India
Search
  • Follow NativePlanet
Share
» »400 ಅಡಿ ಎತ್ತರದ ಗನ್ ಹಿಲ್‌ಗೆ ಕೇಬಲ್ ಕಾರ್‌ ಸವಾರಿ ಮಾಡಿ

400 ಅಡಿ ಎತ್ತರದ ಗನ್ ಹಿಲ್‌ಗೆ ಕೇಬಲ್ ಕಾರ್‌ ಸವಾರಿ ಮಾಡಿ

ಮಸ್ಸೂರಿಯ ಅತ್ಯಂತ ಅದ್ಭುತವಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಲಾಲ್ ಟಿಬ್ಬಾದ ನಂತರ ಗನ್ ಹಿಲ್ ಅಲ್ಲಿರುವ ಎರಡನೇ ಆಕರ್ಷಕ ಗಿರಿಧಾಮವಾಗಿದೆ. ಪ್ರಸಿದ್ಧ ಗನ್ ಹಿಲ್ ತನ್ನೊಂದಿಗೆ ಆಸಕ್ತಿದಾಯಕ ಇತಿಹಾಸವನ್ನು ಹೊಂದಿದೆ ಮತ್ತು ಇದು ವರ್ಷಗಳಿಂದ ಜನಪ್ರಿಯತೆಯನ್ನು ಹೆಚ್ಚಿಸಿದೆ.

ಗನ್ ಹಿಲ್ ಹೆಸರು ಬಂದಿದ್ದು ಹೇಗೆ?

ಗನ್ ಹಿಲ್ ಹೆಸರು ಬಂದಿದ್ದು ಹೇಗೆ?

PC: Harshanh

ಸ್ವಾತಂತ್ರ್ಯಾ ಪೂರ್ವದ ದಿನಗಳಲ್ಲಿ ಈ ಬೆಟ್ಟಗಳಲ್ಲಿ ಬಂದೂಕಿನ ಉಪಸ್ಥಿತಿಯಿಂದಾಗಿ ಈ ಬೆಟ್ಟಕ್ಕೆ ಗನ್ ಹಿಲ್ ಎನ್ನುವ ಹೆಸರಿಡಲಾಯಿತು. ಆಗ ಗಡಿಯಾರವಿಲ್ಲದ ಕಾರಣ ಸ್ಥಳೀಯರಿಗೆ ಸಮಯದ ಅರಿವಾಗಲು ಈ ಬೆಟ್ಟದ ತುದಿಯಿಂದ ಬ್ರಿಟಿಷರು ಪ್ರತಿ ಮಧ್ಯಾಹ್ನದಂದು ಗನ್‌ನಿಂದ ಗುಂಡು ಹಾರಿಸುತ್ತಿದ್ದರು ಎನ್ನಲಾಗಿದೆ.

400 ಅಡಿ ಎತ್ತರ

400 ಅಡಿ ಎತ್ತರ

PC: Rameshng

400 ಅಡಿ ಎತ್ತರದಲ್ಲಿರುವ ಗನ್ ಹಿಲ್ ಮಸ್ಸೂರಿಯ ಅತ್ಯಂತ ಸುಂದರ ಆಕರ್ಷಣೆಯಾಗಿದೆ. ಬೆಟ್ಟವನ್ನು ತಲುಪಲು ಪ್ರವಾಸಿಗರು ಕೇಬಲ್ ಕಾರ್ ತೆಗೆದುಕೊಳ್ಳಬೇಕಾಗುತ್ತದೆ. ಕೇಬಲ್ ಕಾರು ರೋಪ್ ವೇ ನಿಮ್ಮನ್ನು ನೈಜ ನಿಧಿಗೆ ಕರೆದೊಯ್ಯುತ್ತದೆ ಮತ್ತು ಸಂಪೂರ್ಣ ಗಿರಿಧಾಮದ ವಿಹಂಗಮ ನೋಟವನ್ನು ನೀವು ಆನಂದಿಸುವಂತೆ ಮಾಡುತ್ತದೆ.

ಹಿಮಾಲಯ ಪರ್ವತ ಶ್ರೇಣಿ

ಹಿಮಾಲಯ ಪರ್ವತ ಶ್ರೇಣಿ

PC: Harshanh
ಶಿಖರವು ಪಿತ್ವಾರಾ, ಶ್ರೀಕಾಂತ, ಬಂಡರ್ಪಂಚ್ ಮತ್ತು ಗಂಗೋತ್ರಿಗಳಂತಹ ಹಿಮಾವೃತ ಹಿಮಾಲಯ ಪರ್ವತ ಶ್ರೇಣಿಗಳ ಅದ್ಭುತವಾದ ನೋಟವನ್ನು ನೀಡುತ್ತದೆ. ಅಲ್ಲದೆ, ಪ್ರವಾಸಿಗರು ಮಸ್ಸೂರಿ ಪಟ್ಟಣ ಮತ್ತು ಡೂನ್ ಕಣಿವೆಯ ನೋಟವನ್ನು ಆನಂದಿಸಬಹುದು.

ಹಿಮಾಲಯ ಪರ್ವತದ ಪರಿಪೂರ್ಣ ನೋಟ

ಹಿಮಾಲಯ ಪರ್ವತದ ಪರಿಪೂರ್ಣ ನೋಟ

PC: Harshanh
ಗನ್ ಹಿಲ್ ಹಲವಾರು ಅಂಗಡಿಗಳು, ರೆಸ್ಟಾರೆಂಟ್‌ಗಳು ಮತ್ತು ಮಳಿಗೆಗಳನ್ನು ಹೊಂದಿದೆ. ಇಲ್ಲಿ ಪ್ರವಾಸಿಗರು ಬಲೂನ್ ಶೂಟಿಂಗ್ ಮತ್ತು ಹೂಪ್ಲಾ ರೀತಿಯ ಆಟಗಳಲ್ಲಿ ಮತ್ತು ಶಾಪಿಂಗ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಕೃತಿ ಪ್ರೇಮಿಗಳು ಮತ್ತು ಛಾಯಾಗ್ರಾಹಕರಿಗೆ ಈ ಬೆಟ್ಟವು ಉತ್ತಮ ಸ್ಥಳವಾಗಿದೆ. ಗನ್ ಹಿಲ್ ಹಿಮಾಲಯ ಪರ್ವತ ಶಿಖರದ ಪರಿಪೂರ್ಣ ನೋಟವನ್ನು ನೀಡುತ್ತದೆ. ಅದ್ಭುತವಾದ ಮತ್ತು ಪರ್ವತಮಯ ಹಿನ್ನೆಲೆಯೊಂದಿಗೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕೆಲವು ಕ್ಷಣಗಳನ್ನು ಕಳೆಯಲು ಪರಿಪೂರ್ಣ ಸ್ಥಳವಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Harshanh
ಗನ್ ಹಿಲ್‌ಗೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಮಾರ್ಚ್ ಮತ್ತು ಜೂನ್ ತಿಂಗಳುಗಳಲ್ಲಿ. 4:00 ರಿಂದ 6:00 ರವರೆಗೆ ರೋಪ್ ವೇಗೆ ಹೋಗುವುದನ್ನು ತಪ್ಪಿಸಿ. ಯಾಕೆಂದರೆ ಈ ಸಮಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ
ನೀಡುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Harshanh
ಗನ್ ಹಿಲ್ ಡೆಹ್ರಾಡೂನ್ ರೈಲ್ವೇ ನಿಲ್ದಾಣದಿಂದ 34 ಕಿ.ಮೀ ದೂರದಲ್ಲಿದೆ. ಇದು ಸುಮಾರು 1 ಗಂಟೆ 20 ನಿಮಿಷದ ಪ್ರಯಾಣವಾಗಿದೆ. ಇದು ಲೈಬ್ರರಿ ಬಸ್ ನಿಲ್ದಾಣ, ಕಾರ್ಟ್ ರಸ್ತೆ ಮತ್ತು ಮಾಲ್ ರಸ್ತೆಗಳಿಂದ ಕೇವಲ 1.7 ಕಿ.ಮೀ. ದೂರದಲ್ಲಿದೆ. ಹಾಗಾಗಿ ಬಸ್‌ಗಳು ಮತ್ತು ಟ್ಯಾಕ್ಸಿಗಳು ಈ ರಸ್ತೆಯನ್ನು ಹೆಚ್ಚಾಗಿ ಬಳಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X