Search
  • Follow NativePlanet
Share
» »ದಕ್ಷಿಣ ಪಳನಿ ಸುಬ್ರಹ್ಮಣ್ಯ ದೇವಾಲಯ!

ದಕ್ಷಿಣ ಪಳನಿ ಸುಬ್ರಹ್ಮಣ್ಯ ದೇವಾಲಯ!

ಕೇರಳದ ಅಲಪುಳ ಜಿಲ್ಲೆಯಲ್ಲಿರುವ ಹರಿಪಾಡ್ ಪಟ್ಟಣವು ತನ್ನಲ್ಲಿರುವ ಅತಿ ಪ್ರಾಚೀನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಿಂದಾಗಿ ಸಾಕಷ್ಟು ಪ್ರಸಿದ್ಧಿಗಳಿಸಿದೆ

By Vijay

ಕೇರಳದಲ್ಲಿ ಕಂಡುಬರುವ ಮೂರು ಬಲು ಪ್ರಾಚೀನ ದೇವಾಲಯಗಳ ಪೈಕಿ ಒಂದಾಗಿದೆ ಈ ದೇವಾಲಯ. ಇದನ್ನು ಹರಿಪಾಡ್ ಸುಬ್ರಹ್ಮಣ್ಯ ದೇವಾಲಯ ಎಂದು ಕರೆಯುತ್ತಾರೆ. ಹರಿಪಾಡ್ ಎಂಬುದು ಕೇರಳದ ಅಲಪುಳ (ಅಲ್ಲೆಪ್ಪಿ) ಜಿಲ್ಲೆಯಲ್ಲಿರುವ ಒಂದು ಪಟ್ಟಣ ಪ್ರದೇಶವಾಗಿದ್ದು ಅಲ್ಲಿ ಸುಬ್ರಹ್ಮಣ್ಯನ ಈ ದೇವಾಲಯವಿದೆ.

ದಕ್ಷಿಣದ ಪಳನಿ ಎಂತಲೆ ಖ್ಯಾತಿಗಳಿಸಿರುವ ಸುಬ್ರಹ್ಮಣ್ಯ ಸ್ವಾಮಿಯ ಈ ದೇವಾಲಯವು ಸಾಕಷ್ಟು ಜನಪ್ರೀಯವಾಗಿದ್ದು ಪ್ರತಿ ವರ್ಷ ಲಕ್ಷಾಂತರ ಜನರಿಂದ ಭೇಟಿ ನೀಡಲ್ಪಡುತ್ತದೆ. ಕಲಿಯುಗ ಪ್ರಾರಂಭವಾಗುವುದಕ್ಕೂ ಮೊದಲೆ ಈ ದೇವಾಲಯ ಸ್ಥಾಪಿತವಾಗಿದೆ ಎಂಬ ಪ್ರತೀತಿಯಿದೆ.

ದಕ್ಷಿಣ ಪಳನಿ ಸುಬ್ರಹ್ಮಣ್ಯ ದೇವಾಲಯ!

ಚಿತ್ರಕೃಪೆ: Balagopal.k

ಸುವರ್ಣ ಲೇಪಿತ ಸುಬ್ರಹ್ಮಣ್ಯನ ವಿಗ್ರಹವು ನೋಡಲು ಸಾಕಷ್ಟು ದೊಡ್ಡದಾಗಿದ್ದು ಒಂದೆ ಕ್ಶಣದಲ್ಲೆ ಭಕ್ತರನ್ನು ಆಕರ್ಷಿಸಿಬಿಡುತ್ತದೆ. ಅಲ್ಲದೆ ದೇವಾಲಯ ಸುವರ್ಣ ಧ್ವಜ ಸ್ಥಂಬವು ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ಮೊದಲು ಇಲ್ಲಿನ ಸುಬ್ರಹಣ್ಯನ ವಿಗ್ರಹವು ಋಷಿಗಳಾದ ಪರಶುರಾಮರು ಪೂಜಿಸಲು ಉಪಯೋಗಿಸುತ್ತಿದ್ದರು. ತದನಂತರ ಕಂದನಲ್ಲೂರಿನ ಹಿನ್ನೀರಿನಲ್ಲಿ ಈ ವಿಗ್ರಹ ಮುಳುಗಿಹೋಯಿತು.

ಇತಿಹಾಸ

ಪ್ರಸ್ತುತ ದೇವಾಲಯವಿರುವ ಪಟ್ಟಣದ ಹೆಸರು ಹರಿಪಾಡ್. ಹಿಂದೆ ಇದು ಏಕಚಕ್ರ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು. ಇಲ್ಲಿದ್ದ ಎಲ್ಲ ಜಮೀನುದಾರರಿಗೂ ಒಮ್ಮೆ ಒಟ್ಟಾಗಿ ಸುಬ್ರಹ್ಮಣ್ಯನ ವಿಗ್ರಹವಿರುವ ಸ್ಥಳದ ಕುರಿತು ಕನಸು ಬಿದ್ದಿತು. ಅದರಂತೆ ಅವರು ಕಾಯಂಕುಲಂ ಕೆರೆಯಿಂದ ಸುಬ್ರಹ್ಮಣ್ಯನ ವಿಗ್ರಹವನ್ನು ಹೊರತೆಗೆದರು.

ದಕ್ಷಿಣ ಪಳನಿ ಸುಬ್ರಹ್ಮಣ್ಯ ದೇವಾಲಯ!

ಚಿತ್ರಕೃಪೆ: RajeshUnuppally

ನೀರಿನಿಂದ ವಿಗ್ರಹ ದೊರಕಿದ ಕಾರಣವಾಗಿ ವಿಗ್ರಹ ಲಬ್ಧಿ ಜಲೋಲಸವಂ ಆಚರಣೆಯನ್ನು ಪಾಯಿಪ್ಪಾಡ್ ಎಂಬ ನದಿಯ ತಟದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಿದರು. ತದ ನಂತರ ಮಕರ ಮಾಸದ ಪುಷ್ಯ ನಕ್ಷತ್ರದಂದು ಸುಬ್ರಹ್ಮಣ್ಯನ ವಿಗ್ರಹವನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು.

ನಂಬಿಕೆಯಂತೆ ಸುಬ್ರಹ್ಮಣ್ಯನ ವಿಗ್ರಹ ಪ್ರತಿಷ್ಠಾಪ್ನೆಯಲ್ಲಿ ಸ್ವತಃ ವಿಷ್ಣು ದೇವರೆ ಅರ್ಚಕನ ವೇಷದಲ್ಲಿ ಬಂದು ಕಾರ್ಯವನ್ನು ಸಾಂಗೋಪವಾಗಿ ನೆರವೇರಿಸಿದರೆಂಬ ನಂಬಿಕೆಯಿದೆ.

ದಕ್ಷಿಣ ಪಳನಿ ಸುಬ್ರಹ್ಮಣ್ಯ ದೇವಾಲಯ!

ಚಿತ್ರಕೃಪೆ: Arayilpdas

ಪ್ರಧಾನ ದೇವ

ದೇವಾಲಯದಲ್ಲಿರುವ ಪ್ರಧಾನ ದೇವರಾದ ಶ್ರೀ ಸುಬ್ರಹ್ಮಣ್ಯನು ನಾಲ್ಕು ಕೈಗಳನ್ನು ಹೊಂದಿರುವ ಭಂಗಿಯಲ್ಲಿ ನಿಂತಿದ್ದಾನೆ. ಈ ವಿಗ್ರಹವು ಏನಿಲ್ಲವೆಂದರೂ ಎಂಟು ಅಡಿಗಳಷ್ಟು ಎತ್ತರವಿದೆ. ಅಲ್ಲದೆ ಈ ವಿಗ್ರಹದಲ್ಲಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಉಪಸ್ಥಿತಿಯಿದೆ ಎಂದು ನಂಬಲಾಗಿದೆ.

ಕದ್ದಿರಾಂಪುರದ ಮುರುಗನ ದೇವಾಲಯ

ಈ ದೇವಾಲಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯನ್ನು ಹೊರತುಪಡಿಸಿದರೆ, ಗಣೇಶ, ದಕ್ಷಿಣಮೂರ್ತಿ, ತಿರುವಂಬಾಡಿ ಕಣ್ಣನ್, ನಾಗ ಹಾಗೂ ಶಾಸ್ತ ದೇವತೆಗಳ ಸನ್ನಿಧಿಗಳಿರುವುದನ್ನೂ ಸಹ ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X