಂದೆಡೆಯಾದರೆ ಇನ್ನೊಂದು ಕಡೆಯಲ್ಲಿ ಈ ಸ್ಥಳವು ಶಿವದೇವರ ಆವಾಸಸ್ಥಾನವಾಗಿದ್ದು (ಮಹಾಬಲೇಶ್ವರ ದೇವಾಲಯ) ಇದು ನಿಮಗೆ ಆಧ್ಯಾತ್ಮಿಕ ಸ್ಪರ್ಶವನ್ನು ನೀಡುತ್ತದೆ. ಸುರಕ್ಷತೆ ಮತ್ತು ನೈರ್ಮಲ್ಯದ ಅಂಶವನ್ನು ಗಮನದಲ್ಲಿಟ್ಟುಕೊಂಡು ಕಿಕ್ಕಿರಿದ ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸುವುದು ಯಾವಾಗಲೂ ಒಳ್ಳೆಯದು. ಖಂಡಿತವಾಗಿ, ಗೋಕರ್ಣವು ಕರ್ನಾಟಕದಲ್ಲಿ ಕೆಲವು ಸ್ವಚ್ಚವಾದ ಬೀಚ್‌ಗಳನ್ನು ಹೊಂದಿದೆ.

ಸಿರಿಮನೆ ಜಲಪಾತ

ಸಿರಿಮನೆ ಜಲಪಾತ

ಅಕ್ಟೋಬರ್ ತಿಂಗಳೆಂದರೆ ಅದು ಜಲಪಾತಗಳು ಹರಿಯುವ ಸಮಯ ಮತ್ತು ನೀವು ಖಂಡಿತವಾಗಿಯೂ ಜಲಪಾತವಿರುವ ಒಂದು ಸ್ಥಳಕ್ಕಾದರೂ ಭೇಟಿ ಕೊಡಬೇಕು. ಜಲಪಾತಗಳನ್ನು ದೂರದಿಂದಲೇ ನೋಡುವುದು ಒಂದು ಮೋಜಿನ ವಿಷಯವಾದರೂ ಕೂಡಾ ಅದರಲ್ಲಿ ಆಟವಾಡುವುದು ಇನ್ನೂ ಕುತೂಹಲಕಾರಿ ವಿಷಯವಾಗಿದೆ. ಸಿರಿಮನೆ ಜಲಪಾತವು ಅಂತಹುದೇ ಒಂದು ಸ್ಥಳವಾಗಿದ್ದು, ಈ ಜಲಪಾತದ ನೀರಿನಲ್ಲಿ ನಿಮಗೆ ಆಟವಾಡುವ ಅವಕಾಶವಿದೆ. ಸಿರಿಮನೆ ಜಲಪಾತವು ಕುಟುಂಬ ಪ್ರವಾಸಗಳಿಗೆ ಸೂಕ್ತವಾಗಿದೆ ಮತ್ತು ಮಕ್ಕಳಿಗೂ ಸಾಕಷ್ಟು ಸುರಕ್ಷಿತವಾಗಿದೆ. ಈ ಪ್ರವಾಸದಲ್ಲಿ ನೀವು ಶೃಂಗೇರಿ (12 ಕಿಮೀ) ಮತ್ತು ಹೊರನಾಡು (52 ಕಿಮೀ) ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

ಮೈಸೂರು

ಮೈಸೂರು

ಮೈಸೂರು ಜನನಿಬಿಡ ಸ್ಥಳವಾಗಿದ್ದರೂ ಕೂಡಾ ಯಾವಾಗಲೂ ಮಜಾ ಮಾಡುವ ಸ್ಥಳವಾಗಿದೆ. ಮೈಸೂರು ಮೃಗಾಲಯ, ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್, ಬೃಂದಾವನ ಉದ್ಯಾನವನ ಮುಂತಾದವುಗಳನ್ನು ಮಕ್ಕಳು ಖಂಡಿತವಾಗಿಯೂ ಇಷ್ಟಪಡುತ್ತಾರೆ. ಅದೂ ಅಕ್ಟೋಬರ್ ತಿಂಗಳು ಮೈಸೂರು ದಸರಾದ ಸಮಯ. ಇದು ಹಬ್ಬದ ಸೀಸನ್‌ ಆಗಿರುವುದರಿಂದ ನೀವು ಮುಂಚಿತವಾಗಿ ಹೋಟೆಲ್‌ಗಳನ್ನು ಯೋಜಿಸಿ ಮತ್ತು ಬುಕ್ ಮಾಡಬೇಕು. ಈ ಸಮಯದಲ್ಲಿ ಪ್ರದರ್ಶಿಸಲಾಗುವ ಹಳೆಯ ದಸರಾ ಆಚರಣೆಗಳು, ಅನೇಕ ಕಾರ್ಯಕ್ರಮಗಳು ಮತ್ತು ಕರ್ನಾಟಕದ ಜಾನಪದ ಕಲಾ ಪ್ರಕಾರಗಳನ್ನು ಸಹ ಮಕ್ಕಳು ನೋಡಿ ಆನಂದಿಸುತ್ತಾರೆ.

ದಾಂಡೇಲಿ

ದಾಂಡೇಲಿ

ನಿಮಗೆ ದಾಂಡೇಲಿಯ ವನ್ಯಜೀವಿ ಅಭಯಾರಣ್ಯದ ಬಗ್ಗೆ ತಿಳಿದಿದೆಯೇ? ಇದು ಕರ್ನಾಟಕದ ಎರಡನೇ ಅತ್ಯಂತ ದೊಡ್ಡ ವನ್ಯ ಜೀವಿ ಅಭಯಾರಣ್ಯವಾಗಿದೆ. ಈ ಅದ್ಬುತವಾದ ಪ್ರವಾಸಿ ತಾಣವಾಗಿದ್ದು ಕಾಳಿ ನದಿಯ ದಡದಲ್ಲಿರುವ ಈ ಸ್ಥಳಕ್ಕೆ ಕುಟುಂಬದವರ ಜೊತೆ ಪ್ರವಾಸ ಮಾಡುವುದು ಒಂದು ಅದ್ಬುತ ಅನುಭವವಾಗಿದೆ. ದಾಂಡೇಲಿಯು ಸುಂದರ ಪ್ರಕೃತಿಯಿಂದ ಆಶೀರ್ವದಿಸಲ್ಪಟ್ಟಿದೆ. ಮತ್ತು ಅಕ್ಟೋಬರ್ ತಿಂಗಳು ಈ ಸ್ಥಳಕ್ಕೆ ಭೇಟಿ ಕೊಡಲು ಸೂಕ್ತವಾದ ಸಮಯವಾಗಿದೆ. ದಾಂಡೇಲಿ ವನ್ಯಜೀವಿ ಅಭಯಾರಣ್ಯದ ಜೊತೆಗೆ, ನೀವು ಸುಪಾ ಅಣೆಕಟ್ಟು, ಅಂಶಿ ರಾಷ್ಟ್ರೀಯ ಉದ್ಯಾನವನ, ಕವಲ ಗುಹೆಗಳು, ದಾಂಡೆಲ್ಲಾಪ ದೇವಾಲಯ, ಶಿರೋಲಿ ಶಿಖರ ಮತ್ತು ಶ್ರೀ ತುಳಜಾ ಭವಾನಿ ದೇವಾಲಯವನ್ನು ಸಹ ಭೇಟಿ ಮಾಡಬಹುದು. ಕುತೂಹಲದ ವಿಷಯವೆಂದರೆ, ಈ ಎರಡೂ ವನ್ಯಜೀವಿ ತಾಣಗಳು ಜಂಗಲ್ ಸಫಾರಿಗಳನ್ನು ಹೊಂದಿವೆ. ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲಿ ಭೇಟಿ ನೀಡಲು ದಾಂಡೇಲಿ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

ದುಬಾರೆ ಎಲಿಫೆಂಟ್ ಕ್ಯಾಂಪ್ (ಆನೆ ಶಿಬಿರ)

ದುಬಾರೆ ಎಲಿಫೆಂಟ್ ಕ್ಯಾಂಪ್ (ಆನೆ ಶಿಬಿರ)

'ಹಾಥಿ ಮೆರೆ ಸಾಥಿ' (ಆನೆ ನನ್ನ ಗೆಳೆಯ) ಎಂದು ಹೇಳುವ ಹಾಗೆ ದುಬಾರೆ ಆನೆ ಶಿಬಿರದಲ್ಲಿ ನೀವು ಖಂಡಿತವಾಗಿಯೂ ಆನೆಗಳ ಜೊತೆಗೆ ಒಂದು ಸುಂದರ ಅನುಭವವನ್ನು ಪಡೆಯುವಿರಿ. ದುಬಾರೆಯಲ್ಲಿ ನೀವು ಆನೆಗಳಿಗೆ ಸ್ನಾನ ಮಾಡಿಸಬಹುದು ಮತ್ತು ಅವುಗಳ ಜೀವನ ಶೈಲಿಯ ಬಗ್ಗೆ ಕಲಿಯಬಹುದಾಗಿದೆ. ದುಬಾರೆ ಎಲಿಫೆಂಟ್ ಕ್ಯಾಂಪ್ ನಲ್ಲಿ ಕೇವಲ ಆನೆಗಳ ಜೊತೆ ಆಟವಾಡುವುದು ಮಾತ್ರವಲ್ಲದೆ, ಅವುಗಳ ವಿಕಾಸದ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ. ವನ್ಯಜೀವಿಗಳ ಪ್ರಾಮುಖ್ಯತೆಯ ಬಗ್ಗೆ ಮಕ್ಕಳಿಗೆ ತಿಳಿಯುವುದು ಇನ್ನಷ್ಟು ಮುಖ್ಯವಾಗುತ್ತದೆ. ಆದ್ದರಿಂದ, ಕೊಡಗಿನ ದುಬಾರೆ ಆನೆ ಶಿಬಿರವು ವಿನೋದ ಮತ್ತು ಶೈಕ್ಷಣಿಕ ಪ್ರವಾಸವಾಗಬಹುದಾಗಿದೆ.

ನೀವು ಈ ಲೇಖನವನ್ನು ಓದಿ ಆನಂದಿಸಿದ್ದೀರಿ ಮತ್ತು ಮಕ್ಕಳೊಂದಿಗೆ ಭೇಟಿ ನೀಡಲು ಕರ್ನಾಟಕದಾದ್ಯಂತ ಈ ಸ್ಥಳಗಳನ್ನು ಪ್ರಯತ್ನಿಸುವಿರಿ ಎಂದು ನಾವು ಭಾವಿಸುತ್ತೇವೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X