Search
  • Follow NativePlanet
Share
» »ದೇಶದ ಭಯಾನಕ ರಸ್ತೆಗಳಿವು; ಇಲ್ಲಿ ಗುಂಡಿಗೆ ಕೈಯಲ್ಲಿಡಿದು ಪ್ರಯಾಣಿಸಬೇಕು!

ದೇಶದ ಭಯಾನಕ ರಸ್ತೆಗಳಿವು; ಇಲ್ಲಿ ಗುಂಡಿಗೆ ಕೈಯಲ್ಲಿಡಿದು ಪ್ರಯಾಣಿಸಬೇಕು!

ಇಂದಿನ ಕಾಲದಲ್ಲೂ ಆತ್ಮ, ದೆವ್ವ ಪಿಶಾಚಿಯನ್ನು ನಂಬುವವರು ಅನೇಕರು ಇದ್ದಾರೆ. ಆತ್ಮದ ಕಾಟದಿಂದ ಪಾರಾಗಲೂ ಏನೆಲ್ಲಾ ಪೂಜೆ, ಹವನಗಳನ್ನು ನಡೆಸುತ್ತಾರೆ. ನಮ್ಮ ದೇಶದಲ್ಲಿರುವ ಕೆಲವು ಸ್ಥಳಗಳು ನೀವು ದೆವ್ವಗಳನ್ನು ನಂಬುವಂತೆ ಮಾಡುತ್ತವೆ. ಅವುಗಳಲ್ಲಿ ಕೆಲವು ರಸ್ತೆಗಳೂ ಸೇರಿವೆ. ಅಂತಹ ಭಯಾನಕ ರಸ್ತೆಗಳು ಯಾವುವು ಅನ್ನೋದನ್ನು ತಿಳಿಯೋಣ.

ಕಾಸ್ರಾ ಘಾಟ್‌ , ಮುಂಬೈ-ನಾಸಿಕ್ ಹೈವೆ

ಕಾಸ್ರಾ ಘಾಟ್‌ , ಮುಂಬೈ-ನಾಸಿಕ್ ಹೈವೆ

ಕಾಸ್ರಾ ಘಾಟ್ ಮುಂಬೈನಿಂದ ನಾಸಿಕ್ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ, ಕಾಡು ಇದೆ. ಬಹಳಷ್ಟು ಜನರು ಇಲ್ಲಿ ಅಸಾಮಾನ್ಯ ಅನುಭವವನ್ನು ಹೊಂದಿದ್ದಾರೆ. ತಲೆಯಿಲ್ಲದ ಮಹಿಳೆಯೊಬ್ಬಳು ರಾತ್ರಿ ಹೊತ್ತಿನಲ್ಲಿ ವಾಹನದ ಮುಂದುಗಡೆ ಬರುತ್ತಾಳೆ ಎಂದು ನೋಡಿದ ಜನರು ಹೇಳುತ್ತಾರೆ. ಈ ಘಾಟ್ ನಲ್ಲಿ ಅನೇಕ ಅಪಘಾತಗಳು ನಡೆದಿವೆ. ಹಾಗಾಗಿ ಕಾಸ್ರಾ ಘಾಟ್‌ ಅನೇಕ ವಿಶ್ರಾಂತ ಆತ್ಮಗಳು ಸಂಚರಿಸುತ್ತವೆ.

ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತಂತೆ!

ರಾಷ್ಟ್ರೀಯ ಹೆದ್ದಾರಿ 209

ರಾಷ್ಟ್ರೀಯ ಹೆದ್ದಾರಿ 209

ಸುತ್ತಮುತ್ತಲಿನ ಜನರನ್ನು ಎನ್ಎಚ್ 209 ಸುತ್ತುವರೆದಿರುವ ಪ್ರದೇಶದಲ್ಲಿ ದುರದೃಷ್ಟಕರ ಘಟನೆಗಳು ಸಂಭವಿಸಿವೆ. ಸ್ಥಳೀಯ ಜನರು ಸೂರ್ಯಾಸ್ತದ ನಂತರ ಈ ದಾರಿಯಲ್ಲಿ ಹೋಗಲು ಹೆದರುತ್ತಾರೆ. ಚಿತ್ರ ವಿಷಿತ್ರ ಘಟನೆಗಳನ್ನು ಎದುರಿಸಬೇಕಾಗುತ್ತದೆ.

ಬ್ಲೂ ಕ್ರಾಸ್ ರೋಡ್ ಚೆನ್ನೈ

ಬ್ಲೂ ಕ್ರಾಸ್ ರೋಡ್ ಚೆನ್ನೈ

ಈ ರಸ್ತೆಯ ಮೇಲೆ ಹಲವಾರು ಆತ್ಮಹತ್ಯೆಗಳು ನಡೆದಿವೆ ಮತ್ತು ಚೆನ್ನೈನಲ್ಲಿ ಅತಿ ಹೆಚ್ಚು ಭಯಾನಕ ರಸ್ತೆಗಳಲ್ಲಿ ಇದೂ ಒಂದಾಗಿದೆ. ರಸ್ತೆಗಳು ಮರಗಳಿಂದ ಸುತ್ತುವರಿದಿದೆ. ಆದ್ದರಿಂದ ಹಗಲಿನ ವೇಳೆಯಲ್ಲೂ ಸಹ ರಸ್ತೆಯಲ್ಲಿ ಬೆಳಕು ಕಡಿಮೆ ಇರುತ್ತದೆ. ರಾತ್ರಿಯ ಸಮಯದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ಇನ್ನೂ ಕೆಟ್ಟದಾಗಿರುತ್ತದೆ. ಜನರು ಈ ರಸ್ತೆಯಲ್ಲಿ ಅನೇಕ ಭಯಾನಕ ಜೀವಿಗಳೂ ಓಡಾಡುವುದನ್ನು ಗಮನಿಸಿದ್ದಾರೆ.

ಮಾರ್ವೆ ಮತ್ತು ಮಾಡ್ ಐಲೆಂಡ್ ರಸ್ತೆ, ಮುಂಬೈ

ಮಾರ್ವೆ ಮತ್ತು ಮಾಡ್ ಐಲೆಂಡ್ ರಸ್ತೆ, ಮುಂಬೈ

ಮುಂಬೈಯಲ್ಲಿ ಈ ರಸ್ತೆಯ ಮೇಲೆ ವಧುವಿನ ಉಡುಪಿನಲ್ಲಿ ಮಹಿಳೆಯೊಬ್ಬ ಕಾಣಿಸಿಕೊಳ್ಳುತ್ತಾಳೆ. ಕೆಲವೊಮ್ಮೆ ಆಕೆಯ ಕಿರಿಚುವಿಕೆಯನ್ನು ಸದ್ದು ಕೇಳಬಹುದು. ಕೆಲವೊಮ್ಮೆ, ಆಕೆಯ ಕಾಲ್ಗೆಜ್ಜೆಯ ಸದ್ದು ಕೇಳಿಸುತ್ತದೆ. ಇದರ ಹಿಂದೆ ಒಂದು ಕಥೆಯೂ ಇದೆ. ಆಕೆಯ ಗಂಡ ಆಕೆಯನ್ನು ಕಾರ್‌ನಲ್ಲಿ ಲಾಂಗ್‌ ಡ್ರೈವ್‌ಗೆ ಕರೆದುಕೊಂಡು ಹೋಗಿ ಮುಂದುಗಡೆಯಿಂದ ಟ್ರಕ್ ಬರುತ್ತಿರುವಾಗ ಕಾರಿನ ವೇಗವನ್ನು ಹೆಚ್ಚಿಸಿ ತಾನು ಕಾರಿನಿಂದ ಜಿಗಿದು ಆಕೆಯನ್ನು ಕೊಲೆಮಾಡಿದ್ದ ಎನ್ನಲಾಗುತ್ತದೆ

ದೆಹಲಿ ಕಂಟೋನ್ಮೆಂಟ್ ರಸ್ತೆ

ದೆಹಲಿ ಕಂಟೋನ್ಮೆಂಟ್ ರಸ್ತೆ

ದೆಹಲಿ ಕಂಟೋನ್ಮೆಂಟ್ ರೋಡ್ ಬಳಿ ಬಿಳಿ ಸೀರೆಯುಟ್ಟು ಓರ್ವ ಮಹಿಳೆಯು ರಾತ್ರಿ ಹೊತ್ತಿನಲ್ಲಿ ಓಡಾಡುತ್ತಿರುತ್ತಾಳೆ. ಆ ಮಹಿಳೆಯು ತಮ್ಮ ವಾಹನದ ವೇಗಕ್ಕೆ ಓಡುತ್ತಿರುವುದನ್ನು ಬಹಳಷ್ಟು ವಾಹನ ಚಾಲಕರು ನೋಡಿದ್ದಾರೆ. ಅವರು ಕೆಲವೊಮ್ಮೆ ರಸ್ತೆ ಬದಿ ನಿಂತುಕೊಂಡು ಲಿಫ್ಟ್ ಕೇಳುತ್ತಾಳೆ. ನೀವು ಈ ರಸ್ತೆಯ ಮೂಲಕ ವಾಹನ ಚಾಲನೆ ಮಾಡುತ್ತಿದ್ದೀರೆಂದಾರೆ ನಿಮ್ಮ ಕಾರನ್ನು ಅಲ್ಲೆಲ್ಲೂ ನಿಲ್ಲಿಸಬಾರದೆಂದು ನಿಮಗೆ ಗೊತ್ತಿರಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X