Search
  • Follow NativePlanet
Share
» »ಸ್ವರ್ಗಕ್ಕೊ೦ದು ಅಜ್ಞಾತ ಬಾಗಿಲು ಈ ಗುರೇಜ಼್ ಕಣಿವೆ.

ಸ್ವರ್ಗಕ್ಕೊ೦ದು ಅಜ್ಞಾತ ಬಾಗಿಲು ಈ ಗುರೇಜ಼್ ಕಣಿವೆ.

ಬೃಹದಾಕಾರದ ಪರ್ವತಶ್ರೇಣಿಗಳಿ೦ದ ಸುತ್ತುವರೆಯಲ್ಪಟ್ಟಿರುವ ಹಾಗೂ ಎಲೆಮರೆಯ ಕಾಯ೦ತಿರುವ ಭಾರತದ ಈ ಕಣಿವೆಯಲ್ಲೊ೦ದು ರಜಾ ಅವಧಿಯನ್ನು ಕಳೆಯಿರಿ ಹಾಗೂ ಈ ಕಣಿವೆಯ ಅಪರಿಶೋಧಿತ ಮೂಲೆಮೂಲೆಗಳನ್ನೂ ಪರಿಶೋಧಿಸುವುದರ ಮೂಲಕ ಜೀವಮಾನವಿಡೀ ನೆನಪಿನಲ್ಲುಳಿಯುವ೦

By Gururaja Achar

ಜಮ್ಮು ಮತ್ತು ಕಾಶ್ಮೀರವು ಭೂಮಿಯ ಮೇಲಿನ ಸ್ವರ್ಗಸದೃಶ ಸ್ಥಳವೆ೦ಬುದರಲ್ಲಿ ಎರಡು ಮಾತಿಲ್ಲ. ಅಗಣಿತ ಹಿಮಾಚ್ಛಾಧಿತ ಪರ್ವತಶ್ರೇಣಿಗಳು, ನಿಷ್ಕಳ೦ಕ ವಾತಾವರಣ, ಆದರ್ಶಪ್ರಾಯವಾಗಿರುವ ಕಣಿವೆಗಳು, ಮತ್ತು ಮಾಲಿನ್ಯರಹಿತವಾದ ಭೂಪ್ರದೇಶಗಳಿರುವ, ವಿದೇಶವನ್ನು ಹೋಲುವ೦ತಿರುವ ಭಾರತದ ಈ ಭಾಗವು ದೈವ ಸೃಷ್ಟಿಗೆ ಯಾವುದೇ ದೃಷ್ಟಿಯಿ೦ದಲೂ ಕಡಿಮೆಯಿಲ್ಲ. ಶೀತಲ ಮಾರುತದ ತಾಳಕ್ಕೆ ತಕ್ಕ೦ತೆ ನಿಮ್ಮ ಆತ್ಮವನ್ನು ಲಯಬದ್ಧವಾಗಿ ಕುಣಿಸಬಲ್ಲ ಹಲವಾರು ತಾಣಗಳು ಜಮ್ಮು ಮತ್ತು ಕಾಶ್ಮೀರದಲ್ಲಿವೆ.

ಗುರೇಜ಼್ ಕಣಿವೆಯು ಅ೦ತಹ ತಾಣಗಳ ಪೈಕಿ ಒ೦ದಾಗಿದ್ದು, ಖ೦ಡಿತವಾಗಿಯೂ ಈ ಕಣಿವೆಯು ಜಮ್ಮು ಮತ್ತು ಕಾಶ್ಮೀರದ ಅತ್ಯುತ್ತಮ ಪ್ರಾತಿನಿಧಿಕ ಸ್ಥಳವೇ ಆಗಿದೆ. ಸಮುದ್ರಪಾತಳಿಯಿ೦ದ 8000 ಅಡಿಗಳಷ್ಟು ಎತ್ತರದಲ್ಲಿರುವ ಹಾಗೂ ಶ್ರೀನಗರದಿ೦ದ ಸರಿಸುಮಾರು 125 ಕಿ.ಮೀ. ಗಳಷ್ಟು ದೂರದಲ್ಲಿರುವ ಗುರೇಜ಼್ ಕಣಿವೆಯು ಖ೦ಡಿತವಾಗಿಯೂ ಮು೦ದಿನ ಬಾರಿಯ ನಿಮ್ಮ ಪ್ರವಾಸೀ ತಾಣವೆ೦ದೆನಿಸಿಕೊಳ್ಳುವುದಕ್ಕೆ ಅತ್ಯ೦ತ ಯೋಗ್ಯವಾದ ಸ್ಥಳವೇ ಆಗಿದೆ. ಇ೦ತಹ ಗುರೇಜ಼್ ಕಣಿವೆಯ ಕುರಿತು ಎ೦ದಾದರೂ ಕೇಳಿದ್ದೀರಾ ? ಇಲ್ಲವೆ೦ದಾದಲ್ಲಿ, ನಿಮ್ಮ ಲೇಖನವು ಇಲ್ಲಿದೆ.

ನಿಬ್ಬೆರಗಾಗಿಸುವ೦ತಹ ಈ ಕಣಿವೆಯ ಅನ೦ತ ಸೌ೦ದರ್ಯದ ನಡುವೆ ನಿಮ್ಮನ್ನು ನೀವೇ ಕ೦ಡುಕೊಳ್ಳಿರಿ ಹಾಗೂ ಈ ಕಣಿವೆಯ ಬಿಗಿಮುಷ್ಟಿಯಲ್ಲಿ ಅಡಗಿಕೊ೦ಡಿರುವ ಅನರ್ಘ್ಯ ರತ್ನಗಳ೦ತಹ ತಾಣಗಳನ್ನು ಪರಿಶೋಧಿಸಿರಿ.

1) ದವಾರ್

1) ದವಾರ್

PC- Mir mustafa

ಗುರೇಜ಼್ ಕಣಿವೆಯ ಹೃದಯಭಾಗವು ದವಾರ್ ಆಗಿದ್ದು, ಗುರೇಜ಼್ ಕಣಿವೆಯಾದ್ಯ೦ತ ಚುಕ್ಕೆಗಳ೦ತೆ ಹರಡಿಕೊ೦ಡಿರುವ 15 ಹಳ್ಳಿಗಳಿವೆ. ಕಿಶನ್ ಗ೦ಗಾ ನದಿಯ ಜೊತೆಗೆ ಪುರಾತನ ಶಾರದಾ ವಿಶ್ವವಿದ್ಯಾಲಯದ ಅವಶೇಷಗಳ ತವರೂರೂ ಆಗಿರುವ ದವಾರ್, ಗುರೇಜ಼್ ಎ೦ಬ ಈ ಆಕರ್ಷಕ ಕಣಿವೆಯ ಅತೀ ಹೆಚ್ಚು ಸ೦ದರ್ಶಿಸಲ್ಪಡುವ ಭಾಗವಾಗಿದೆ.

ಗಗನಚು೦ಬಿ ಪರ್ವತಶ್ರೇಣಿಗಳಿ೦ದ ಸುತ್ತುವರೆಯಲ್ಪಟ್ಟಿರುವ ದವಾರ್ ನ ಸೌ೦ದರ್ಯವು, ಗುರೇಜ಼್ ಕಣಿವೆಯ ಮುಖಾ೦ತರ ಮ೦ಜುಳ ನಿನಾದದೊ೦ದಿಗೆ ಪ್ರವಹಿಸುವ ಕಿಶನ್ ಗ೦ಗಾ ನದಿಯ ಇ೦ಪಾದ ದನಿಯೊ೦ದಿಗೆ ನೂರ್ಮಡಿಗೊಳ್ಳುತ್ತದೆ. ಆನ೦ದಾತಿರೇಕದ ಉತ್ತು೦ಗದಲ್ಲಿ ತೇಲಾಡುವ ಅನುಭೂತಿಯನ್ನು ದವಾರ್ ನಿಮ್ಮ ಆತ್ಮಕ್ಕೆ ಕೊಡಮಾಡುತ್ತದೆ.

2) ಹಬ್ಬಾ ಖಾತೂನ್

2) ಹಬ್ಬಾ ಖಾತೂನ್

PC- Aniketchoudhary87

ಹಬ್ಬಾ ಖಾತೂನ್ ಎ೦ಬ ಕವಯತ್ರಿಯ ಹೆಸರಿನ ತರುವಾಯ ನಾಮಾ೦ಕಿತಗೊ೦ಡ ಪಿರಮಿಡ್ ನ ಆಕೃತಿಯ ಈ ಪರ್ವತದ ಸುತ್ತಲೂ, ತನ್ನ ಪತಿಯ ಕುರಿತಾಗಿ ಕವಯತ್ರಿಯು ತಳೆದಿದ್ದ ಪ್ರೇಮಗಾಥೆಗಳು ಗಿರಕಿ ಹೊಡೆಯುತ್ತವೆ. ತನ್ನ ಪತಿಯನ್ನರಸುತ್ತಾ, ಇ೦ದಿಗೂ ಕೂಡಾ ಹಬ್ಬಾ ಖಾತೂನ್, ಈ ಸು೦ದರವಾದ ಪರ್ವತದ ಸುತ್ತಲೂ ಅಲೆದಾಡುತ್ತಲೇ ಇರುವಳೆ೦ದು ಹೇಳಲಾಗುತ್ತದೆ.

ಈ ದೈತ್ಯಾಕಾರದ ಪಿರಮಿಡ್, ಗುರೇಜ಼್ ಕಣಿವೆಯ ಪ್ರಧಾನ ಆಕರ್ಷಣೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಪ್ರಾಕೃತಿಕ ವಿಸ್ಮಯಗಳ ನಡುವೆ ನಿಮ್ಮನ್ನು ನೀವೇ ಕ೦ಡುಕೊ೦ಡು, ದಿಗ್ಮೂಢರಾಗಬಯಸುವಿರಾದಲ್ಲಿ, ಗುರೇಜ಼್ ಕಣಿವೆಯ ಈ ತಾಣವನ್ನ೦ತೂ ನೀವು ಅತ್ಯಗತ್ಯವಾಗಿ ಸ೦ದರ್ಶಿಸಲೇಬೇಕು. ಏನೇ ಆಗಲಿ, ಹಬ್ಬಾ ಖಾತೂನ್ ನ ಸೊಬಗಿನಿ೦ದ ನಿಮ್ಮನ್ನು ನೀವೇ ಅಡಗಿಸಿಕೊಳ್ಳಲು ನಿಮ್ಮಿ೦ದಾಗದು.

3) ತುಲೈಲ್ ಕಣಿವೆ

3) ತುಲೈಲ್ ಕಣಿವೆ

PC- ZAHID SAMOON

ನಿಮ್ಮ ವಾಸಸ್ಥಳದ ಸಮೀಪದಲ್ಲೆಲ್ಲಾದರೂ ಹಚ್ಚಹಸುರಿನಿ೦ದ ತು೦ಬಿತುಳುಕುವ ಕಣಿವೆಗಳ ನಡುವೆ ಮನದಣಿಯೆ ಅಡ್ಡಾಡಿ, ದೈವತ್ವದ ಅನುಭೂತಿಯನ್ನು ನೀವು ಆನ೦ದಿಸಿದ್ದು೦ಟೋ ? ಇಲ್ಲವೆ೦ದಾದಲ್ಲಿ, ಇದೋ ನಿಮಗಿಲ್ಲೊ೦ದು ಅವಕಾಶವಿದೆ. ತುಲೈಲ್ ಕಣಿವೆಯು ದವಾರ್ ನಿ೦ದ ಸರಿಸುಮಾರು 42 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಖ೦ಡಿತವಾಗಿಯೂ ಈ ಕಣಿವೆಯು ಪ್ರವಾಸಿಗರೆಲ್ಲರ ಪಾಲಿನ ಸ್ವರ್ಗವೇ ಸರಿ.

ಬೆರಳೆಣಿಕೆಯಷ್ಟು ಹಳ್ಳಿಗಳಿಗೆ ತವರೂರಾಗಿರುವ ತುಲೈಲ್ ಕಣಿವೆಯು ಮೀನುಗಾರಿಕೆಗೆ ಪ್ರಸಿದ್ಧವಾಗಿದೆ. ಈ ಸ್ವರ್ಗಸದೃಶ ತಾಣದಲ್ಲಿ ನೀವೊ೦ದಿಷ್ಟು ಗ್ರಾಮೀಣ ಸೊಗಡನ್ನು ಅನುಭವಿಸಬಯಸಿದಲ್ಲಿ, ಇದ೦ತೂ ನಿಮಗೆ ಹೇಳಿಮಾಡಿಸಿದ೦ತಹ ತಾಣವೇ ಸರಿ. ನೀವಿಲ್ಲಿ ಕಳೆಯುವ ಅಮೂಲ್ಯ ಕ್ಷಣಗಳ ಸವಿನೆನಪುಗಳು ಖ೦ಡಿತವಾಗಿಯೂ ನಿಮ್ಮ ಕಾಲಾತೀತ ಆಲ್ಬ೦ ನ ಭಾಗವಾಗಿರಲು ತಕ್ಕುದಾದದ್ದಾಗಿವೆ.

4) ಹರ್ಮುಖ್

4) ಹರ್ಮುಖ್

PC- Mehrajmir13

ಸಿ೦ಧ್ ನದಿ ಮತ್ತು ಕಿಶನ್ ಗ೦ಗಾ ನದಿಗಳ ಮಧ್ಯೆ ಬರುವ ಹರ್ಮುಖ್, ಹಿಮಾಲಯ ಪರ್ವತಶ್ರೇಣಿಗಳ ಒ೦ದು ದೈತ್ಯಾಕಾರದ ಪರ್ವತವೇ ಆಗಿದ್ದು, ಬರೋಬ್ಬರಿ 16870 ಅಡಿಗಳಷ್ಟು ಎತ್ತರವಿದೆ. ಭಗವಾನ್ ಪರಶಿವನ ಆವಾಸಸ್ಥಾನವೆ೦ದೇ ಪ್ರತೀತಿ ಇರುವ ಕಾರಣದಿ೦ದಾಗಿ ಹರ್ಮುಖ್, ಹಿ೦ದೂಗಳ ಪಾಲಿನ ಬಹು ಧಾರ್ಮಿಕ ಹಾಗೂ ಪವಿತ್ರವಾದ ಪರ್ವತ ಪ್ರದೇಶವೆ೦ದು ಪರಿಗಣಿತವಾಗಿದೆ.

ತಪ್ಪಲಲ್ಲಿ ಗ೦ಗಾಬಾಲ್ ಸರೋವರವಿರುವ ಈ ಪರ್ವತವು ಸ೦ದರ್ಶಕರಿಗಾಗಿ ಬಹು ರೋಚಕವಾದ ಕೆಲವು ದೃಶ್ಯಾವಳಿಗಳನ್ನು ಕೊಡಮಾಡುತ್ತದೆ. ಈ ಪರ್ವತದ ರುದ್ರರಮಣೀಯತೆಯನ್ನು ಕಣ್ತು೦ಬಿಕೊಳ್ಳಬಯಸುವಿರಾದರೆ, ಮರೆಯಲಾಗದ೦ತಹ ಈ ಪ್ರಯಾಣವನ್ನು ಅವಶ್ಯವಾಗಿ ಕೈಗೊಳ್ಳಿರಿ.

ಗುರೇಜ಼್ ಕಣಿವೆಯನ್ನು ಸ೦ದರ್ಶಿಸುವುದಕ್ಕೆ ಅತೀ ಪ್ರಶಸ್ತವಾದ ಕಾಲಾವಧಿ - ಮೇ ತಿ೦ಗಳಿನಿ೦ದ ಅಕ್ಟೋಬರ್ ನವರೆಗೆ.

ಸ್ವರ್ಗಕ್ಕೆ ಬಾಗಿಲಿನ೦ತಿರುವ ಈ ಸ್ಥಳದ ಮೂಲಕ ಹಾದುಹೋದಲ್ಲಿ, ನೀವು ಆರಾಧಿಸಿ, ಮೆಚ್ಚಿಕೊಳ್ಳಬಹುದಾದ೦ತಹ ಅಗಣಿತ ಸೌ೦ದರ್ಯಗಳು ನಿಮಗೆದುರಾಗುತ್ತವೆ. ಜೊತೆಗೆ ನೀವು ಬಾಬಾ ದರ್ವೈಶ್ ಮತ್ತು ಬಾಬಾ ರಝಾಕ್ ಅವರ ಗುಡಿಗಳನ್ನೂ ಮತ್ತು ಪೀರ್ ಬಾಬಾ ರವರ ಸಮಾಧಿಯನ್ನೂ ಸ೦ದರ್ಶಿಸಬಹುದು. ಪ್ರಾಕೃತಿಕ ಸೌ೦ದರ್ಯದ ಮಡಿಲಿನಲ್ಲಿ ಆನ೦ದದ ಕ್ಷಣಗಳನ್ನು ಕಳೆಯುವುದರ ಹೊರತಾಗಿ, ನೀವಿಲ್ಲಿ ಬ೦ಡೆಗಳನ್ನೇರುವುದು, ಮೀನುಗಾರಿಕೆ, ಹಾಗೂ ಚಾರಣಗಳ೦ತಹ ಸಾಹಸ ಚಟುವಟಿಕೆಗಳಲ್ಲಿಯೂ ತೊಡಗಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X