Search
  • Follow NativePlanet
Share
» »ಹಿಮಾಲಯನ್ ರಾಷ್ಟ್ರೀಯ ಉದ್ಯಾನ : ಯುನೆಸ್ಕೊದ ಹೊಚ್ಚ ಹೊಸ ಸ್ಥಳ

ಹಿಮಾಲಯನ್ ರಾಷ್ಟ್ರೀಯ ಉದ್ಯಾನ : ಯುನೆಸ್ಕೊದ ಹೊಚ್ಚ ಹೊಸ ಸ್ಥಳ

By Vijay

ಜೂನ್ 2014 ರಲ್ಲಿ ಹಿಮಾಚಲ ಪ್ರದೇಶ ರಾಜ್ಯದ ಹಿಮಾಲಯನ್ ರಾಷ್ಟ್ರೀಯ ಉದ್ಯಾನವು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ನೂತನವಾಗಿ ಸೇರ್ಪಡೆಯಾಯಿತು. ವಿಶೇಷ ನಿಸರ್ಗ ಸೌಂದರ್ಯ ಹಾಗೂ ಜೀವಸಂಪತ್ತಿನ ಮಾನದಂಡಗಳ ಆಧಾರದ ಮೇಲೆ ಇದಕ್ಕೆ ಈ ಮಾನ್ಯತೆಯನ್ನು ನೀಡಲಾಗಿದೆ.

ಈ ರಾಷ್ಟ್ರೀಯ ಉದ್ಯಾನವು ಹಿಮಾಚಲ ರಾಜ್ಯದ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾದ ಕುಲ್ಲು ಪ್ರದೇಶದಲ್ಲಿ ನೆಲೆಸಿದೆ. 754 ಚ.ಕಿ.ಮೀ ಗಳಷ್ಟು ವಿಸ್ತೀರ್ಣ ಹೊಂದಿದ್ದು, 1984 ರಲ್ಲಿ ಸ್ಥಾಪಿಸಲ್ಪಟ್ಟಿದೆ. ಹಲವಾರು ವೈವಿಧ್ಯಮಯ ಸಸ್ಯ ಹಾಗು ಪ್ರಾಣಿ ಸಂಪತ್ತಿಗೆ ಆಶ್ರಯ ತಾಣವಾಗಿರುವ ಈ ಉದ್ಯಾನ ಗುರುತರವಾದ ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ.

ಟ್ರೆಕ್ ಚಟುವಟಿಕೆಗೆ ಹೆಸರುವಾಸಿಯಾಗಿರುವ ಈ ರಾಷ್ಟ್ರೀಯ ಉದ್ಯಾನವನ್ನು ರಸ್ತೆ ಹಾಗೂ ವಿಮಾನದ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಆದರೆ ಟ್ರೆಕ್ ಅಥವಾ ಚಾರಣ ಕೈಗೊಳ್ಳುವ ಮುಂಚೆ ಉದ್ಯಾನದ ಕೇಂದ್ರ ಕಚೇರಿಯಲ್ಲಿ ನಡೆಸಲಾಗುವ ಶಿಬಿರದಲ್ಲಿ ಪಾಲ್ಗೊಳ್ಳುವುದು ಅನುಕೂಲಮಯ ಹಾಗೂ ಪ್ರೋತ್ಸಾಹದಾಯಕವಾಗಿರುತ್ತದೆ.

ಈ ಉದ್ಯಾನದಿಂದ 50 ಕಿ.ಮೀ ದೂರದಲ್ಲಿರುವ ಕುಲ್ಲು ಇಲ್ಲಿಗೆ ತೆರಳಲು ಹತ್ತಿರದ ಪಟ್ಟಣವಾಗಿದ್ದು ಇಲ್ಲಿನ ವಿಮಾನ ನಿಲ್ದಾಣವು ದೆಹಲಿ, ಚಂಡೀಗಡ್, ಶಿಮ್ಲಾ, ಧರ್ಮಶಾಲಾನಂತಹ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ರೈಲಿನ ಮೂಲಕ ತೆರಳಬೇಕೆಂದರೆ ಮೊದಲು ಚಂಡೀಗಡ್ ಗೆ ತೆರಳಿ ಅಲ್ಲಿಂದ ಮಂಡಿಗೆ ತೆರಳಬೇಕು. ಮಂಡಿಯಿಂದ ಬಾಡಿಗೆ ಟ್ಯಾಕ್ಸಿಗಳು ಈ ಉದ್ಯಾನಕ್ಕೆ ತೆರಳಲು ಲಭ್ಯವಿರುತ್ತವೆ.

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

1984 ರಲ್ಲಿ ಹಿಮಾಚಲ ವನ್ಯಜೀವನ ಯೋಜನೆಯ ಅಡಿಯಲ್ಲಿ ಇಲ್ಲಿನ ಜೀವಾ, ಸೈಂಜ್ ಹಾಗೂ ತೀರ್ಥನ್ ನದಿಗಳ ಜೌಗು ಪ್ರದೇಶದ ಸರ್ವೇಕ್ಷಣೆಯನ್ನು ನಡೆಸಿ ಈ ಭಾಗಗಳನ್ನು ರಾಷ್ಟ್ರೀಯ ಉದ್ಯಾನದ ಭಾಗಗಳನ್ನಾಗಿ ಮಾಡಲಾಯಿತು.

ಚಿತ್ರಕೃಪೆ: John Pavelka

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಈ ಒಟ್ಟಾರೆ ಅರಣ್ಯ ಪ್ರದೇಶವು ಸಮುದ್ರ ಮಟ್ಟದಿಂದ ಸರಾಸರಿ 1700 ಮೀಗಳಷ್ಟು ಎತ್ತರದಿಂದ ಹಿಡಿದು ಅತಿ ಎತ್ತರದ ಪ್ರದೇಶ ಸುಮಾರು 5800 ಮೀಗಳಷ್ಟು ಎತ್ತರದಲ್ಲಿದೆ.

ಚಿತ್ರಕೃಪೆ: Travelling Slacker

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಪ್ರಸ್ತುತ ರಾಷ್ಟ್ರೀಯ ಉದ್ಯಾನವು ಉತ್ತರ, ಪೂರ್ವ ಹಾಗೂ ದಕ್ಷಿಣ ದಿಕ್ಕುಗಳ ಗಡಿಗಳಲ್ಲಿ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರೆದಿದ್ದು ಸಂರಕ್ಷಿಸಲ್ಪಟ್ಟಿವೆ.

ಚಿತ್ರಕೃಪೆ: Travelling Slacker

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಈ ಉದ್ಯಾನವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರದೇಶದ ಐದು ಕಿ.ಮೀ ಗಳಷ್ಟು ಪ್ರದೇಶವನ್ನು ಇಕೋ ಜೋನ್ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ನೂರಕ್ಕಿಂತ ಹೆಚ್ಚು ಹಳ್ಳಿಗಳು ಸುಮಾರು 1600 ಗಳಷ್ಟು ಮನೆಗಳು ಹಾಗೂ 16000 ದಷ್ಟು ಜನಸಂಖ್ಯೆಯಿದ್ದು ಇವರಲ್ಲಿ ಬಹುತೇಕ ಎಲ್ಲ ಜನರು ನಿಸರ್ಗ ಸಂಪತ್ತಿನೆ ಮೇಲೆಯೆ ಅವಲಂಬಿತರಾಗಿದ್ದಾರೆ.

ಚಿತ್ರಕೃಪೆ: Travelling Slacker

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಪಕ್ಷಿಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುವ ಈ ಉದ್ಯಾನದಲ್ಲಿ 31 ಬಗೆಯ ಸಸ್ತನಿಗಳು, 181 ಬಗೆಯ ಪಕ್ಷಿಗಳು, 11 ಬಗೆಯ ಮಳೆ ಹುಳುಗಳು, 17 ಬಗೆಯ ಮೃದ್ವಂಗಿಗಳು, 127 ಬಗೆಯ ಕೀಟಗಳು, 3 ಬಗೆಯ ಸರೀಸೃಪಗಳು, 9 ಬಗೆಯ ಉಭಯವಾಸಿಗಳು ಹಾಗೂ 375 ಸಸ್ಯರಾಶಿಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Parth Joshi

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಈ ಸುಂದರವಾದ ರಾಷ್ಟ್ರೀಯ ಉದ್ಯಾನದಲ್ಲಿ ಹಲವಾರು ಟ್ರೆಕ್ಕಿಂಗ್ ಮಾರ್ಗಗಳು ಲಭ್ಯವಿದ್ದು ರೋಮಾಂಚನಕರ ಅನುಭೂತಿಯನ್ನು ನೀಡುತ್ತವೆ. ಅಲ್ಲದೆ ಇತರೆ ಅನ್ವೇಷಿಸಬಹುದಾದ ಅನ್ಯ ಮಾರ್ಗಗಳಿದ್ದು, ಅದಕ್ಕೆ ತೆರಳುವ ಮೊದಲು ಭದ್ರತೆಯ ದೃಷ್ಟಿಯಿಂದ ಅರಣ್ಯ ಇಲಾಖೆಯ ಅನುಮತಿ ಹಾಗೂ ಸಹಾಯ ಪಡೆಯುವುದು ಅವಶ್ಯಕವಾಗಿದೆ.

ಚಿತ್ರಕೃಪೆ: J.M.Garg

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಇಲ್ಲಿ ಕೈಗೊಳ್ಳಬಹುದಾದ ಪ್ರಖ್ಯಾತ ಟ್ರೆಕ್ಕಿಂಗ್ ಮಾರ್ಗಗಳೆಂದರೆ, ಸೈಂಜ್ ಕಣಿವೆ ಪ್ರದೇಶ, ಸೈಂಜ್ - ತೀರ್ಥನ್ ಕಣಿವೆಗಳು, ಗುಶೈನಿಯಿಂದ ಶಿಲ್ಟ್ ವರೆಗೆ, ಜೀವಾ ನಾಲಾದಿಂದ ಪರ್ವರ್ತಿ ನದಿ ಕಣಿವೆ ಪ್ರದೇಶ, ಸೈಂಜ್ ಕಣಿವೆಯಲ್ಲಿನ ರಕ್ತಿಸಾರ್ ಪ್ರದೇಶ. ಆದರೆ ಇವೆಲ್ಲ ಟ್ರೆಕ್ಕಿಂಗ್ ಮಾರ್ಗಗಳು ಸುಮಾರು 4 ದಿನಗಳಿಂದ 8 ದಿನಗಳ ಅವಧಿಯದ್ದಾಗಿವೆ.

ಚಿತ್ರಕೃಪೆ: Travelling Slacker

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕಿನ ಸುಂದರವಾದ ಚಿತ್ರಗಳು. ಇಲ್ಲಿ ಯಾವೇಲ್ಲ ವಿಶಿಷ್ಟ ಹಕ್ಕಿಗಳು ಕಂಡುಬರುತ್ತವೆ ಎಂಬುದರ ಕುರಿತು ಮುಂದಿನ ಸ್ಲೈಡುಗಳಲ್ಲಿ ನೋಡಿ.

ಚಿತ್ರಕೃಪೆ: Pkspks

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕಿನ ಸುಂದರವಾದ ಚಿತ್ರಗಳು.

ಚಿತ್ರಕೃಪೆ: J.M.Garg

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕಿನ ಸುಂದರವಾದ ಚಿತ್ರಗಳು.

ಚಿತ್ರಕೃಪೆ: J.M.Garg

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕಿನ ಸುಂದರವಾದ ಚಿತ್ರಗಳು.

ಚಿತ್ರಕೃಪೆ: J.M.Garg

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕಿನ ಸುಂದರವಾದ ಚಿತ್ರಗಳು.

ಚಿತ್ರಕೃಪೆ: J.M.Garg

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕಿನ ಸುಂದರವಾದ ಚಿತ್ರಗಳು.

ಚಿತ್ರಕೃಪೆ: J.M.Garg

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕಿನ ಸುಂದರವಾದ ಚಿತ್ರಗಳು.

ಚಿತ್ರಕೃಪೆ: J.M.Garg

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ:

ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕಿನ ಸುಂದರವಾದ ಚಿತ್ರಗಳು.

ಚಿತ್ರಕೃಪೆ: J.M.Garg

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X