• Follow NativePlanet
Share
» »ದೀಪಾವಳಿ ಹಬ್ಬಕ್ಕೆ ಮಾತ್ರ ತೆರೆಯುವ ಮಾಹಿಮಾನ್ವಿತ ದೇವಾಲಯ ಯಾವುದು ಗೊತ್ತ?

ದೀಪಾವಳಿ ಹಬ್ಬಕ್ಕೆ ಮಾತ್ರ ತೆರೆಯುವ ಮಾಹಿಮಾನ್ವಿತ ದೇವಾಲಯ ಯಾವುದು ಗೊತ್ತ?

Written By:

ದೀಪಾವಳಿ ಹಬ್ಬ ಬರುತ್ತಿದೆ. ದೇಶದಲ್ಲಿನ ಎಲ್ಲಾ ಭಾಗಗಳಲ್ಲಿಯೂ ವಿಜೃಂಬಣೆಯಿಂದ ಆಚರಿಸುವ ಹಬ್ಬವೆಂದರೆ ಅದು ದೀಪಾವಳಿ. ಮಕ್ಕಳಿಂದ ಹಿಡಿದು ದೊಡ್ಡವರವರೆವಿಗೂ ಅತ್ಯಂತ ಸಂಭ್ರಮ, ಸಡಗರದಿಂದ ಆಡಚರಿಸುವ ಹಬ್ಬವಾಗಿದೆ. ಆಶ್ಚರ್ಯ ಏನಪ್ಪ ಎಂದರೆ ನಮ್ಮ ಕರ್ನಾಟಕದಲ್ಲಿನ ಒಂದು ಮಾಹಿಮಾನ್ವಿತವಾದ ದೇವಾಲಯವಿದೆ.

ಆ ದೇವಾಲಯವು ವರ್ಷದಲ್ಲಿ ಒಮ್ಮೆ ಮಾತ್ರ ದೇವಾಲಯವನ್ನು ತೆರಯುತ್ತಾರೆ. ಆ ಸಮಯ ಯಾವುದು ಎಂದರೆ ದೀಪಾವಳಿ. ದೀಪಾವಳಿ ಹಬ್ಬದಂದು ಮಾತ್ರ ಆ ದೇವಾಲಯವನ್ನು ತೆರೆಯುತ್ತಾರೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯದಲ್ಲಿ ಹಲವಾರು ವಿಸ್ಮಯಗಳು ನಡೆಯುವುದು.

ಹಾಗಾದರೆ ಆ ದೇವಾಲಯ ಎಲ್ಲಿದೆ? ಯಾವ ದೇವಾಲಯ ಎಂಬುದು ತಿಳಿಯಲೇಬೇಕು ಅಲ್ಲವೇ? ಹಾಗಾದರೆ ಲೇಖನದ ಮೂಲಕ ತಿಳಿದುಕೊಳ್ಳಿ.

ಎಲ್ಲಿದೆ?

ಎಲ್ಲಿದೆ?

ಈ ಅದ್ಭುತವಾದ ದೇವಾಲಯವು ನಮ್ಮ ಕರ್ನಾಟಕದ ಹಾಸನ ಜಿಲ್ಲೆಯಲ್ಲಿದೆ. ಆ ಮಹಿಮಾನ್ವಿತವಾದ ದೇವಾಲಯವೇ ಹಾಸನಾಂಭ ದೇವಾಲಯವಾಗಿದೆ. ಬೆಂಗಳೂರಿನಿಂದ ಈ ದೇವಾಲಯಕ್ಕೆ ಸುಮಾರು 185 ಕಿ.ಮೀ ದೂರವಿದೆ. ಸುಮಾರು 3 ಗಂಟೆಗಳ ಕಾಲ ಪ್ರಯಾಣ ಮಾಡುಬೇಕಾಗುತ್ತದೆ.

ದೀಪಾವಳಿ ಹಬ್ಬದಂದು ಮಾತ್ರ ತೆರೆಯುತ್ತಾರೆ

ದೀಪಾವಳಿ ಹಬ್ಬದಂದು ಮಾತ್ರ ತೆರೆಯುತ್ತಾರೆ

ಈ ಹಾಸನಾಂಭ ದೇವಾಲಯವನ್ನು ಕ್ರಿ.ಶ 12 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು. ಅತ್ಯಂತ ಪ್ರಾಚೀನವಾದುದು ಎಂದು ಹೇಳಬಹುದಾಗಿದೆ. ಇಲ್ಲಿನ ಗರ್ಭಗುಡಿಯಲ್ಲಿ ಹಾಸನಾಂಭ ಎಂಬ ದೇವತೆಯನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸುತ್ತಾರೆ. ಈ ದೇವಾಲಯವನ್ನು 1 ವರ್ಷಕ್ಕೆ ಮಾತ್ರ ತೆರೆಯುತ್ತಾರೆ. ಆ ಒಂದು ದಿನವೇ ದೀಪಾವಳಿ ಹಬ್ಬದಂದು.

ವರ್ಷಕೊಮ್ಮೆ

ವರ್ಷಕೊಮ್ಮೆ

ಈ ದೇವಾಲಯದ ಮಹಿಮೆ ಅಪಾರವಾಗಿದೆ. ಕರ್ನಾಟಕದಲ್ಲಿನ ಪ್ರತಿಯೊಬ್ಬರು ಈ ತಾಯಿಯ ಮಹಿಮೆಯ ಬಗ್ಗೆ ತಿಳಿಯಲೇಬೇಕು. ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ. ಈ ಹಾಸನಾಂಭ ದೇವಾಲಯವನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುತ್ತಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಒಂದು ದಿನದ ಮಟ್ಟಿಗೆ ಮಾತ್ರ ದೇವಾಲಯವನ್ನು ತೆರೆಯುತ್ತಾರೆ.

ಮುಚ್ಚಿರುತ್ತದೆ

ಮುಚ್ಚಿರುತ್ತದೆ

ದೀಪಾವಳಿ ಹಬ್ಬದಂದು ಮಾತ್ರ ತೆರೆದಿರುವ ಈ ದೇವಾಲಯವು ವರ್ಷವೆಲ್ಲಾ ಮುಚ್ಚಿರುತ್ತದೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯದಲ್ಲಿ ದೀಪ ಬೆಳಗುವುದು. ಇದರಲ್ಲಿ ಏನು ವಿಷೇಶ ಎಂದು ಅಂದುಕೊಳ್ಳುತ್ತಿದ್ದೀರಾ? ಹಾಗಾದರೆ ಓದಿ....

ದೀಪಗಳು

ದೀಪಗಳು

ಇಲ್ಲಿನ ಆಶ್ಚರ್ಯಕರವಾದ ಸಂಗತಿ ಏನೆಂದರೆ ಹಾಸನಂಭ ದೇವಾಲಯ ಗರ್ಭಗುಡಿಯಲ್ಲಿ ದೀಪಾವಳಿ ಹಬ್ಬದ ರಾತ್ರಿಯಂದು ದೀಪಗಳನ್ನು ಬೆಳಗಿ ಅಲ್ಲಿಂದ ಪೂಜಾರಿಗಳು ಹೊರಡುತ್ತಾರೆ. ಮತ್ತೇ ಆ ದೇವಾಲಯದ ಬಾಗಿಲನ್ನು ತೆರೆಯುವುದು ಮತ್ತೊಂದು ದೀಪಾವಳಿ ಹಬ್ಬಕ್ಕೆ ಮಾತ್ರ.

ಬೆಳಗುವುದು

ಬೆಳಗುವುದು

ದೀಪವನ್ನು ಬೆಳಗಿ ಒಂದು ವರ್ಷಕ್ಕೆ ಸರಿಯಾಗಿ ಅಂದರೆ ಮತ್ತೊಂದು ದೀಪಾವಳಿಯ ದಿನದಂದು ದೇವಾಲಯದ ಗರ್ಭ ಗುಡಿಯ ಬಾಗಿಲನ್ನು ತೆರೆದರೆ ಕಳೆದ ವರ್ಷ ಬೆಳಗಿದ ದೀಪವು ಇನ್ನೂ ಹಾಗೆಯೇ ಬೆಳಗುತ್ತಾ ಇರುತ್ತದೆ. ಇದು ನಂಬಲು ಅಸಾಧ್ಯವಾದರೂ ಕೂಡ ಇದು ಸತ್ಯ.

ಶಕ್ತಿ

ಶಕ್ತಿ

ಎಣ್ಣೆಯಿಂದ ಬೆಳಗಿದ ದೀಪವು ತಾಯಿಯ ಗರ್ಭಗುಡಿಯಲ್ಲಿ ಒಂದು ವರ್ಷಗಳ ಕಾಲ ಬೆಳಗುತ್ತಾ ಇರಲು ಯಾವ ಶಕ್ತಿ ಸಹಾಯ ಮಾಡುತ್ತಿರುವುದು ಎಂಬುದು ಆ ಹಾಸನಾಂಭ ದೇವಿಯೊಬ್ಬಳಿಗೆ ಮಾತ್ರ ಗೊತ್ತ. ಈ ವಿಚಿತ್ರವಾದ ಕಾಣಲು ದೀಪಾವಳಿ ಹಬ್ಬದ ದಿನದಂದು ಅಪಾರ ಸಂಖ್ಯೆಯಲ್ಲಿ ಜನಸಾಗರವೇ ನೆರೆದಿರುತ್ತದೆ.

ಹಾಸ

ಹಾಸ

ಹಾಸ ಎಂದರೆ ದಕ್ಷಿಣ ಭಾರತದ ಭಾಷೆಯಲ್ಲಿ ಸಾಮಾನ್ಯವಾಗಿ ನಗು ಎಂಬುದೇ ಆಗಿದೆ. ಹಾಗಾಗಿಯೇ ಹಾಸನದಲ್ಲಿ ಹಾಸನಾಂಭ ದೇವಿಯು ಎಂದಿಗೂ ತನ್ನ ನಗುವಿನಿಂದಲೇ ಭಕ್ತರನ್ನು ಆಕರ್ಷಿಸುವ ಪರಾಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಹಾಸನ ಜಿಲ್ಲೆಯಲ್ಲಿರುವ ತಾಯಿಯನ್ನು ಹಾಸನಾಂಭ ಎಂಬ ಹೆಸರಿನಿಂದ ಕರೆಯುತ್ತಾರೆ.

ಭಕ್ತರು

ಭಕ್ತರು

ಈ ಹಾಸನಾಂಭ ತಾಯಿಯನ್ನು ಪೂಜಿಸಿದವರಿಗೆ ಆ ತಾಯಿಯು ಒಳ್ಳೆಯದನ್ನು ಮಾಡಿದರೆ. ನಂಬದವರನ್ನು ಅಷ್ಟೇ ಉಗ್ರ ರೂಪ ತಾಳಿ ಶಿಕ್ಷೆ ನೀಡುತ್ತಾಳೆ ಎಂಬುದು ಅಲ್ಲಿನ ಭಕ್ತರ ನಂಬಿಕೆಯಾಗಿದೆ.

ಸ್ಥಳ ಪುರಾಣಗಳ ಪ್ರಕಾರ

ಸ್ಥಳ ಪುರಾಣಗಳ ಪ್ರಕಾರ

ಒಂದು ಸ್ಥಳ ಪುರಾಣದ ಪ್ರಕಾರ ಹಾಸನಾಂಭಳ ಭಕ್ತಿಯನ್ನು ತಿಳಿದುಕೊಳ್ಳಿ ಅದೇನೆಂದರೆ, ಹಾಸನಾಂಭಳ ಭಕ್ತೆಯನ್ನು ಸದಾ ಅಕೆಯ ಅತ್ತೆಯು ಪೀಡಿಸುತ್ತಿದ್ದಳು. ಅತ್ತೆಯನ್ನು ಈ ತಾಯಿಯು ದೇವಾಲಯದಲ್ಲಿಯೇ ಶಿಲೆಯಾಗಿ ಹೋಗು ಎಂದು ಶಾಪ ನೀಡಿದ್ದಾಳೆ ಎಂಬ ಸ್ಥಳ ಪುರಾಣವಿದೆ.

ಶಿಲೆ

ಶಿಲೆ

ಆಶ್ಚರ್ಯ ಏನಪ್ಪ ಎಂದರೆ ಆ ಶಿಲೆಯು ಸ್ವಲ್ಪ ಸ್ವಲ್ಪವೇ ಸ್ಥಳ ಬದಲಾವಣೆಗೊಳ್ಳುತ್ತಾ ಹಾಸನಾಂಭ ತಾಯಿಯ ಕಡೆ ಹೋಗುತ್ತಿದೆ ಎಂತೆ. ಅಂದರೆ ಸ್ಥಳ ಬದಲಾವಣೆ ಮಾಡುತ್ತಿದೆ ಎಂತೆ.

ಕಲಿಯುಗ ಸಮಯದಲ್ಲಿ

ಕಲಿಯುಗ ಸಮಯದಲ್ಲಿ

ಹಾಸನಾಂಬೆಯ ಭಕ್ತೆಗೆ ಹಿಂಸೆಯನ್ನು ನೀಡುತ್ತಿದ್ದ ಅತ್ತೆಯ ಶಿಲೆಗೆ ಮುಕ್ತಿ ಕಲಿಯುಗದ ಅಂತ್ಯದಲ್ಲಿ ಅಂತೆ. ಕಲಿಯುಗ ಅಂತ್ಯದ ಸಮಯದಲ್ಲಿ ಹಾಸನಾಂಭ ತಾಯಿಯ ಸನ್ನಿಧಿಯಲ್ಲಿ ಆಕೆಗೆ ಮುಕ್ತಿ ಲಭಿಸುತ್ತದೆ ಎಂಬುದನ್ನು ಈ ಕ್ಷೇತ್ರದ ಮಾಹಿಮಾನ್ವಿತವಾದ ವೃದ್ಧನ ಮಾತಾಗಿದೆ.

ಕಳ್ಳರು

ಕಳ್ಳರು

ಒಮ್ಮೆ ಹಾಸನಂಭ ದೇವಾಲಯಕ್ಕೆ 4 ಕಳ್ಳರು ಒಳ ಪ್ರವೇಶ ಮಾಡಿದರಂತೆ. ಹಾಸನಂಭ ಧರಿಸಿರುವ ಒಡವೆಗಳನ್ನು ಕದಿಯುವ ಸಲುವಾಗಿ ಪ್ರಯತ್ನಿಸಿದರಂತೆ.

ಕಲ್ಲು

ಕಲ್ಲು

ಇದರಿಂದ ಕೋಪಗೊಂಡ ತಾಯಿಯು ಆ 4 ಕಳ್ಳರನ್ನು ಕಲ್ಲುಗಳಾಗಿ ಹೋಗಿ ಎಂದು ಶಾಪವನ್ನು ನೀಡಿದಳಂತೆ. ಹೀಗಾಗಿ ದೇವಾಲಯದ ಸ್ವಲ್ಪ ದೂರದಲ್ಲಿನ ಕಲ್ಲಪ್ಪ ಎಂಬ ಗುಡಿಯಲ್ಲಿ ಆ ನಾಲ್ಕು ಕಲ್ಲುಗಳು ಕಾಣಿಸುವುದು ವಿಶೇಷವಾಗಿದೆ.

ತಲುಪುವ ಬಗೆ?

ತಲುಪುವ ಬಗೆ?

ರೈಲ್ವೆ ನಿಲ್ದಾಣ: ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಹಾಸನ ಜಂಗ್ಷನ್. ಇಲ್ಲಿಂದ ಸುಲಭವಾಗಿ ಈ ಪ್ರವಾಸಿ ತಾಣಗಳಿಗೆಲ್ಲಾ ಒಮ್ಮೆ ಭೇಟಿ ನೀಡಬಹುದಾಗಿದೆ. ಹಾಸನಾಂಭ ದೇವಾಲಯಕ್ಕೆ ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ಅರಸಿಕೆರೆ ರೈಲ್ವೆ ಸ್ಟೇಷನ್. ಇಲ್ಲಿಂದ 38 ಕಿ.ಮೀ ದೂರದಲ್ಲಿದೆ.

ತಲುಪುವ ಬಗೆ?

ತಲುಪುವ ಬಗೆ?

ವಿಮಾನ ನಿಲ್ದಾಣ
ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮೈಸೂರು ವಿಮಾನ ನಿಲ್ದಾಣ. ಇಲ್ಲಿಂದ ಹಾಸನಕ್ಕೆ ಸುಮಾರು 136 ಕಿ.ಮೀ ದೂರದಲ್ಲಿದೆ.

ತಲುಪುವ ಬಗೆ?

ತಲುಪುವ ಬಗೆ?

ರಸ್ತೆ ಮಾರ್ಗವಾಗಿ
ಬೆಂಗಳೂರಿನಿಂದ ಹಾಸನಕ್ಕೆ ನೇರವಾದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಸೌಕರ್ಯವಿದೆ. ಮೈಸೂರಿನಿಂದ 115 ಕಿ.ಮೀ ದೂರ, ಬೆಂಗಳೂರಿನಿಂದ 186 ಕಿ.ಮೀ ದೂರ, ಮಂಗಳೂರಿನಿಂದ 172 ಕಿ.ಮೀ ದೂರದಲ್ಲಿದೆ. ಭಕ್ತನಿಗಾಗಿ ತನ್ನ ದಿಕ್ಕನ್ನೇ ಬದಲಾಯಿಸಿಕೊಂಡ ದೇವಾಲಯ : ಅಂಬರನಾಥ ದೇವಾಲಯ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more