Search
  • Follow NativePlanet
Share
» »ಇಲ್ಲಿನ ಕಾಲೇಜ್ ಕ್ಯಾಂಪಸ್‌ನಲ್ಲಿ ಕುರ್ಚಿ ತನ್ನಷ್ಟಕ್ಕೆ ಓಡಾಡುತ್ತಂತೆ!

ಇಲ್ಲಿನ ಕಾಲೇಜ್ ಕ್ಯಾಂಪಸ್‌ನಲ್ಲಿ ಕುರ್ಚಿ ತನ್ನಷ್ಟಕ್ಕೆ ಓಡಾಡುತ್ತಂತೆ!

ಗುಜರಾತ್‌ನ ಪ್ರಸಿದ್ಧ ಸ್ಥಳಗಳಲ್ಲಿ ಅಹಮದಾಬಾದ್ ಕೂಡಾ ಒಂದು. ಶಬರಮತಿ ಆಶ್ರಮ, ಜಮಾ ಮಸೀದಿ, ತೀನ್ ದರ್‌ವಾಜ, ಪಕ್ಷಿ ವಿಹಾರ ಇವೆಲ್ಲಾ ಇಲ್ಲಿನ ಆಕರ್ಷಣೆಗಳಾಗಿವೆ. ಇವುಗಳನ್ನೆಲ್ಲಾ ಹೊರತುಪಡಿಸಿ ಅಹಮದಾಬಾದ್‌ನಲ್ಲಿ ಇನ್ನೂ ಅನೇಕ ಸ್ಥಳಗಳಿವೆ. ಅಲ್ಲಿಗೆ ಯಾರೂ ಹೋಗೋದಿಲ್ಲ. ಅವುಗಳನ್ನು ಪ್ರೇತಬಾಧಿತ ಸ್ಥಳ ಎನ್ನಲಾಗುವುದು.

ಸ್ಟ್ರೀಟ್ ಶಾಪಿಂಗ್ ಮಾಡೋದಂದ್ರೆ ಇಷ್ಟನಾ? ಹಾಗಾದ್ರೆ ಇಲ್ಲಿಗೆ ಹೋಗ್ಲೇ ಬೇಕುಸ್ಟ್ರೀಟ್ ಶಾಪಿಂಗ್ ಮಾಡೋದಂದ್ರೆ ಇಷ್ಟನಾ? ಹಾಗಾದ್ರೆ ಇಲ್ಲಿಗೆ ಹೋಗ್ಲೇ ಬೇಕು

ಸಿಗ್ನೇಚರ್ ಫಾರ್ಮ್

ಸಿಗ್ನೇಚರ್ ಫಾರ್ಮ್

ಅಹಮದಾಬಾದ್‌ನ ಪ್ರೇತಬಾಧಿತ ಸ್ಥಳಗಳಲ್ಲಿ ಸಿಗ್ನೇಚರ್ ಫಾರ್ಮ್ ಕೂಡ ಒಂದು. ಈ ಸ್ಥಳಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತದೆ ಎನ್ನುತ್ತಾರೆ ಸ್ಥಳೀಯರು. ಕೆಲವು ಯುವಕರ ಗುಂಪೊಂದು ಈ ಫಾರ್ಮ್‌ಗೆ ತಿರುಗಾಡಲೆಂದು ಸಂಜೆ ಹೊತ್ತಿಗೆ ಹೋಗಿದ್ದಾಗ ಈ ಸ್ಥಳದ ಬಗ್ಗೆ ಇನ್ನಷ್ಟು ಚರ್ಚೆಗೆ ಒಳಗಾಗಿದೆ. ಇಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತದೆ ಎನ್ನುವುದು ಗೊತ್ತಿದ್ದೂ ಆ ಯುವಕರಯ ಅಲ್ಲಿಗೆ ಹೋಗಿದ್ದರು. ಅಲ್ಲಿ ಯಾವುದೋ ಅದೃಶ್ಯ ಶಕ್ತಿ ಆ ಯುವಕರನ್ನು ಬಲಿ ತೆಗೆದುಕೊಂಡಿತ್ತು. ಹಾಗಾಗಿ ಇಲ್ಲಿ ಸಂಜೆ ಹೊತ್ತು ಯಾರೂ ಹೋಗೋದೇ ಇಲ್ಲ. ಅಲ್ಲದೆ ವಿಚಿತ್ರ ಶಬ್ಧಗಳೂ ಕೇಳಿಸುತ್ತದೆ. ಹಾಗಾಗಿ ಇಲ್ಲಿನ ಸುತ್ತಮುತ್ತಲಿನ ವಾತಾವರಣ ಭಯಾನಕವಾಗಿರುತ್ತದೆ.

ಚಂದ್‌ಕೋಡ್

ಚಂದ್‌ಕೋಡ್

ಅಹಮದಾಬಾದ್‌ನಲ್ಲಿರುವ ಚಂದ್ ಕೋಡ್ ಒಂದು ಪ್ರಸಿದ್ಧ ಸ್ಥಳವಾಗಿದೆ. ಇದು ಸಬರಮತಿ ನದಿಯ ದಡದಲ್ಲಿದೆ. ಇಲ್ಲಿ ಒಂದು ಮರವಿದೆ. ಅದರಲ್ಲಿ ಪ್ರೇತಾತ್ಮ ಇದೆ ಎನ್ನಲಾಗುತ್ತದೆ. ಯಾರಾದರೂ ಆ ಮರದ ಬಳಿಗೆ ಹೋಗಲು ಯತ್ನಿಸಿದರೆ ರಾತ್ರಿ ಅವರ ಕನಸಿನಲ್ಲಿ ಆ ಆತ್ಮ ಬರುತ್ತದೆ. ಆ ಮರ ನೋಡಲೂ ಬಹಳ ಭಯಾನಕವಾಗಿದೆ. ಈ ವರೆಗೂ ಇದೊಂದು ರಹಸ್ಯವಾಗಿಯೇ ಉಳಿದಿದೆ.

ಆಕಾಶಗಂಗಾ, ಸೋಲಾ ರೋಡ್

ಆಕಾಶಗಂಗಾ, ಸೋಲಾ ರೋಡ್

ಅಹಮದಾಬಾದ್‌ನ ಸೋಲಾ ರೋಡ್‌ನ್ನು ಅತ್ಯಂತ ಬ್ಯುಸಿ ರಸ್ತೆ ಎನ್ನಲಾಗುತ್ತದೆ. ಇದೇ ರಸ್ತೆಯಲ್ಲಿ ಆಕಾಶ ಗಂಗಾ ಎನ್ನುವ ಒಂದು ಬಂಗಲೆ ಇದೆ. ಅಲ್ಲಿ ಪ್ರೇತಾತ್ಮಗಳಿವೆ ಎನ್ನಲಾಗುತ್ತದೆ. ಕೆಲವು ವರ್ಷಗಳ ಹಿಂದೆ ಈ ಬಂಗಲೆಯನ್ನು ಯಾರೋ ಖರೀದಿಸಿದ್ದರು. ಬಂಗಲೆ ಸ್ವಲ್ಪ ಹಳೇ ಸ್ಥತಿಯಲ್ಲಿದ್ದ ಕಾರಣ ಅದನ್ನು ಸ್ವಲ್ಪ ರಿಪೇರಿ ಮಾಡಿಸಿದರು. ಆ ಮನೆಯಲ್ಲಿ ಉಳಿಯಲು ಬಂದಾಗ ಅ ಮನೆಯಲ್ಲಿ ಯಾರೋ ಅಳುವ, ಕಿರುಚಾಡುವ ಸದ್ದು ಕೇಳಿ ಬರುತ್ತಿತ್ತು. ನಂತರ ಆ ವ್ಯಕ್ತಿ ಬಂಗಲೆಯನ್ನೇ ಬಿಟ್ಟು ಹೋದರು. ಆಗಿನಿಂದ ಇಂದಿನವರೆಗೂ ಆ ಬಂಗಲೆಯಲ್ಲಿ ಯಾರೂ ಉಳಿಯಲು ಬಂದಿಲ್ಲ.

ಗುಜರಾತ್ ತಾಂತ್ರಿಕ ವಿಶ್ವವಿದ್ಯಾನಿಲಯ ಕ್ಯಾಂಪಸ್

ಗುಜರಾತ್ ತಾಂತ್ರಿಕ ವಿಶ್ವವಿದ್ಯಾನಿಲಯ ಕ್ಯಾಂಪಸ್

ಅಹಮದಾಬಾದ್‌ನಲ್ಲಿರುವ ಈ ವಿಶ್ವವಿದ್ಯಾನಿಲಯದಲ್ಲಿ ಯಾವುದೋ ಆತ್ಮ ಸುತ್ತುತ್ತಿದೆ ಎನ್ನಲಾಗುತ್ತದೆ. ಮಧ್ಯರಾತ್ರಿ ಈ ಕ್ಯಾಂಪಸ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಬಹಳಷ್ಟು ವಿದ್ಯಾರ್ಥಿಗಳಿಗೆ ಭಯಾನಕ ಅನುಭವವಾಗಿದೆ. ತನ್ನಷ್ಟಕ್ಕೆ ಬಾಗಿಲು ತೆರೆಯುವುದು. ಕಿಟಕಿ ಮುಚ್ಚುವುದು. ಟೇಬಲ್, ಕುರ್ಚಿ ತನ್ನಷ್ಟಕ್ಕೆ ಓಡಾಡಲು ಪ್ರಾರಂಭಿಸುತ್ತದೆ. ಈವರೆಗೂ ಈ ಘಟನೆಗಳು ಒಂದು ರಹಸ್ಯವಾಗಿಯೇ ಉಳಿದಿದೆ.

ಅಹ್ರಮ್ ಬಂಗಲೆ

ಅಹ್ರಮ್ ಬಂಗಲೆ

ಒಂದಾನೊಂದು ಕಾಲದಲ್ಲಿ ಈ ಸ್ಥಳ ಶಾಂತಿಪ್ರಿಯ ಸ್ಥಳಗಳಲ್ಲಿ ಗುರತಿಸಲ್ಪಡುತ್ತಿತ್ತು. ಆದರೆ ಇಂದು ಅಹಮದಾಬಾದ್‌ನ ಪ್ರೇತಬಾದಿತ ಸ್ಥಳಗಳಲ್ಲಿ ಒಂದಾಗಿದೆ. ಇದರ ಹಿಂದೆ ಕೊಲೆಯ ಕಥೆಯೇ ಇದೆ. ಈ ಸ್ಥಳದಲ್ಲಿ ಯಾವುದೋ ಪರಿವಾರದ ಕೊಲೆ ನಡೆದಿತ್ತು ಎನ್ನಾಗುತ್ತದೆ. ಆ ಪರಿವಾರದ ಆತ್ಮ ಅಲ್ಲಿ ತಿರುಗಾಡುತ್ತಿದೆ ಎನ್ನಲಾಗುತ್ತದೆ.

Read more about: gujarat india ahmadabad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X