Search
  • Follow NativePlanet
Share
» »ಹ್ಯಾಂಗಿಂಗ್ ಗಾರ್ಡನ್‌ನಲ್ಲಿರುವ ದೈತ್ಯ ಹುಡುಗಿಯ ಬೂಟು ನೋಡಿ

ಹ್ಯಾಂಗಿಂಗ್ ಗಾರ್ಡನ್‌ನಲ್ಲಿರುವ ದೈತ್ಯ ಹುಡುಗಿಯ ಬೂಟು ನೋಡಿ

ಮುಂಬೈನ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಹ್ಯಾಂಗಿಂಗ್ ಗಾರ್ಡನ್ ಟೆರೇಸ್ ಶೈಲಿಯ ಉದ್ಯಾನವಾಗಿದೆ.

ಹ್ಯಾಂಗಿಂಗ್ ಗಾರ್ಡನ್ ನಗರದ ಅತ್ಯಂತ ಹಳೆಯ ಹಾಗೂ ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಉದ್ಯಾನವನವಾಗಿದೆ. ಉತ್ತಮ ಆಯಕಟ್ಟಿನಲ್ಲಿ ಕಟ್ಟಲಾದ ಈ ಉದ್ಯಾನವದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಹಳೆಯ ದೈತ್ಯ ಹುಡುಗಿಯ ಬೂಟು. ಇಲ್ಲಿ ಉತ್ತಮ ಛಾಯಾಚಿತ್ರವನ್ನು ತೆಗೆದುಕೊಳ್ಳಬಹುದು. ಈ ಹ್ಯಾಂಗಿಂಗ್ ಗಾರ್ಡನ್ ಕೆಂಪ್ಸ್ ಕಾರ್ನರ್ ಹಾಗೂ ಸೊಗಸಾದ ಶೋ ರೂಮ್ ಗೆ ಹತ್ತಿರದಲ್ಲಿದೆ.

ಟೆರೇಸ್ ಶೈಲಿಯ ಉದ್ಯಾನ

ಟೆರೇಸ್ ಶೈಲಿಯ ಉದ್ಯಾನ

PC:A.Savin
ಮುಂಬೈನ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಹ್ಯಾಂಗಿಂಗ್ ಗಾರ್ಡನ್ ಟೆರೇಸ್ ಶೈಲಿಯ ಉದ್ಯಾನವಾಗಿದ್ದು, ಇದನ್ನು 1880 ರಲ್ಲಿ ಉಲ್ಹಾಸ್ ಘಾಪೋಕರ್ ಸ್ಥಾಪಿಸಿದರು ಮತ್ತು ನಂತರ ಇದನ್ನು 1921 ರಲ್ಲಿ ನವೀಕರಿಸಲಾಯಿತು. ಈ ಉದ್ಯಾನವನ್ನು ಫೆರೋಜೇಶ ಮೆಹ್ತಾ ಗಾರ್ಡನ್ ಎಂದೂ ಕರೆಯುತ್ತಾರೆ.

ಅರೇಬಿಯನ್ ಸಮುದ್ರದ ಅಲೆಗಳ ನೋಟ

ಅರೇಬಿಯನ್ ಸಮುದ್ರದ ಅಲೆಗಳ ನೋಟ

PC:Bahnfrend
ಉತ್ತಮವಾಗಿ ನಿರ್ವಹಿಸಲ್ಪಟ್ಟ ಈ ಸೊಂಪಾದ ಉದ್ಯಾನವು ಸುಂದರವಾದ ದೃಶ್ಯಗಳನ್ನು ನೀಡುತ್ತದೆ ಮತ್ತು ಅದರ ಪ್ರಾಣಿ-ಆಕಾರದ ಹೆಡ್ಜಸ್ ಮತ್ತು ಅದ್ಭುತ ಹಸಿರು ಸಸ್ಯವರ್ಗಕ್ಕೆ ಸಾಕಷ್ಟು ಜನಪ್ರಿಯವಾಗಿದೆ. ವಿಸ್ತಾರವಾದ ಅರೇಬಿಯನ್ ಸಮುದ್ರದ ಅಲೆಗಳ ನೋಟವನ್ನು ಸಹ ಆನಂದಿಸಬಹುದು.

ಸೂರ್ಯಾಸ್ತಕ್ಕೆ ಪ್ರಸಿದ್ಧಿ

ಸೂರ್ಯಾಸ್ತಕ್ಕೆ ಪ್ರಸಿದ್ಧಿ

PC: Nichalp
ಸ್ಮರಣೀಯ ಸೂರ್ಯಾಸ್ತದ ವೀಕ್ಷಣೆಗಳನ್ನು ನೀಡಲು ಹ್ಯಾಂಗಿಂಗ್ ಗಾರ್ಡನ್ ಹೆಸರುವಾಸಿಯಾಗಿದೆ. ಉದ್ಯಾನವನ್ನು ನೀರಿನ ಜಲಾಶಯದಲ್ಲಿ ಸ್ಥಾಪಿಸಲಾಗಿದೆ, ಅದು ಹತ್ತಿರದಲ್ಲಿಯೇ ಇರುವ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಹಲವಾರು ರೀತಿಯ ಹೂವುಗಳು, ಬೃಹತ್ ಮರಗಳು ಮತ್ತು ಸಸ್ಯಗಳು ಚೆನ್ನಾಗಿ ಅಂದಗೊಳಿಸಿದ ಉದ್ಯಾನವನ್ನು ಸುಂದರಗೊಳಿಸುತ್ತವೆ.

ಬೂಟ್ ಹೌಸ್

ಬೂಟ್ ಹೌಸ್

PC:Nichalp
ಈ ಉದ್ಯಾನವನ್ನು ಸ್ಥಳೀಯರು ಮತ್ತು ಎಲ್ಲಾ ಗುಂಪುಗಳ ಪ್ರವಾಸಿಗರು ಭೇಟಿ ನೀಡುತ್ತಾರೆ, ಏಕೆಂದರೆ ಇದು ತನ್ನ ಪ್ರೀತಿಪಾತ್ರರ ಜೊತೆ ಪಿಕ್ನಿಕ್ ಆನಂದಿಸಲು ಸೂಕ್ತ ಸ್ಥಳವಾಗಿದೆ. ಉದ್ಯಾನವನಕ್ಕೆ ಭೇಟಿ ನೀಡುವ ಮಕ್ಕಳು ಇಲ್ಲಿನ ಸ್ವಿಂಗ್‌ಗಳನ್ನು ಇಷ್ಟಪಡುತ್ತಾರೆ, ವಿಶೇಷವಾಗಿ ‘ಹಳೆಯ ಮಹಿಳೆಯ ಶೂ' ಮತ್ತು ಕಲ್ಲಿನಿಂದ ಮಾಡಲ್ಪಟ್ಟ ‘ಬೂಟ್ ಹೌಸ್'. ಉತ್ತಮವಾಗಿ ನಿರ್ವಹಿಸಲ್ಪಟ್ಟ ಈ ಉದ್ಯಾನವನ್ನು ಮಲಬಾರ್ ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿದೆ.

ಹ್ಯಾಂಗಿಂಗ್ ಗಾರ್ಡನ್‌ನಲ್ಲಿನ ಪ್ರಮುಖ ಆಕರ್ಷಣೆಗಳು

ಹ್ಯಾಂಗಿಂಗ್ ಗಾರ್ಡನ್‌ನಲ್ಲಿನ ಪ್ರಮುಖ ಆಕರ್ಷಣೆಗಳು

PC: A.Savin

ಪ್ರಾಣಿಗಳ ಆಕಾರದ ಟೋಪಿರಿಗಳು ಮತ್ತು ಸುತ್ತಲೂ ಹೆಡ್ಜಸ್
ಅರೇಬಿಯನ್ ಸಮುದ್ರದ ಸ್ಮರಣೀಯ ಸೂರ್ಯಾಸ್ತದ ನೋಟ
ವಾಕಿಂಗ್ ಮತ್ತು ಜಾಗಿಂಗ್‌ಗಾಗಿ ಮಾರ್ಗಗಳನ್ನು ನಿರ್ವಹಿಸಲಾಗಿದೆ
ಛಾಯಾಚಿತ್ರಗಳನ್ನು ಕ್ಲಿಕ್ ಮಾಡಲು ಸೂಕ್ತ ಸ್ಥಳ
ನೀರಿನ ಕಾರಂಜಿಗಳು ಸಂಜೆಯ ಸಮಯದಲ್ಲಿ ಮೋಡಿಮಾಡುವಂತೆ ಕಾಣುತ್ತವೆ
ಚೌಪಟ್ಟಿ ಮತ್ತು ಮೆರೈನ್ ಡ್ರೈವ್‌ನ ದೃಶ್ಯಾವಳಿಗಳು
ಮಕ್ಕಳಿಗಾಗಿ ಸ್ವಿಂಗ್ ಹೊಂದಿರುವ ವಿಶೇಷ ಆಟದ ಮೈದಾನ

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Nichalp
ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಈ ವಿಮಾನ ನಿಲ್ದಾಣವು ಮುಂಬೈಯನ್ನು ಜಗತ್ತಿನ ವಿವಿಧ ಮೂಲೆಗಳೊಂದಿಗೆ ಸಂಪರ್ಕಿಸುತ್ತದೆ.
ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಮುಂಬೈ ಸೆಂಟ್ರಲ್ ಮುಂಬೈಯನ್ನು ದೇಶದ ವಿವಿಧ ಭಾಗಗಳೊಂದಿಗೆ ಸಂಪರ್ಕಿಸುವ ಎರಡು ಪ್ರಮುಖ ರೈಲು ನಿಲ್ದಾಣಗಳಾಗಿವೆ.
ರಾಷ್ಟ್ರೀಯ ಹೆದ್ದಾರಿಗಳ ಸಹಾಯದಿಂದ ಮುಂಬೈ ಭಾರತದ ವಿವಿಧ ನಗರಗಳು ಮತ್ತು ಪಟ್ಟಣಗಳಿಗೆ ಸಂಪರ್ಕ ಹೊಂದಿದೆ. ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ- 4, 17, 8, 9, 50 ಮತ್ತು 3 ರ ಮೂಲಕ ಮುಂಬೈ ನಗರವನ್ನು ತಲುಪಬಹುದು. ಪುಣೆ,

Read more about: garden mumbai ಮುಂಬೈ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X